ಪುಣೆ: ಟೀಂ ಇಂಡಿಯಾ ವೇಗದ ಬೌಲರ್ ಶಾರ್ದುಲ್ ಠಾಕೂರ್ (Shardul Thakur) ಸತತ ಮೂರು ಪಂದ್ಯಗಳಲ್ಲಿ ಉತ್ತಮ ಕೊಡುಗೆ ನೀಡುವ ಮೂಲಕ ಸಾಧನೆ ಮಾಡಿದ್ದಾರೆ. ಇದಕ್ಕಾಗಿ ಅವರು 'ಮ್ಯಾನ್ ಆಫ್ ದಿ ಮ್ಯಾಚ್' ಅನ್ನು ಪಡೆಯದಿದ್ದರೂ ಸಹ ಇದು ಭಾರತ ತಂಡ ಪಂದ್ಯವನ್ನು ಗೆಲ್ಲಲು ಕಾರಣವಾಯಿತು. ಶಾರ್ದೂಲ್ ಠಾಕೂರ್ ಅವರ ಈ ಸಾಧನೆಯಿಂದಾಗಿ ಟ್ವಿಟರ್ನಲ್ಲಿ ಹೀರೋ ಆಗಿದ್ದಾರೆ.
ವಾಸ್ತವವಾಗಿ, ಶಾರ್ದುಲ್ ಠಾಕೂರ್ (Shardul Thakur) ಇಂಗ್ಲೆಂಡ್ ವಿರುದ್ಧದ ಮೊದಲ ಏಕದಿನ (Ind vs Eng ODI) ಪಂದ್ಯದ ನಿರ್ಣಾಯಕ ಸಂದರ್ಭದಲ್ಲಿ ಒಂದೇ ಓವರ್ನಲ್ಲಿ ಇಯೊನ್ ಮೋರ್ಗಾನ್ ಮತ್ತು ಜೋಸ್ ಬಟ್ಲರ್ ಅವರ ವಿಕೆಟ್ಗಳನ್ನು ಕಬಳಿಸುವ ಮೂಲಕ ಪಂದ್ಯದ ಚಿತ್ರಣವನ್ನು ಬದಲಾಯಿಸಿದರು.
Every time LORD SHARDUL Taking Wickets for India in Right Time 🌟🌟🌟🌟🌟
Almost in this series he is playing crucial role 💥💥✨#INDvENG #INDvsENG pic.twitter.com/QRmjKdtRSj
— Siva Harsha™ (@SivaHarsha_1) March 23, 2021
#INDvENG
I believe in Lord Shardul Thakur's supremacy pic.twitter.com/IWMLeKMsvp— Shivani (@meme_ki_diwani) March 23, 2021
Lord Shardul Breathing Fire. 146 !#INDvENG pic.twitter.com/q2cI7gyLpa
— Arpan (@ThatCricketHead) March 23, 2021
ಮೊದಲ ಏಕದಿನ ಪಂದ್ಯದಲ್ಲಿ ಶಾರ್ದುಲ್ ಕಮಾಲ್:
ಮೊದಲ ಏಕದಿನ ಪಂದ್ಯದ ವೇಳೆ, ಶಾರ್ದುಲ್ ಠಾಕೂರ್ (Shardul Thakur) 25ನೇ ಓವರ್ನ ಮೊದಲ ಎಸೆತದಲ್ಲಿ ಇಯೊನ್ ಮೋರ್ಗಾನ್ ಅವರ ವಿಕೆಟ್ ಕಬಳಿಸಿದರು. ಇದರ ನಂತರ, ಜೋಸ್ ಬಟ್ಲರ್ ಅದೇ ಓವರ್ನ ನಾಲ್ಕನೇ ಎಸೆತದಲ್ಲಿ ಎಲ್ಬಿಡಬ್ಲ್ಯೂ ಔಟಾದರು. ಒಂದೇ ಓವರ್ನಲ್ಲಿ 2 ವಿಕೆಟ್ಗಳನ್ನು ಕಬಳಿಸುವ ಮೂಲಕ ಶಾರ್ದುಲ್ ಠಾಕೂರ್ ಪಂದ್ಯದ ಹಾದಿಯನ್ನೇ ಬದಲಾಯಿಸಿದರು. ಆದರೆ ಅವರು ಹೀಗೆ ಮಾಡಿರುವುದು ಇದೇ ಮೊದಲಲ್ಲ. ಇದಕ್ಕೂ ಮೊದಲು ನಾಲ್ಕನೇ ಮತ್ತು ಐದನೇ ಟಿ 20 ಪಂದ್ಯಗಳಲ್ಲಿ ಶಾರ್ದುಲ್ ಠಾಕೂರ್ ಹಾಗೆ ಮಾಡುವ ಮೂಲಕ ಭಾರತದ ಗೆಲುವಿನ ಬಾಗಿಲು ತೆರೆದರು.
