Hardik Pandya Fitness Update: ನ್ಯೂಜಿಲೆಂಡ್ ವಿರುದ್ಧದ ಪಂದ್ಯದಲ್ಲಿ ಆಡಲಿದ್ದಾರೆಯೇ ಹಾರ್ದಿಕ್ ಪಾಂಡ್ಯ?

Hardik Pandya Fitness Update: ಟಿ20 ವಿಶ್ವಕಪ್ 2021: ಟೀಂ ಇಂಡಿಯಾದ ಮಾರಕ ಆಲ್ ರೌಂಡರ್ ಹಾರ್ದಿಕ್ ಪಾಂಡ್ಯ ಪಾಕಿಸ್ತಾನ ವಿರುದ್ಧದ ಪಂದ್ಯದ ವೇಳೆ ಗಾಯಗೊಂಡಿದ್ದರು. 

Written by - Yashaswini V | Last Updated : Oct 26, 2021, 06:32 AM IST
  • ಟಿ20 ವಿಶ್ವಕಪ್‌ನ (T20 World Cup) ಮೊದಲ ಪಂದ್ಯದಲ್ಲಿ ಟೀಂ ಇಂಡಿಯಾದ ಮಾರಕ ಆಲ್ ರೌಂಡರ್ ಹಾರ್ದಿಕ್ ಪಾಂಡ್ಯ ಪಾಕಿಸ್ತಾನ ವಿರುದ್ಧದ ಪಂದ್ಯದ ವೇಳೆ ಭುಜದ ಗಾಯಕ್ಕೆ ಒಳಗಾದರು
  • ಈ ಪಂದ್ಯದ ವೇಳೆ ಗಾಯಗೊಂಡಿದ್ದ ಹಾರ್ದಿಕ್ ಪಾಂಡ್ಯ ಟಿ20 ವಿಶ್ವಕಪ್‌ನ ಉಳಿದ ಪಂದ್ಯಗಳಿಂದ ಹೊರಗುಳಿಯುವ ಅಪಾಯದಲ್ಲಿದ್ದರು
  • ಇದೀಗ ಹಾರ್ದಿಕ್ ಪಾಂಡ್ಯ ಅವರ ಫಿಟ್‌ನೆಸ್ ವರದಿ ಹೊರಬಿದ್ದಿದ್ದು, ನ್ಯೂಜಿಲೆಂಡ್ ವಿರುದ್ಧದ ಮುಂದಿನ ಪಂದ್ಯದಲ್ಲಿ ಆಡಲಿದ್ದಾರೆ ಎಂದು ವರದಿಯಾಗಿದೆ
Hardik Pandya Fitness Update: ನ್ಯೂಜಿಲೆಂಡ್ ವಿರುದ್ಧದ ಪಂದ್ಯದಲ್ಲಿ ಆಡಲಿದ್ದಾರೆಯೇ ಹಾರ್ದಿಕ್ ಪಾಂಡ್ಯ? title=
Hardik Pandya Fitness Update

Hardik Pandya Fitness Update: ಪಾಕಿಸ್ತಾನ ವಿರುದ್ಧದ ಪಂದ್ಯದ ವೇಳೆ ಗಾಯಗೊಂಡಿದ್ದ ಭಾರತ ತಂಡದ ಆಲ್‌ರೌಂಡರ್ ಹಾರ್ದಿಕ್ ಪಾಂಡ್ಯ (Hardik Pandya) ಬಗ್ಗೆ ಶುಭ ಸುದ್ದಿ ಬಂದಿದೆ. ಹಾರ್ದಿಕ್ ಪಾಂಡ್ಯ ಅವರ ಗಾಯ ತುಂಬಾ ಗಂಭೀರವಾಗಿಲ್ಲ. ಹಾಗಾಗಿ ಅವರು ಮುಂದಿನ ಟಿ20 ವಿಶ್ವಕಪ್ (T20 World Cup 2021) ಪಂದ್ಯಗಳಲ್ಲಿ ಆಡಬಹುದು ಎಂದು ಹೇಳಲಾಗಿದೆ.

