Sexual Harassment Allegations: ರಾಷ್ಟ್ರೀಯ ಕ್ರಿಕೆಟ್ ತಂಡದ ಆಟಗಾರನ ಮೇಲೆ ಲೈಂಗಿಕ ಕಿರುಕುಳದ ಆರೋಪ

Sexual Harassment Allegations: ಶ್ರೀಲಂಕಾ ಕ್ರಿಕೆಟ್ ತಂಡದಲ್ಲಿ ವಿವಾದವೊಂದು ಸೃಷ್ಟಿಯಾಗಿದೆ. ಮಾಧ್ಯಮಗಳ ವರದಿ ಪ್ರಕಾರ ಹೋಟೆಲ್ ರೂಮ್ ವೊಂದರಲ್ಲಿ ಮಹಿಳಾ ಅಧಿಕಾರಿಯ ಜೊತೆಗೆ ರಾಷ್ಟ್ರೀಯ ಕ್ರಿಕೆಟ್ ತಂಡದ ಆಟಗಾರನನ್ನು ಬಂಧಿಸಲಾಗಿದೆ.

Written by - Nitin Tabib | Last Updated : Jan 22, 2021, 08:43 PM IST
  • ಸ್ಥಳೀಯ ಮಾಧ್ಯಮಗಳ ವರದಿಯಿಂದ ವಿಷಯ ಬಹಿರಂಗ.
  • ಮಹಿಳಾ ಅಧಿಕಾರಿಯ ಜೊತೆಗೆ ಹೋಟೆಲ್ ರೂಮ್ ನಲ್ಲಿ ಬಂಧನಕ್ಕೋಳಗಾದ ಕ್ರಿಕೆಟರ್.
  • ಶ್ರೀಲಂಕಾ ರಾಷ್ಟ್ರೀಯ ತಂಡದ ಸಸಸ್ಯ ಮಹಿಳಾ ವೈದ್ಯಕೀಯ ಸಿಬ್ಬಂದಿ ಜೊತೆ ದುರ್ವರ್ತನೆ.
  • ತನಿಖೆಗೆ ಆದೇಶ ನೀಡಿದ ಶ್ರೀಲಂಕಾ ಕ್ರಿಕೆಟ್.
Sexual Harassment Allegations: ರಾಷ್ಟ್ರೀಯ ಕ್ರಿಕೆಟ್ ತಂಡದ ಆಟಗಾರನ ಮೇಲೆ  ಲೈಂಗಿಕ ಕಿರುಕುಳದ ಆರೋಪ title=
Sexual Harassment Allegation(File Photo)

Sexual Harassment Allegations - ಕೊಲಂಬೊ: ಶ್ರೀಲಂಕಾ ಕ್ರಿಕೆಟ್ ಮಂಡಳಿ ತನ್ನ ರಾಷ್ಟ್ರೀಯ ತಂಡದ ಮ್ಯಾನೇಜರ್  ಗೆ  ತಂಡದ ವೈದ್ಯಕೀಯ ಸ್ಟಾಫ್ ಮೇಲೆ ಉದಯೋನ್ಮುಖ ಕ್ರಿಕೆಟ್ ಆಟಗಾರ ನಡೆಸಿರುವ ಲೈಂಗಿಕ ಕಿರುಕುಳ ಆರೋಪಗಳ ಕುರಿತು ವರದಿ ಸಲ್ಲಿಸಲು ಹೇಳಿದೆ.

ತಂಡದ ಯುವ ಸ್ಪಿನ್ನರ್ ಹಾಗೂ ಆಲ್ ರೌಂಡರ್ ಆಟಗಾರ ಹೋಟೆಲ್ ತನ್ನ ಕೋಣೆಯಲ್ಲಿ ಮಹಿಳಾ ಅಧಿಕಾರಿಯೋರ್ವಳ ಜೊತೆ ಕಂಡುಬಂದ ಕುರಿತು ಸ್ಥಳೀಯ ಮಾಧ್ಯಮಗಳು ವರದಿ ಮಾಡಿದ ಬಳಿಕ ಶ್ರೀಲಂಕಾ ಕ್ರಿಕೆಟ್ ಮಂಡಳಿ ವಿವಾದದ ಸುಳಿಗೆ ಸಿಲುಕಿದೆ.

