Suresh Raina : ಟೀಂ ಇಂಡಿಯಾದ ಮಾಜಿ ಆಲ್‌ರೌಂಡರ್ ಸುರೇಶ್ ರೈನಾ ಆತ್ಮಕಥೆ ಜು.14ಕ್ಕೆ ಬಿಡುಗಡೆ!

ಸಚಿನ್‌ ತೆಂಡೂಲ್ಕರ್‌ ನೀಡಿದ ಸ್ಪೂರ್ತಿಯ ಪದ 'ಬಿಲೀವ್‌' ಎಂಬುದನ್ನು ತಮ್ಮ ಪುಸ್ತಕದ ಹೆಸರು

Last Updated : Jun 12, 2021, 01:06 PM IST
  • 22 ವರ್ಷಗಳ ಯಶಸ್ವಿ ಅಂತರರಾಷ್ಟ್ರೀಯ ಕ್ರಿಕೆಟ್‌ ಪ್ರಯಾಣದ ನಂತ್ರ ಭಾರತದ ಮಾಜಿ ಆಲ್‌ರೌಂಡರ್ ಸುರೇಶ್‌ ರೈನಾ
  • ಸುರೇಶ್‌ ರೈನಾ ಬರಹಗಾರನಾಗಿ ಬಡ್ತಿ ಪಡೆದಿದ್ದಾರೆ
  • ಸಚಿನ್‌ ತೆಂಡೂಲ್ಕರ್‌ ನೀಡಿದ ಸ್ಪೂರ್ತಿಯ ಪದ 'ಬಿಲೀವ್‌' ಎಂಬುದನ್ನು ತಮ್ಮ ಪುಸ್ತಕದ ಹೆಸರು
Suresh Raina : ಟೀಂ ಇಂಡಿಯಾದ ಮಾಜಿ ಆಲ್‌ರೌಂಡರ್ ಸುರೇಶ್ ರೈನಾ ಆತ್ಮಕಥೆ ಜು.14ಕ್ಕೆ ಬಿಡುಗಡೆ! title=

ನವದೆಹಲಿ : 22 ವರ್ಷಗಳ ಯಶಸ್ವಿ ಅಂತರರಾಷ್ಟ್ರೀಯ ಕ್ರಿಕೆಟ್‌ ಪ್ರಯಾಣದ ನಂತರ ಭಾರತದ ಮಾಜಿ ಆಲ್‌ರೌಂಡರ್ ಸುರೇಶ್‌ ರೈನಾ ಬರಹಗಾರನಾಗಿ ಬಡ್ತಿ ಪಡೆದಿದ್ದಾರೆ. ಪ್ರಸ್ತುತ 'ಚೆನ್ನೈ ಸೂಪರ್‌ ಕಿಂಗ್ಸ್‌' (ಸಿಎಸ್‌ಕೆ) ತಂಡದ ಪರ ಆಡುತ್ತಿರುವ ಸುರೇಶ್‌ ರೈನಾ ತಮ್ಮ ವೈಯಕ್ತಿಕ ಬದುಕು ಮತ್ತು ಕ್ರಿಕೆಟ್‌ ವೃತ್ತಿಜೀವನದಿಂದ ಕಲಿತ ಪಾಠದ ಸಾರವನ್ನು ಬರಹದ ರೂಪದಲ್ಲಿ ಅಚ್ಚಾಗಿಸಿದ್ದಾರೆ.

ಕ್ರಿಕೆಟ್‌ ದಂತಕಥೆ ಸಚಿನ್‌ ತೆಂಡೂಲ್ಕರ್‌ ನೀಡಿದ ಸ್ಪೂರ್ತಿಯ ಪದ 'ಬಿಲೀವ್‌'(Believe) ಎಂಬುದನ್ನು ತಮ್ಮ ಪುಸ್ತಕದ ಹೆಸರಾಗಿಸಿಕೊಂಡಿರುವುದು ವಿಶೇಷ. 2014ರಲ್ಲಿ 'ಬಿಲೀವ್' ಎಂಬ ಇಂಗ್ಲಿಷ್‌ ಪದವನ್ನು ಕೈ ಮೇಲೆ ಟ್ಯಾಟೂ ಹಾಕಿಸಿಕೊಂಡಗಲೂ ತೆಂಡೂಲ್ಕರ್‌ ಅವರಿಂದ ಸ್ಪೂರ್ತಿ ಪಡೆದ ಪದವಿದು ಎಂದು ಹೇಳಿದ್ದರು.

