Thailand ಹೋಟೆಲ್ ಕೋಣೆಯಲ್ಲಿ Shane Warne ಅವರನ್ನು ಹತ್ಯೆಗೈಯಲಾಗಿದೆಯೇ! ಪೊಲೀಸರು ಹೇಳಿದ್ದೇನು?

Shane Warne Death: ವಿಶ್ವದ ಶ್ರೇಷ್ಠ ಸ್ಪಿನ್ನರ್ ಶೇನ್ ವಾರ್ನ್ ತಮ್ಮ 52 ನೇ ವಯಸ್ಸಿನಲ್ಲಿ ನಿಧನರಾಗಿದ್ದಾರೆ (Shane Warne Died). ಆದರೆ, ಇದೀಗ ಅವರ ಸಾವಿನ ಕುರಿತು ಹೊಸ ಅಪ್ಡೇಟ್ ಪ್ರಕಟಗೊಂಡಿದೆ. ಈ ಬಗ್ಗೆ ಥಾಯ್ಲೆಂಡ್ ಪೊಲೀಸರು (Thailand Police) ಬಹಿರಂಗಪಡಿಸಿದ್ದಾರೆ.  

Written by - Nitin Tabib | Last Updated : Mar 6, 2022, 04:40 PM IST
  • ಟೆಸ್ಟ್ ಪಂದ್ಯಗಳಲ್ಲಿ 700 ವಿಕೆಟ್
  • ಥೈಲ್ಯಾಂಡ್ ಪೊಲೀಸರು ಹೇಳಿದ್ದೇನು?
  • ಪ್ರಜ್ಞಾಹೀನ ಸ್ಥಿತಿಯಲ್ಲಿ ಅವರ ದೇಹ ಸಿಕ್ಕಿತ್ತು.
Thailand ಹೋಟೆಲ್ ಕೋಣೆಯಲ್ಲಿ Shane Warne ಅವರನ್ನು ಹತ್ಯೆಗೈಯಲಾಗಿದೆಯೇ!  ಪೊಲೀಸರು ಹೇಳಿದ್ದೇನು? title=
Shane Warne Death (File Photo)

ನವದೆಹಲಿ: Shane Warne Death - ವಿಶ್ವದ ಶ್ರೇಷ್ಠ ಸ್ಪಿನ್ನರ್ ಶೇನ್ ವಾರ್ನ್ (Shane Warne) ಅವರು 52 ನೇ ವಯಸ್ಸಿನಲ್ಲಿ ನಿಧನರಾಗಿದ್ದಾರೆ. ಅವರ ಎಸೆತಗಳನ್ನು ಆಡುವುದು ವಿಶ್ವದ ದಿಗ್ಗಜ ಬ್ಯಾಟ್ಸ್ ಮನ್ ಗಳಿಗೂ ಕೂಡ ಸುಲಭದ ಮಾತಾಗಿರಲಿಲ್ಲ. ಅವರು ತಮ್ಮ ವೃತ್ತಿಜೀವನದಲ್ಲಿ ಹಲವು ಖ್ಯಾತನಾಮ ಬ್ಯಾಟ್ಸ್ ಮನ್ ಗಳ ವಿಕೆಟ್‌ಗಳನ್ನು ಕಬಳಿಸಿದ್ದಾರೆ. ಶೇನ್ ವಾರ್ನ್ (Australian Legend) ಥೈಲ್ಯಾಂಡ್‌ನ ತನ್ನ ಕೋಣೆಯಲ್ಲಿ ಪ್ರಜ್ಞಾಹೀನ ಸ್ಥಿತಿಯಲ್ಲಿ ಪತ್ತೆಯಾಗಿದ್ದಾರೆ ಎಂಬುದರ ಕುರಿತು ಇದೀಗ ಥಾಯ್ಲೆಂಡ್ ಪೊಲೀಸರಿಗೆ ದೊಡ್ಡ ಪುರಾವೆ ಸಿಕ್ಕಿದೆ.

ಇದನ್ನೂ ಓದಿ-ಹೇಗಿತ್ತು Shane Warne ಜೀವನದ ಕೊನೆಯ ಆ 20 ನಿಮಿಷ ?

