ಪ್ಯಾರಿಸ್‌ ಒಲಿಂಪಿಕ್ಸ್ʼನಲ್ಲಿ ಭಾರತಕ್ಕೆ 3ನೇ ಪದಕದ ಗರಿಮೆ: ಶೂಟಿಂಗ್‌ʼನಲ್ಲಿ ಕಂಚು ಗೆದ್ದು ಇತಿಹಾಸ ಬರೆದ ಸ್ವಪ್ನಿಲ್ ಕುಸಾಲೆ

Swapnil Kusale bronze medal at Paris Olympics: ಕೊಲ್ಲಾಪುರದ 29 ವರ್ಷದ ಶೂಟರ್‌ʼಗೆ ಇದು ಮೊದಲ ಒಲಿಂಪಿಕ್ಸ್ ಆಗಿದ್ದು, ಮೊದಲ ಅವಕಾಶದಲ್ಲೇ ಪದಕ ಗೆದ್ದಿದ್ದಾರೆ. 12 ವರ್ಷಗಳಿಂದ ಒಲಿಂಪಿಕ್ಸ್‌ʼಗೆ ಅರ್ಹತೆ ಪಡೆಯುವ ಪ್ರಯತ್ನದಲ್ಲಿದ್ದ ಸ್ವಪ್ನಿಲ್, ಈ ಬಾರಿ ಅವಕಾಶ ಪಡೆದಿದ್ದರು.    

Written by - Bhavishya Shetty | Last Updated : Aug 1, 2024, 02:36 PM IST
    • ಪ್ಯಾರಿಸ್‌ ಒಲಿಂಪಿಕ್ಸ್ʼನಲ್ಲಿ ಕಂಚು ಗೆದ್ದು ಇತಿಹಾಸ ಬರೆದ ಸ್ವಪ್ನಿಲ್ ಕುಸಾಲೆ
    • ಈ ಸ್ಪರ್ಧೆಯಲ್ಲಿ ಒಲಿಂಪಿಕ್ ಪದಕ ಗೆದ್ದ ಮೊದಲ ಭಾರತೀಯ ಎಂಬ ಹೆಗ್ಗಳಿಕೆ
    • ಕೊಲ್ಲಾಪುರದ 29 ವರ್ಷದ ಶೂಟರ್‌ʼಗೆ ಇದು ಮೊದಲ ಒಲಿಂಪಿಕ್ಸ್
ಪ್ಯಾರಿಸ್‌ ಒಲಿಂಪಿಕ್ಸ್ʼನಲ್ಲಿ ಭಾರತಕ್ಕೆ 3ನೇ ಪದಕದ ಗರಿಮೆ: ಶೂಟಿಂಗ್‌ʼನಲ್ಲಿ ಕಂಚು ಗೆದ್ದು ಇತಿಹಾಸ ಬರೆದ ಸ್ವಪ್ನಿಲ್ ಕುಸಾಲೆ title=
File Photo

Swapnil Kusale bronze medal at Paris Olympics: ಭಾರತದ ಮತ್ತೊಬ್ಬ ಶೂಟರ್ ಒಲಿಂಪಿಕ್ಸ್‌ʼನಲ್ಲಿ ತ್ರಿವರ್ಣ ಧ್ವಜ ಹಾರಿಸಿದ್ದಾರೆ. ಶೂಟರ್ ಸ್ವಪ್ನಿಲ್ ಕುಸಾಲೆ 50 ಮೀಟರ್ ರೈಫಲ್ʼನಲ್ಲಿ ಕಂಚಿನ ಪದಕ ಗೆದ್ದಿದ್ದಾರೆ.  ಈ ಸ್ಪರ್ಧೆಯಲ್ಲಿ ಒಲಿಂಪಿಕ್ ಪದಕ ಗೆದ್ದ ಮೊದಲ ಭಾರತೀಯ ಎಂಬ ಹೆಗ್ಗಳಿಕೆಗೆ ಸ್ವಪ್ನಿಲ್ ಕುಸಾಲೆ ಪಾತ್ರರಾಗಿದ್ದಾರೆ.

ಇದನ್ನೂ ಓದಿ: ಅಭಿಷೇಕ್‌ ಜೊತೆಗಿನ ವಿಚ್ಚೇದನ ವದಂತಿಗಳ ಬಗ್ಗೆ ಕೊನೆಗೂ ಮೌನ ಮುರಿದ ಐಶ್ವರ್ಯ ರೈ.. ಉತ್ತರ ಕೇಳಿ ಬೆಚ್ಚಿ ಬಿದ್ದ ನೆಟ್ಟಿಗರು..! ಡಿವೋರ್ಸ್‌ ಫಿಕ್ಸ್?!  

