SRH vs GT : SRH ಟೀಂ ಮ್ಯಾಚ್ ವಿನ್ನರ್‌ಗಳು ಈ 2 ಬೌಲರ್‌ಗಳು : ಇವರ ವೇಗಕ್ಕೆ ಎದುರಾಳಿ ಎದೆಯಲ್ಲಿ ಗಡ ಗಡ!

ಹೈದರಾಬಾದ್ ತಂಡಕ್ಕೆ ಈ ಪಂದ್ಯವನ್ನು ಗೆಲ್ಲುವುದು ತುಂಬಾ ಕಷ್ಟಕರವಾಗಿದೆ. ಗುಜರಾತ್ ತಂಡ ಈ ಋತುವಿನಲ್ಲಿ ಇದುವರೆಗೆ ಕೇವಲ 1 ಪಂದ್ಯವನ್ನು ಮಾತ್ರ ಕಳೆದುಕೊಂಡಿದೆ. ಇಂತಹ ಪರಿಸ್ಥಿತಿಯಲ್ಲಿ ವಿಲಿಯಮ್ಸನ್ ಅವರ 2 ಮಾರಕ ಬೌಲರ್‌ಗಳು ಪಂದ್ಯವನ್ನು ಗೆಲ್ಲುವ ದೊಡ್ಡ ಜವಾಬ್ದಾರಿ ಹೊಂದಿದೆ.

Written by - Channabasava A Kashinakunti | Last Updated : Apr 27, 2022, 03:32 PM IST
  • ವಿಲಿಯಮ್ಸನ್ ಈ ಇಬ್ಬರು ಮಾರಕ ಬೌಲರ್‌ಗಳು
  • ಉಮ್ರಾನ್‌ ಬೌಲಿಂಗ್ ವೇಗ 150 KMPH
  • ಯಾರ್ಕರ್ ಸ್ಪೆಷಲಿಸ್ಟ್ ಟಿ ನಟರಾಜನ್
SRH vs GT : SRH ಟೀಂ ಮ್ಯಾಚ್ ವಿನ್ನರ್‌ಗಳು ಈ 2 ಬೌಲರ್‌ಗಳು : ಇವರ ವೇಗಕ್ಕೆ ಎದುರಾಳಿ ಎದೆಯಲ್ಲಿ ಗಡ ಗಡ! title=

IPL 2022 SRH vs GT : ಕೇನ್ ವಿಲಿಯಮ್ಸನ್ ನಾಯಕತ್ವದ ಸನ್‌ರೈಸರ್ಸ್ ಹೈದರಾಬಾದ್ (SRH) ಮುಂದಿರುವ ಮುಂದಿನ ಸವಾಲು ಗುಜರಾತ್ ಟೈಟಾನ್ಸ್ (GT) ತಂಡವನ್ನು ಸೋಲಿಸುವುದು. ಈ ಎರಡು ತಂಡಗಳ ನಡುವಿನ ಈ ಪಂದ್ಯ ಇಂದು (ಏಪ್ರಿಲ್ 27) ಸಂಜೆ 7:30 ಕ್ಕೆ ಮುಂಬೈನ ವಾಂಖೆಡೆ ಕ್ರೀಡಾಂಗಣದಲ್ಲಿ ನಡೆಯಲಿದೆ. ಹೈದರಾಬಾದ್ ತಂಡಕ್ಕೆ ಈ ಪಂದ್ಯವನ್ನು ಗೆಲ್ಲುವುದು ತುಂಬಾ ಕಷ್ಟಕರವಾಗಿದೆ. ಗುಜರಾತ್ ತಂಡ ಈ ಋತುವಿನಲ್ಲಿ ಇದುವರೆಗೆ ಕೇವಲ 1 ಪಂದ್ಯವನ್ನು ಮಾತ್ರ ಕಳೆದುಕೊಂಡಿದೆ. ಇಂತಹ ಪರಿಸ್ಥಿತಿಯಲ್ಲಿ ವಿಲಿಯಮ್ಸನ್ ಅವರ 2 ಮಾರಕ ಬೌಲರ್‌ಗಳು ಪಂದ್ಯವನ್ನು ಗೆಲ್ಲುವ ದೊಡ್ಡ ಜವಾಬ್ದಾರಿ ಹೊಂದಿದೆ.

