T20 World Cup 2022 : ಜಡೇಜಾ ಸ್ಥಾನಕ್ಕೆ ಈ ಆಟಗಾರನಿಗೆ ಚಾನ್ಸ್, ಮೊದಲ ಬಾರಿಗೆ ಟಿ20 ವಿಶ್ವಕಪ್​ಗೆ ಎಂಟ್ರಿ!

ಜಡೇಜಾ ಹೊರಗುಳಿದಿರುವುದು ಭಾರತಕ್ಕೆ ಭಾರಿ ಹೊಡೆತ ಬಿದ್ದಿದೆ. ಆದರೆ ಈ ಸ್ಟಾರ್ ಆಟಗಾರನ ನಿರ್ಗಮನದಿಂದ ಟೀಂ ಇಂಡಿಯಾದ ಮತ್ತೊಬ್ಬ ಆಟಗಾರನಿಗೆ ಅದೃಷ್ಟದ ಬಾಗಿಲು ತೆರೆದಿದೆ. 

Written by - Channabasava A Kashinakunti | Last Updated : Sep 4, 2022, 06:16 PM IST
  • ಏಷ್ಯಾಕಪ್ ಟಿ20 ವೇಳೆ ಭಾರತ ತಂಡ ಭಾರೀ ಹಿನ್ನಡೆ
  • ಟಿ20 ವಿಶ್ವಕಪ್‌ನಿಂದ ಹೊರಗುಳಿದ ವೀಂದ್ರ ಜಡೇಜಾ
  • ಗಾಯದ ಸಮಸ್ಯೆಯಿಂದ ಬಳಲುತ್ತಿರುವ ಜಡೇಜಾ
T20 World Cup 2022 : ಜಡೇಜಾ ಸ್ಥಾನಕ್ಕೆ ಈ ಆಟಗಾರನಿಗೆ ಚಾನ್ಸ್, ಮೊದಲ ಬಾರಿಗೆ ಟಿ20 ವಿಶ್ವಕಪ್​ಗೆ ಎಂಟ್ರಿ! title=

T20 World Cup 2022 : ಏಷ್ಯಾಕಪ್ ಟಿ20 ವೇಳೆ ಭಾರತ ತಂಡ ಭಾರೀ ಹಿನ್ನಡೆಯಾಗಿದೆ. ವಾಸ್ತವವಾಗಿ, ಏಷ್ಯಾ ಕಪ್‌ನಲ್ಲಿ, ಭಾರತೀಯ ತಂಡದ ಸ್ಟಾರ್ ಆಲ್‌ರೌಂಡರ್ ರವೀಂದ್ರ ಜಡೇಜಾ ಗಾಯಗೊಂಡ ಕಾರಣ ಟಿ20 ವಿಶ್ವಕಪ್‌ನಿಂದ ಹೊರಗುಳಿದಿದ್ದಾರೆ. ಜಡೇಜಾ ಹೊರಗುಳಿದಿರುವುದು ಭಾರತಕ್ಕೆ ಭಾರಿ ಹೊಡೆತ ಬಿದ್ದಿದೆ. ಆದರೆ ಈ ಸ್ಟಾರ್ ಆಟಗಾರನ ನಿರ್ಗಮನದಿಂದ ಟೀಂ ಇಂಡಿಯಾದ ಮತ್ತೊಬ್ಬ ಆಟಗಾರನಿಗೆ ಅದೃಷ್ಟದ ಬಾಗಿಲು ತೆರೆದಿದೆ. 

ಗಾಯದ ಸಮಸ್ಯೆಯಿಂದ ಬಳಲುತ್ತಿರುವ ಜಡೇಜಾ

ಮೊಣಕಾಲು ಗಾಯದ ಸಮಸ್ಯೆಯಿಂದಾಗಿ ರವೀಂದ್ರ ಜಡೇಜಾ ಏಷ್ಯಾಕಪ್ ಮತ್ತು ಟಿ20 ವಿಶ್ವಕಪ್‌ನಿಂದ ಹೊರಗುಳಿದಿದ್ದಾರೆ. ಜಡೇಜಾ ಈಗ ಚೇತರಿಸಿಕೊಳ್ಳಲು ತಿಂಗಳುಗಳು ಬೇಕು. ಅವರು ಕೂಡ ಟೀಂ ಇಂಡಿಯಾದಿಂದ ಬಹಳ ಕಾಲ ಹೊರಗುಳಿಯಬೇಕಾಗುತ್ತದೆ. ಹೀಗಾಗಿ, ದೀಪಕ್ ಹೂಡಾಗೆ ತಂಡದಲ್ಲಿ ಅವಕಾಶ ನೀಡಬಹುದು. ದೀಪಕ್ ಉತ್ತಮ ಬ್ಯಾಟ್ಸ್‌ಮನ್ ಮಾತ್ರವಲ್ಲ, ಸಮಯ ಬಂದಾಗ ಬೌಲಿಂಗ್ ಕೂಡ ಮಾಡುತ್ತಾರೆ.