ಪೊಲೀಸರಿಗೆ ದೊರೆತ ಪುರಾವೆ ಏನು?
ಆಸ್ಟ್ರೇಲಿಯಾದ  ಮಾಜಿ ಕ್ರಿಕೆಟಿಗ ಶೇನ್ ವಾರ್ನ್ ಸಾವಿನ ಬಗ್ಗೆ ಹೊಸ ಅಪ್‌ಡೇಟ್ ಪ್ರಕಟಗೊಂಡಿದೆ. ಶೇನ್ ಅವರ ಹೋಟೆಲ್  ಕೊಠಡಿಯಿಂದ ರಕ್ತ ಪತ್ತೆಯಾಗಿದೆ ಎಂದು ಥಾಯ್ಲೆಂಡ್ ಪೊಲೀಸರು ಹೇಳಿದ್ದಾರೆ. ಶೇನ್ ವಾರ್ನ್ ಸಾವಿನ ನಂತರ, ಅವರ ಮೃತದೇಹದ ಬಳಿ ತುಂಬಾ ರಕ್ತ ಪತ್ತೆಯಾಗಿದೆ ಎಂದು ಸ್ಥಳೀಯ ಪೊಲೀಸರು ಹೇಳಿದ್ದಾರೆ. ಪ್ರಜ್ಞಾಹೀನ ಸ್ಥಿತಿಯಲ್ಲಿ ಶೇನ್ ವಾರ್ನ್ ಅವರಿಗೆ CPR ನೀಡಲಾಗಿದ್ದು, ಇದರಿಂದ ರಕ್ತ ಬಂದಿರಬಹುದು ಎನ್ನಲಾಗಿದೆ. 

ಇದನ್ನೂ ಓದಿ-ಸ್ಪಿನ್ ಮಾಂತ್ರಿಕ ಶೇನ್ ವಾರ್ನ್ ನಿಧನಕ್ಕೆ ಕಂಬನಿ ಮಿಡಿದ ಕ್ರಿಕೆಟ್ ಜಗತ್ತು ..

ಅವರ ಸ್ನೇಹಿತರು ಅವರನ್ನು ಆಸ್ಪತ್ರೆಗೆ ಕರೆದೊಯ್ದಿದ್ದರು. ಆದರೆ ಇದುವರೆಗೂ ಮಾಹಿತಿ ದೃಢಪಟ್ಟಿಲ್ಲ. ಮರಣೋತ್ತರ ಪರೀಕ್ಷೆಗಾಗಿ ಕಾಯಲಾಗುತ್ತಿದೆ ಎಂದು ಪೊಲೀಸರು ತಿಳಿಸಿದ್ದಾರೆ. CPR ((Cardiopulmonary Resuscitation)) ಅಂದರೆ ಕಾರ್ಡಿಯೋಪಲ್ಮನರಿ ರೀಸಕ್ಷೀಶನ್ ಎಂದರ್ಥ. ಇದು ಒಂದು ರೀತಿಯ ವೈದ್ಯಕೀಯ ಚಿಕಿತ್ಸೆಯಾಗಿದೆ, ಇದು ರೋಗಿಯ ಜೀವವನ್ನು ಉಳಿಸಲು ತುರ್ತು ಪರಿಸ್ಥಿತಿಯಲ್ಲಿ ನೀಡಲಾಗುವ ಚಿಕಿತ್ಸೆಯಾಗಿದೆ. ಹೀಗಿರುವಾಗ  ಶೇನ್ ವಾರ್ನ್ ಅವರ ಕೊಠಡಿಯಿಂದ ರಕ್ತ ಸಿಕ್ಕ ಕಾರಣ ಅವರ ಸಾವಿನ ಕುರಿತು ಪ್ರಶ್ನೆಗಳು ಉದ್ಭವಿಸಿವೆ.

ಇದನ್ನೂ ಓದಿ-Shane Warne ಅವರ ಈ ಬೌಲ್ ಅನ್ನು 'Ball Of The Century' ಎನ್ನಲಾಗುತ್ತದೆ, ಇಡೀ ವಿಶ್ವವೇ ನಿಬ್ಬೇರಗಾಗಿತ್ತು

ಕನ್ನಡ ಭಾಷೆಯಲ್ಲಿ ಮತ್ತಷ್ಟು ಸ್ವಾರಸ್ಯಕರ ಸುದ್ದಿಗಳನ್ನು ಓದಲು ನಮ್ಮ ಜೀ ಕನ್ನಡ ನ್ಯೂಸ್ ಮೊಬೈಲ್ ಆಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3hDyh4G
Apple Link - https://apple.co/3hEw2hy
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು TwitterFacebook ಲಿಂಕ್ ಗಳ ಮೇಲೆ ಕ್ಲಿಕ್ಕಿಸಿ.

Trending News