ಕೊಲ್ಲಾಪುರದ 29 ವರ್ಷದ ಶೂಟರ್‌ʼಗೆ ಇದು ಮೊದಲ ಒಲಿಂಪಿಕ್ಸ್ ಆಗಿದ್ದು, ಮೊದಲ ಅವಕಾಶದಲ್ಲೇ ಪದಕ ಗೆದ್ದಿದ್ದಾರೆ. 12 ವರ್ಷಗಳಿಂದ ಒಲಿಂಪಿಕ್ಸ್‌ʼಗೆ ಅರ್ಹತೆ ಪಡೆಯುವ ಪ್ರಯತ್ನದಲ್ಲಿದ್ದ ಸ್ವಪ್ನಿಲ್, ಈ ಬಾರಿ ಅವಕಾಶ ಪಡೆದಿದ್ದರು.  

ಇತಿಹಾಸ ಸೃಷ್ಟಿಸಿದ ಸ್ವಪ್ನಿಲ್:

ಸ್ವಪ್ನಿಲ್ ಕುಸಾಲೆ 451.4 ಅಂಕಗಳೊಂದಿಗೆ ಕಂಚಿನ ಪದಕ ಪಡೆದಿದ್ದಾರೆ. ವಿಶ್ವದ ನಂಬರ್ 1 ಶೂಟರ್ʼನ್ನು ಸೋಲಿಸಿ ಕಂಚಿನ ಪದಕ ಗೆದ್ದ ಸ್ವಪ್ನಿಲ್ ಕುಸಾಲೆ ಭಾರತಕ್ಕೆ ಒಲಿಂಪಿಕ್ ಪದಕ ಗೆದ್ದ 7ನೇ ಶೂಟರ್ ಎನಿಸಿಕೊಂಡಿದ್ದಾರೆ. ಇನ್ನು ಪ್ಯಾರಿಸ್ ಒಲಿಂಪಿಕ್ಸ್‌ʼನಲ್ಲಿ ಭಾರತಕ್ಕೆ ಇದುವರೆಗೆ ಮೂವರು ಶೂಟರ್‌ʼಗಳು ಪದಕ ಗೆದ್ದಿದ್ದಾರೆ. ಮನು ಭಾಕರ್ 10 ಮೀಟರ್ ಏರ್ ಪಿಸ್ತೂಲ್ ವೈಯಕ್ತಿಕ ಮತ್ತು ಮಿಶ್ರ ಸ್ಪರ್ಧೆಯಲ್ಲಿ ಕಂಚಿನ ಪದಕ ಗೆದ್ದಿದ್ದಾರೆ. ಇವರೊಂದಿಗೆ ಸರಬ್ಜೋತ್ ಸಿಂಗ್‌ ಕೂಡ ಪದಕ ಗೆದ್ದಿದ್ದಾರೆ. ಇದೀಗ ಸ್ವಪ್ನಿಲ್ 50 ಮೀಟರ್ ರೈಫಲ್ ಮೂರು ಸ್ಥಾನಗಳಲ್ಲಿ ಕಂಚಿನ ಪದಕ ಗೆದ್ದು ಇತಿಹಾಸ ನಿರ್ಮಿಸಿದ್ದಾರೆ.

ಸ್ವಪ್ನಿಲ್ ʼಸುವರ್ಣʼ ವೃತ್ತಿ

ಒಲಂಪಿಕ್ಸ್‌ʼಗೂ ಮುನ್ನ ಸ್ವಪ್ನಿಲ್ ಕುಸಾಲೆ ಕೈರೋದಲ್ಲಿ ನಡೆದ ವಿಶ್ವ ಚಾಂಪಿಯನ್‌ಶಿಪ್‌ನಲ್ಲಿ ಕಂಚಿನ ಪದಕ ಗೆದ್ದಿದ್ದರು. 2021ರಲ್ಲಿ ದೆಹಲಿಯಲ್ಲಿ ನಡೆದ ವಿಶ್ವಕಪ್‌ʼನಲ್ಲಿ ಚಿನ್ನ, 2022 ರ ಏಷ್ಯನ್ ಗೇಮ್ಸ್‌ʼನಲ್ಲಿ ಚಿನ್ನದ ಪದಕ, ಕಳೆದ ವರ್ಷ ಏಷ್ಯನ್ ಶೂಟಿಂಗ್ ಚಾಂಪಿಯನ್‌ಶಿಪ್‌ʼನಲ್ಲಿ ಬೆಳ್ಳಿ ಪದಕ, ಅದೇ ವರ್ಷ ಜಕಾರ್ತದಲ್ಲಿ ನಡೆದ ಏಷ್ಯನ್ ರೈಫಲ್-ಪಿಸ್ತೂಲ್ ಚಾಂಪಿಯನ್‌ಶಿಪ್‌ʼನಲ್ಲಿ ಚಿನ್ನ, 2017ರ ಕಾಮನ್‌ವೆಲ್ತ್ ಚಾಂಪಿಯನ್‌ಶಿಪ್‌ʼನಲ್ಲಿ ಕಂಚು ಗೆದ್ದ ಹಿರಿಮೆ ಇವರದ್ದು.