ಇದನ್ನೂ ಓದಿ : Video : ಈ 4 ಅಕ್ಷರ ಪದ ಹೇಳಲು ನಾಚಿನೀರಾದ ರಾಹುಲ್ ದ್ರಾವಿಡ್

ಜಡೇಜಾಗೆ ಅವಕಾಶ ಸಿಗಬಹುದು

ಟೀಂ ಇಂಡಿಯಾದ ಸ್ಟಾರ್ ಆಲ್‌ರೌಂಡರ್ ರವೀಂದ್ರ ಜಡೇಜಾ ಇನ್ನು ಮುಂದೆ 2022 ರ ಏಷ್ಯಾ ಕಪ್‌ನಲ್ಲಿ ಟೀಂ ಇಂಡಿಯಾದಲ್ಲಿ ಆಡಿಲ್ಲ. ಗಾಯದ ಸಮಸ್ಯೆಯಿಂದ ರವೀಂದ್ರ ಜಡೇಜಾ ತಂಡದಿಂದ ಹೊರಗುಳಿದಿದ್ದು, ರವೀಂದ್ರ ಜಡೇಜಾ ಬದಲಿಗೆ ದೀಪಕ್ ಹೂಡಾ ಪ್ಲೇಯಿಂಗ್ 11 ನಲ್ಲಿ ಸ್ಥಾನ ಪಡೆಯಬಹುದು. ದೀಪಕ್ ಹೂಡಾ ಬ್ಯಾಟಿಂಗ್ ಜೊತೆಗೆ ಬೌಲಿಂಗ್ ಕೂಡ ಮಾಡುತ್ತಾರೆ. ಮತ್ತೊಂದೆಡೆ, ವಿಶ್ವಕಪ್ ತಂಡದಲ್ಲಿ ಜಡೇಜಾ ಬದಲಿಗೆ ಹೂಡಾ ಕೂಡ ಆಯ್ಕೆಯಾಗಬಹುದು.

ಟೀಂ ಇಂಡಿಯಾದಲ್ಲಿ ದೀಪಕ್ ಅತ್ತುತ್ಯಮ ಪ್ರದರ್ಶನ

ಇದುವರೆಗೆ ಟೀಂ ಇಂಡಿಯಾ ಪರ ದೀಪಕ್ ಹೂಡಾ ಅತ್ತುತ್ಯಮ ಪ್ರದರ್ಶನ ನೀಡಿದ್ದಾರೆ, ವಿಶೇಷವೆಂದರೆ ಅವರು ಇದುವರೆಗೆ ಟೀಂ ಇಂಡಿಯಾ ಪರ ಆಡಿದ ಎಲ್ಲಾ ಪಂದ್ಯಗಳಲ್ಲಿ ತಂಡವೇ ಗೆಲುವು ಸಾಧಿಸಿದೆ. ದೀಪಕ್ ಹೂಡಾ ಟೀಂ ಇಂಡಿಯಾ ಪರ ಇದುವರೆಗೆ ಒಟ್ಟು 9 ಟಿ20 ಹಾಗೂ 8 ಏಕದಿನ ಪಂದ್ಯಗಳನ್ನಾಡಿದ್ದು, ಈ ವೇಳೆ ಟೀಂ ಇಂಡಿಯಾ ಎಲ್ಲಾ ಪಂದ್ಯಗಳನ್ನು ಗೆದ್ದಿದೆ. ದೀಪಕ್ ಹೂಡಾ 9 ಟಿ20 ಪಂದ್ಯಗಳಲ್ಲಿ 54.80 ಸರಾಸರಿಯಲ್ಲಿ 274 ರನ್ ಗಳಿಸಿದ್ದಾರೆ. ಅದೇ ಸಮಯದಲ್ಲಿ, 8 ಏಕದಿನ ಪಂದ್ಯಗಳಲ್ಲಿ, ದೀಪಕ್ ಹೂಡಾ 28.2 ಸರಾಸರಿಯಲ್ಲಿ 141 ರನ್ ಗಳಿಸಿದ್ದಾರೆ.

ಇದನ್ನೂ ಓದಿ : Asia Cup 2022 ರಲ್ಲಿ ಹೆಚ್ಚು ರನ್ ಗಳಿಸಿದ್ದು ರೋಹಿತ್-ವಿರಾಟ್ ಅಲ್ಲ, ಈ ಆಟಗಾರ!

ಕನ್ನಡ ಭಾಷೆಯಲ್ಲಿ ಮತ್ತಷ್ಟು ತಾಜಾ ಸುದ್ದಿಗಳನ್ನು ಓದಲು ನಮ್ಮ ಜೀ ಕನ್ನಡ ನ್ಯೂಸ್ ಮೊಬೈಲ್ ಅಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3AClgDd
Apple Link - https://apple.co/3wPoNgr
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು TwitterFacebookYoutube ಲಿಂಕ್ ಗಳ ಮೇಲೆ ಕ್ಲಿಕ್ ಮಾಡಿ.

Trending News