ವಾಸ್ತವವಾಗಿ, ಟಿ20 ವಿಶ್ವಕಪ್‌ನ (T20 World Cup) ಮೊದಲ ಪಂದ್ಯದಲ್ಲಿ ಟೀಂ ಇಂಡಿಯಾದ ಮಾರಕ ಆಲ್ ರೌಂಡರ್ ಹಾರ್ದಿಕ್ ಪಾಂಡ್ಯ ಪಾಕಿಸ್ತಾನ ವಿರುದ್ಧದ ಪಂದ್ಯದ ವೇಳೆ ಭುಜದ ಗಾಯಕ್ಕೆ ಒಳಗಾದರು, ನಂತರ ಅವರು ಫೀಲ್ಡಿಂಗ್‌ಗೆ ಬರಲಿಲ್ಲ. ಬ್ಯಾಟಿಂಗ್ ವೇಳೆ ಅವರು ಎಂಟು ಎಸೆತಗಳಲ್ಲಿ 11 ರನ್ ಗಳಿಸಿದ್ದ ಪಾಂಡ್ಯ, ಬೌಲಿಂಗ್ ಮಾಡಲು ಸಾಧ್ಯವಾಗಲಿಲ್ಲ. ಇದರಿಂದಾಗಿ ಪಾಕಿಸ್ತಾನ ವಿರುದ್ಧದ ಮೊದಲ ಪಂದ್ಯದಲ್ಲಿ ಟೀಂ ಇಂಡಿಯಾ 10 ವಿಕೆಟ್‌ಗಳ ಅಂತರದ ದೊಡ್ಡ ಹಿನ್ನಡೆಯನ್ನು ಅನುಭವಿಸುವಂತಾಯಿತು. ಮತ್ತೊಂದೆಡೆ, ಈ ಪಂದ್ಯದ ವೇಳೆ ಗಾಯಗೊಂಡಿದ್ದ ಹಾರ್ದಿಕ್ ಪಾಂಡ್ಯ ಟಿ20 ವಿಶ್ವಕಪ್‌ನ ಉಳಿದ ಪಂದ್ಯಗಳಿಂದ ಹೊರಗುಳಿಯುವ ಅಪಾಯದಲ್ಲಿದ್ದರು. ಆದರೀಗ ಹಾರ್ದಿಕ್ ಪಾಂಡ್ಯ ಅವರ ಫಿಟ್‌ನೆಸ್ ವರದಿ (Hardik Pandya Fitness Update) ಹೊರಬಿದ್ದಿದ್ದು, ನ್ಯೂಜಿಲೆಂಡ್ ವಿರುದ್ಧದ ಮುಂದಿನ ಪಂದ್ಯದಲ್ಲಿ ಆಡಲಿದ್ದಾರೆ ಎಂದು ವರದಿಯಾಗಿದೆ.

ಇದನ್ನೂ ಓದಿ- T20 World Cup 2021: ಪಾಕ್ ಗೆಲುವಿನ ನಂತರ ಪ್ರಧಾನಿ ಇಮ್ರಾನ್ ಖಾನ್ ಹೇಳಿದ್ದೇನು ಗೊತ್ತೇ?

ಸುದ್ದಿ ಸಂಸ್ಥೆ ಎಎನ್‌ಐ ಜೊತೆಗಿನ ಸಂವಾದದ ಸಂದರ್ಭದಲ್ಲಿ, ತಂಡಕ್ಕೆ ಸಂಬಂಧಿಸಿದ ಮೂಲವೊಂದು, ಹಾರ್ದಿಕ್ ಪಾಂಡ್ಯ (Hardik Pandya) ಈಗಾಗಲೇ ಆರೋಗ್ಯವಾಗಿದ್ದಾರೆ. ಅವರಿಗೆ ಯಾವುದೇ ರೀತಿಯ ತೊಂದರೆ ಇಲ್ಲ. ಮುನ್ನೆಚ್ಚರಿಕೆಯಾಗಿ ಹಾರ್ದಿಕ್ ಪಾಂಡ್ಯಗೆ ಸಿಟಿ ಸ್ಕ್ಯಾನ್ ಮಾಡಿಸಲಾಗಿದೆ. ಟಿ20 ವಿಶ್ವಕಪ್‌ನಲ್ಲಿ ನಿನ್ನೆ ತಂಡದ ಮೊದಲ ಪಂದ್ಯವಾದ್ದರಿಂದ ಟೀಮ್ ಮ್ಯಾನೇಜ್‌ಮೆಂಟ್ ಅವರೊಂದಿಗೆ ಯಾವುದೇ ರಿಸ್ಕ್ ತೆಗೆದುಕೊಳ್ಳಲು ಬಯಸಲಿಲ್ಲ ಎಂದು ಮಾಹಿತಿ ನೀಡಿದ್ದಾರೆ.