ಇದನ್ನೂ ಓದಿ: ಶ್ರೀಲಂಕಾದ ಸಾರ್ವಜನಿಕ ಸ್ಥಳದಲ್ಲಿ ವಿರಾಟ್‌ ಕೊಹ್ಲಿಗೆ ಅವಮಾನ... ಸಿಟ್ಟಿಗೆದ್ದ ಕೊಹ್ಲಿ ಮಾಡಿದ್ದು!

ಒಲಿಂಪಿಕ್ಸ್‌ʼನಲ್ಲಿ ಪದಕ ಗೆದ್ದ ಶೂಟರ್‌ʼಗಳು

  • ಶೂಟಿಂಗ್‌ʼನಲ್ಲಿ ಭಾರತಕ್ಕೆ ಮೊದಲ ಪದಕ (ಬೆಳ್ಳಿ) ವನ್ನು ರಾಜ್ಯವರ್ಧನ್ ಸಿಂಗ್ ರಾಥೋಡ್ ಅವರು ಅಥೆನ್ಸ್ ಒಲಿಂಪಿಕ್ಸ್ 2004 ರಲ್ಲಿ ಗೆದ್ದರು.
  •  2008ರ ಬೀಜಿಂಗ್ ಒಲಿಂಪಿಕ್ಸ್‌ʼನಲ್ಲಿ ಅಭಿನವ್ ಬಿಂದ್ರಾ ಚಿನ್ನ ಗೆದ್ದಿದ್ದರು.
  •  2012ರ ಲಂಡನ್ ಒಲಿಂಪಿಕ್ಸ್‌ʼನಲ್ಲಿ ವಿಜಯ್ ಕುಮಾರ್ ಬೆಳ್ಳಿ ಪದಕ ಹಾಗೂ ಗಗನ್ ನಾರಂಗ್ ಕಂಚಿನ ಪದಕ ಗೆದ್ದಿದ್ದರು.
  •  ಪ್ಯಾರಿಸ್ ಒಲಿಂಪಿಕ್ಸ್‌ʼನಲ್ಲಿ ಮನು ಭಾಕರ್ ವೈಯಕ್ತಿಕ ವಿಭಾಗದಲ್ಲಿ ಕಂಚು, ಮಿಶ್ರ ಶೂಟಿಂಗ್‌ ವಿಭಾಗದಲ್ಲಿ ಸರಬ್ಜೋತ್ ಸಿಂಗ್ ಜೊತೆ ಮನು ಭಾಕರ್ ಕಂಚು, ಇದೀಗ ಸ್ವಪ್ನಿಲ್ ಕೂಡ ಶೂಟಿಂಗ್ʼನಲ್ಲಿ ಕಂಚಿನ ಪದಕ ಗೆದ್ದಿದ್ದಾರೆ

 

ಕನ್ನಡ ಭಾಷೆಯಲ್ಲಿ ಇತ್ತೀಚಿನ ಕರ್ನಾಟಕ, ದೇಶ, ವಿದೇಶ, ಮನರಂಜನೆ, ಶಿಕ್ಷಣ, ಉದ್ಯೋಗ, ಆರೋಗ್ಯ, ಜೀವನಶೈಲಿ, ಆಧ್ಯಾತ್ಮ,  ಕ್ರೀಡೆ, ಕ್ರೈಂ, ವೈರಲ್, ವ್ಯಾಪಾರ, ತಂತ್ರಜ್ಞಾನ ಸುದ್ದಿಗಳನ್ನು ಓದಲು ಈಗಲೇ ನಮ್ಮ ಜೀ ಕನ್ನಡ ನ್ಯೂಸ್ ಮೊಬೈಲ್ ಅಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3AClgDd
Apple Link - https://apple.co/3wPoNgr
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು 
Twitter Link - https://bit.ly/3n6d2R8
Facebook Link - https://bit.ly/3Hhqmcj 
Youtube Link - https://tinyurl.com/7jmvv2nz

Instagram Link -  https://bit.ly/3LyfY2l 
Sharechat Link - https://bit.ly/3LCjokI 
Threads Link-  https://www.threads.net/@zeekannadanews 
WhatsApp Channel- bit.ly/46lENGm ಲಿಂಕ್ ಗಳ ಮೇಲೆ ಕ್ಲಿಕ್ ಮಾಡಿ 

 

Trending News