T20 World Cup 2022: ಜಿಂಬಾಬ್ವೆ ವಿರುದ್ಧದ ಪಂದ್ಯಕ್ಕೆ ಈ ಇಬ್ಬರನ್ನು ಕೈಬಿಡ್ತಾರಾ ರೋಹಿತ್ ಶರ್ಮಾ?

ನೆದರಲ್ಯಾಂಡ್ ತಂಡವು ದಕ್ಷಿಣ ಆಫ್ರಿಕಾವನ್ನು ಸೋಲಿಸಿರುವುದರಿಂದ ಟೀಂ ಇಂಡಿಯಾ ಸೆಮಿಫೈನಲ್‍ಗೆ ಎಂಟ್ರಿ ಕೊಟ್ಟಿದೆ.

Written by - Puttaraj K Alur | Last Updated : Nov 6, 2022, 10:10 AM IST
  • ಟಿ-20 ವಿಶ್ವಕಪ್‍ನಲ್ಲಿ ಕಳಪೆ ಪ್ರದರ್ಶನ ನೀಡುತ್ತಿರುವ ಆಟಗಾರರಿಗೆ ಗೇಟ್‍ಪಾಸ್?
  • ಆರ್.ಅಶ್ವಿನ್ ಮತ್ತು ದಿನೇಶ ಕಾರ್ತಿಕ್‍ರನ್ನು ತಂಡದಿಂದ ಕೈಬಿಡ್ತಾರಾ ರೋಹಿತ್ ಶರ್ಮಾ
  • ನೆದರಲ್ಯಾಂಡ್ ಎದುರು ದಕ್ಷಿಣ ಆಫ್ರಿಕಾ ಸೋತಿದ್ದರಿಂದ ಟೀಂ ಇಂಡಿಯಾ ಸೆಮೀಸ್‍ಗೆ ಪ್ರವೇಶ
T20 World Cup 2022: ಜಿಂಬಾಬ್ವೆ ವಿರುದ್ಧದ ಪಂದ್ಯಕ್ಕೆ ಈ ಇಬ್ಬರನ್ನು ಕೈಬಿಡ್ತಾರಾ ರೋಹಿತ್ ಶರ್ಮಾ? title=
ಕಳಪೆ ಪ್ರದರ್ಶನ ನೀಡುತ್ತಿರುವ ಆಟಗಾರರಿಗೆ ಗೇಟ್‍ಪಾಸ್?

ನವದೆಹಲಿ: T20 ವಿಶ್ವಕಪ್‌ನಲ್ಲಿ ಟೀಂ ಇಂಡಿಯಾ ಪರ ಇಬ್ಬರು ಆಟಗಾರರು ಅತ್ಯಂತ ಕಳಪೆ ಪ್ರದರ್ಶನ ನೀಡುತ್ತಿದ್ದಾರೆ. ಈ ಆಟಗಾರರು ಭಾರತ ತಂಡಕ್ಕೆ ದೊಡ್ಡ ಹೊರೆಯಾಗಿ ಪರಿಣಮಿಸಿದ್ದಾರೆ. ಇಂದು ಮೆಲ್ಬೋರ್ನ್ ಮೈದಾನದಲ್ಲಿ ಭಾರತ ಮತ್ತು ಜಿಂಬಾಬ್ವೆ ಮುಖಾಮುಖಿಯಾಗುತ್ತಿವೆ. ಈ ಪಂದ್ಯಕ್ಕೆ ನಾಯಕ ರೋಹಿತ್ ಶರ್ಮಾ ಕಳಪೆ ಫಾರ್ಮ್‌ನಲ್ಲಿರುವ ಇಬ್ಬರು ಆಟಗಾರರನ್ನು ತಂಡದಿಂದ ಕೈಬಿಡಬಹುದು ಎಮದು ಹೇಳಲಾಗಿದೆ.

