ಟೀಂ ಇಂಡಿಯಾಗೆ ಬಿಗ್ ರಿಲೀಫ್ : ಪಾಕ್ ಟೀಂನಿಂದ ಈ ಡೆಂಜರ್ ಬ್ಯಾಟ್ಸ್‌ಮನ್ ಔಟ್

ಪಾಕಿಸ್ತಾನ ಕ್ರಿಕೆಟ್ ತಂಡದ ಅಪಾಯಕಾರಿ ಬ್ಯಾಟ್ಸ್‌ಮನ್ ಮತ್ತು ಟೀಂ ಇಂಡಿಯಾದ ಶತ್ರು ಟಿ20 ವಿಶ್ವಕಪ್‌ನಿಂದ ಹೊರಗುಳಿದಿದ್ದಾರೆ ಎಂದು ಹೇಳಲಾಗುತ್ತಿದೆ.

Written by - Channabasava A Kashinakunti | Last Updated : Sep 15, 2022, 11:46 AM IST
  • ಟೀಂ ಇಂಡಿಯಾಗೆ ಬಿಗ್ ರಿಲೀಫ್ ನ್ಯೂಸ್
  • ನಾಲ್ಕರಿಂದ ಆರು ವಾರಗಳವರೆಗೆ ಹೊರಗೆ
  • ಟೀಂ ಇಂಡಿಯಾಗೆ ಈತ ದೊಡ್ಡ ಶತ್ರು
ಟೀಂ ಇಂಡಿಯಾಗೆ ಬಿಗ್ ರಿಲೀಫ್ : ಪಾಕ್ ಟೀಂನಿಂದ ಈ ಡೆಂಜರ್ ಬ್ಯಾಟ್ಸ್‌ಮನ್ ಔಟ್ title=

T20 World Cup : ಟಿ20 ವಿಶ್ವಕಪ್ ಅಕ್ಟೋಬರ್ 16 ರಿಂದ ಆಸ್ಟ್ರೇಲಿಯಾದಲ್ಲಿ ಪ್ರಾರಂಭವಾಗಲಿದೆ. ಬಹುತೇಕ ಎಲ್ಲಾ ದೇಶಗಳು T20 ವಿಶ್ವಕಪ್‌ಗೆ ತಮ್ಮ ತಂಡಗಳನ್ನು ಘೋಷಿಸಿವೆ, ಆದರೆ ಪಾಕಿಸ್ತಾನವು ಟಿ20 ವಿಶ್ವಕಪ್‌ಗೆ ತನ್ನ ತಂಡವನ್ನು ಇನ್ನೂ ಆಯ್ಕೆ ಮಾಡಿಲ್ಲ. ಪಾಕಿಸ್ತಾನ ಕ್ರಿಕೆಟ್ ತಂಡದ ಅಪಾಯಕಾರಿ ಬ್ಯಾಟ್ಸ್‌ಮನ್ ಮತ್ತು ಟೀಂ ಇಂಡಿಯಾದ ಶತ್ರು ಟಿ20 ವಿಶ್ವಕಪ್‌ನಿಂದ ಹೊರಗುಳಿದಿದ್ದಾರೆ ಎಂದು ಹೇಳಲಾಗುತ್ತಿದೆ.

ಟೀಂ ಇಂಡಿಯಾದ ದೊಡ್ಡ ಶತ್ರು ಟಿ20 ವಿಶ್ವಕಪ್‌ನಲ್ಲಿ ಆಡುವುದಿಲ್ಲ

ಸೆಪ್ಟೆಂಬರ್ 15 ರವರೆಗೆ ಟಿ20 ವಿಶ್ವಕಪ್‌ಗೆ ತಮ್ಮ ತಂಡಗಳನ್ನು ಘೋಷಿಸಲು ಎಲ್ಲಾ ದೇಶಗಳಿಗೆ ಗಡುವು ನೀಡಲಾಗಿದೆ. ಇಂತಹ ಪರಿಸ್ಥಿತಿಯಲ್ಲಿ ಟಿ20 ವಿಶ್ವಕಪ್‌ಗೆ ಪಾಕಿಸ್ತಾನ ತಂಡವನ್ನು ಯಾವಾಗ ಬೇಕಾದರೂ ಪ್ರಕಟಿಸಬಹುದು. ವರದಿಗಳ ಪ್ರಕಾರ, ಪಾಕಿಸ್ತಾನ ಕ್ರಿಕೆಟ್ ತಂಡದ ಅಪಾಯಕಾರಿ ಬ್ಯಾಟ್ಸ್‌ಮನ್ ಫಖರ್ ಜಮಾನ್ ಟಿ20 ವಿಶ್ವಕಪ್‌ನಲ್ಲಿ ಆಡುವುದಿಲ್ಲ.

ಇದನ್ನೂ ಓದಿ : ICC T20 Rankings : ಐಸಿಸಿ ಟಿ20 ರ‍್ಯಾಕಿಂಗ್ ಪಟ್ಟಿಯಲ್ಲಿ ಮಿಂಚಿದ ವಿರಾಟ್ ಕೊಹ್ಲಿ