ವಿಲಿಯಮ್ಸನ್ ಈ ಇಬ್ಬರು ಮಾರಕ ಬೌಲರ್‌ಗಳು

ಗುಜರಾತ್ ಟೈಟಾನ್ಸ್ (ಜಿಟಿ) ಈ ಋತುವಿನಲ್ಲಿ ಇದುವರೆಗೆ 7 ಪಂದ್ಯಗಳಲ್ಲಿ 6 ಗೆದ್ದಿದೆ. ಹಾಗೆ, ಹೈದರಾಬಾದ್ 7 ಪಂದ್ಯಗಳಲ್ಲಿ 5ರಲ್ಲಿ ಜಯ ಸಾಧಿಸಿದೆ. ವಿಲಿಯಮ್ಸನ್ ಈ ಋತುವಿನಲ್ಲಿ ಅತ್ಯಂತ ಮಾರಕ ಬೌಲಿಂಗ್ ಮಾಡುತ್ತಿದ್ದಾರೆ. ಗುಜರಾತ್ ವಿರುದ್ಧದ ಪಂದ್ಯ ಗೆದ್ದು ಪಾಯಿಂಟ್ ಪಟ್ಟಿಯಲ್ಲಿ ಅಗ್ರಸ್ಥಾನವನ್ನು ತಲುಪೂವ ಗುರಿಯಲ್ಲಿದ್ದಾರೆ. ಹೈದರಾಬಾದ್ ಟೀಂನಲ್ಲಿರುವ  ವೇಗದ ಬೌಲರ್‌ಗಳಾದ ಟಿ ನಟರಾಜನ್ ಮತ್ತು ಉಮ್ರಾನ್ ಮಲಿಕ್ ಈ ಪಂದ್ಯದಲ್ಲಿ ದೊಡ್ಡ ಮ್ಯಾಚ್ ವಿನ್ನರ್‌ಗಳು. ಈ ಇಬ್ಬರೂ ಟೀಂ ಇಂಡಿಯಾದ ಬೌಲರ್‌ಗಳು ಅತ್ಯಂತ ವೇಗವಾಗಿ ಬೌಲಿಂಗ್ ಮಾಡುತ್ತಾರೆ. ಹಾಗೆ ಟೀಂಗೆ ಯಾವಾಗ ವಿಕೆಟ್‌ ಬೇಕು ಆಗ ವಿಕೆಟ್‌ ಪಡೆಯುತ್ತಾರೆ, ಈ ಇಬ್ಬರೂ ಆಟಗಾರರು ಗುಜರಾತ್‌ಗೆ ದೊಡ್ಡ ಕಂಟಕವಾಗಿ ಕಾಡುವ ಸಾಧ್ಯಗಳಿವೆ.

ಇದನ್ನೂ ಓದಿ : IPL ಇತಿಹಾಸದಲ್ಲಿ 150 ವಿಕೆಟ್‌ ಪಡೆದ ದಾಖಲೆ ವೀರ ಅಶ್ವಿನ್‌

ಉಮ್ರಾನ್‌ ಬೌಲಿಂಗ್ ವೇಗ 150 KMPH 

ಉಮ್ರಾನ್ ಮಲಿಕ್ ಗಂಟೆಗೆ 150 ಕಿಲೋಮೀಟರ್ ವೇಗದಲ್ಲಿ ಸ್ಥಿರವಾಗಿ ಬೌಲಿಂಗ್ ಮಾಡುವ ಕಲೆಯನ್ನು ಹೊಂದಿದ್ದಾರೆ, ಅವರು ಈ ಋತುವಿನಲ್ಲಿ ಇದೆ ವೇಗದಲ್ಲಿ ಬೌಲಿಂಗ್ ಮಾಡಿ ವಿಕೆಟ್ಗಳನ್ನು ಪಡೆಯುತ್ತಿದ್ದಾರೆ. ಉಮ್ರಾನ್ ಈ ಋತುವಿನಲ್ಲಿ ಇದುವರೆಗೆ 7 ಪಂದ್ಯಗಳಲ್ಲಿ 10 ವಿಕೆಟ್ ಪಡೆದಿದ್ದಾರೆ. ಈ ಋತುವಿನಲ್ಲಿ ಒಮ್ಮೆ 20ನೇ ಓವರ್ ಮೇಡನ್ ಬೌಲ್ ಮಾಡಿದ್ದಾರೆ. ಈ ದಾಖಲೆ ಮಾಡುವುದು ಬೌಲರ್‌ಗಳಿಗೆ ತುಂಬಾ ಕಷ್ಟದ ಕೆಲಸ. ಐಪಿಎಲ್ 2021 ರಲ್ಲಿ, ಉಮ್ರಾನ್ ವೇಗದ ಎಸೆತಗಳು ಎಲ್ಲರ ಗಮನ ಸೆಳೆಯುತ್ತವೆ. ಕಳೆದ ಋತುವಿನಲ್ಲಿ ಅತಿವೇಗದ ಬಾಲ್ ಎಸೆದ ದಾಖಲೆಯನ್ನೂ ಮಾಡಿದ್ದಾರೆ. ಉಮ್ರಾನ್ ಈ ಋತುವಿನಲ್ಲಿ ಬ್ಯಾಟ್ಸ್‌ಮನ್‌ಗಳಿಗೆ ಶತ್ರುವಾಗಿ ಕಾಡಲಿದ್ದಾರೆ.

