IPL 2024: ಸ್ಟಾರ್ ಪ್ಲೇಯರ್ಸ್ ಆದ್ರೂ ಐಪಿಎಲ್ ಹರಾಜಿನಲ್ಲಿ ಬಿಕರಿಯಾಗದ ಆಟಗಾರರು ಇವರು

IPL 2024: ಇಂಡಿಯನ್ ಪ್ರೀಮಿಯರ್ ಲೀಗ್ (ಐಪಿಎಲ್ 2024) ಹರಾಜಿನಲ್ಲಿ ಭಾರತೀಯ ಆಟಗಾರ ಸಮೀರ್ ರಿಜ್ವಿ ಅವರನ್ನು ಚೆನ್ನೈ ಸೂಪರ್ ಕಿಂಗ್ಸ್ (ಸಿಎಸ್‌ಕೆ) ಗೆ ರೂ. 8.4 ಕೋಟಿಗೆ ಖರೀದಿಸಿದೆ. 

Written by - Chetana Devarmani | Last Updated : Dec 21, 2023, 02:03 PM IST
  • ಇಂಡಿಯನ್ ಪ್ರೀಮಿಯರ್ ಲೀಗ್ 2024
  • ಐಪಿಎಲ್ ಹರಾಜಿನಲ್ಲಿ ಮಾರಾಟವಾಗದ ಕ್ರಿಕೆಟಿಗರು
  • ಐಪಿಎಲ್ 2024 ಮಾರಾಟವಾಗದ ಆಟಗಾರರ ಸಂಪೂರ್ಣ ಪಟ್ಟಿ
IPL 2024: ಸ್ಟಾರ್ ಪ್ಲೇಯರ್ಸ್ ಆದ್ರೂ ಐಪಿಎಲ್ ಹರಾಜಿನಲ್ಲಿ ಬಿಕರಿಯಾಗದ ಆಟಗಾರರು ಇವರು  title=
IPL 2024

IPL 2024: ಆಸ್ಟ್ರೇಲಿಯಾದ ವೇಗಿ ಮಿಚೆಲ್ ಸ್ಟಾರ್ಕ್ ಇಂಡಿಯನ್ ಪ್ರೀಮಿಯರ್ ಲೀಗ್ (ಐಪಿಎಲ್ 2024) ಇತಿಹಾಸದಲ್ಲಿ ಅತ್ಯಂತ ದುಬಾರಿ ಬೆಲೆಗೆ ಮಾರವಾದ ಆಟಗಾರನಾಗಿದ್ದಾರೆ. ಮಂಗಳವಾರ ದುಬೈನಲ್ಲಿ ನಡೆದ ಐಪಿಎಲ್ ಹರಾಜಿನಲ್ಲಿ ಕೋಲ್ಕತ್ತಾ ನೈಟ್ ರೈಡರ್ಸ್ 24.75 ಕೋಟಿಗೆ ಅವರನ್ನು ಖರೀದಿಸಿದೆ. ಪ್ಯಾಟ್ ಕಮ್ಮಿನ್ಸ್ ಈ ಹಿಂದೆ ಐಪಿಎಲ್ ಇತಿಹಾಸದಲ್ಲಿ ಅತ್ಯಂತ ದುಬಾರಿ ಆಟಗಾರರಾಗಿದ್ದರು. ಅವರನ್ನು ಸನ್‌ರೈಸರ್ಸ್ ಹೈದರಾಬಾದ್ ತಂಡವು 20.50 ಕೋಟಿ ರೂ ಗೆ ತೆಗೆದುಕೊಂಡಿತ್ತು. ಹರಾಜಿನಲ್ಲಿ ಮುಂಬೈ ಇಂಡಿಯನ್ಸ್ (MI) ಮತ್ತು ಡೆಲ್ಲಿ ಕ್ಯಾಪಿಟಲ್ಸ್ (DC), ಗುಜರಾತ್ ಟೈಟಾನ್ಸ್ (GT) ಮತ್ತು ಕೋಲ್ಕತ್ತಾ ನೈಟ್ ರೈಡರ್ಸ್ (KKR) ಮಿಚೆಲ್ ಸ್ಟಾರ್ಕ್ ಗಾಗಿ ಬಿಡ್ ನಡೆಸಿದರು. ಅಂತಿಮವಾಗಿ ಕೋಲ್ಕತ್ತಾ ನೈಟ್ ರೈಡರ್ಸ್ 24 ಕೋಟಿ 75 ಲಕ್ಷಕ್ಕೆ ಸ್ಟಾರ್ಕ್ ಅವರನ್ನು ಖರೀದಿಸಿತು.