ಟೀಂ ಇಂಡಿಯಾಗೆ ಬಿಗ್ ರಿಲೀಫ್ ನ್ಯೂಸ್

ತನ್ನ ಯೂಟ್ಯೂಬ್ ಚಾನೆಲ್ 'ಕ್ಯಾಟ್ ಬಿಹೈಂಡ್' ನಲ್ಲಿ ಬಿಗ್ ಅಪ್ಡೇಟ್ ನೀಡಿದ್ದು, ಪಾಕಿಸ್ತಾನದ ಮಾಜಿ ವಿಕೆಟ್ ಕೀಪರ್ ಬ್ಯಾಟ್ಸ್‌ಮನ್ ರಶೀದ್ ಲತೀಫ್, ಫಖರ್ ಜಮಾನ್ ಟಿ 20 ವಿಶ್ವಕಪ್‌ನಲ್ಲಿ ಆಡುವುದಿಲ್ಲ ಎಂದು ಹೇಳಿದ್ದಾರೆ. ಟಿ20 ವಿಶ್ವಕಪ್‌ನಲ್ಲಿ ಫಖರ್ ಜಮಾನ್ ಆಡದಿದ್ದರೆ, ಟೀಂ ಇಂಡಿಯಾಗೆ ಇದು ಬಿಗ್ ರಿಲೀಫ್ ನೀಡಿದಂತಾಗಿದೆ

ನಾಲ್ಕರಿಂದ ಆರು ವಾರಗಳವರೆಗೆ ಹೊರಗೆ

ರಶೀದ್ ಲತೀಫ್ ಮಾತನಾಡಿ, 'ಫಖರ್ ಜಮಾನ್ ಟಿ20 ವಿಶ್ವಕಪ್ ತಂಡದಲ್ಲಿ ಇರುವುದಿಲ್ಲ. ಫಖರ್ ಮೊಣಕಾಲಿನ ಗಾಯದಿಂದ ಬಳಲುತ್ತಿದ್ದಾರೆ ಹೀಗಾಗಿ, ನಾಲ್ಕರಿಂದ ಆರು ವಾರಗಳ ಕಾಲ ಟೀಂನಿಂದ ಹೊರಗುಳಿದಿದ್ದಾರೆ. ಅವರು ಒಂದು ತಿಂಗಳ ವಿಶ್ರಾಂತಿಗೆ ಸಹ ಹೋಗಬಹುದು. ಅವರ ಗಾಯವು ಶಾಹೀನ್ ಅಫ್ರಿದಿಯಂತೆಯೇ ಇದೆ. ಅವರು ಬೇಗ ಗುಣಮುಖರಾಗಲಿ ಎಂದು ಹಾರೈಸುತ್ತೇನೆ ಎಂದು ಹೇಳಿದ್ದಾರೆ.

ಟೀಂ ಇಂಡಿಯಾಗೆ ಈತ ದೊಡ್ಡ ಶತ್ರು

2017 ರ ಐಸಿಸಿ ಚಾಂಪಿಯನ್ಸ್ ಟ್ರೋಫಿಯಲ್ಲಿ ಭಾರತಕ್ಕೆ ಬಿಗ್ ಶಾಕ್ ನೀಡಿದ್ದು ಇದೆ ಬ್ಯಾಟ್ಸ್‌ಮನ್ ಫಖರ್ ಜಮಾನ್, ಹೌದು, 2017 ರ ಐಸಿಸಿ ಚಾಂಪಿಯನ್ಸ್ ಟ್ರೋಫಿಯ ಫೈನಲ್‌ನಲ್ಲಿ, ಪಾಕಿಸ್ತಾನ ಕ್ರಿಕೆಟ್ ತಂಡವು ಫಖರ್ ಜಮಾನ್ 114 ರನ್‌ಗಳ ಆಧಾರದ ಮೇಲೆ ಭಾರತಕ್ಕೆ ಗೆಲ್ಲಲು 339 ರನ್‌ಗಳ ಗುರಿಯನ್ನು ನೀಡಿತು, ಇದಕ್ಕೆ ಉತ್ತರವಾಗಿ ಟೀಂ ಇಂಡಿಯಾ ಕೇವಲ 158 ರನ್‌ಗಳಿಗೆ ಆಲೌಟ್ ಆಯಿತು. ಟೀಂ ಇಂಡಿಯಾ 180 ರನ್‌ಗಳ ಸೋಲನ್ನು ಎದುರಿಸಬೇಕಾಯಿತು ಮತ್ತು ಐಸಿಸಿ ಚಾಂಪಿಯನ್ಸ್ ಟ್ರೋಫಿ ಪ್ರಶಸ್ತಿಯೂ ಅದರ ಕೈಯಿಂದ ಕೈ ತಪ್ಪಿತು. 2017 ರ ಐಸಿಸಿ ಚಾಂಪಿಯನ್ಸ್ ಟ್ರೋಫಿಯಲ್ಲಿ ಟೀಂ ಇಂಡಿಯಾ ಸೋಲಿನ ನಂತರ, ಆಗಿನ ಟೀಂ ಇಂಡಿಯಾದ ಕೋಚ್ ಆಗಿದ್ದ ಅನಿಲ್ ಕುಂಬ್ಳೆ ಮುಖ್ಯ ಕೋಚ್ ಹುದ್ದೆಗೆ ರಾಜೀನಾಮೆ ನೀಡಿದ್ದರು.

ಇದನ್ನೂ ಓದಿ : T20 World Cup : ಟಿ20 ವಿಶ್ವಕಪ್‌ನ Playing 11 ನಿಂದ ರಿಷಬ್ ಪಂತ್ ಔಟ್ : ಹಾಗಿದ್ರೆ, ಯಾರಿಗೆ ಸ್ಥಾನ?

ಕನ್ನಡ ಭಾಷೆಯಲ್ಲಿ ಮತ್ತಷ್ಟು ತಾಜಾ ಸುದ್ದಿಗಳನ್ನು ಓದಲು ನಮ್ಮ ಜೀ ಕನ್ನಡ ನ್ಯೂಸ್ ಮೊಬೈಲ್ ಅಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3hDyh4G
Apple Link - https://apple.co/3hEw2hy
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು TwitterFacebookYoutube ಲಿಂಕ್ ಗಳ ಮೇಲೆ ಕ್ಲಿಕ್ ಮಾಡಿ.

Trending News