ಗಿಲ್‌ ಶತಕ ಮಿಸ್‌ ಮಾಡಿಕೊಂಡಿದ್ದಕ್ಕೆ ಬೇಸಗೊಂಡ ಸಾರಾ ತೆಂಡೂಲ್ಕರ್..! ವಿಡಿಯೋ ವೈರಲ್

Shubman Gill Sara Tendulkar : ವಿಶ್ವಕಪ್ 2023 ರ ಶ್ರೀಲಂಕಾ ವಿರುದ್ಧದ ಹಣಾಹಣಿಯಲ್ಲಿ ಭಾರತದ ಆರಂಭಿಕ ಬ್ಯಾಟರ್ ಶುಬ್ಮನ್ ಗಿಲ್ ಕೇವಲ 8 ರನ್‌ಗಳಲ್ಲಿ (92) ಶತಕ ಮಿಸ್‌ ಮಾಡಿಕೊಂಡರು. ಈ ವೇಳೆ ಸ್ಟೆಡಿಯಂನಲ್ಲಿ ಪಂದ್ಯ ವಿಕ್ಷೀಸುತ್ತಿದ್ದ ಸಾರಾ ತೆಂಡೂಲ್ಕರ್‌ ರಿಯಾಕ್ಟ್‌ ಮಾಡಿರುವ ದೃಶ್ಯ ಸೋಷಿಯಲ್‌ ಮಿಡಿಯಾದಲ್ಲಿ ವೈರಲ್‌ ಆಗಿದೆ.

Written by - Krishna N K | Last Updated : Nov 2, 2023, 07:58 PM IST
  • ಮುಂಬೈನ ವಾಂಖೆಡೆ ಸ್ಟೇಡಿಯಂನಲ್ಲಿ ನಡೆಯುತ್ತಿರುವ ವಿಶ್ವಕಪ್ 2023 ಶ್ರೀಲಂಕಾ ಭಾರತ ಪಂದ್ಯ
  • ಗಿಲ್ ಶ್ರೀಲಂಕಾದ ಬೌಲರ್‌ಗಳ ಆಕ್ರಮಣಕ್ಕೆ 11 ಬೌಂಡರಿ ಮತ್ತು ಎರಡು ಬೃಹತ್ ಸಿಕ್ಸರ್‌ಗಳ ಮೂಲಕ ಅಬ್ಬರಿಸಿದರು.
  • ಶುಬ್ಮನ್ ಗಿಲ್ ಕೇವಲ 8 ರನ್‌ಗಳಲ್ಲಿ (92) ಶತಕ ಮಿಸ್‌ ಮಾಡಿಕೊಂಡರು.
ಗಿಲ್‌ ಶತಕ ಮಿಸ್‌ ಮಾಡಿಕೊಂಡಿದ್ದಕ್ಕೆ ಬೇಸಗೊಂಡ ಸಾರಾ ತೆಂಡೂಲ್ಕರ್..! ವಿಡಿಯೋ ವೈರಲ್ title=

Ind vs SL World Cup Match : ಮುಂಬೈನ ವಾಂಖೆಡೆ ಸ್ಟೇಡಿಯಂನಲ್ಲಿ ನಡೆಯುತ್ತಿರುವ ವಿಶ್ವಕಪ್ 2023 ರ ಶ್ರೀಲಂಕಾ ವಿರುದ್ಧದ ಹಣಾಹಣಿಯಲ್ಲಿ ಭಾರತದ ಆರಂಭಿಕ ಬ್ಯಾಟರ್ ಶುಬ್ಮನ್ ಗಿಲ್ ಕೇವಲ 8 ರನ್‌ಗಳಲ್ಲಿ (92) ಶತಕ ಮಿಸ್‌ ಮಾಡಿಕೊಂಡರು. ದಿಲ್ಶನ್ ಮಧುಶಂಕ ಬೌಲಿಂಗ್‌ಗೆ ಔಟಾದ ಕಾರಣ ಮೊದಲ ODI ಕ್ರಿಕೆಟ್ ವಿಶ್ವಕಪ್ ಶತಕವನ್ನು ಮಿಸ್‌ ಮಾಡಿಕೊಂಡರು. 

ಗಿಲ್ ಶ್ರೀಲಂಕಾದ ಬೌಲರ್‌ಗಳ ಆಕ್ರಮಣಕ್ಕೆ ತಕ್ಕ ಉತ್ತರ ನೀಡುತ್ತಲೇ 11 ಬೌಂಡರಿ ಮತ್ತು ಎರಡು ಬೃಹತ್ ಸಿಕ್ಸರ್‌ಗಳ ಮೂಲಕ ಅಬ್ಬರಿಸಿದರು. ಆದರೂ ಕೇವಲ ಎಂಟು ರನ್‌ಗಳ ಅಂತರದಲ್ಲಿ ಶತಕ ಮಿಸ್‌ ಮಾಡಿಕೊಂಡಿದ್ದು, ಫ್ಯಾನ್ಸ್‌ಗೆ ಬೇಸರ ತಂದಿತು. 92 ರನ್‌ ಕಲೆಹಾಕಿದ್ದ ಶುಬ್ಮನ್‌ ಕೇವಲ 8 ರನ್‌ಗಳ ಅಂತದಲ್ಲಿದ್ದಾಗಲೇ ಕ್ಯಾಚ್‌ ಔಟ್‌ ಆದರು.