ಇದನ್ನೂ ಓದಿ - ಕನ್ನಡಿಗ ಪ್ರಸಿದ್ಧ ಕೃಷ್ಣಾ ದಾಳಿಗೆ ತತ್ತರಿಸಿದ ಇಂಗ್ಲೆಂಡ್, ಭಾರತಕ್ಕೆ 66 ರನ್ ಗಳ ಗೆಲುವು
ನಾಲ್ಕನೇ ಮತ್ತು ಐದನೇ ಟಿ 20 ಯಲ್ಲೂ ಡೈಸ್ ರಿವರ್ಸ್ ಮಾಡಿ :
ನಾಲ್ಕನೇ ಟಿ 20 ಯಲ್ಲಿ ಪಂದ್ಯವು ಸುಮಾರು 50-50ರಲ್ಲಿದ್ದಾಗ ಶಾರ್ದುಲ್ ಅದೇ ಓವರ್ನಲ್ಲಿ ಓಯೆನ್ ಮೋರ್ಗಾನ್ ಮತ್ತು ಬೆನ್ ಸ್ಟೋಕ್ಸ್ ಅವರನ್ನು ಔಟ್ ಮಾಡುವ ಮೂಲಕ ತಂಡವನ್ನು ಗೆಲುವಿನ ಹಾದಿಗೆ ತಂದರು. ಇದರ ನಂತರ, ಐದನೇ ಟಿ 20 ಯಲ್ಲಿಯೂ, ಶಾರ್ದುಲ್ ಒಂದು ಓವರ್ನಲ್ಲಿ ಡೇವಿಡ್ ಮಲನ್ ಮತ್ತು ಜಾನಿ ಬೈರ್ಸ್ಟೋವ್ ಅವರ ವಿಕೆಟ್ಗಳನ್ನು ಪಡೆಯುವ ಮೂಲಕ ತಂಡವನ್ನು ಗೆಲುವಿನ ದಡ ಸೇರಿಸಲು ಕೊಡುಗೆ ನೀಡಿದರು.
ಇದನ್ನೂ ಓದಿ - Ind vs Eng: ಭಾವುಕರಾಗಿ ಗ್ರೌಂಡ್ ಗಿಳಿದ ಕ್ರುನಾಲ್ ಪಾಂಡ್ಯ: ಹಲವು ದಾಖಲೆಗಳು ಉಡೀಸ್!
ಮೂರು ಪಂದ್ಯಗಳ ಏಕದಿನ ಸರಣಿಯ ಮೊದಲ ಪಂದ್ಯದಲ್ಲಿ ಭಾರತ ಇಂಗ್ಲೆಂಡ್ ತಂಡವನ್ನು 66 ರನ್ ಗಳಿಂದ ಸೋಲಿಸಿತು. ಈ ಪಂದ್ಯದಲ್ಲಿ ಭಾರತ ಮೊದಲ ಪಂದ್ಯದಲ್ಲಿಯೇ 317 ರನ್ಗಳ ದೊಡ್ಡ ಮೊತ್ತ ಕಲೆ ಹಾಕಿತು. ಇದಕ್ಕೆ ಪ್ರತಿಕ್ರಿಯೆಯಾಗಿ ಇಂಗ್ಲೆಂಡ್ 42.5 ಓವರ್ಗಳಲ್ಲಿ ತಮ್ಮ ಎಲ್ಲಾ ವಿಕೆಟ್ಗಳನ್ನು ಕಳೆದುಕೊಂಡ ನಂತರ ಕೇವಲ 251 ರನ್ ಗಳಿಸಲು ಸಾಧ್ಯವಾಯಿತು. ಈ ಪಂದ್ಯದಲ್ಲಿ ಭಾರತ ಎಲ್ಲಾ ವಿಭಾಗಗಳಲ್ಲಿ ಇಂಗ್ಲೆಂಡ್ ತಂಡದ ವಿರುದ್ಧ ಪ್ರಾಬಲ್ಯ ಸಾಧಿಸಿದೆ.
ಕನ್ನಡ ಭಾಷೆಯಲ್ಲಿ ಮತ್ತಷ್ಟು ಸ್ವಾರಸ್ಯಕರ ಸುದ್ದಿಗಳನ್ನು ಓದಲು ನಮ್ಮ ಝೀ ಹಿಂದೂಸ್ತಾನ್ ಕನ್ನಡ ಮೊಬೈಲ್ ಆಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3hDyh4G
Apple Link - https://apple.co/3loQYe
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು Twitter, Facebook ಲಿಂಕ್ ಗಳ ಮೇಲೆ ಕ್ಲಿಕ್ಕಿಸಿ.