ಈ ಸ್ಪಿನ್ನರ್ ನಿರಾಸೆ ಮೂಡಿಸಿದರು

2022ರ ಟಿ-20 ವಿಶ್ವಕಪ್‌ನಲ್ಲಿ ರವಿಚಂದ್ರನ್ ಅಶ್ವಿನ್ ಅಮೋಘ ಆಟ ಪ್ರದರ್ಶಿಸುವಲ್ಲಿ ಸಂಪೂರ್ಣ ವಿಫಲರಾಗಿದ್ದಾರೆ. ಅವರು ಟೀಂ ಇಂಡಿಯಾಕ್ಕೆ ದೊಡ್ಡ ತಲೆನೋವಾಗಿ ಪರಿಣಮಿಸಿದ್ದಾರೆ. ಟಿ-20 ವಿಶ್ವಕಪ್‌ನ 4 ಪಂದ್ಯಗಳಲ್ಲಿ ಕೇವಲ 3 ವಿಕೆಟ್‌ಗಳನ್ನು ಪಡೆದಿದ್ದಾರೆ. ಅಶ್ವಿನ್ ಟೆಸ್ಟ್ ಕ್ರಿಕೆಟ್‌ನಲ್ಲಿ ಟೀಂ ಇಂಡಿಯಾಗೆ ಪ್ರಯೋಜನಕಾರಿ ಎಂದು ಸಾಬೀತುಪಡಿಸುತ್ತಿರಬಹುದು, ಆದರೆ ಅವರ ಮ್ಯಾಜಿಕ್ ಟಿ-20 ಕ್ರಿಕೆಟ್‌ನಲ್ಲಿ ಕಾರ್ಯನಿರ್ವಹಿಸುತ್ತಿಲ್ಲ. ಅವರು ತುಂಬಾ ದುಬಾರಿ ಬೌಲಿಂಗ್ ಮಾಡುತ್ತಿದ್ದಾರೆ.   

ಇದನ್ನೂ ಓದಿ: T20 World Cup 2022: ಲೈಂಗಿಕ ದೌರ್ಜನ್ಯ ಆರೋಪ: ಸಿಡ್ನಿಯಲ್ಲಿ ಸ್ಟಾರ್ ಕ್ರಿಕೆಟಿಗ ಬಂಧನ!

ದಕ್ಷಿಣ ಆಫ್ರಿಕಾ ವಿರುದ್ಧದ ಪಂದ್ಯದಲ್ಲಿ ಸಾಕಷ್ಟು ರನ್ ಬಿಟ್ಟುಕೊಟ್ಟ ಕಾರಣ ಟೀಂ ಇಂಡಿಯಾ ಸೋಲು ಕಾಣಬೇಕಾಯಿತು. ಅಶ್ವಿನ್ 63 ಟಿ-20 ಪಂದ್ಯಗಳಲ್ಲಿ 69 ವಿಕೆಟ್ ಪಡೆದಿದ್ದಾರೆ. ಇಂತಹ ಪರಿಸ್ಥಿತಿಯಲ್ಲಿ ಜಿಂಬಾಬ್ವೆ ವಿರುದ್ಧ ಅಶ್ವಿನ್ ಬದಲಿಗೆ ಯುಜುವೇಂದ್ರ ಚಹಾಲ್ ಅವರನ್ನು ಸೇರಿಸಿಕೊಳ್ಳಬಹುದು ಎಂದು ವರದಿಯಾಗಿದೆ.

ಈ ವಿಕೆಟ್ ಕೀಪರ್ ಫ್ಲಾಪ್ ಆಗಿದ್ದಾರೆ

ಐಪಿಎಲ್ 2022ರಲ್ಲಿ ಅತ್ಯುತ್ತಮ ಆಟ ಪ್ರದರ್ಶಿಸುವ ಮೂಲಕ ಟೀಂ ಇಂಡಿಯಾದಲ್ಲಿ ಸ್ಥಾನ ಖಚಿತಪಡಿಸಿಕೊಂಡಿರುವ ದಿನೇಶ್ ಕಾರ್ತಿಕ್, ಟಿ-20 ವಿಶ್ವಕಪ್‌ನಲ್ಲಿ ಫಿನಿಶರ್ ಫಾರ್ಮ್ ತೋರಿಸಲು ಸಾಧ್ಯವಾಗಿಲ್ಲ. ಇವರಿಂದಾಗಿ ಸ್ಟಾರ್ ವಿಕೆಟ್ ಕೀಪರ್ ಬ್ಯಾಟ್ಸ್ ಮನ್ ರಿಷಬ್ ಪಂತ್ ಬೆಂಚ್ ಮೇಲೆ ಕೂರಬೇಕಾಗಿದೆ. ದಿನೇಶ್ ಕಾರ್ತಿಕ್ ಅವರಿಂದ ದೊಡ್ಡ ಇನ್ನಿಂಗ್ಸ್ ನಿರೀಕ್ಷಿಸಿದಾಗಲೆಲ್ಲಾ ನಿರಾಸೆ ಮೂಡಿಸಿದ್ದಾರೆ. ಬಹುಬೇಗನೆ ಔಟಾಗುವ ಕಾರ್ತಿಕ್ ಹೇಳಿಕೊಳ್ಳುವಂತಹ ಪ್ರದರ್ಶನ ನೀಡುತ್ತಿಲ್ಲ.    

