Rohit Sharma out of 5th Test : ಟೀಂ ಇಂಡಿಯಾ ಮುಂದಿನ ತಿಂಗಳ ಒಂದರಿಂದ ಇಂಗ್ಲೆಂಡ್ ವಿರುದ್ಧದ 5 ಪಂದ್ಯಗಳ ಟೆಸ್ಟ್ ಸರಣಿಯ ಕೊನೆಯ ಪಂದ್ಯದಲ್ಲಿ ಕಣಕ್ಕಿಳಿಯಲಿದೆ. ಆದರೆ ಈ ಪಂದ್ಯದ ಮೊದಲು, ತಂಡದ ಹಿಟ್‌ಮ್ಯಾನ್ ಓಪನರ್ ಮತ್ತು ನಾಯಕ ರೋಹಿತ್ ಶರ್ಮಾ ಕೊರೊನಾ ಸೋಂಕಿಗೆ ಒಳಗಾಗಿದ್ದರಿಂದ ಭಾರತ ತಂಡ ಹಿನ್ನಡೆ ಅನುಭವಿಸಿತು. ರೋಹಿತ್ ಐದನೇ ಟೆಸ್ಟ್‌ನಲ್ಲಿ ಆಡಬಹುದೇ ಅಥವಾ ಇಲ್ಲವೇ ಎಂದು ಇಡೀ ವಿಶ್ವವೇ ಕಾಯುತ್ತಿತ್ತು. ಆದರೆ, ಈಗ ರೋಹಿತ್ ಆಡುತ್ತಿಲ್ಲ ಎಂಬುವುದು ಖಚಿತವಾಗಿದೆ.
ಐದನೇ ಟೆಸ್ಟ್‌ನಿಂದ ರೋಹಿತ್ ಔಟ್
ರೋಹಿತ್ ಶರ್ಮಾ ಬಗ್ಗೆ ಶಾಕಿಂಗ್ ಸುದ್ದಿಯೊಂದು ಹೊರಬಿದ್ದಿದೆ. ಇಂಗ್ಲೆಂಡ್ ವಿರುದ್ಧದ ಕೊನೆಯ ಟೆಸ್ಟ್‌ಗೆ ಮೊದಲು ರೋಹಿತ್ ಚೇತರಿಸಿಕೊಳ್ಳಲು ಸಾಧ್ಯವಾಗಲಿಲ್ಲ ಮತ್ತು ಈಗ ಅವರು ಈ ದೊಡ್ಡ ಪಂದ್ಯದಿಂದ ಹೊರಗುಳಿಯಬೇಕಾಗುತ್ತದೆ. ರೋಹಿತ್ ಅನುಪಸ್ಥಿತಿಯಲ್ಲಿ ಜಸ್ಪ್ರೀತ್ ಬುಮ್ರಾ ತಂಡದ ನಾಯಕರಾಗಲಿದ್ದಾರೆ. ಸುದ್ದಿ ಸಂಸ್ಥೆ ಎಎನ್‌ಐ ಈ ವಿಷಯವನ್ನು ಬಹಿರಂಗಪಡಿಸಿದೆ. ಐದನೇ ಟೆಸ್ಟ್‌ಗೆ ಮೊದಲು, ಅಭ್ಯಾಸ ಪಂದ್ಯದ ವೇಳೆ ರೋಹಿತ್‌ಗೆ ಕೋವಿಡ್ ಸೋಂಕು ತಗುಲಿತು, ಇಲ್ಲಿಯವರೆಗೆ ಸಂಪೂರ್ಣವಾಗಿ ಚೇತರಿಸಿಕೊಳ್ಳಲು ವಿಫಲರಾಗಿದ್ದಾರೆ.
ಇದನ್ನೂ ಓದಿ : IND vs IRE : ರೋಹಿತ್-ರಾಹುಲ್ ಹಿಂದಿಕ್ಕಿ ವಿಶ್ವ ದಾಖಲೆ ಬರೆದ ಟೀಂ ಇಂಡಿಯಾ ಈ ಜೋಡಿ!