ಐಪಿಎಲ್ 2024 ರ ಹರಾಜಿನಲ್ಲಿ ಬಿಡ್ ಮಾಡದ ಆಟಗಾರರಲ್ಲಿ ಆಸ್ಟ್ರೇಲಿಯಾದ ದಿಗ್ಗಜ ಸ್ಟೀವ್ ಸ್ಮಿತ್ ಕೂಡ ಸೇರಿದ್ದಾರೆ. ಅವರ ಮೂಲ ಬೆಲೆ 2 ಕೋಟಿ ರೂ. ಆದರೆ ಅವರನ್ನು ಯಾರೂ ಖರೀದಿಸಿಲ್ಲ. ಆಸ್ಟ್ರೇಲಿಯಾದ ಜೋಶ್ ಇಂಗ್ಲಿಸ್ ಕೂಡ ಅನ್ ಸೋಲ್ಡ್ ಆಗಿದ್ದಾರೆ. ಅವರ ಮೂಲ ಬೆಲೆಯೂ ರೂ.2 ಕೋಟಿ. 

ಇದನ್ನೂ ಓದಿ: ರಾಬಿನ್ ಮಿಂಜ್ ತಂದೆಗೆ ಹೀಗಂತ ಮಾತು ಕೊಟ್ಟಿದ್ದರಂತೆ ಧೋನಿ ! 

ಜೋಶ್ ಹ್ಯಾಜಲ್‌ವುಡ್, ಆದಿಲ್ ರಶೀದ್, ರಾಸ್ಸಿ ವ್ಯಾನ್ ಡೆರ್ ಡಸ್ಸೆನ್, ಜೇಸನ್ ಹೋಲ್ಡರ್, ಸೌಥಿ ಮುಂತಾದ ವಿದೇಶಿ ಆಟಗಾರರು  ಅನ್ ಸೋಲ್ಡ್ ಆಗಿದ್ದಾರೆ. ಇದರಲ್ಲಿ ಭಾರತದ ಸ್ಟಾರ್ ಆಟಗಾರರೂ ಹರಾಜಿನಲ್ಲಿ ಬಿಕರಿಯಾಗಲಿಲ್ಲ. ಈ ಪಟ್ಟಿಯಲ್ಲಿ ಹನುಮ ವಿಹಾರಿ, ವರುಣ್ ಆರೋನ್, ಕುಲದೀಪ್ ಯಾದವ್, ವಿರಾಟ್ ಸಿಂಗ್ ಮುಂತಾದ ಆಟಗಾರರು ಇದ್ದಾರೆ.

ಮಾರಾಟವಾಗದ ಆಟಗಾರರ ಸಂಪೂರ್ಣ ಪಟ್ಟಿ:

