IPLನಲ್ಲಿ ವಿಫಲವಾದ್ರೂ ಟಿ20ಯಲ್ಲಿ ‘ಸೂರ್ಯ’ನೇ ಕಿಂಗ್: ಅಗ್ರಸ್ಥಾನದಲ್ಲಿ ಮತ್ತೆ ಟೀಂ ಇಂಡಿಯಾದ ಮಿ.360

ICC Latest T20 Ranking: ಟೀಂ ಸೂರ್ಯಕುಮಾರ್ ಯಾದವ್ ಐಸಿಸಿ ಪುರುಷರ ಟಿ20 ಅಂತಾರಾಷ್ಟ್ರೀಯ ಬ್ಯಾಟಿಂಗ್ ಶ್ರೇಯಾಂಕದಲ್ಲಿ ಅಗ್ರಸ್ಥಾನದಲ್ಲಿ ಮುಂದುವರಿದಿದ್ದಾರೆ. 906 ಅಂಕಗಳೊಂದಿಗೆ ಪಟ್ಟಿಯಲ್ಲಿ ಮೊದಲ ಸ್ಥಾನದಲ್ಲಿದ್ದಾರೆ. ಪಾಕಿಸ್ತಾನದ ಮೊಹಮ್ಮದ್ ರಿಜ್ವಾನ್ 13 ಅಂಕಗಳ ನಷ್ಟ ಅನುಭವಿಸಿ, 798 ಅಂಕಗಳೊಂದಿಗೆ ಎರಡನೇ ಸ್ಥಾನದಲ್ಲಿದ್ದಾರೆ.

Written by - Bhavishya Shetty | Last Updated : Apr 19, 2023, 06:22 PM IST
    • ಐಸಿಸಿ ಟಿ20 ಬ್ಯಾಟ್ಸ್‌’ಮನ್‌’ಗಳ ಇತ್ತೀಚಿನ ಶ್ರೇಯಾಂಕ ಬಿಡುಗಡೆ
    • ಐಸಿಸಿ ಪುರುಷರ ಟಿ20 ಅಂತಾರಾಷ್ಟ್ರೀಯ ಬ್ಯಾಟಿಂಗ್ ಶ್ರೇಯಾಂಕದಲ್ಲಿ ಸೂರ್ಯಕುಮಾರ್ ಯಾದವ್’ಗೆ ಅಗ್ರಸ್ಥಾನ
    • 906 ಅಂಕಗಳೊಂದಿಗೆ ಪಟ್ಟಿಯಲ್ಲಿ ಮೊದಲ ಸ್ಥಾನದಲ್ಲಿದ್ದಾರೆ
IPLನಲ್ಲಿ ವಿಫಲವಾದ್ರೂ ಟಿ20ಯಲ್ಲಿ ‘ಸೂರ್ಯ’ನೇ ಕಿಂಗ್: ಅಗ್ರಸ್ಥಾನದಲ್ಲಿ ಮತ್ತೆ ಟೀಂ ಇಂಡಿಯಾದ ಮಿ.360 title=
Suryakumar Yadav

ICC Latest T20 Ranking: ಟೀಂ ಇಂಡಿಯಾದ ಡ್ಯಾಶಿಂಗ್ ಬ್ಯಾಟ್ಸ್‌’ಮನ್ ಚ IPL 2023 ರಲ್ಲಿ ಸಂಪೂರ್ಣ ವೈಫಲ್ಯತೆ ಕಾಣುತ್ತಿದ್ದಾರೆ. ಆದರೆ T20 ಕ್ರಿಕೆಟ್‌ನಲ್ಲಿ ಮಾತ್ರ ಅವರ ಆಳ್ವಿಕೆ ಮುಂದುವರೆದಿದೆ. ಅಂತರಾಷ್ಟ್ರೀಯ ಕ್ರಿಕೆಟ್ ಮಂಡಳಿ (ಐಸಿಸಿ) ಟಿ20 ಬ್ಯಾಟ್ಸ್‌’ಮನ್‌’ಗಳ ಇತ್ತೀಚಿನ ಶ್ರೇಯಾಂಕವನ್ನು (ICC T20 Ranking) ಬಿಡುಗಡೆ ಮಾಡಿದೆ. ಸೂರ್ಯಕುಮಾರ್ ಯಾದವ್ ಈ ಬಾರಿಯೂ ಟಿ20 ಶ್ರೇಯಾಂಕದಲ್ಲಿ ನಂಬರ್ ಒನ್ ಸ್ಥಾನದಲ್ಲಿ ಮುಂದುವರಿದಿದ್ದಾರೆ.

ಇದನ್ನೂ ಓದಿ: ನೋಡಲು ಸಣಕಲು… ಆದ್ರೆ World Cupನಲ್ಲಿ ಟೀಂ ಇಂಡಿಯಾ ಆನೆಬಲ ತುಂಬಲಿದ್ದಾನೆ ಈ ಆಟಗಾರ! ಎಂಟ್ರಿ ಕನ್ಫರ್ಮ್?