ಕ್ಯಾಪ್ಟನ್ ಆಗಲು ಸಿದ್ಧರಾಗಿದ್ದಾರೆ ಜಸ್ಪ್ರೀತ್ ಬುಮ್ರಾ
ಅಷ್ಟೇ ಅಲ್ಲ ಸ್ವತಃ ಜಸ್ಪ್ರೀತ್ ಬುಮ್ರಾ ಟೀಂ ಇಂಡಿಯಾದ ನೂತನ ನಾಯಕನಾಗಲು ಸಿದ್ಧರಾಗಿದ್ದಾರೆ. ಬುಮ್ರಾ ಭಾರತ ತಂಡದ ಉಪನಾಯಕನಾದ ಸಮಯದಲ್ಲಿ, ಬುಮ್ರಾ ನಾಯಕತ್ವದ ಜವಾಬ್ದಾರಿಯನ್ನು ತೆಗೆದುಕೊಳ್ಳಲು ಸಿದ್ಧರಿದ್ದೀರಾ ಎಂದು ಕೇಳಿದ ಪ್ರಶ್ನೆಗೆ, ಬುಮ್ರಾ ಭವಿಷ್ಯದಲ್ಲಿ ಈ ಜವಾಬ್ದಾರಿ ಸಿಕ್ಕರೆ ಅದಕ್ಕೆ ನಾನೂ ಸಿದ್ಧ ಎಂದು ಹೇಳಿದ್ದರು. ಈಗ ರೋಹಿತ್ ತನ್ನ ಕೊರೋನಾದಿಂದ ಚೇತರಿಸಿಕೊಳ್ಳದ ಕರಣ ಬುಮ್ರಾ ಕನಸು ನನಸಾಗಿದೆ.
ರೋಹಿತ್‌ಗೆ ಕೊರೊನಾ ಕಾಟ
ತಂಡದ ನಾಯಕ ರೋಹಿತ್ ಶರ್ಮಾಗೆ ಕೊರೊನಾ ಪಾಸಿಟಿವ್ ದೃಢಪಟ್ಟಿದೆ. ಶನಿವಾರ ನಡೆದ ರ್ಯಾಪಿಡ್ ಆಂಟಿಜೆನ್ ಪರೀಕ್ಷೆಯಲ್ಲಿ ರೋಹಿತ್ ಶರ್ಮಾ ಅವರಿಗೆ ಕರೋನಾ ಪಾಸಿಟಿವ್ ಕಂಡುಬಂದಿದೆ. ಬಿಸಿಸಿಐ ಟ್ವಿಟರ್ ಮೂಲಕ ಈ ಮಾಹಿತಿ ನೀಡಿದೆ. ಲೀಸೆಸ್ಟರ್‌ಶೈರ್ ವಿರುದ್ಧ ನಡೆಯುತ್ತಿರುವ 4 ದಿನಗಳ ಅಭ್ಯಾಸ ಪಂದ್ಯದಲ್ಲಿ ರೋಹಿತ್ ತಂಡದ ಭಾಗವಾಗಿದ್ದರು. ಮೊದಲ ಇನ್ನಿಂಗ್ಸ್‌ನಲ್ಲಿಯೂ ಬ್ಯಾಟ್ ಮಾಡಿದ ಅವರು ಎರಡನೇ ಇನ್ನಿಂಗ್ಸ್‌ನಲ್ಲಿ ಬ್ಯಾಟಿಂಗ್‌ಗೆ ಬರಲಿಲ್ಲ.
ಇದನ್ನೂ ಓದಿ : ಟೀಂ ಇಂಡಿಯಾದ ಮತ್ತೊಂದು ವಿದೇಶಿ ಪ್ರವಾಸ ಘೋಷಣೆ: ಇಲ್ಲಿದೆ ಸಂಪೂರ್ಣ ಮಾಹಿತಿ
ಕನ್ನಡ ಭಾಷೆಯಲ್ಲಿ ಮತ್ತಷ್ಟು ತಾಜಾ ಸುದ್ದಿಗಳನ್ನು ಓದಲು ನಮ್ಮ ಜೀ ಕನ್ನಡ ನ್ಯೂಸ್ ಮೊಬೈಲ್ ಅಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3hDyh4G
Apple Link - https://apple.co/3hEw2hy
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು Twitter, Facebook, Youtube ಲಿಂಕ್ ಗಳ ಮೇಲೆ ಕ್ಲಿಕ್ಕಿಸಿ.