ಹೆಸರಿಗೆ ಇವರು ದಿಗ್ಗಜರು… ಆದ್ರೆ ಈ ನಾಲ್ವರಿಂದ ಟೆಸ್ಟ್ ಇತಿಹಾಸದಲ್ಲೇ ಕಳಪೆ ದಾಖಲೆ ಬರೆಯಿತು Team India!

IND vs AUS WTC Final 2023: ಈ ಪಂದ್ಯದಲ್ಲಿ ಟೀಂ ಇಂಡಿಯಾದ ಅಗ್ರ ಕ್ರಮಾಂಕ ಸಂಪೂರ್ಣ ವಿಫಲವಾಗಿತ್ತು. ಈ ವೇಳೆ ಟೀಂ ಇಂಡಿಯಾ ತನ್ನ ಹೆಸರಿನಲ್ಲಿ ಕಳಪೆ ದಾಖಲೆಯೊಂದನ್ನು ಬರೆದಿದೆ. ಪಂದ್ಯದ ಮೊದಲ ಇನಿಂಗ್ಸ್‌ ನಲ್ಲಿ ಅಗ್ರ ಕ್ರಮಾಂಕದ ಆಟಗಾರರು ಭಾರತೀಯ ಕ್ರಿಕೆಟ್ ಇತಿಹಾಸದಲ್ಲಿ ಮೊದಲ ಬಾರಿಗೆ ಇಂತಹ ಕಳಪೆ ದಾಖಲೆ ಸೃಷ್ಟಿಸಿದ್ದಾರೆ.

Written by - Bhavishya Shetty | Last Updated : Jun 9, 2023, 10:33 AM IST
    • ಎರಡನೇ ದಿನದಾಟದ ಅಂತ್ಯಕ್ಕೆ ಭಾರತದ ಸ್ಕೋರ್ ಐದು ವಿಕೆಟ್‌ ಗೆ 151ಕ್ಕೆ ಕುಸಿಯಿತು
    • ಈ ಪಂದ್ಯದಲ್ಲಿ ಟೀಂ ಇಂಡಿಯಾದ ಅಗ್ರ ಕ್ರಮಾಂಕ ಸಂಪೂರ್ಣ ವಿಫಲವಾಗಿತ್ತು
    • ಭಾರತೀಯ ಕ್ರಿಕೆಟ್ ಇತಿಹಾಸದಲ್ಲಿ ಮೊದಲ ಬಾರಿಗೆ ಇಂತಹ ಕಳಪೆ ದಾಖಲೆ ಸೃಷ್ಟಿಸಿದ್ದಾರೆ
ಹೆಸರಿಗೆ ಇವರು ದಿಗ್ಗಜರು… ಆದ್ರೆ ಈ ನಾಲ್ವರಿಂದ ಟೆಸ್ಟ್ ಇತಿಹಾಸದಲ್ಲೇ ಕಳಪೆ ದಾಖಲೆ ಬರೆಯಿತು Team India! title=
WTC 2023

IND vs AUS WTC Final 2023: ವಿಶ್ವ ಟೆಸ್ಟ್ ಚಾಂಪಿಯನ್‌ ಶಿಪ್‌ ನ (WTC Final-2023) ಫೈನಲ್‌ ನಲ್ಲಿ ಆಸ್ಟ್ರೇಲಿಯಾವು ಟೀಂ ಇಂಡಿಯಾದ ಮೇಲೆ ತನ್ನ ಹಿಡಿತವನ್ನು ಬಿಗಿಗೊಳಿಸಿದೆ. ಆಸ್ಟ್ರೇಲಿಯಾ ಮೊದಲ ಇನಿಂಗ್ಸ್‌ ನಲ್ಲಿ 469 ರನ್ ಗಳಿಸಿದೆ. ಆದರೆ ಎರಡನೇ ದಿನದಾಟದ ಅಂತ್ಯಕ್ಕೆ ಭಾರತದ ಸ್ಕೋರ್ ಐದು ವಿಕೆಟ್‌ ಗೆ 151ಕ್ಕೆ ಕುಸಿಯಿತು.

