“ಟೆಸ್ಟ್ ಸರಣಿ ಕೈವಶವಾಗಿದ್ದು ಇವರಿಂದಲೇ, ಇವರೇ ನಿಜವಾದ ಗೆಲುವಿನ ಹೀರೋ” ಎಂದ ಶುಭ್ಮನ್ ಗಿಲ್

IND Vs ENG: ರಾಂಚಿ ಟೆಸ್ಟ್‌’ನಲ್ಲಿ ಶುಭ್ಮನ್ ಗಿಲ್ ಅವರನ್ನು ಗೆಲುವಿನ ಹೀರೋ ಎಂದು ಬಣ್ಣಿಸಲಾಯಿತು. ಆದರೆ ಶುಭ್ಮನ್ ಗಿಲ್ ಗೆಲುವಿನ ಶ್ರೇಯವನ್ನು ಆರಂಭಿಕರಿಗೆ ನೀಡಿದ್ದಾರೆ. ನಾಲ್ಕನೇ ಇನ್ನಿಂಗ್ಸ್‌’ನಲ್ಲಿ ಆರಂಭಿಕರು ಉತ್ತಮ ಆರಂಭ ನೀಡಿದರು. ಇದರಿಂದಾಗಿ ಎದುರಾಳಿ ತಂಡದ ಮೇಲೆ ಒತ್ತಡ ಬಿದ್ದಿತು ಎಂದು ಶುಭ್‌ಮನ್ ಗಿಲ್ ಹೇಳಿದ್ದಾರೆ

Written by - Bhavishya Shetty | Last Updated : Feb 26, 2024, 05:30 PM IST
    • ರಾಂಚಿ ಟೆಸ್ಟ್‌’ನಲ್ಲಿ ಟೀಂ ಇಂಡಿಯಾ ರೋಚಕ ಗೆಲುವು ಸಾಧಿಸಿದೆ
    • ಶುಭ್ಮನ್ ಗಿಲ್ ಮತ್ತು ಧ್ರುವ್ ಜುರೆಲ್ ಜವಾಬ್ದಾರಿಯುತ ಆಟ
    • ರಾಂಚಿ ಟೆಸ್ಟ್‌’ನಲ್ಲಿ ಶುಭ್ಮನ್ ಗಿಲ್ ಅವರನ್ನು ಗೆಲುವಿನ ಹೀರೋ ಎಂದು ಬಣ್ಣಿಸಲಾಯಿತು
“ಟೆಸ್ಟ್ ಸರಣಿ ಕೈವಶವಾಗಿದ್ದು ಇವರಿಂದಲೇ, ಇವರೇ ನಿಜವಾದ ಗೆಲುವಿನ ಹೀರೋ” ಎಂದ ಶುಭ್ಮನ್ ಗಿಲ್ title=
Shubman Gill

IND Vs ENG: ರಾಂಚಿ ಟೆಸ್ಟ್‌’ನಲ್ಲಿ ಟೀಂ ಇಂಡಿಯಾ ರೋಚಕ ಗೆಲುವು ಸಾಧಿಸಿದೆ. ಶುಭ್ಮನ್ ಗಿಲ್ ಮತ್ತು ಧ್ರುವ್ ಜುರೆಲ್ ಜವಾಬ್ದಾರಿಯುತ ಆಟದಿಂದ ಭಾರತಕ್ಕೆ ನಾಲ್ಕನೇ ಟೆಸ್ಟ್’ನಲ್ಲೂ ಜಯ ಸಾಧಿಸಲು ಸಾಧ್ಯವಾಗಿದೆ. ಇನ್ನು ಶುಭ್ಮನ್ ಗಿಲ್ ಅಜೇಯ ಅರ್ಧಶತಕ ಗಳಿಸುವ ಮೂಲಕ ಟೀಮ್ ಇಂಡಿಯಾವನ್ನು ಗೆಲುವಿನತ್ತ ಮುನ್ನಡೆಸಿದ್ದು ಶ್ಲಾಘನೀಯ.

