ಚಾಮರಾಜನಗರದಲ್ಲಿ ₹400 ಕೋಟಿ ಹೂಡಿಕೆ ಮಾಡಿದ ಮುತ್ತಯ್ಯ ಮುರಳೀಧರನ್!

ವಿಶ್ವವಿಖ್ಯಾತ ಸ್ಪಿನ್‌ ಬೌಲರ್‌ ಶ್ರೀಲಂಕಾದ ಮುತ್ತಯ್ಯ ಮುರಳೀಧರನ್‌ ಅವರು ತಮ್ಮ ಕ್ರಿಕೆಟ್‌ ನಿವೃತ್ತಿ ಬಳಿಕ ಉದ್ಯಮದಲ್ಲಿ ತೊಡಗಿಸಿಕೊಂಡಿದ್ದಾರೆ. ಈ ಸ್ಪಿನ್ ಮಾತ್ರಿಕ ತಮ್ಮ ಉದ್ಯಮಕ್ಕೆ ಕರ್ನಾಟಕವನ್ನೇ ಆಯ್ಕೆ ಮಾಡಿಕೊಂಡಿರುವುದು ವಿಶೇಷ.

Written by - Puttaraj K Alur | Last Updated : Aug 16, 2023, 08:52 PM IST
  • ಧಾರವಾಡ ಬಳಿಕ ಚಾಮರಾಜನಗದಲ್ಲಿಯೂ ಮುತ್ತಯ್ಯ ಮುರುಳೀಧರನ್ ಪಾನೀಯ ಘಟಕ ಸ್ಥಾಪನೆ
  • ಗಡಿನಾಡು ಚಾಮರಾಜನಗರದಲ್ಲಿ ಪಾನೀಯ ಉದ್ಯಮಕ್ಕೆ 400 ಕೋಟಿ ರೂ. ಹೂಡಿಕೆ
  • ಧಾರವಾಡದಲ್ಲಿ ‘ಸಿಲೋನ್‌ ಬೆವರೇಜಸ್‌ ಕಂಪನಿ’ ಸ್ಥಾಪನೆಗೆ 900 ಕೋಟಿ ರೂ. ಹೂಡಿಕೆ
ಚಾಮರಾಜನಗರದಲ್ಲಿ ₹400 ಕೋಟಿ ಹೂಡಿಕೆ ಮಾಡಿದ ಮುತ್ತಯ್ಯ ಮುರಳೀಧರನ್! title=
ಚಾಮರಾಜನಗರದಲ್ಲಿ ಮುರಳೀಧರನ್ 400 ಕೋಟಿ ಹೂಡಿಕೆ!

ಚಾಮರಾಜನಗರ: ವಿಶ್ವವಿಖ್ಯಾತ ಸ್ಪಿನ್‌ ಬೌಲರ್‌ ಶ್ರೀಲಂಕಾದ ಮುತ್ತಯ್ಯ ಮುರಳೀಧರನ್‌ ಅವರು ತಮ್ಮ ಕ್ರಿಕೆಟ್‌ ನಿವೃತ್ತಿ ಬಳಿಕ ಉದ್ಯಮದಲ್ಲಿ ತೊಡಗಿಸಿಕೊಂಡಿದ್ದಾರೆ. ಈ ಸ್ಪಿನ್ ಮಾತ್ರಿಕ ತಮ್ಮ ಉದ್ಯಮಕ್ಕೆ ಕರ್ನಾಟಕವನ್ನೇ ಆಯ್ಕೆ ಮಾಡಿಕೊಂಡಿರುವುದು ವಿಶೇಷ. ಈಗಾಗಲೇ ಧಾರವಾಡ ತಾಲೂಕಿನ ಮುಮ್ಮಿಗಟ್ಟಿಯ FMGC ಕ್ಲಸ್ಟರ್‌ನಲ್ಲಿ ‘ಸಿಲೋನ್‌ ಬೆವರೇಜಸ್‌ ಕಂಪನಿ’ ಸ್ಥಾಪನೆಗೆ 900 ಕೋಟಿ ರೂ. ಹೂಡಿಕೆ ಮಾಡಿದ್ದಾರೆ.

ಇದೀಗ ಗಡಿನಾಡು ಚಾಮರಾಜನಗರದಲ್ಲಿಯೂ ಮುತ್ತಯ್ಯ ಮುರುಳೀಧರನ್ ತಮ್ಮ ಬೃಹತ್ ಉದ್ಯಮವನ್ನು ವಿಸ್ತರಿಸಲು ಯೋಚಿಸಿದ್ದು, 400 ಕೋಟಿ ರೂ. ಬಂಡವಾಳ ಹೂಡಿಕೆ ಮಾಡಿದ್ದಾರೆ. ಚಾಮರಾಜನಗರದ ಕೆಲ್ಲಂಬಳ್ಳಿ, ಬದನಗುಪ್ಪೆ ಕೈಗಾರಿಕಾ ಪ್ರದೇಶದ 46 ಎಕರೆ ಪ್ರದೇಶದಲ್ಲಿ ಪಾನೀಯ ತಯಾರಿಕಾ ಘಟಕ ಆರಂಭಿಸುತ್ತಿದ್ದಾರೆ.

