ಶ್ರೀನಗರ: ಕ್ರಿಕೆಟಿಗರಾಗಲು ಆಶಿಸುವವರಿಗೆ ವಿಶೇಷವಾಗಿ ದೂರದ ಪ್ರದೇಶಗಳ ಯುವಕರಿಗೆ ತರಬೇತಿ ನೀಡಲು ಭಾರತದ ಮಾಜಿ ಕ್ರಿಕೆಟಿಗ ಸುರೇಶ್ ರೈನಾ (Suresh Raina) ಜಮ್ಮು ಮತ್ತು ಕಾಶ್ಮೀರದಲ್ಲಿ ಕ್ರಿಕೆಟ್ ಅಕಾಡೆಮಿ (Cricket academy) ತೆರೆಯಲಿದ್ದಾರೆ ಎಂದು ಅಧಿಕೃತ ವಕ್ತಾರರು ಮಾಹಿತಿ ನೀಡಿದರು. ರೈನಾ ಶುಕ್ರವಾರ ಜಮ್ಮು ಮತ್ತು ಕಾಶ್ಮೀರ ಪೊಲೀಸ್ ಮುಖ್ಯಸ್ಥ ದಿಲ್ಬಾಗ್ ಸಿಂಗ್ ಅವರನ್ನು ಭೇಟಿಯಾಗಿ ಈ ಕೇಂದ್ರಾಡಳಿತ ಪ್ರದೇಶದ ಯುವಕರ ಕ್ರೀಡಾ ಸಾಮರ್ಥ್ಯವನ್ನು ಸುಧಾರಿಸುವ ಯೋಜನೆಗಳ ಬಗ್ಗೆ ಚರ್ಚಿಸಿದರು.
'ನೀನು ಚೆನ್ನೈ ತಂಡದ ಹೃದಯ ಬಡಿತವಿದ್ದಂತೆ'-ಸುರೇಶ್ ರೈನಾಗೆ ಶೇನ್ ವ್ಯಾಟ್ಸನ್ ಹೃದಯಸ್ಪರ್ಶಿ ಸಂದೇಶ
ಪೊಲೀಸ್ ವಕ್ತಾರರು, 'ಪ್ರಸಿದ್ಧ (ಮಾಜಿ) ಅಂತರರಾಷ್ಟ್ರೀಯ ಆಟಗಾರ ಸುರೇಶ್ ರೈನಾ ಅವರು ಜಮ್ಮು ಮತ್ತು ಕಾಶ್ಮೀರ ಮಹಾನಿರ್ದೇಶಕ (ಡಿಜಿಪಿ) ದಿಲ್ಬಾಗ್ ಸಿಂಗ್ ಅವರನ್ನು ಶುಕ್ರವಾರ ಪೊಲೀಸ್ ಪ್ರಧಾನ ಕಚೇರಿಯಲ್ಲಿ (ಪಿಎಚ್‌ಕ್ಯು) ಭೇಟಿಯಾಗಿ ಸ್ಥಳೀಯ ಯುವಕರ ಕ್ರೀಡಾಪಟುತ್ವವನ್ನು ಪ್ರೋತ್ಸಾಹಿಸಲಾಗುತ್ತಿರುವ ಪೊಲೀಸರ ಆ ಯೋಜನೆಗಳ ಬಗ್ಗೆ ಚರ್ಚಿಸಿದ್ದಾರೆ.
It gives me immense pleasure to get the support of honourable @manojsinha_ sir, had a productive meeting today with him on working towards creating a platform for sports in Jammu & Kashmir. Let's make it bigger! @IndiaSports @diprjk #jammu #kashmir #sports pic.twitter.com/8Hbdfvr4St
— Suresh Raina🇮🇳 (@ImRaina) September 18, 2020
ಜಮ್ಮು ಮತ್ತು ಕಾಶ್ಮೀರದ (Jammu and Kashmir) ಯುವಕರಲ್ಲಿ ಕ್ರೀಡೆಗಳನ್ನು ಉತ್ತೇಜಿಸಲು ಬಯಸುತ್ತೇನೆ ಎಂದು ತಿಳಿಸಿರುವ ರೈನಾ, ಪಿಎಚ್‌ಕ್ಯುಗೆ ಬಂದಿದ್ದಕ್ಕಾಗಿ ಮಾಜಿ ಕ್ರಿಕೆಟಿಗನಿಗೆ ಡಿಜಿಪಿ ಧನ್ಯವಾದ ಅರ್ಪಿಸಿದ್ದಾರೆ ಮತ್ತು ಜಮ್ಮು ಮತ್ತು ಕಾಶ್ಮೀರದ ಕೇಂದ್ರಾಡಳಿತ ಪ್ರದೇಶದ ಯುವಕರಿಗೆ ಸೇವೆ ಸಲ್ಲಿಸುವ ಅವರ ಬದ್ಧತೆಯನ್ನು ಶ್ಲಾಘಿಸಿರುವುದಾಗಿ ತಿಳಿಸಿದರು.
UAEಯಿಂದ ಇದ್ದಕ್ಕಿದ್ದಂತೆ ಭಾರತಕ್ಕೆ ಮರಳಿದ ಸುರೇಶ ರೈನಾ, ಐಪಿಎಲ್ ಪೂರ್ಣ ಋತುವಿನಿಂದ ಹೊರಕ್ಕೆ
ಶಾಲೆಗಳು, ಕಾಲೇಜುಗಳು ಮತ್ತು ಗ್ರಾಮೀಣ ಪ್ರದೇಶಗಳು ಸೇರಿದಂತೆ ರಾಜ್ಯದ ವಿವಿಧ ಭಾಗಗಳಿಂದ ಪ್ರತಿಭಾವಂತ ಯುವಕರು ಅಥವಾ ಮಕ್ಕಳಿಗೆ ಮಾರ್ಗದರ್ಶನ ನೀಡಲು ಅವರು ಬಯಸುತ್ತಾರೆ ಎಂದು ಭಾರತದ ಮಾಜಿ ಬ್ಯಾಟ್ಸ್‌ಮನ್ ಹೇಳಿದ್ದಾರೆ. ಕ್ರಿಕೆಟ್ ಉತ್ತೇಜಿಸಲು ಮತ್ತು ವಿಶೇಷವಾಗಿ ಬಡ ಮಕ್ಕಳ ಪ್ರತಿಭೆಯನ್ನು ಗುರುತಿಸಲು ಅವರು ಈ ಹಿಂದೆ ಡಿಜಿಪಿಗೆ ಪತ್ರ ಬರೆದಿದ್ದಾರೆ ಎಂಬುದು ಗಮನಾರ್ಹವಾಗಿದೆ.