ಇದನ್ನೂ ಓದಿ: Karnataka ದಲ್ಲಿ ಭಾರಿ ಹಿನ್ನಡೆಯ ಬಳಿಕ ಬಿಜೆಪಿಗೆ ಆರ್ಎಸ್ಎಸ್ ಸಲಹೆ, ಕಾಂಗ್ರೆಸ್ ಗೆಲ್ಲಲು ಇದೇ ಕಾರಣ

ಈ ಪಂದ್ಯದಲ್ಲಿ ಟೀಂ ಇಂಡಿಯಾದ ಅಗ್ರ ಕ್ರಮಾಂಕ ಸಂಪೂರ್ಣ ವಿಫಲವಾಗಿತ್ತು. ಈ ವೇಳೆ ಟೀಂ ಇಂಡಿಯಾ ತನ್ನ ಹೆಸರಿನಲ್ಲಿ ಕಳಪೆ ದಾಖಲೆಯೊಂದನ್ನು ಬರೆದಿದೆ. ಪಂದ್ಯದ ಮೊದಲ ಇನಿಂಗ್ಸ್‌ ನಲ್ಲಿ ಅಗ್ರ ಕ್ರಮಾಂಕದ ಆಟಗಾರರು ಭಾರತೀಯ ಕ್ರಿಕೆಟ್ ಇತಿಹಾಸದಲ್ಲಿ ಮೊದಲ ಬಾರಿಗೆ ಇಂತಹ ಕಳಪೆ ದಾಖಲೆ ಸೃಷ್ಟಿಸಿದ್ದಾರೆ.

ಟೀಂ ಇಂಡಿಯಾ ತನ್ನ ಮೊದಲ ಇನಿಂಗ್ಸ್‌ ನಲ್ಲಿ 71 ರನ್ ಗಳಿಸುವಷ್ಟರಲ್ಲಿ ಮೊದಲ 4 ವಿಕೆಟ್ ಕಳೆದುಕೊಂಡಿದೆ. ರೋಹಿತ್ ಶರ್ಮಾ, ಶುಭ್ಮನ್ ಗಿಲ್, ಚೇತೇಶ್ವರ ಪೂಜಾರ ಮತ್ತು ವಿರಾಟ್ ಕೊಹ್ಲಿ ಸಂಪೂರ್ಣ ವಿಫಲರಾಗಿದ್ದಾರೆ. ಭಾರತೀಯ ಟೆಸ್ಟ್ ಕ್ರಿಕೆಟ್ ಇತಿಹಾಸದಲ್ಲಿ ಎಲ್ಲಾ ಅಗ್ರ-4 ಬ್ಯಾಟ್ಸ್‌ ಮನ್‌ ಗಳು ಎರಡಂಕಿ ದಾಟಲು ಹೆಣಗಾಡಿ, ಔಟ್ ಆಗಿದ್ದು ಇದೇ ಮೊದಲು. ರೋಹಿತ್ ಶರ್ಮಾ 26 ಎಸೆತಗಳಲ್ಲಿ 15 ರನ್, ಶುಭ್ಮನ್ ಗಿಲ್ 15 ಎಸೆತಗಳಲ್ಲಿ 13 ರನ್, ಚೇತೇಶ್ವರ ಪೂಜಾರ 25 ಎಸೆತಗಳಲ್ಲಿ 14 ರನ್ ಮತ್ತು ವಿರಾಟ್ ಕೊಹ್ಲಿ 31 ಎಸೆತಗಳಲ್ಲಿ 14 ರನ್ ಗಳಿಸಿದ್ದಾರೆ.

ಟೀಂ ಇಂಡಿಯಾಕ್ಕೆ ಕೆಟ್ಟ ಆರಂಭ:

ಭಾರತ ತಂಡದ ನಾಯಕ ರೋಹಿತ್ ಶರ್ಮಾ ಎರಡು ಬೌಂಡರಿಗಳ ನೆರವಿನಿಂದ 15 ರನ್ ಗಳಿಸಿದ್ದಾಗ ಆಸ್ಟ್ರೇಲಿಯದ ನಾಯಕ ಪ್ಯಾಟ್ ಕಮ್ಮಿನ್ಸ್ ಅವರನ್ನು ಎಲ್ಬಿಡಬ್ಲು ಮಾಡಿದರು. ಐಪಿಎಲ್‌ ನಲ್ಲಿ ಅಮೋಘ ಫಾರ್ಮ್ ತೋರಿದ್ದ ಶುಭ್ಮನ್ ಗಿಲ್ ಅವರನ್ನು ಸ್ಕಾಟ್ ಬೋಲ್ಯಾಂಡ್ ಬೌಲ್ಡ್ ಮಾಡಿದರು. ಗಿಲ್ ಎರಡು ಬೌಂಡರಿಗಳ ನೆರವಿನಿಂದ 13 ರನ್ ಗಳಿಸಿದರು. ಇನ್ನು ಚೇತೇಶ್ವರ್ ಪೂಜಾರ, ಗಿಲ್‌ ನಂತೆಯೇ ಬೌಲ್ಡ್ ಆದರು. ಕ್ಯಾಮರೂನ್ ಗ್ರೀನ್ ಅವರ ಅದ್ಭುತ ಬೌಲಿಂಗ್ ಚೇತೇಶ್ವರ್ ಅವರ ವಿಕೆಟ್ ಕಬಳಿಸಿತು. ಇನ್ನುಳಿದಂತೆ ಮಿಚೆಲ್ ಸ್ಟಾರ್ಕ್ ಎಸೆತಕ್ಕೆ ರನ್ ಸಿಡಿದಲು ಹೋದ ಕೊಹ್ಲಿ ಕ್ಯಾಚ್ ನೀಡಿ ಔಟ್ ಆದರು.

ಇದನ್ನೂ ಓದಿ: Blue Berry Seeds Benefits: ನೇರಳೆ ಹಣ್ಣು, ಬೀಜದಲ್ಲಿ ಅಡಗಿದೆ ಆರೋಗ್ಯದಾಯಕ ಗುಣ!

ಅಜಿಂಕ್ಯ ರಹಾನೆ ಮೇಲೆ ನಿರೀಕ್ಷೆ:

ಟೀಂ ಇಂಡಿಯಾದ ಎಲ್ಲಾ ಭರವಸೆ ಈಗ ಅಜಿಂಕ್ಯ ರಹಾನೆ ಮೇಲೆ ನಿಂತಿದೆ. ಅಜಿಂಕ್ಯ ರಹಾನೆ 29 ರನ್ ಗಳಿಸಿ ಅಜೇಯರಾಗಿದ್ದಾರೆ. ದಿನದಾಟದ ಅಂತ್ಯಕ್ಕೆ ಶ್ರೀಕರ್ ಭರತ್ ಐದು ರನ್ ಗಳಿಸಿ ರಹಾನೆಗೆ ಆಸರೆಯಾಗಿದ್ದರು. ಆಸ್ಟ್ರೇಲಿಯಾದ ಮೊದಲ ಇನ್ನಿಂಗ್ಸ್ ಸ್ಕೋರ್‌ ಗಿಂತ ಭಾರತ ಇನ್ನೂ 318 ರನ್‌ ಗಳಷ್ಟು ಹಿಂದಿದೆ. ಫಾಲೋ ಆನ್ ತಪ್ಪಿಸಲು ತಂಡಕ್ಕೆ ಇನ್ನೂ 119 ರನ್‌ ಗಳ ಅಗತ್ಯವಿದೆ.

 

 

ಕನ್ನಡ ಭಾಷೆಯಲ್ಲಿ ಇತ್ತೀಚಿನ ಕರ್ನಾಟಕ, ದೇಶ, ವಿದೇಶ, ಮನರಂಜನೆ, ಶಿಕ್ಷಣ, ಉದ್ಯೋಗ, ಆರೋಗ್ಯ, ಜೀವನಶೈಲಿ, ಆಧ್ಯಾತ್ಮ,  ಕ್ರೀಡೆ, ಕ್ರೈಂ, ವೈರಲ್, ವ್ಯಾಪಾರ, ತಂತ್ರಜ್ಞಾನ ಸುದ್ದಿಗಳನ್ನು ಓದಲು ಈಗಲೇ ನಮ್ಮ ಜೀ ಕನ್ನಡ ನ್ಯೂಸ್ ಮೊಬೈಲ್ ಅಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3AClgDd
Apple Link - https://apple.co/3wPoNgr
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು 
Twitter Link - https://bit.ly/3n6d2R8
Facebook Link - https://bit.ly/3Hhqmcj 
Youtube Link - https://bit.ly/3LwfnhK 

Instagram Link -  https://bit.ly/3LyfY2l 
Sharechat Link - https://bit.ly/3LCjokI ಲಿಂಕ್ ಗಳ ಮೇಲೆ ಕ್ಲಿಕ್ ಮಾಡಿ

Trending News