ಇದನ್ನೂ ಓದಿ : Video: MS Dhoni ಮನೆಗೆ ಪುಟ್ಟ ಅತಿಥಿ ಆಗಮನ, ವಿಡಿಯೋ ಶೇರ್ ಮಾಡಿ 'ಟಚ್‌ವುಡ್' ಎಂದ ಸಾಕ್ಷಿ

ಬಿಲೀವ್‌ - ವಾಟ್‌ ಲೈಫ್‌ ಆಯಂಡ್‌ ಕ್ರಿಕೆಟ್‌ ಟಾಟ್‌ ಮಿ:

ಟೀಂ ಇಂಡಿಯಾದ ಎಡಗೈ ಬ್ಯಾಟ್ಸಮನ್‌ ಸುರೇಶ್‌ ರೈನಾ ಅವರ ಆತ್ಮಕಥೆಯ ಪೂರ್ಣ ಹೆಸರು 'ಬಿಲೀವ್‌ - ವಾಟ್‌ ಲೈಫ್‌ ಆಯಂಡ್‌ ಕ್ರಿಕೆಟ್‌ ಟಾಟ್‌ ಮಿ'(‘Believe - What Life and Cricket Taught Me). ಇದೇ ಜೂನ್‌ 14ರಂದು ಪುಸ್ತಕ ಬಿಡುಗಡೆಗೊಳಿಸುವುದಾಗಿ ರೈನಾ ತಿಳಿಸಿದ್ದಾರೆ.

ಇದನ್ನೂ ಓದಿ : KL Rahul ಜೊತೆ ಇಂಗ್ಲೆಂಡ್‌ನಲ್ಲಿದ್ದಾರೆಯೇ ಗರ್ಲ್ ಫ್ರೆಂಡ್ Athiya Shetty? ಇಲ್ಲಿವೆ ವೈರಲ್ ಫೋಟೋಸ್

ಕ್ರಿಕೆಟ್‌ ಪ್ರಯಣದುದ್ದಕ್ಕೂ ಎದುರಿಸಿದ ಸವಾಲುಗಳು, ಗಾಯಗಳು, ವೈಫಲ್ಯಗಳು ಎಲ್ಲವನ್ನು ಮುಕ್ತವಾಗಿ ಪುಸ್ತಕದಲ್ಲಿ ದಾಖಲಿಸಿದ್ದಾರೆ. ಗುರಿಯಿಲ್ಲದೆ ಗಲ್ಲಿ ಸುತ್ತಿಕೊಂಡಿದ್ದ ಹುಡುಗ ಕ್ರಿಕೆಟ್‌ ಐಕಾನ್‌ ಆಗಿದ್ದು ಹೇಗೆ, ಲಕ್ಷಾಂತರ ಮಂದಿಯ ಪ್ರೀತಿ ಗಳಿಸಿದ್ದು ಹೇಗೆ ಎಂಬ ಸ್ಪೂರ್ತಿಗಾಥೆಯನ್ನು ಪುಸ್ತಕದಲ್ಲಿ ಎಳೆಎಳೆಯಾಗಿ ಬಿಡಿಸಿದ್ದಾರೆ. ರೈನಾ(Suresh Raina)ರ ಈ ಪುಸ್ತಕವು ಬರಹಗಾರ ಭರತ್‌ ಸುಂದರೇಸನ್‌ ಸಹಾಯದೊಂದಿಗೆ ರಚಿಸಿದ್ದಾಗಿದೆ.