ಯಾರ್ಕರ್ ಸ್ಪೆಷಲಿಸ್ಟ್ ಟಿ ನಟರಾಜನ್

ಟಿ ನಟರಾಜನ್ ಯಾರ್ಕರ್ ಸ್ಪೆಷಲಿಸ್ಟ್ ಎಂದು ಕರೆಯುತ್ತಾರೆ. ನಟರಾಜನ್ ಈ ಋತುವಿನಲ್ಲಿ ಉತ್ತಮ ಫಾರಂನಲ್ಲಿದ್ದಾರೆ, ನಟರಾಜನ್ ಸತತವಾಗಿ ವಿಕೆಟ್‌ಗಳನ್ನು ಪಡೆದಿದ್ದಾರೆ. ಅವರು ಪರ್ಪಲ್ ಕ್ಯಾಪ್ ರೇಸ್‌ನಲ್ಲಿ ಎರಡನೇ ಸ್ಥಾನದಲ್ಲಿದ್ದಾರೆ, ಆದ್ದರಿಂದ ಟಿ ನಟರಾಜನ್ 4 ಓವರ್‌ಗಳು ಗುಜರಾತ್ ಟೈಟಾನ್ಸ್ (ಜಿಟಿ) ಗೆ ಕಂಠವಾಗಲಿದೆ. ಐಪಿಎಲ್ 2022 ರಲ್ಲಿ ನಟರಾಜನ್ ಇಲ್ಲಿಯವರೆಗೆ 7 ಪಂದ್ಯಗಳನ್ನು ಆಡಿದ್ದಾರೆ, ಇದರಲ್ಲಿ ಅವರು 14.53 ಸರಾಸರಿಯಲ್ಲಿ 15 ವಿಕೆಟ್ಗಳನ್ನು ಹೊಂದಿದ್ದಾರೆ. 30 ವರ್ಷದ ನಟರಾಜನ್ ಐಪಿಎಲ್ 2021 ರಲ್ಲಿ ಹೈದರಾಬಾದ್‌ಗಾಗಿ ಕೇವಲ ಎರಡು ಪಂದ್ಯಗಳನ್ನು ಆಡಿದ್ದಾರೆ ಮತ್ತು ಗಾಯದ ಕಾರಣ ಇಡೀ ಪಂದ್ಯಾವಳಿಯಿಂದ ಹೊರಗುಳಿದರು, ಆದರೆ ಈ ಬಾರಿ ಅವರ ಫಾರ್ಮ್ ಬ್ಯಾಟ್ಸ್‌ಮನ್‌ಗಳಿಗೆ ದೊಡ್ಡ ಸವಾಲಾಗಿ ಉಳಿದಿದೆ.

ಇದನ್ನೂ ಓದಿ : IPL : ಇಂದು ಹೈದರಾಬಾದ್‌-ಗುಜರಾತ್‌ ನಡುವೆ ಹಣಾಹಣಿ: ಇಲ್ಲಿದೆ ಪಿಚ್‌ ರಿಪೋರ್ಟ್‌

 

ಕನ್ನಡ ಭಾಷೆಯಲ್ಲಿ ಮತ್ತಷ್ಟು ತಾಜಾ ಸುದ್ದಿಗಳನ್ನು ಓದಲು ನಮ್ಮ ಜೀ ಕನ್ನಡ ನ್ಯೂಸ್ ಮೊಬೈಲ್ ಆಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3hDyh4G
Apple Link - https://apple.co/3hEw2hy
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು TwitterFacebookYoutube ಲಿಂಕ್ ಗಳ ಮೇಲೆ ಕ್ಲಿಕ್ಕಿಸಿ.

Trending News