ಕರುಣ್ ನಾಯರ್, ಸ್ಟೀವ್ ಸ್ಮಿತ್, ಜೋಶ್ ಇಂಗ್ಲಿಸ್, ಮೆಂಡಿಸ್, ಜೋಶ್ ಹ್ಯಾಜಲ್‌ವುಡ್, ವಕಾರ್ ಸಲಾಮ್ಖೈಲ್, ಆದಿಲ್ ರಶೀದ್, ಅಕೀಲ್ ಹೊಸೈನ್, ಇಶ್ ಸೋಧಿ, ತಬ್ರಿಜ್ ಶಮ್ಸಿ, ರೋಹನ್ ಕುನ್ನುಮ್ಮಾಲ್, ಪ್ರಿಯಾಂಸ್ ಆರ್ಯ, ಮನನ್ ವೋಹ್ರಾ, ಸರ್ಬರಾಜ್ ಖಾನ್, ರಾಜ್ ಅನ್ ವಿವ್ರಂತ್ ಖಾನ್ ಶರ್ಮಾ, ಅಧಿತ್ ಶೇತ್, ಹೃತಿಕ್ ಶೋಕೀನ್, ಉರ್ವಿಲ್ ಪಟೇಲ್, ವಿಷ್ಣು ಸೋಲಂಕಿ, ಕುಲದೀಪ್ ಯಾದವ್, ಇಶಾನ್ ಬೋರೆಲ್, ಶಿವ ಸಿಂಗ್, ಮುರ್ಗನ್ ಅಶ್ವಿನ್, ಪುಲ್ಕಿತ್ ನಾರಂಗ್, ಫಿನ್ ಅಲೆನ್, ಕಾಲಿನ್ ಮುನ್ರೊ, ರಾಸ್ಸಿ ವ್ಯಾನ್ ಡೆರ್ ಡ್ಯಸೆನ್, ಕೈಸ್ ಅಹ್ಮದ್, ಮೈಕೆಲ್ ಬ್ರೇಸ್‌ವೆಲ್, ಜೇಮ್ಸ್ ನೀಶಮ್, ಪಾಲ್, ಓಡಿಯನ್ ಸ್ಮಿತ್, ದುಷ್ಮಂತ ಸಮೀರಾ, ಬೆನ್ ಡುವರ್‌ಶುಯಿಸ್, ಮ್ಯಾಟ್ ಹೆನ್ರಿ, ಕೈಲ್ ಜೇಮಿಸನ್, ಟೈಮಲ್ ಮಿಲ್ಸ್, ಆಡಮ್ ಮಿಲ್ನೆ. 

ಇದನ್ನೂ ಓದಿ: CSKಗೆ ರೋಹಿತ್ ಶರ್ಮಾ..! ಐಪಿಎಲ್ ಹರಾಜಿನ ಬೆನ್ನಲ್ಲೇ ಚೆನ್ನೈ ಫ್ರಾಂಚೈಸಿಯಿಂದ ಬಂತು ಶಾಕಿಂಗ್ ನ್ಯೂಸ್ 

ಕನ್ನಡ ಭಾಷೆಯಲ್ಲಿ ಇತ್ತೀಚಿನ ಕರ್ನಾಟಕ, ದೇಶ, ವಿದೇಶ, ಮನರಂಜನೆ, ಶಿಕ್ಷಣ, ಉದ್ಯೋಗ, ಆರೋಗ್ಯ, ಜೀವನಶೈಲಿ, ಆಧ್ಯಾತ್ಮ,  ಕ್ರೀಡೆ, ಕ್ರೈಂ, ವೈರಲ್, ವ್ಯಾಪಾರ, ತಂತ್ರಜ್ಞಾನ ಸುದ್ದಿಗಳನ್ನು ಓದಲು ಈಗಲೇ ನಮ್ಮ ಜೀ ಕನ್ನಡ ನ್ಯೂಸ್ ಮೊಬೈಲ್ ಅಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3AClgDd
Apple Link - https://apple.co/3wPoNgr
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು 
Twitter Link - https://bit.ly/3n6d2R8
Facebook Link - https://bit.ly/3Hhqmcj 
Youtube Link - https://www.youtube.com/live/RNn4I7iIaYE?si=3G4W5dh0oCdFnu-T

Instagram Link -  https://bit.ly/3LyfY2l 
Sharechat Link - https://bit.ly/3LCjokI 
Threads Link-  https://www.threads.net/@zeekannadanews 
WhatsApp Channel- bit.ly/46lENGm ಲಿಂಕ್ ಗಳ ಮೇಲೆ ಕ್ಲಿಕ್ ಮಾಡಿ. 

Trending News