SRH Vs CSK : ತವರಿನಲ್ಲಿ SRH ಗೆ 6 ವಿಕೆಟ್ ಗಳಿಂದ 2ನೇ ಗೆಲುವು

ಐಪಿಎಲ್ 2024 18 ಪಂದ್ಯ ಹೈದ್ರಾಬಾದ್ ನ ರಾಜೀವ್ ಗಾಂಧಿ ಅಂತರಾಷ್ಟ್ರೀಯ ಕ್ರೀಡಾಂಗಣದಲ್ಲಿ ನಡೆಯಿತು 

Written by - Zee Kannada News Desk | Last Updated : Apr 5, 2024, 11:20 PM IST
  • ಒಟ್ಟು ಸನ್ ರೈಸರ್ಸ್ ಹೈದರಾಬಾದ್ 18.1 ಓವರ್ ಗಳಲ್ಲಿ 166 ಗಳಿಸಿ 6 ವಿಕೆಟ್ ಗಳ ಅಂತರದಿಂದ ಜಯ ಸಾಧಿಸಿತು.
  • ಆರಂಭಿಕ ಬ್ಯಾಟ್ಸ್ಮನ್ ಗಳಾಗಿ ರಚಿನ್ ರವೀಂದ್ರ ಹಾಗೂ ರುತುರಾಜ ಗಾಯಕ್ವಾಡ್ ಕಣಕ್ಕಿಳಿದರು.
  • ಸನ್ ರೈಸರ್ಸ್ ಹೈದರಾಬಾದ್ ತಂಡ ಟಾಸ್ ಗೆದ್ದು ಬೌಲಿಂಗ್ ಆಯ್ಕೆ ಮಾಡಿಕೊಳ್ಳುವ ಮೂಲಕ ಚೆನ್ನೈ ಸೂಪರ್ ಕಿಂಗ್ಸ್ ತಂಡಕ್ಕೆ ಬ್ಯಾಟಿಂಗ್ ಬಿಟ್ಟುಕೊಟ್ಟಿತು.
SRH Vs CSK  : ತವರಿನಲ್ಲಿ SRH ಗೆ 6 ವಿಕೆಟ್ ಗಳಿಂದ 2ನೇ ಗೆಲುವು  title=

18ನೇ ಪಂದ್ಯದಲ್ಲಿ ಚೆನ್ನೈ ಸೂಪರ್ ಕಿಂಗ್ಸ್ ಹಾಗೂ ಸನ್ ರೈಸರ್ಸ್ ಹೈದರಾಬಾದ್ ತಂಡಗಳು ಸೆಣಸಾಡತ್ತಿದ್ದು, ಆರಂಭದಲ್ಲಿ ಸನ್ ರೈಸರ್ಸ್ ಹೈದರಾಬಾದ್ ತಂಡ ಟಾಸ್ ಗೆದ್ದು ಬೌಲಿಂಗ್ ಆಯ್ಕೆ ಮಾಡಿಕೊಳ್ಳುವ ಮೂಲಕ ಚೆನ್ನೈ ಸೂಪರ್ ಕಿಂಗ್ಸ್ ತಂಡಕ್ಕೆ ಬ್ಯಾಟಿಂಗ್ ಬಿಟ್ಟುಕೊಟ್ಟಿತು.

ಮೊದಲ ಇನ್ನಿಂಗ್ಸ್ ಪ್ರಾರಂಭಿಸಿದ ಚೆನ್ನೈ ಸೂಪರ್ ಕಿಂಗ್ಸ್ ತಂಡ ಬ್ಯಾಟಿಂಗ್ ಮಾಡುವ ಮೂಲಕ 20 ಓವರ್ ಗಳಲ್ಲಿ 165 ರನ್ಗಳನ್ನು ಗಳಿಸಿತು.

ಇದನ್ನು ಓದಿ : Priyamani : ಸಿಂಪಲ್ ಸೀರೆಯಲ್ಲೂ ಸಕತ್ ಆಗಿ ಸೆಳೆಯುವ ಅಂದಗಾತಿ ಇವಳು : ಫೋಟೋಸ್ ಇಲ್ಲಿವೆ

ಚೆನ್ನೈ ಸೂಪರ್ ಕಿಂಗ್ಸ್ ತಂಡದಿಂದ ಆರಂಭಿಕ ಬ್ಯಾಟ್ಸ್ಮನ್ ಗಳಾಗಿ ರಚಿನ್ ರವೀಂದ್ರ ಹಾಗೂ ರುತುರಾಜ ಗಾಯಕ್ವಾಡ್ ಕಣಕ್ಕಿಳಿದರು.

