ನವದೆಹಲಿ: Ind Vs NZ - ಟಿ20 ವಿಶ್ವಕಪ್ 2021 (T20 World Cup)ಯುಎಇ ನೆಲದಲ್ಲಿ ನಡೆಯುತ್ತಿದ್ದು, ಇಲ್ಲಿ ಎಲ್ಲಾ ತಂಡಗಳು ಪ್ರಶಸ್ತಿ ಗೆಲ್ಲಲು ಹೋರಾಡುತ್ತಿವೆ. ಇಲ್ಲಿಯವರೆಗೆ ಟೂರ್ನಿಯಲ್ಲಿ ನಾವು ದೊಡ್ಡ ಏರಿಳಿತಗಳನ್ನು ಕಂಡಿದ್ದೇವೆ. ಎರಡು ಬಾರಿಯ ಚಾಂಪಿಯನ್ ಆಗಿದ್ದ ವೆಸ್ಟ್ ಇಂಡೀಸ್ ತನ್ನ ಮೊದಲ ಎರಡು ಪಂದ್ಯಗಳಲ್ಲಿ ಸೋತಿದೆ. 2ನೇ ಗುಂಪಿನ ಪಂದ್ಯದಲ್ಲಿ ಭಾರತ (India), ಪಾಕಿಸ್ತಾನ (Pakistan) ವಿರುದ್ಧ 10 ವಿಕೆಟ್‌ಗಳ ಹೀನಾಯ ಸೋಲು ಕಂಡಿತ್ತು. ಆಸ್ಟ್ರೇಲಿಯಾದ ಶ್ರೇಷ್ಠ ಸ್ಪಿನ್ನರ್ ಶೇನ್ ವಾರ್ನ್ ವರ್ಲ್ಡ್ ಕಪ್ 2021ರ ಕುರಿತು ಭವಿಷ್ಯ ನುಡಿದಿದ್ದಾರೆ, ಅವರು T20 ವಿಶ್ವಕಪ್‌ನ ಸೆಮಿಫೈನಲ್‌ಗೆ ಪ್ರವೇಶಿಸಬಹುದಾದ ನಾಲ್ಕು ತಂಡಗಳ ಹೆಸರನ್ನು ಹೇಳಿದ್ದಾರೆ. ಆ ತಂಡಗಳು ಯಾವುವು ತಿಳಿದುಕೊಳ್ಳೋಣ ಬನ್ನಿ.
ಈ ನಾಲ್ಕು ತಂಡಗಳು ಸೆಮಿಫೈನಲ್ ಹಂತಕ್ಕೆ ತಲುಪುವ ಸಾಧ್ಯತೆ (Shane Warne Prediction)
ಆಸ್ಟ್ರೇಲಿಯಾದ ದಿಗ್ಗಜ ಸ್ಪಿನ್ನರ್ ಶೇನ್ ವಾರ್ನ್ (Shane Warne) ಅವರು ಗ್ರೂಪ್ 1 ಮತ್ತು ಗ್ರೂಪ್ 2 ರ ತಲಾ ಎರಡು ತಂಡಗಳ ಹೆಸರನ್ನು ಟ್ವೀಟ್ ಮಾಡುವ ಮೂಲಕ ಸೆಮಿ ಫೈನಲ್ (Semifinal) ಹಂತ ಪ್ರವೇಶಿಸಲಿವೆ ಎಂದು ಹೇಳಿದ್ದಾರೆ.. ಶೇನ್ ಪ್ರಕಾರ, ಗ್ರೂಪ್ 1 ರಿಂದ ಆಸ್ಟ್ರೇಲಿಯಾ ಮತ್ತು ಇಂಗ್ಲೆಂಡ್, ಗುಂಪು 2 ರಿಂದ ಭಾರತ ಮತ್ತು ಪಾಕಿಸ್ತಾನ, ಈ ನಾಲ್ಕು ತಂಡಗಳು ಸೆಮಿಫೈನಲ್ ತಲುಪಬಹುದು ಎಂದಿದ್ದಾರೆ. ಆಸ್ಟ್ರೇಲಿಯಾ ವಿರುದ್ಧ ಇಂಗ್ಲೆಂಡ್ ಅಥವಾ ಭಾರತ ವಿರುದ್ಧ ಪಾಕಿಸ್ತಾನವನ್ನು ಫೈನಲ್‌ನಲ್ಲಿ (T20 World Cup Final) ನೋಡಲು ಶೇನ್ ಬಯಸಿದ್ದಾರೆ.
