Sara Tendulkar : ಗೋವಾದಲ್ಲಿ ಸಚಿನ್‌ ಪುತ್ರಿ ಎಂಜಾಯ್‌ಮೆಂಟ್‌..! ಗಿಲ್‌ ಎಲ್ಲಿ..? 

Shubman Gill Sara Tendulkar :  ಸ್ಟಾರ್ ಇಂಡಿಯಾ ಬ್ಯಾಟರ್ ಮತ್ತು ಐಪಿಎಲ್‌ನ ಗುಜರಾತ್ ಟೈಟಾನ್ಸ್ ಬಿರುಗಾಳಿ ಬ್ಯಾಟ್ಸ್‌ಮನ್ ಶುಭಮನ್ ಗಿಲ್‌ ಜೊತೆ ಸಾರಾ ಹೆಸರು ಕೇಳಿ ಬರುತ್ತಿದೆ. ಇದೀಗ ಗೋವಾಗೆ ಹೋಗಿರುವ ಸಾರಾ ಜೊತೆ ಶುಭಮನ್‌ ಗಿಲ್‌ ಹೆಸರು ಕೇಳಿ ಬಂದಿದೆ. ಸಾರಾಗೆ ಶುಭಮನ್‌ ಗಿಲ್ ಎಲ್ಲಿದ್ದಾರೆ..? ಅಂತ ನೆಟ್ಟಿಗರು ಕಾಮೆಂಟ್ ಮೂಲಕ ಪ್ರಶ್ನೆ ಮಾಡುತ್ತಿದ್ದಾರೆ.

Written by - Krishna N K | Last Updated : Apr 14, 2023, 08:44 AM IST
  • ಸಚಿನ್ ತೆಂಡೂಲ್ಕರ್ ಪುತ್ರಿ ಸಾರಾ ತೆಂಡೂಲ್ಕರ್ ಆಗಾಗ್ಗೆ ಸೋಷಿಯಲ್‌ ಮೀಡಿಯಾದಲ್ಲಿ ಸುದ್ದಿಯಲ್ಲಿರುತ್ತಾರೆ.
  • ಸ್ಟಾರ್ ಇಂಡಿಯಾ ಬ್ಯಾಟ್ಸ್‌ಮನ್ ಶುಭಮನ್ ಗಿಲ್‌ ಜೊತೆ ಸಾರಾ ಹೆಸರು ಕೇಳಿ ಬರುತ್ತಿದೆ.
  • ಸದ್ಯ ಸಚಿನ್‌ ಪುತ್ರಿ ಗೋವಾದದಲ್ಲಿ ಸಖತ್‌ ಎಂಜಾಯ್‌ಮೆಂಟ್‌ ಮಾಡುತ್ತಿದ್ದಾಳೆ.
Sara Tendulkar : ಗೋವಾದಲ್ಲಿ ಸಚಿನ್‌ ಪುತ್ರಿ ಎಂಜಾಯ್‌ಮೆಂಟ್‌..! ಗಿಲ್‌ ಎಲ್ಲಿ..?  title=

Sara Tendulkar : ಭಾರತೀಯ ಕ್ರಿಕೆಟ್‌ ದಿಗ್ಗಜ ಸಚಿನ್ ತೆಂಡೂಲ್ಕರ್ ಪುತ್ರಿ ಸಾರಾ ತೆಂಡೂಲ್ಕರ್ ಆಗಾಗ್ಗೆ ಸೋಷಿಯಲ್‌ ಮೀಡಿಯಾದಲ್ಲಿ ಸುದ್ದಿಯಲ್ಲಿರುತ್ತಾರೆ. ಕೆಲವೊಂದಿಷ್ಟು ಬಾರಿ ಸ್ಟಾರ್ ಇಂಡಿಯಾ ಬ್ಯಾಟರ್ ಮತ್ತು ಐಪಿಎಲ್‌ನ ಗುಜರಾತ್ ಟೈಟಾನ್ಸ್ ಬಿರುಗಾಳಿ ಬ್ಯಾಟ್ಸ್‌ಮನ್ ಶುಭಮನ್ ಗಿಲ್‌ ಜೊತೆ ಸಾರಾ ಹೆಸರು ಕೇಳಿ ಬರುತ್ತಿದೆ. ಇದೀಗ ಗೋವಾಗೆ ಹೋಗಿರುವ ಸಾರಾ ಜೊತೆ ಶುಭಮನ್‌ ಗಿಲ್‌ ಹೆಸರು ಕೇಳಿ ಬಂದಿದೆ.