ಹಾರ್ದಿಕ್ ಪಾಂಡ್ಯ ಫಿಟ್ ನೆಸ್ ಅಪ್ ಡೇಟ್ (Hardik Pandya Fitness Update): 
ಇದಕ್ಕೂ ಮುನ್ನ ಪಾಕಿಸ್ತಾನ ವಿರುದ್ಧದ ಪಂದ್ಯದ ವೇಳೆ ಚೆಂಡು ಹಾರ್ದಿಕ್ ಪಾಂಡ್ಯ ಅವರ ಭುಜಕ್ಕೆ ಬಡಿದಿತ್ತು. ಈ ಬಗ್ಗೆ ಬಿಸಿಸಿಐ ಹೇಳಿದ್ದು, ಬ್ಯಾಟಿಂಗ್ ವೇಳೆ ಚೆಂಡು ಹಾರ್ದಿಕ್ ಅವರ ಬಲಗೈಯ ಭುಜಕ್ಕೆ ಬಡಿದಿದೆ. ಅವರನ್ನು ಸಿಟಿ ಸ್ಕ್ಯಾನ್‌ಗಾಗಿ ಕರೆದೊಯ್ಯಲಾಗುತ್ತಿದೆ ಎಂದು ತಿಳಿಸಿತ್ತು.

ಇದನ್ನೂ ಓದಿ- ಐಪಿಎಲ್ ಗೆ ಹೊಸದಾಗಿ ಸೇರ್ಪಡೆಯಾದ ಅಹಮದಾಬಾದ್,ಲಕ್ನೋ ತಂಡ

ಪಾಕಿಸ್ತಾನ ವಿರುದ್ಧದ ಪಂದ್ಯದ ಆರಂಭಕ್ಕೂ ಮುನ್ನ ಹಾರ್ದಿಕ್ ಪಾಂಡ್ಯ ಅಧಿಕೃತ ಪ್ರಸಾರಕರೊಂದಿಗೆ ಮಾತುಕತೆ ವೇಳೆ ಈ ಪಂದ್ಯದಲ್ಲಿ ತಾನು ಬೌಲಿಂಗ್ ಮಾಡುವುದಿಲ್ಲ. ಪಂದ್ಯಾವಳಿ ಮುಂದುವರೆದಂತೆ, ಅಂತಿಮ ಪಂದ್ಯಗಳಲ್ಲಿ ತಂಡಕ್ಕಾಗಿ ಬೌಲಿಂಗ್ ಮಾಡುವುದಾಗಿ ತಿಳಿಸಿದ್ದರು.

ಕನ್ನಡ ಭಾಷೆಯಲ್ಲಿ ಮತ್ತಷ್ಟು ಸ್ವಾರಸ್ಯಕರ ಸುದ್ದಿಗಳನ್ನು ಓದಲು ನಮ್ಮ ಝೀ ಹಿಂದೂಸ್ತಾನ್ ಕನ್ನಡ ಮೊಬೈಲ್ ಆಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3hDyh4G
Apple Link - https://apple.co/3hEw2hy
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು TwitterFacebook ಲಿಂಕ್ ಗಳ ಮೇಲೆ ಕ್ಲಿಕ್ಕಿಸಿ

Trending News