ಒಂದೇ ಇನಿಂಗ್ಸ್ ನಲ್ಲಿ ಎಲ್ಲ ಆಟಗಾರ್ತಿಯರು 0,0,0,0,0,0,0,0,0,0 ಹೀಗೆ ಔಟ್ ...!

 ಕೇರಳದ ಮಲಪ್ಪುರಂ ಜಿಲ್ಲೆಯಲ್ಲಿ  ಪೆರಿಂಥಾಳಣ್ಣ ಕ್ರಿಕೆಟ್ ಕ್ರೀಡಾಂಗಣದಲ್ಲಿ ವಯನಾಡ್ ವಿರುದ್ಧದ ಕಾಸರಗೋಡು ಬಾಲಕಿಯರ ಅಂಡರ್ -19 ಅಂತರ-ಜಿಲ್ಲೆ ಪಂದ್ಯದಲ್ಲಿ ತಂಡವೊಂದರ ಸ್ಕೋರ್ ಬೋರ್ಡ್ ನಲ್ಲಿ  ಮೊತ್ತ ದಾಖಲಾಗಿದ್ದು ಹೀಗೆ  0,0,0,0,0,0,0,0,0,0,0 ....!

Last Updated : May 16, 2019, 08:38 PM IST
ಒಂದೇ ಇನಿಂಗ್ಸ್ ನಲ್ಲಿ ಎಲ್ಲ ಆಟಗಾರ್ತಿಯರು 0,0,0,0,0,0,0,0,0,0 ಹೀಗೆ  ಔಟ್ ...! title=

ನವದೆಹಲಿ:  ಕೇರಳದ ಮಲಪ್ಪುರಂ ಜಿಲ್ಲೆಯಲ್ಲಿ  ಪೆರಿಂಥಾಳಣ್ಣ ಕ್ರಿಕೆಟ್ ಕ್ರೀಡಾಂಗಣದಲ್ಲಿ ವಯನಾಡ್ ವಿರುದ್ಧದ ಕಾಸರಗೋಡು ಬಾಲಕಿಯರ ಅಂಡರ್ -19 ಅಂತರ-ಜಿಲ್ಲೆ ಪಂದ್ಯದಲ್ಲಿ ತಂಡವೊಂದರ ಸ್ಕೋರ್ ಬೋರ್ಡ್ ನಲ್ಲಿ  ಮೊತ್ತ ದಾಖಲಾಗಿದ್ದು ಹೀಗೆ  0,0,0,0,0,0,0,0,0,0,0 ....!

ಕಾಸರಗೋಡು ತಂಡದ ನಾಯಕಿ ಎಸ್.ಅಕ್ಷತಾ ಅವರು ಟಾಸ್ ಗೆದ್ದು ವಯನಾಡ್ ವಿರುದ್ಧ ಬ್ಯಾಟ್ ಮಾಡಲು ನಿರ್ಧರಿಸಿದರು.ಆದರೆ ಎಲ್ಲ ಆಟಗಾರ್ತಿಯರು ಶೂನ್ಯಕ್ಕೆ ಔಟಾದರು.ಪಂದ್ಯವೊಂದರಲ್ಲಿ ತಂಡದ ಆಟಗಾರೆಲ್ಲರೂ ಶೂನ್ಯಕ್ಕೆ ಔಟಾಗುವ ಮೂಲಕ ಕ್ರಿಕೆಟ್ ಇತಿಹಾಸದಲ್ಲಿ ಕುಖ್ಯಾತ ದಾಖಲೆಗೆ ಸೇರ್ಪಡೆಯಾದರು.ಆದರೆ ಅಚ್ಚರಿಯೆಂದರೆ ಇದರಲ್ಲಿ ನಾಲ್ಕು ರನ್ ಗಳು ಇತರೆಯಾಗಿ ಬಂದವು.

ಕಾಸರಗೋಡು ತಂಡದ ಆರಂಭಿಕ ಆಟಗಾರ್ತಿಯರಾದ ಕೆ.ವೀಕ್ಷಿತ ಮತ್ತು ಎಸ್.ಚೈತ್ರಾ ಮೊದಲ ಎರಡು ಓವರ್ ಗಳವರೆಗೆ ಕ್ರಿಸ್ ನಲ್ಲಿದ್ದರೂ ಕೂಡ ರನ್ ಗಳಿಸುವಲ್ಲಿ ವಿಫಲವಾದರು. ಇನ್ನೊಂದೆಡೆಗೆ ವಯನಾಡ್ ತಂಡದ ನಾಯಕಿ ನಿತ್ಯ ಲೋರ್ದ್ ಆರು ಬಾಲ್ಗಳಲ್ಲಿ ಮೂರು ವಿಕೆಟ್ ಗಳಿಸುವ ಮೂಲಕ ಕಾಸರಗೋಡು ತಂಡದ ಬ್ಯಾಟಿಂಗ್ ಬೆನ್ನೆಲುಬು ಮುರಿದರು.ಐದು ರನ್ ಗಳ ಗೆಲುವಿನ ಗುರಿ ಬೆನ್ನತ್ತಿದ ವಯನಾಡ್ ತಂಡವು ಕೇವಲ ಒಂದು ಓವರ್ ಗಳಲ್ಲಿ ಗೆಲುವನ್ನು ಸಾಧಿಸಿತು.

Trending News