ರುತುರಾಜ್ ಗಾಯಕ್ವಾಡ್ 26(21), ರಚಿನ್ ರವೀಂದ್ರ 12(9), ಅಜಿಂಕ್ಯ ರಹನೆ 35(30), ಶಿವಂ ದುಬೆ 45(24), ರವೀಂದ್ರ ಜಡೇಜಾ 31(23), ಡೆರಿಲ್ ಮಿಚೆಲ್ 13(11), ಎಂಎಸ್ ಧೋನಿ 1(2) ರನ್ ಗಳಿಸಿದರು. 

ಇದಕ್ಕೆ ವಿರುದ್ಧವಾಗಿ ಬೌಲಿಂಗ್ ಸನ್ ರೈಸರ್ಸ್ ಹೈದ್ರಾಬಾದ್ ತಂಡದಿಂದ ಭುವನೇಶ್ವರ್ ಕುಮಾರ್, ಟಿ ನಟರಾಜನ್, ಪ್ಯಾಟ್ ಕಮ್ಮಿನ್ಸ್, ಶಹಾಬಾದ್ ಅಹಮದ್, ಜಯದೇವ್ ಉನದ್ಕತ್ ತಲಾ 1 ವಿಕೆಟ್ಗಳನ್ನು ಪಡೆದರು.

ಎರಡನೇ ಇನ್ನಿಂಗ್ಸ್ ಪ್ರಾರಂಭಿಸಿದ ಸನ್ ರೈಸರ್ಸ್ ಹೈದರಾಬಾದ್ ಆರಂಭಿಕ ಬ್ಯಾಟ್ಸ್ಮನ್ ಗಳಾಗಿ ಟ್ರಾವಿಸ್ ಡೇವಿಡ್ 31(24) , ಅಭಿಷೇಕ್ ಶರ್ಮಾ 37(12), ಐಡೆನ್ ಮಾರ್ಕ್ರಾಮ್ 50(36), ಶಹಮಾನ್ ಅಹಮದ್ 18(19), ಹೆನ್ರಿಕ್ ಕ್ಲಾಸೆನ್ 10(11), ನಿತೀಶ್ ಕುಮಾರ್ ರೆಡ್ಡಿ 14(8)  ರನ್ ಗಳಿಸಿದರು. 

ಇದಕ್ಕೆ ವಿರುದ್ಧವಾಗಿ ಬೌಲಿಂಗ್  ಚೆನ್ನೈ ಸೂಪರ್ ಕಿಂಗ್ಸ್ ತಂಡದಿಂದ ಮೊಯಿನ್ ಅಲಿ 2 , ಮಹೇಶ್ ತೀಕ್ಷಣ, ದೀಪಕ್ ಚಾಹರ್ ತಲಾ 1 ವಿಕೆಟ್ ಪಡೆದರು . 

ಇದನ್ನು ಓದಿ : Anupama Parameshwaran : ನೀಲಿ ಸೀರೆಯಲ್ಲಿ ಮಿನುಗಿದ "ನಟಸಾರ್ವಭೌಮ' ಹುಡುಗಿ : ಫೋಟೋಸ್ ಇಲ್ಲಿವೆ 

ಒಟ್ಟು ಸನ್ ರೈಸರ್ಸ್ ಹೈದರಾಬಾದ್ 18.1 ಓವರ್ ಗಳಲ್ಲಿ 166 ಗಳಿಸಿ 6 ವಿಕೆಟ್ ಗಳ ಅಂತರದಿಂದ ಜಯ ಸಾಧಿಸಿತು. 

ಕನ್ನಡ ಭಾಷೆಯಲ್ಲಿ ಇತ್ತೀಚಿನ ಕರ್ನಾಟಕ, ದೇಶ, ವಿದೇಶ, ಮನರಂಜನೆ, ಶಿಕ್ಷಣ, ಉದ್ಯೋಗ, ಆರೋಗ್ಯ, ಜೀವನಶೈಲಿ, ಆಧ್ಯಾತ್ಮ,  ಕ್ರೀಡೆ, ಕ್ರೈಂ, ವೈರಲ್, ವ್ಯಾಪಾರ, ತಂತ್ರಜ್ಞಾನ ಸುದ್ದಿಗಳನ್ನು ಓದಲು ಈಗಲೇ ನಮ್ಮ ಜೀ ಕನ್ನಡ ನ್ಯೂಸ್ ಮೊಬೈಲ್ ಅಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3AClgDd
Apple Link - https://apple.co/3wPoNgr
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು 
Twitter Link - https://bit.ly/3n6d2R8
Facebook Link - https://bit.ly/3Hhqmcj 
Youtube Link - https://t.co/lCSPNypK2U

Instagram Link -  https://bit.ly/3LyfY2l 
Sharechat Link - https://bit.ly/3LCjokI 
Threads Link-  https://www.threads.net/@zeekannadanews ಲಿಂಕ್ ಗಳ ಮೇಲೆ ಕ್ಲಿಕ್ ಮಾಡಿ

Trending News