ಪಾಕ್ ತಂಡ ಜಬರ್ದಸ್ತ್ ಫಾರ್ಮ್ ನಲ್ಲಿದೆ (T20 World Cup News)
ಪ್ರಸ್ತುತ ಟಿ20 ವಿಶ್ವಕಪ್‌ನಲ್ಲಿ ಪಾಕಿಸ್ತಾನ ಜಬರ್ದಸ್ತ್ ಫಾರ್ಮ್‌ನಲ್ಲಿದೆ. ಮೊದಲ ಪಂದ್ಯದಲ್ಲಿ ಪಾಕಿಸ್ತಾನ ಏಕಪಕ್ಷೀಯ ರೀತಿಯಲ್ಲಿ ಭಾರತವನ್ನು 10 ವಿಕೆಟ್‌ಗಳಿಂದ ಸೋಲಿಸುವ ಮೂಲಕ ಇತಿಹಾಸವನ್ನು ಬದಲಾಯಿಸಿದೆ. ಇದೇ ವೇಳೆ ಎರಡನೇ ಪಂದ್ಯದಲ್ಲಿ ನ್ಯೂಜಿಲೆಂಡ್ 5 ವಿಕೆಟ್‌ಗಳಿಂದ ಸೋಲನ್ನು ಅನುಭವಿಸಿದೆ. ಪಾಕಿಸ್ತಾನ ಕೂಡ ಅಫ್ಘಾನಿಸ್ತಾನವನ್ನು 5 ವಿಕೆಟ್‌ಗಳಿಂದ ಸೋಲಿಸಿದೆ. ಪಾಕಿಸ್ತಾನದ ಮಾರಕ ಫಾರ್ಮ್ ಅನ್ನು ನೋಡಿದರೆ, ಅವರು ಫೈನಲ್ ತಲುಪಲು ಅರ್ಹರಾಗಿದ್ದಾರೆ ಎಂದೇ ಬಿಂಬಿತವಾಗುತ್ತಿದೆ.
ಇದನ್ನೂ ಓದಿ-T20 World Cup 2021: ಫೈನಲ್ ಆಡುವ ತಂಡಗಳ ಬಗ್ಗೆ ಬೆನ್ ಸ್ಟೋಕ್ಸ್ ಭವಿಷ್ಯ
ಆಸ್ಟ್ರೇಲಿಯಾ (Australia) ಹಾಗೂ ಇಂಗ್ಲೆಂಡ್ (England)
ಇಂಗ್ಲೆಂಡ್ ತಂಡ ಈಗಾಗಲೇ ತನ್ನ ಅಮೋಘ ಪ್ರದರ್ಶನದಿಂದ ಎಲ್ಲರ ಮನ ಸೂರೆಗೊಂಡಿದೆ. ಇಂಗ್ಲೆಂಡ್ ಆಡಿದ ಎಲ್ಲಾ ಮೂರು ಪಂದ್ಯಗಳನ್ನು ಗೆದ್ದಿದೆ. ಇಂಗ್ಲೆಂಡ್ ಆಸ್ಟ್ರೇಲಿಯಾವನ್ನು ಸೋಲಿಸಿದೆ. ಇಂಗ್ಲೆಂಡ್ ತಂಡ ತನ್ನ ಗುಂಪಿನಲ್ಲಿ ಅಗ್ರಸ್ಥಾನದಲ್ಲಿದೆ. ಇಂಗ್ಲೆಂಡ್ ಮೊದಲ ಪಂದ್ಯದಲ್ಲಿ ಹಾಲಿ ಚಾಂಪಿಯನ್ ವೆಸ್ಟ್ ಇಂಡೀಸ್ ತಂಡವನ್ನು ಸೋಲಿಸಿತ್ತು. ಇದರ ನಂತರ ಇಂಗ್ಲೆಂಡ್ ಬಾಂಗ್ಲಾದೇಶವನ್ನು ಸೋಲಿಸಿದೆ. ಸೆಮಿಫೈಲ್ ಪಂದ್ಯದಲ್ಲಿ ಭಾರತವು ಇಂಗ್ಲೆಂಡ್‌ನಿಂದ ದೊಡ್ಡ ಪೈಪೋಟಿ ಎದುರಿಸಬಹುದು. ಆದರೆ ಅಭ್ಯಾಸ ಪಂದ್ಯಗಳಲ್ಲಿ ಇಂಗ್ಲೆಂಡ್ ತಂಡವನ್ನು ಭಾರತ ಸೋಲಿಸಿತ್ತು ಎಂಬುದು ಇಲ್ಲಿ ಗಮನಾರ್ಹ.
