Sakshi Malik statement : ಈ ವರ್ಷದ ಆರಂಭದಲ್ಲಿ ದೇಶದ ಕುಸ್ತಿಪಟುಗಳು ಭಾರತೀಯ ಕುಸ್ತಿ ಸಂಸ್ಥೆಯ ಮಾಜಿ ಅಧ್ಯಕ್ಷ ಮತ್ತು ಬಿಜೆಪಿ ಸಂಸದ ಬ್ರಿಜ್ ಭೂಷಣ್ ಶರಣ್ ಸಿಂಗ್ ವಿರುದ್ಧ ಪ್ರತಿಭಟನೆ ಪ್ರಾರಂಭಿಸಿದ್ದರು. ದೆಹಲಿಯ ಜಂತರ್ ಮಂತರ್ ನಲ್ಲಿ ಕುಸ್ತಿಪಟುಗಳು ಪ್ರತಿಭಟನೆ ವೇಳೆ ಹಾಕಿಕೊಂಡಿದ್ದ ಟೆಂಟ್ಗಳನ್ನು ಕಿತ್ತು ಹಾಕಿದ ಕೆಲವೇ ದಿನಗಳಲ್ಲಿ ಕುಸ್ತಿಪಟು ಸಾಕ್ಷಿ ಮಲಿಕ್ ದೊಡ್ಡ ಹೇಳಿಕೆಯೊಂದನ್ನು ನೀಡಿದ್ದಾರೆ. ಸರ್ಕಾರ ಇಟ್ಟಿರುವ ಪ್ರಸ್ತಾವನೆಯನ್ನು ಮೊದಲು ವರಿಷ್ಠರು ಹಾಗೂ ಬೆಂಬಲಿಗರೊಂದಿಗೆ ಚರ್ಚಿಸಿದ ನಂತರ ಅಂತಿಮ ನಿರ್ಧಾರ ಕೈಗೊಳ್ಳಲಾಗುವುದು ಎಂದು ಸಾಕ್ಷಿ ಹೇಳಿದ್ದಾರೆ.
ಇಂದು ಕ್ರೀಡಾ ಸಚಿವರನ್ನು ಭೇಟಿ ಮಾಡುವ ಸಾಧ್ಯತೆ :
ಇನ್ನು ಕೇಂದ್ರ ಕ್ರೀಡಾ ಸಚಿವ ಅನುರಾಗ್ ಠಾಕೂರ್ ಕುಸ್ತಿಪಟುಗಳನ್ನು ಭೇಟಿಯಾಗಿ ಮಾತುಕತೆ ನಡೆಸುವ ವಿಚಾರಕ್ಕೆ ಸಂಬಂಧಿಸಿದಂತೆ ಜನರಿಂದ ಮಿಶ್ರ ಪ್ರತಿಕ್ರಿಯೆ ವ್ಯಕ್ತವಾಗುತ್ತಿದೆ. ಈ ನಡುವೆ ಅನುರಾಗ್ ಠಾಕೂರ್ ಹಾಗೂ ಪ್ರತಿಭಟನೆ ನಡೆಸಿದ್ದ ಕುಸ್ತಿಪಟುಗಳ ನಡುವೆ ಇಂದು ಸಭೆ ನಡೆಯಲಿದೆ ಎಂದು ಹೇಳಲಾಗಿದೆ. ಆದರೆ, ಈ ಮಾತುಕತೆ ಯಾವ ಸಮಯಕ್ಕೆ ನಿಗದಿಯಾಗಿದೆ ಎಂದು ಮಾತ್ರ ಹೇಳಲಾಗಿಲ್ಲ.
ಇದನ್ನೂ ಓದಿ : Wrestlers Protest: ಅಮಿತ್ ಶಾ ಜೊತೆಗಿನ ಭೇಟಿ ಹಾಗೂ ನೌಕರಿಗೆ ಹಾಜರಾಗುವ ಕುರಿತು ಸ್ಪಷ್ಟನೆ ನೀಡಿದ ಬಜರಂಗ್ ಪುನೀಯಾ
ದೂರವಾಣಿ ಸಂದರ್ಶನದ ವೇಳೆ ನೀಡಿರುವ ಹೇಳಿಕೆ :
ಸುದ್ದಿ ಸಂಸ್ಥೆ ಎಎನ್ಐಗೆ ಸಾಕ್ಷಿ ಮಲಿಕ್ ಟೆಲಿಫೋನಿಕ್ ಸಂದರ್ಶನ ನೀಡಿದ್ದಾರೆ. ಈ ವೇಳೆ 'ಸರ್ಕಾರದ ಪ್ರಸ್ತಾವನೆ ಬಗ್ಗೆ ಚಳವಳಿಗೆ ಸಂಬಂಧಿಸಿದ ಎಲ್ಲರೂ ಒಪ್ಪಿಗೆ ನೀಡಿದಾಗ ಮಾತ್ರ ಅದರಂತೆ ನಡೆದುಕೊಳ್ಳಲಾಗುವುದು. ಸರ್ಕಾರದ ಯಾವುದೇ ಪ್ರಸ್ತಾವನೆಗೆ ಒಪ್ಪಿ ಚಳವಳಿಯನ್ನು ಕೊನೆಗೊಳಿಸುವುದು ಸಾಧ್ಯವೇ ಇಲ್ಲ ಎಂದು ಸ್ಪಷ್ಟಪಡಿಸಿದ್ದಾರೆ. ನಮ್ಮ ಮುಂದಿನ ಹೆಜ್ಜೆ ಏನು ಅಥವಾ ಮುಂದಿನ ಸಭೆ ಯಾವಾಗ ಎನ್ನುವ ಬಗ್ಗೆ ಇನ್ನು ಕೂಡಾ ಸಮಯ ನಿಗದಿಯಾಗಿಲ್ಲ ಎಂದಿದ್ದಾರೆ.