ಇದನ್ನೂ ಓದಿ: ಜಸ್ಟ್ 12 ರನ್’ನಿಂದ ಮಿಸ್ ಆಯ್ತು ವಿರಾಟ್ 49ನೇ ಶತಕ; ಆದ್ರೂ ಸಚಿನ್ ಸೇರಿ ಜಗತ್ತಿನ 5 ವಿಶ್ವದಾಖಲೆಗಳು ಬ್ರೇಕ್

ಹೌದು.. ಮುಂಬೈನ ವಾಂಖೆಡೆ ಸ್ಟೇಡಿಯಂನಲ್ಲಿ ಸೇರಿದ್ದ ಅಭಿಮಾನಿಗಳು ಗಿಲ್ ಔಟಾದ ನಂತರ ಬೇಸರ ವ್ಯಕ್ತಪಡಿಸಿದರು. ಇದೇ ಕ್ರಮವಾಗಿ ಪಂದ್ಯ ನೋಡುತ್ತಿದ್ದ ಲೆಜೆಂಡರಿ ಕ್ರಿಕೆಟಿಗ ಸಚಿನ್ ತೆಂಡೂಲ್ಕರ್ ಅವರ ಪುತ್ರಿ ಸಾರಾ ತೆಂಡೂಲ್ಕರ್ ಕೂಡ ಗಿಲ್‌ ಔಟಾಗಿದ್ದಕ್ಕೆ ಪ್ರತಿಕ್ರಿಯೆ ನೀಡಿದ್ದು, ಈ ಕುರಿತು ದೃಶ್ಯ ಸೋಷಿಯಲ್‌ ಮೀಡಿಯಾದಲ್ಲಿ ಸಖತ್‌ ವೈರಲ್‌ ಆಗಿದೆ.

ಇದಕ್ಕೂ ಮೊದಲು ಟಾಸ್ ಗೆದ್ದ ಶ್ರೀಲಂಕಾ ನಾಯಕ ಕುಸಾಲ್ ಮೆಂಡಿಸ್ ಮೊದಲು ಫೀಲ್ಡಿಂಗ್ ಮಾಡಲು ನಿರ್ಧರಿಸಿದರು. ನಾಯಕ ರೋಹಿತ್ ಶರ್ಮಾ ಔಟ್‌ ಆದಾಗ ಭಾರತ ತಂಡ ದೊಡ್ಡ ಹೊಡೆತವನ್ನು ಅನುಭವಿಸಿತು. ಆದರೆ ಗಿಲ್‌ಗೆ ಕೊಹ್ಲಿಯಿಂದ ಬೆಂಬಲ ಸಿಕ್ಕಿತು. ಇಬ್ಬರೂ ಮೊದಲ ಪವರ್‌ಪ್ಲೇನಲ್ಲಿ 60 ರನ್ ಕಲೆಹಾಕಿದರು.

ಕನ್ನಡ ಭಾಷೆಯಲ್ಲಿ ಇತ್ತೀಚಿನ ಕರ್ನಾಟಕ, ದೇಶ, ವಿದೇಶ, ಮನರಂಜನೆ, ಶಿಕ್ಷಣ, ಉದ್ಯೋಗ, ಆರೋಗ್ಯ, ಜೀವನಶೈಲಿ, ಆಧ್ಯಾತ್ಮ,  ಕ್ರೀಡೆ, ಕ್ರೈಂ, ವೈರಲ್, ವ್ಯಾಪಾರ, ತಂತ್ರಜ್ಞಾನ ಸುದ್ದಿಗಳನ್ನು ಓದಲು ಈಗಲೇ ನಮ್ಮ ಜೀ ಕನ್ನಡ ನ್ಯೂಸ್ ಮೊಬೈಲ್ ಅಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3AClgDd
Apple Link - https://apple.co/3wPoNgr
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು 
Twitter Link - https://bit.ly/3n6d2R8
Facebook Link - https://bit.ly/3Hhqmcj 
Youtube Link - https://www.youtube.com/live/RNn4I7iIaYE?si=3G4W5dh0oCdFnu-T

Instagram Link -  https://bit.ly/3LyfY2l 
Sharechat Link - https://bit.ly/3LCjokI 
Threads Link-  https://www.threads.net/@zeekannadanews 
WhatsApp Channel- bit.ly/46lENGm ಲಿಂಕ್ ಗಳ ಮೇಲೆ ಕ್ಲಿಕ್ ಮಾಡಿ.

Trending News