ಇದನ್ನೂ ಓದಿ: ನಿವೃತ್ತಿ ಹಿಂಪಡೆದು ವಿಶ್ವಕಪ್’ನಲ್ಲಿ ಸ್ಥಾನ ಪಡೆದ ಜಗತ್ತಿನ ಶ್ರೇಷ್ಠ ಆಲ್’ರೌಂಡರ್! ಈತ ಧೋನಿಗೆ ಗೆಳೆಯ-ಕೊಹ್ಲಿಗೆ ಶತ್ರು!

6 ತಿಂಗಳ ಹಿಂದೆಯೇ ಮುತ್ತರಯ್ಯ ಮುರುಳೀಧರನ್ ಅವರು ಜಮೀನು ಖರೀದಿಸಿದ್ದು, ಅವರ ಈ ಯೋಜನೆಗೆ ರಾಜ್ಯಮಟ್ಟದಲ್ಲಿ ಅನುಮತಿ ದೊರೆತಿದೆ. ಈಗಾಗಲೇ ಗುರುತಿಸಿರುವ ಜಾಗದಲ್ಲಿ ಪಾನೀಯ ಘಟಕದ ನಿರ್ಮಾಣ ಕಾರ್ಯ ಭರದಿಂದ ಸಾಗುತ್ತಿದೆ. ‘ಮುತ್ತಯ್ಯ ಬೆವರೇಜ್‌ ಅಂಡ್‌ ಕನ್‌ಫೆಕ್ಷನರಿ ಪ್ರೈವೇಟ್‌ ಲಿಮಿಟೆಡ್‌ ಹೆಸರಿನಲ್ಲಿ ತಂಪು ಪಾನೀಯ ಕಾರ್ಖಾನೆ ಸ್ಥಾಪಿಸಲಾಗುತ್ತಿದೆ.

ತಂಪು ಪಾನೀಯ ಘಟಕ ಸ್ಥಾಪನೆಯಿಂದ 800 ಮಂದಿಗೆ ಕೆಲಸ ಸಿಗಲಿದೆ. ಈಗಾಗಲೇ ಕಾಮಗಾರಿ ನಡೆಯುತ್ತಿದ್ದು, ಮುಂದಿನ 10 ತಿಂಗಳ ಅವಧಿಯಲ್ಲಿ ಕಾರ್ಖಾನೆ ಆರಂಭವಾಗುವ ನಿರೀಕ್ಷೆ ಇದೆ ಅನ್ನೂ ಮಾಹಿತಿ ದೊರೆತಿದೆ.

ಇದನ್ನೂ ಓದಿ: 32ರ ಹರೆಯದಲ್ಲೇ ನಿವೃತ್ತಿ ಘೋಷಿಸಿದ ಟೀಂ ಇಂಡಿಯಾದ ಸ್ಟಾರ್ ಬೌಲರ್!

ಕನ್ನಡ ಭಾಷೆಯಲ್ಲಿ ಇತ್ತೀಚಿನ ಕರ್ನಾಟಕ, ದೇಶ, ವಿದೇಶ, ಮನರಂಜನೆ, ಶಿಕ್ಷಣ, ಉದ್ಯೋಗ, ಆರೋಗ್ಯ, ಜೀವನಶೈಲಿ, ಆಧ್ಯಾತ್ಮ,  ಕ್ರೀಡೆ, ಕ್ರೈಂ, ವೈರಲ್, ವ್ಯಾಪಾರ, ತಂತ್ರಜ್ಞಾನ ಸುದ್ದಿಗಳನ್ನು ಓದಲು ಈಗಲೇ ನಮ್ಮ ಜೀ ಕನ್ನಡ ನ್ಯೂಸ್ ಮೊಬೈಲ್ ಅಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3AClgDd
Apple Link - https://apple.co/3wPoNgr
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು 
Twitter Link - https://bit.ly/3n6d2R8
Facebook Link - https://bit.ly/3Hhqmcj 
Youtube Link - https://www.youtube.com/watch?v=uzXzteRDY-k

Instagram Link -  https://bit.ly/3LyfY2l 
Sharechat Link - https://bit.ly/3LCjokI 
Threads Link-  https://www.threads.net/@zeekannadanews ಲಿಂಕ್ ಗಳ ಮೇಲೆ ಕ್ಲಿಕ್ ಮಾಡಿ.

Trending News