ಇದನ್ನೂ ಓದಿ: T20 World Cup 2022: ದಕ್ಷಿಣ ಆಫ್ರಿಕಾಗೆ ಹೀನಾಯ ಸೋಲು, ಪಾಕಿಸ್ತಾನಕ್ಕೆ ಸುವರ್ಣಾವಕಾಶ!

2022ರ ಟಿ-20 ವಿಶ್ವಕಪ್‌ನಲ್ಲಿ ದಿನೇಶ್ ಕಾರ್ತಿಕ್ ಒಂದೇ ಒಂದು ಅರ್ಧ ಶತಕ  ಗಳಿಸಿಲ್ಲ. 37 ವರ್ಷದ ಕಾರ್ತಿಗೆ ವೃತ್ತಿಜೀವನದ ಮೇಲೆ ವಯಸ್ಸಿನ ಪ್ರಭಾವವೂ ಗೋಚರಿಸುತ್ತದೆ. ಕಾರ್ತಿಕ್ ಟೀಂ ಇಂಡಿಯಾ ಪರ 60 ಟಿ-20 ಪಂದ್ಯಗಳಲ್ಲಿ 686 ರನ್ ಗಳಿಸಿದ್ದಾರೆ. ಜಿಂಬಾಬ್ವೆ ವಿರುದ್ಧ ನಾಯಕ ರೋಹಿತ್ ಅವರು ರಿಷಬ್ ಪಂತ್‍ಗೆ ಅವಕಾಶ ನೀಡಬಹುದು.

ಸೆಮಿಫೈನಲ್‍ಗೆ ಟೀಂ ಇಂಡಿಯಾ ಎಂಟ್ರಿ

ಟಿ-20 ವಿಶ್ವಕಪ್‌ನಲ್ಲಿ ಆಡಿದ 4 ಪಂದ್ಯಗಳಲ್ಲಿ 3 ಗೆಲುವು ಸಾಧಿಸಿರುವ ಟೀಂ ಇಂಡಿಯಾ 6 ಅಂಕಗಳೊಂದಿಗೆ ಗ್ರೂಪ್-2ರಲ್ಲಿ ಅಗ್ರಸ್ಥಾನದಲ್ಲಿದೆ. ಇಂದು ನಡೆದ ಮಹತ್ವದ ಪಂದ್ಯದಲ್ಲಿ ನೆದರಲ್ಯಾಂಡ್ ತಂಡವು ದಕ್ಷಿಣ ಆಫ್ರಿಕಾಗೆ ಸೋಲಿನ ರುಚಿ ತೋರಿಸಿದೆ. ಹೀಗಾಗಿ ಭಾರತ ತಂಡವು ನೇರವಾಗಿ ಸೆಮಿಫೈನಲ್ ಪ್ರವೇಶಿಸಿದೆ. ದಕ್ಷಿಣ ಆಫ್ರಿಕಾ ಟೂರ್ನಿಯಿಂದ ಹೊರಬಿದ್ದರೆ, ಪಾಕಿಸ್ತಾನ ಅಥವಾ ಬಾಂಗ್ಲಾದೇಶಕ್ಕೆ ಸೆಮೀಸ್ ಅವಕಾಶವಿದೆ. ಜಿಂಬಾಬ್ವೆ ವಿರುದ್ಧ ಸೋತರೂ ಸಹ ಟೀಂ ಇಂಡಿಯಾ ಸೆಮಿಫೈನಲ್ ಪ್ರವೇಶಿಸಲಿದೆ.   

ಕನ್ನಡ ಭಾಷೆಯಲ್ಲಿ ಮತ್ತಷ್ಟು ತಾಜಾ ಸುದ್ದಿಗಳನ್ನು ಓದಲು ನಮ್ಮ ಜೀ ಕನ್ನಡ ನ್ಯೂಸ್ ಮೊಬೈಲ್ ಅಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3AClgDd
Apple Link - https://apple.co/3wPoNgr
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು TwitterFacebookYoutube ಲಿಂಕ್ ಗಳ ಮೇಲೆ ಕ್ಲಿಕ್ ಮಾಡಿ.

Trending News