ವೈದ್ಯಕೀಯ ತಂಡದ ಮಹಿಳೆಯ ಜೊತೆಗೆ ದುರ್ವತನೆ
ಪ್ರಸ್ತುತ ಇಂಗ್ಲೆಂಡ್ ವಿರುದ್ಧ ಟೆಸ್ಟ್ ಸರಣಿಯನ್ನು ಆಡುತ್ತಿರುವ ತಂಡದ ಸದಸ್ಯರೊಬ್ಬರು ವೈದ್ಯಕೀಯ ಸಿಬ್ಬಂದಿಯ ಸದಸ್ಯರೊಂದಿಗೆ ಕೆಟ್ಟದಾಗಿ ವರ್ತಿಸಿದ್ದಾರೆ ಎಂದು ವರದಿಯಾಗಿದೆ ಶ್ರೀಲಂಕಾ ಕ್ರಿಕೆಟ್ (Cricket) ಹೇಳಿದೆ. 

'ಈ ವಿಷಯದ ಗಂಭೀರತೆಯನ್ನು ಮನಗಂಡ ನಾವು ತಂಡದ ವ್ಯವಸ್ಥಾಪಕ ಅಸಂತಾ ಡಿ ಮೇಲ್ ಅವರಿಗೆ ಈ ಘಟನೆಯನ್ನು ವರದಿ ಸಲ್ಲಿಸಲು ಹೇಳಿದ್ದು, ಮಾಧ್ಯಮ ವರದಿಗಳ ಸತ್ಯಾಸತ್ಯತೆಗಳನ್ನು ಖಚಿತಪಡಿಸಿಕೊಳ್ಳಲಾಗುವುದು' ಎಂದು ಶ್ರೀಲಂಕಾ ಕ್ರಿಕೆಟ್ ಹೇಳಿದೆ.

ಇದನ್ನು ಓದಿ- ಆಸ್ಟ್ರೇಲಿಯಾದ ನಕಾರಾತ್ಮಕ ಆಟದ ವಿಧಾನ ಟೀಕಿಸಿದ ಮೈಕೆಲ್ ಕ್ಲಾರ್ಕ್

ಶ್ರೀಲಂಕಾ ಮತ್ತು ಇಂಗ್ಲೆಂಡ್ ನಡುವಿನ ಎರಡನೇ ಟೆಸ್ಟ್ ಶುಕ್ರವಾರದಿಂದ ಗೌಲ್‌ನಲ್ಲಿ ಆರಂಭವಾಗಲಿದೆ.

ಇದನ್ನು ಓದಿ- Bucket List viral : 37 ಚೆಂಡುಗಳಲ್ಲಿ ಶತಕ ಬಾರಿಸಿದ ಕ್ರಿಕೆಟಿಗ

ಇನ್ನೊಂದೆಡೆ ತಂಡದ ಎಲ್ಲಾ ಆಟಗಾರರು ಬಯೋ ಬಬಲ್‌ನಲ್ಲಿ ವಾಸಿಸುತ್ತಿರುವುದರಿಂದ ಇಂತಹ ಘಟನೆ ನಡೆಯಲು ಸಾಧ್ಯವಿಲ್ಲ ಎಂದು ತಂಡದ ಕೋಚ್ ಮಿಕ್ಕಿ ಆರ್ಥರ್ ಬುಧವಾರ ಹೇಳಿದ್ದಾರೆ.

ಇದನ್ನು ಓದಿ- ಆಸ್ಟ್ರೇಲಿಯಾ ನಾಯಕ ಟಿಮ್ ಪೈನ್ ಕ್ಷಮೆಯಾಚನೆ

ಕನ್ನಡ ಭಾಷೆಯಲ್ಲಿ ಮತ್ತಷ್ಟು ಸ್ವಾರಸ್ಯಕರ ಸುದ್ದಿಗಳನ್ನು ಓದಲು ನಮ್ಮ ಝೀ ಹಿಂದೂಸ್ತಾನ್ ಕನ್ನಡ ಮೊಬೈಲ್ ಆಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3hDyh4G
Apple Link - https://apple.co/3loQYe 
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು TwitterFacebook ಲಿಂಕ್ ಗಳ ಮೇಲೆ ಕ್ಲಿಕ್ಕಿಸಿ.

Trending News