ಕೇಂದ್ರ ಕ್ರೀಡಾ ಸಚಿವ ಅನುರಾಗ್ ಠಾಕೂರ್ ಅವರು ಪ್ರತಿಭಟನಾ ನಿರತ ಕುಸ್ತಿಪಟುಗಳನ್ನು ಮಾತುಕತೆಗೆ ಆಹ್ವಾನಿಸಿದ್ದು, ಈ ಬಗ್ಗೆ ಸಾಕ್ಷಿ ಮಲಿಕ್ ಈ ಪ್ರತಿಕ್ರಿಯೆ ನೀಡಿದ್ದಾರೆ.
ಇದನ್ನೂ ಓದಿ : ಈ ವರ್ಷದ ಏಷ್ಯಾಕಪ್ ರದ್ದು! ಭಾರತಕ್ಕೆ ಲಂಕಾ, ಅಫ್ಘಾನ್, ಬಾಂಗ್ಲಾ ಬೆಂಬಲ… ಪಾಕಿಸ್ತಾನದ ಪ್ಲಾನ್ ಉಲ್ಟಾಪಲ್ಟಾ!
ಪ್ರತಿಭಟನೆ ಹಿಂತೆಗೆತದ ಸುದ್ದಿ ನಿರಾಕರಣೆ :
ಇದಕ್ಕೂ ಮೊದಲು, ಸಾಕ್ಷಿ ಸೇರಿದಂತೆ ಹಲವು ಕುಸ್ತಿಪಟುಗಳು ಭಾರತದ ಕುಸ್ತಿ ಫೆಡರೇಶನ್ (ಡಬ್ಲ್ಯುಎಫ್ಐ) ಅಧ್ಯಕ್ಷ ಬ್ರಿಜ್ ಭೂಷಣ್ ಸಿಂಗ್ ವಿರುದ್ಧದ ಚಳವಳಿ ಅಂತ್ಯಗೊಳಿಸಿದ್ದಾರೆ ಎಂದು ಹೇಳಲಾಗುತ್ತಿತ್ತು. ಆದರೆ ಈ ಸುದ್ದಿಯನ್ನು ಸಾಕ್ಷಿ ಮಲಿಕ್ ನಿರಾಕರಿಸಿದ್ದರು. ಸಾಕ್ಷಿ ಮಲಿಕ್, ಬಜರಂಗ್ ಪುನಿಯಾ ಮತ್ತು ವಿನೇಶ್ ಫೋಗಟ್ ಮುಷ್ಕರವನ್ನು ಹಿಂಪಡೆದಿದ್ದಾರೆ. ಮತ್ತು ಅವರೆಲ್ಲರೂ ಭಾರತೀಯ ರೈಲ್ವೆಯಲ್ಲಿ ತಮ್ಮ ಉದ್ಯೋಗಗಳಿಗೆ ಮರಳಿದ್ದಾರೆ ಎಂದು ಕೆಲವು ಮಾಧ್ಯಮಗಳು ವರದಿ ಮಾಡಿತ್ತು. ಇದಾದ ನಂತರ ಟ್ವೀಟ್ ಮಾಡುವ ಮೂಲಕ ಈ ವರದಿಗಳನ್ನು ಸಾಕ್ಷಿ ಮತ್ತು ಬಜರಂಗ್ ನಿರಾಕರಿಸಿದ್ದಾರೆ. ಅಲ್ಲದೆ ಇದು ಕೇವಲ ವದಂತಿ ಎಂದು ಹೇಳಿದ್ದಾರೆ.
ಇದನ್ನೂ ಓದಿ : ಅಂದು ನಿವೃತ್ತಿ ಘೋಷಿಸಿದ್ದ.. ಇಂದು ಮತ್ತೆ ಕ್ರಿಕೆಟ್’ಗೆ ಎಂಟ್ರಿಕೊಟ್ಟ! IPLನಲ್ಲಿ CSK ಪರ ಆಡಿದ್ದ ಈತ ಕೊಹ್ಲಿಯ ಶತ್ರು!
ಕನ್ನಡ ಭಾಷೆಯಲ್ಲಿ ಇತ್ತೀಚಿನ ಕರ್ನಾಟಕ, ದೇಶ, ವಿದೇಶ, ಮನರಂಜನೆ, ಶಿಕ್ಷಣ, ಉದ್ಯೋಗ, ಆರೋಗ್ಯ, ಜೀವನಶೈಲಿ, ಆಧ್ಯಾತ್ಮ, ಕ್ರೀಡೆ, ಕ್ರೈಂ, ವೈರಲ್, ವ್ಯಾಪಾರ, ತಂತ್ರಜ್ಞಾನ ಸುದ್ದಿಗಳನ್ನು ಓದಲು ಈಗಲೇ ನಮ್ಮ ಜೀ ಕನ್ನಡ ನ್ಯೂಸ್ ಮೊಬೈಲ್ ಅಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3AClgDd
Apple Link - https://apple.co/3wPoNgr
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು
Twitter Link - https://bit.ly/3n6d2R8
Facebook Link - https://bit.ly/3Hhqmcj
Youtube Link - https://bit.ly/3LwfnhK
Instagram Link - https://bit.ly/3LyfY2l
Sharechat Link - https://bit.ly/3LCjokI ಲಿಂಕ್ ಗಳ ಮೇಲೆ ಕ್ಲಿಕ್ ಮಾಡಿ.