ರಾಂಚಿ ಟೆಸ್ಟ್‌’ನಲ್ಲಿ ಶುಭ್ಮನ್ ಗಿಲ್ ಅವರನ್ನು ಗೆಲುವಿನ ಹೀರೋ ಎಂದು ಬಣ್ಣಿಸಲಾಯಿತು. ಆದರೆ ಶುಭ್ಮನ್ ಗಿಲ್ ಗೆಲುವಿನ ಶ್ರೇಯವನ್ನು ಆರಂಭಿಕರಿಗೆ ನೀಡಿದ್ದಾರೆ. ನಾಲ್ಕನೇ ಇನ್ನಿಂಗ್ಸ್‌’ನಲ್ಲಿ ಆರಂಭಿಕರು ಉತ್ತಮ ಆರಂಭ ನೀಡಿದರು. ಇದರಿಂದಾಗಿ ಎದುರಾಳಿ ತಂಡದ ಮೇಲೆ ಒತ್ತಡ ಬಿದ್ದಿತು ಎಂದು ಶುಭ್‌ಮನ್ ಗಿಲ್ ಹೇಳಿದ್ದಾರೆ.

ಇದನ್ನೂ ಓದಿ: ಈ ಆರೋಗ್ಯ ಸಮಸ್ಯೆ ಉಳ್ಳವರು ಬೆಲ್ಲ-ಹುರಿಗಡಲೆ ಸೇವಿಸಿ: ವಾರದಲ್ಲಿ ಪರ್ಮನೆಂಟ್ ರಿಲೀಫ್ ಸಿಗುತ್ತೆ!

ರಾಂಚಿ ಟೆಸ್ಟ್ ಪಂದ್ಯವನ್ನು ಗೆಲ್ಲುವ ಮೂಲಕ ಟೀಂ ಇಂಡಿಯಾ ಐದು ಟೆಸ್ಟ್‌’ಗಳ ಸರಣಿಯಲ್ಲಿ 3-1 ಮುನ್ನಡೆ ಸಾಧಿಸಿದೆ.

“ನಾವು ಎದುರಾಳಿ ತಂಡವನ್ನು ಒತ್ತಡಕ್ಕೆ ಸಿಲುಕಿಸಿದ್ದೇವೆ. ನಮ್ಮ ಆರಂಭಿಕರು ಉತ್ತಮ ಆರಂಭ ನೀಡಿದರು. ಸತತ ವಿಕೆಟ್‌ ಪತನದಿಂದಾಗಿ ಒತ್ತಡ ಹೆಚ್ಚಾಯಿತು. ಆದರೆ ಆ ಒತ್ತಡವನ್ನು ಕೊನೆಗೊಳಿಸಲು ಜುರೆಲ್ ಮೀನಾಮೇಷ ಎಣಿಸಲಿಲ್ಲ. ಪರಿಸ್ಥಿತಿ ನೋಡಿ ಅದಕ್ಕೆ ತಕ್ಕಂತೆ ಆಡಿದರು” ಎಂದು ಹೊಗಳಿದ್ದಾರೆ.