ಇದನ್ನೂ ಓದಿ : "ನಾನು ಭಾರತ ಕ್ರಿಕೆಟ್ ತಂಡದ ನಾಯಕನಾಗಬೇಕಾಗಿತ್ತು...ಆದರೆ ..."

ಟೀಂ ಇಂಡಿಯಾಗೆ ಅಂತರರಾಷ್ಟ್ರೀಯ ಮಟ್ಟದಲ್ಲಿ ಮೇರು ಸ್ಥಾನ ಕಲ್ಪಿಸಿದ ಸೌರವ್‌ ಗಂಗೂಲಿ(Sourav Ganguly), ಸಚಿನ್‌ ತೆಂಡೂಲ್ಕರ್‌, ರಾಹುಲ್‌ ದ್ರಾವಿಡ್‌, ಅನಿಲ್‌ ಕುಂಬ್ಳೆ, ಮಹೇಂದ್ರ ಸಿಂಗ್‌ ಧೋನಿ ಮತ್ತಿತರರಿಂದ ಅರಿತುಕೊಂಡ ವಿಚಾರಗಳನ್ನು ದಾಖಲಿಸಿದ್ದಾರೆ. ನಂಬಿಕೆ, ಜೀವನಪ್ರೀತಿ ಮತ್ತು ಶ್ರಮ ಎಷ್ಟು ಮುಖ್ಯ ಎಂಬುದನ್ನು ಅನುಭವದ ಮಾತುಗಳಲ್ಲಿ ರೈನಾ ಹೇಳಿದ್ದಾರೆ.

ಇದನ್ನೂ ಓದಿ : ಏಷ್ಯನ್ ಗೇಮ್ಸ್ ಚಿನ್ನದ ಪದಕ ವಿಜೇತ ಬಿಂಗ್ಸರ್ ಡಿಂಗ್ಕೊ ಸಿಂಗ್ ಸಾವು

ಪೆಂಗ್ವಿನ್‌ ಇಂಡಿಯಾ, ಅಮೆಜಾನ್‌(Amazon) ಮತ್ತು ಫ್ಲಿಪ್‌ಕಾರ್ಟ್‌ನಲ್ಲಿ ಪುಸ್ತಕಗಳನ್ನು ಕಾಯ್ದಿರಿಸಬಹುದು ಎಂದು ಸುರೇಶ್‌ ರೈನಾ ಟ್ವೀಟ್‌ ಮಾಡಿದ್ದಾರೆ.226 ಏಕದಿನ ಪಂದ್ಯಗಳನ್ನು ಆಡಿರುವ ಸುರೇಶ್‌ ರೈನಾ 35.31 ರನ್‌ರೇಟ್‌ ಸರಾಸರಿಯಲ್ಲಿ 5,615 ರನ್‌ಗಳನ್ನು ಗಳಿಸಿದ್ದಾರೆ. ಸ್ಪಿನ್‌ ಮೂಲಕ 36 ವಿಕೆಟ್‌ಗಳನ್ನು ಪಡೆದಿದ್ದಾರೆ.

ಇದನ್ನೂ ಓದಿ : CRICURU App : ಕ್ರಿಕೆಟ್ ತರಬೇತಿಗೆ 'ಆ್ಯಪ್' ಆರಂಭಿಸಿದ ವೀರೇಂದ್ರ ಸೆಹ್ವಾಗ್!

ಕನ್ನಡ ಭಾಷೆಯಲ್ಲಿ ಮತ್ತಷ್ಟು ಸ್ವಾರಸ್ಯಕರ ಸುದ್ದಿಗಳನ್ನು ಓದಲು ನಮ್ಮ ಝೀ ಹಿಂದೂಸ್ತಾನ್ ಕನ್ನಡ ಮೊಬೈಲ್ ಆಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3hDyh4G
Apple Link - https://apple.co/3loQYe 
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು TwitterFacebook ಲಿಂಕ್ ಗಳ ಮೇಲೆ ಕ್ಲಿಕ್ಕಿಸಿ.

 

Trending News