ಸೂರ್ಯಕುಮಾರ್ ಯಾದವ್ ಐಸಿಸಿ ಪುರುಷರ ಟಿ20 ಅಂತಾರಾಷ್ಟ್ರೀಯ ಬ್ಯಾಟಿಂಗ್ ಶ್ರೇಯಾಂಕದಲ್ಲಿ ಅಗ್ರಸ್ಥಾನದಲ್ಲಿ ಮುಂದುವರಿದಿದ್ದಾರೆ. 906 ಅಂಕಗಳೊಂದಿಗೆ ಪಟ್ಟಿಯಲ್ಲಿ ಮೊದಲ ಸ್ಥಾನದಲ್ಲಿದ್ದಾರೆ. ಪಾಕಿಸ್ತಾನದ ಮೊಹಮ್ಮದ್ ರಿಜ್ವಾನ್ 13 ಅಂಕಗಳ ನಷ್ಟ ಅನುಭವಿಸಿ, 798 ಅಂಕಗಳೊಂದಿಗೆ ಎರಡನೇ ಸ್ಥಾನದಲ್ಲಿದ್ದಾರೆ. ಇನ್ನುಳಿದಂತೆ ಪಾಕಿಸ್ತಾನ ತಂಡದ ನಾಯಕ ಬಾಬರ್ ಅಜಮ್ 769 ಅಂಕಗಳನ್ನು ಪಡೆದು ನಂತರದ ಸ್ಥಾನದಲ್ಲಿ ಮುಂದುವರೆದಿದ್ದಾರೆ. ವಿರಾಟ್ ಕೊಹ್ಲಿ 15ನೇ ಸ್ಥಾನದಲ್ಲಿದ್ದಾರೆ.

ಸದ್ಯ ಪಾಕಿಸ್ತಾನ ಮತ್ತು ನ್ಯೂಜಿಲೆಂಡ್ ನಡುವೆ ಐದು ಪಂದ್ಯಗಳ ಟಿ20 ಸರಣಿ ನಡೆಯುತ್ತಿದೆ. ಈ ಸರಣಿಯಲ್ಲಿ ಪಾಕಿಸ್ತಾನ 2-1 ಮುನ್ನಡೆ ಸಾಧಿಸಿದೆ. ಪಾಕಿಸ್ತಾನ ತಂಡದ ನಾಯಕ ಬಾಬರ್ ಅಜಮ್ ಈ ಸರಣಿಯಲ್ಲಿ ಇದುವರೆಗೆ 1 ಶತಕ ಬಾರಿಸಿದ್ದಾರೆ. ಇವರ ಆಟ ಇದೇ ರೀತಿ ಮುಂದುವರೆದರೆ ಟಿ20 ಶ್ರೇಯಾಂಕದಲ್ಲಿ ಮೊಹಮ್ಮದ್ ರಿಜ್ವಾನ್ ಅವರನ್ನು ಹಿಂದಿಕ್ಕುವ ಅವಕಾಶ ಬಾಬರ್ ಅಜಂ ಅವರಿಗೆ ಲಭಿಸಲಿದೆ.

ಇದನ್ನೂ ಓದಿ: RCB vs CSK: ಸಿಕ್ಸ್, ಬೌಂಡರಿ, ಕ್ಯಾಚ್, ಡ್ರಾಪ್.. ರೋಚಕ ಹೋರಾಟದಲ್ಲಿ ಗೆದ್ದ ಸಿಎಸ್’ಕೆ! ಹೈವೋಲ್ಟೇಜ್ ಪಂದ್ಯದ Highlights ಇಲ್ಲಿದೆ

ಬೌಲರ್‌’ಗಳು ಮತ್ತು ಆಲ್‌’ರೌಂಡರ್‌’ಗಳ ಶ್ರೇಯಾಂಕ:

ಟಾಪ್-10 ಬೌಲರ್‌’ಗಳು ಮತ್ತು ಆಲ್‌ರೌಂಡರ್‌’ಗಳ ಇತ್ತೀಚಿನ ICC T20 ರ್ಯಾಂಕಿಂಗ್‌ ಪ್ರಕಟಿಸಲಾದರೂ ಸಹ ಅದರಲ್ಲಿ ಯಾವುದೇ ಬದಲಾವಣೆ ಇಲ್ಲ. ಅಫ್ಘಾನಿಸ್ತಾನದ ಸ್ಪಿನ್ನರ್ ರಶೀದ್ ಖಾನ್ ಬೌಲರ್‌ಗಳ ಪಟ್ಟಿಯಲ್ಲಿ ಅಗ್ರ ಸ್ಥಾನದಲ್ಲಿದ್ದಾರೆ, ಬೌಲರ್‌ಗಳ ಪಟ್ಟಿಯಲ್ಲಿ ಟಾಪ್ 10ರೊಳಗೆ ಯಾವೊಬ್ಬ ಭಾರತೀಯನೂ ಸೇರಿಲ್ಲ. ಇನ್ನು ಶಕೀಬ್ ಅಲ್ ಹಸನ್ ಆಲ್ ರೌಂಡರ್ ರ್ಯಾಂಕಿಂಗ್’ ನಲ್ಲಿ ಅಗ್ರಸ್ಥಾನದಲ್ಲಿದ್ದಾರೆ.

 

ಕನ್ನಡ ಭಾಷೆಯಲ್ಲಿ ಮತ್ತಷ್ಟು ತಾಜಾ ಸುದ್ದಿಗಳನ್ನು ಓದಲು ನಮ್ಮ ಜೀ ಕನ್ನಡ ನ್ಯೂಸ್ ಮೊಬೈಲ್ ಆಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3hDyh4G
Apple Link - https://apple.co/3hEw2hy
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು TwitterFacebookYoutube ಲಿಂಕ್ ಗಳ ಮೇಲೆ ಕ್ಲಿಕ್ಕಿಸಿ.

Trending News