“ಇಂಗ್ಲೆಂಡ್ ಉತ್ತಮವಾಗಿ ಬೌಲಿಂಗ್ ಮಾಡುತ್ತಿದೆ. ಬೌಂಡರಿ ಗಳಿಸುವ ಅವಕಾಶ ಸಿಗುತ್ತಿಲ್ಲ. ಆದರೆ ನಾವು ಮೇಡನ್ ಓವರ್‌ಗಳನ್ನು ಬಿಡಲಿಲ್ಲ. ಸಿಂಗಲ್ಸ್ ತೆಗೆದುಕೊಳ್ಳುತ್ತಲೇ ಇದ್ದೆವು. ಜುರೆಲ್ ಉತ್ತಮವಾಗಿ ಬ್ಯಾಟಿಂಗ್ ಮಾಡಿದರು. ಜುರೆಲ್ ಆಫ್ ಸ್ಪಿನ್ನರ್ ವಿರುದ್ಧ ಉತ್ತಮವಾಗಿ ಆಡಿದ್ದಾರೆ. ಕೆಎಲ್ ರಾಹುಲ್ ಔಟಾದ ನಂತರ ನಮಗೆ ಕಷ್ಟ ಹೆಚ್ಚಾಯಿತು. ಆದರೆ ರೋಹಿತ್ ಶರ್ಮಾ ಮತ್ತು ಕೋಚ್ ರಾಹುಲ್ ದ್ರಾವಿಡ್ ಈ ಕೆಲಸವನ್ನು ಕಷ್ಟಕರವಾಗಿಸಲಿಲ್ಲ. ಇಬ್ಬರೂ ಹಿರಿಯರು ನಮಗೆ ಆಡಲು ಸಂಪೂರ್ಣ ಸ್ವಾತಂತ್ರ್ಯ ನೀಡಿದ್ದರು. ಇದರ ಪರಿಣಾಮವೇ ಸರಣಿ ಗೆಲುವು” ಎಂದರು.

ಇದನ್ನೂ ಓದಿ:  ರಾಜ್ಯಾದ್ಯಂತ ಮಾರ್ಚ್ 3ರಿಂದ 6ರವರೆಗೆ ಪಲ್ಸ್ ಪೋಲಿಯೋ ಲಸಿಕಾ ಕಾರ್ಯಕ್ರಮ

ಸರಣಿಯ ಮೊದಲ ಪಂದ್ಯವನ್ನು ಗೆಲ್ಲುವ ಮೂಲಕ ಇಂಗ್ಲೆಂಡ್ ಮುನ್ನಡೆ ಸಾಧಿಸಿತ್ತು. ಆದರೆ ಮೊದಲ ಟೆಸ್ಟ್‌’ನ ಸೋಲಿನಿಂದ ಪಾಠ ಕಲಿತು ಭಾರತ ಬಲಿಷ್ಠ ಪುನರಾಗಮನ ಮಾಡಿದೆ. ಟೀಂ ಇಂಡಿಯಾ ಸತತ ಮೂರು ಟೆಸ್ಟ್‌’ಗಳನ್ನು ಗೆದ್ದು ಸರಣಿಯನ್ನು ಗೆದ್ದುಕೊಂಡಿದೆ. ಇನ್ನುಳಿದ ಕೊನೆಯ ಪಂದ್ಯ ಧರ್ಮಶಾಲಾದಲ್ಲಿ ನಡೆಯಲಿದೆ.

 

ಕನ್ನಡ ಭಾಷೆಯಲ್ಲಿ ಇತ್ತೀಚಿನ ಕರ್ನಾಟಕ, ದೇಶ, ವಿದೇಶ, ಮನರಂಜನೆ, ಶಿಕ್ಷಣ, ಉದ್ಯೋಗ, ಆರೋಗ್ಯ, ಜೀವನಶೈಲಿ, ಆಧ್ಯಾತ್ಮ,  ಕ್ರೀಡೆ, ಕ್ರೈಂ, ವೈರಲ್, ವ್ಯಾಪಾರ, ತಂತ್ರಜ್ಞಾನ ಸುದ್ದಿಗಳನ್ನು ಓದಲು ಈಗಲೇ ನಮ್ಮ ಜೀ ಕನ್ನಡ ನ್ಯೂಸ್ ಮೊಬೈಲ್ ಅಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3AClgDd
Apple Link - https://apple.co/3wPoNgr
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು 
Twitter Link - https://bit.ly/3n6d2R8
Facebook Link - https://bit.ly/3Hhqmcj 
Youtube Link - https://www.youtube.com/watch?v=I87DcFM35WY

Instagram Link -  https://bit.ly/3LyfY2l 
Sharechat Link - https://bit.ly/3LCjokI 
Threads Link-  https://www.threads.net/@zeekannadanews 
WhatsApp Channel- bit.ly/46lENGm ಲಿಂಕ್ ಗಳ ಮೇಲೆ ಕ್ಲಿಕ್ ಮಾಡಿ

Trending News