ಶೇನ್ ವಾಟ್ಸನ್ ಆರ್ಭಟಕ್ಕೆ ತತ್ತರಿಸಿದ ರಾಜಸ್ತಾನ್

    

Last Updated : Apr 21, 2018, 01:11 PM IST
ಶೇನ್ ವಾಟ್ಸನ್ ಆರ್ಭಟಕ್ಕೆ ತತ್ತರಿಸಿದ ರಾಜಸ್ತಾನ್  title=

ಪುಣೆ: ಚೆನ್ನೈ ನ ಶೇನ್ ವಾಟ್ಸನ್  ಅವರ ಭರ್ಜರಿ ಶತಕದ ನೆರವಿನಿಂದ  ರಾಜಸ್ತಾನ್ ತಂಡದ ವಿರುದ್ದ 20 ಓವರ್ ಗಳಲ್ಲಿ  ಐದು ವಿಕೆಟ್ ನಷ್ಟಕ್ಕೆ 204 ರನ್ ಗಳಿಸಿತು.

ಚೆನ್ನೈ ತಂಡದ ಆರಂಭಿಕ ಆಟಗಾರ  ಶೇನ್ ವಾಟ್ಸನ್ ಅವರು ಕೇವಲ 57 ಎಸೆತಗಳಲ್ಲಿ 9 ಬೌಂಡರಿ ಮತ್ತು 6 ಸಿಕ್ಸರ್ ಗಳಿಂದ ಒಟ್ಟು 106 ರನ್ ಗಳಿಸಿದರು.ಅದೇ ರೀತಿಯಾಗಿ ಸುರೇಶ ರೈನಾ ಕೂಡಾ ಕೇವಲ 29 ಎಸೆತಗಳಲ್ಲಿ 46 ರನ್ ಗಳಿಸುವ ಮೂಲಕ ತಂಡವು 200 ರ ಗಡಿ ದಾಟಲು ನೆರವಾದರು.

ಇನ್ನೊಂದೆಡೆ 204 ರನ್ ಗಳ ಸವಾಲು ಬೆನ್ನತ್ತಿದ ರಾಜಸ್ತಾನ್ ತಂಡವು 18.3 ಓವರ್ ಗಳಲ್ಲಿ ಕೇವಲ 140 ರನ್ ಗಳಿಗೆ ಅಲೌಟ್ ಆಯಿತು. ರಾಜಸ್ತಾನ್ ತಂಡದಲ್ಲಿ  ಬೆನ್ ಸ್ಟೋಕ್ ರವರ 45 ರನ್ ಗಳನ್ನೂ ಹೊರತುಪಡಿಸಿ ಬೇರೆ ಯಾರು ಅಷ್ಟು ಪರಿಣಾಮಕಾರಿ ಆಟ ಆಡುವಲ್ಲಿ ವಿಫಲವಾದರು. 

Trending News