ಇದನ್ನೂ ಓದಿ-T20 World Cup 2021 : ಗೇಮ್ ಪ್ಲಾನ್ ಸಿದ್ಧಪಡಿಸಿದ ಕೊಹ್ಲಿ : ಭಾರತ vs ನ್ಯೂಜಿಲೆಂಡ್ 'ಗೇಮ್ ಓವರ್' ಹೀಗಿರಲಿದೆ!
ನ್ಯೂಜಿಲ್ಯಾಂಡ್ (New Zealand) ವಿರುದ್ಧ ಭಾರತದ ಮಾಡು ಇಲ್ಲವೇ ಮಡಿ ಪಂದ್ಯ (Ind Vs NZ)
ಟೀಂ ಇಂಡಿಯಾದ ಇಂದಿನ ಪಂದ್ಯ ತುಂಬಾ ಮಹತ್ವದ್ದಾಗಿದೆ, ಏಕೆಂದರೆ ಭಾರತ ತನ್ನ ಗುಂಪಿನಲ್ಲಿ ಪಾಕಿಸ್ತಾನದ ವಿರುದ್ಧ ಮೊದಲ ಪಂದ್ಯವನ್ನು ಸೋತಿದೆ. ಇಂತಹ ಪರಿಸ್ಥಿತಿಯಲ್ಲಿ ಟೂರ್ನಿಯಲ್ಲಿ ಉಳಿಯಲು ಹಾಗೂ ಸೆಮಿಫೈನಲ್ ಭರವಸೆ ಉಳಿಸಿಕೊಳ್ಳಲು ನ್ಯೂಜಿಲೆಂಡ್ ವಿರುದ್ಧ ಗೆಲ್ಲುವುದು ಅನಿವಾರ್ಯವಾಗಿದೆ.
ಇದನ್ನೂ ಓದಿ-T20 WORLD CUP 2021: ಪ್ಲೇಯಿಂಗ್ 11ನಲ್ಲಿ ಈ ಆಟಗಾರನಿಗೆ ಅವಕಾಶ ನೀಡಲು ಕೊಹ್ಲಿ ಏನು ಬೇಕಾದರೂ ಮಾಡಬಹುದು
ಕನ್ನಡ ಭಾಷೆಯಲ್ಲಿ ಮತ್ತಷ್ಟು ಸ್ವಾರಸ್ಯಕರ ಸುದ್ದಿಗಳನ್ನು ಓದಲು ನಮ್ಮ ಝೀ ಹಿಂದೂಸ್ತಾನ್ ಕನ್ನಡ ಮೊಬೈಲ್ ಆಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3hDyh4G
Apple Link - https://apple.co/3hEw2hy
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು Twitter, Facebook ಲಿಂಕ್ ಗಳ ಮೇಲೆ ಕ್ಲಿಕ್ಕಿಸಿ.