ಹೌದು.. ಸಚಿನ್‌ ಪುತ್ರಿ ಗೋವಾದದಲ್ಲಿ ಸಖತ್‌ ಎಂಜಾಯ್‌ಮೆಂಟ್‌ ಮಾಡುತ್ತಿದ್ದಾಳೆ. ಈ ಕುರಿತು ಕೆಲವೊಂದಿಷ್ಟು ಫೋಟೋಗಳನ್ನು ತಮ್ಮ ಇನ್‌ಸ್ಟಾಗ್ರಾಮ್‌ ಖಾತೆಯಲ್ಲಿ ಹಂಚಿಕೊಂಡಿದ್ದಾರೆ. ಬಿಳಿ ಉಡುಗೆಯಲ್ಲಿ ಸಾರಾ ಸುಂದರವಾಗಿ ಕಾಣುತ್ತಿದ್ದಾರೆ. ಹೊಟೇಲ್‌ ಒಂದರಲ್ಲಿ ಗುಂಗುರು ಕೂದಲಿನ ಚೆಲುವೆ ನಗುತ್ತಾ ಕುಳಿತಿರುವ ದೃಶ್ಯ ಫೋಟೋದಲ್ಲಿ ಕಾಣಬಹುದು. ನೆಟಿಜನ್‌ಗಳು ಸಾರಾ ತೆಂಡೂಲ್ಕರ್ ಅವರ ಸೌಂದರ್ಯವನ್ನು ಹೊಗಳುವ ಬದಲು ಸಾರಾಗೆ ಶುಭಮನ್‌ ಗಿಲ್ ಎಲ್ಲಿದ್ದಾರೆ..? ಅಂತ ಕಾಮೆಂಟ್ ಮೂಲಕ ಪ್ರಶ್ನೆ ಮಾಡುತ್ತಿದ್ದಾರೆ.

 
 
 
 

 
 
 
 
 
 
 
 
 
 
 

A post shared by Sara Tendulkar (@saratendulkar)

ಇದನ್ನೂ ಓದಿ: ಬ್ರೆಟ್ ಲೀ ಕಾರ್ ಚೇಸ್ ಮಾಡಲು ಮುಂದಾದ ಆರ್ಸಿಬಿ ಫ್ಯಾನ್...!ಬ್ರೆಟ್ ಲೀ ಹೇಳಿದ್ದೇನು ಗೊತ್ತಾ?

ನೆಟ್ಟಿಗರೊಬ್ಬರು, ನಾನು ಬೇಗ ಶುಬ್ಮನ್ ಗಿಲ್ ಅವರ ಐಡಿಯನ್ನು ಪರಿಶೀಲಿಸಬೇಕು, ಬಹುಶಃ ಅವರು ಅದೇ ಸ್ಥಳದಿಂದ ಫೋಟೋವನ್ನು ಅಪ್ಲೋಡ್ ಮಾಡುತ್ತಾರೆ ಎಂದು ಕಾಮೆಂಟ್‌ ಮಾಡಿ ಸ್ಮೈಲಿ ಇಮೋಜಿ ಹಾಕಿದ್ದಾರೆ. ಮತ್ತೊಬ್ಬರು, ʼನೀವು ಇರುವ ಹೊಟೇಲ್‌ನಲ್ಲಿ ಶುಭಮನ್‌ ಇದ್ದಾರೆಯೇ..? ಅಂತ ಚಿತ್ರ ವಿಚಿತ್ರವಾಗಿ ಪ್ರಶ್ನೆ ಮಾಡಿದ್ದಾರೆ. ಇನ್ನು ಸಾರಾ ತೆಂಡೂಲ್ಕರ್ ಮತ್ತು ಶುಭಮಾನ್ ಗಿಲ್ ಡೇಟಿಂಗ್ ಗಾಸಿಫ್‌ ಇಂದಿನ ಸುದ್ದಿಯಲ್ಲಿ ಇಬ್ಬರಿಬ್ಬರ ನಡುವೆ ಲವ್‌ ಇದ್ಯೋ ಇಲ್ವೋ ಗೊತ್ತಿಲ್ಲ, ಆದ್ರೆ ನೆಟ್ಟಿಗರಂತು ಕಥೆ ಮೇಲೆ ಕಥೆ ಕಟ್ಟುತ್ತಿದ್ದಾರೆ.

ಕನ್ನಡ ಭಾಷೆಯಲ್ಲಿ ಮತ್ತಷ್ಟು ತಾಜಾ ಸುದ್ದಿಗಳನ್ನು ಓದಲು ನಮ್ಮ ಜೀ ಕನ್ನಡ ನ್ಯೂಸ್ ಮೊಬೈಲ್ ಆಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3hDyh4G
Apple Link - https://apple.co/3hEw2hy
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು TwitterFacebookYoutube ಲಿಂಕ್ ಗಳ ಮೇಲೆ ಕ್ಲಿಕ್ಕಿಸಿ.

Trending News