ಸಚಿನ್ ತೆಂಡೂಲ್ಕರ್ ಹುಟ್ಟುಹಬ್ಬಕ್ಕೆ ಶುಭಾಶಯಗಳ ಸುರಿಮಳೆ

ಇಂದು ಕ್ರಿಕೆಟ್ ದಿಗ್ಗಜ ಮಾಸ್ಟರ್ ಬ್ಲಾಸ್ಟರ್ ಸಚಿನ್ ತೆಂಡೂಲ್ಕರ್ ಗೆ 46ನೇ ಹುಟ್ಟುಹಬ್ಬದ ಸಂಭ್ರಮ.ಆದ್ದರಿಂದ ಇಂದು ಸಾಮಾಜಿಕ ಜಾಲತಾಣದಲ್ಲಿ ಈ ದಂತಕತೆ ಆಟಗಾರನಿಗೆ ಜನ್ಮದಿನದ ಶುಭಾಶಯಗಳ ಮಹಾಪೂರವೇ ಹರಿದು ಬಂದಿದೆ. 

Last Updated : Apr 24, 2019, 03:41 PM IST
ಸಚಿನ್ ತೆಂಡೂಲ್ಕರ್ ಹುಟ್ಟುಹಬ್ಬಕ್ಕೆ ಶುಭಾಶಯಗಳ ಸುರಿಮಳೆ  title=
Photo courtesy: Twitter

ನವದೆಹಲಿ: ಇಂದು ಕ್ರಿಕೆಟ್ ದಿಗ್ಗಜ ಮಾಸ್ಟರ್ ಬ್ಲಾಸ್ಟರ್ ಸಚಿನ್ ತೆಂಡೂಲ್ಕರ್ ಗೆ 46ನೇ ಹುಟ್ಟುಹಬ್ಬದ ಸಂಭ್ರಮ.ಆದ್ದರಿಂದ ಇಂದು ಸಾಮಾಜಿಕ ಜಾಲತಾಣದಲ್ಲಿ ಈ ದಂತಕತೆ ಆಟಗಾರನಿಗೆ ಜನ್ಮದಿನದ ಶುಭಾಶಯಗಳ ಮಹಾಪೂರವೇ ಹರಿದು ಬಂದಿದೆ. 

ಕ್ರಿಕೆಟ್ ದೇವರು ಎಂದು ಖ್ಯಾತಿ ಪಡೆದಿರುವ ಸಚಿನ್ ತೆಂಡೂಲ್ಕರ್ ಗೆ ಜನ್ಮದಿನದ ನಿಮಿತ್ತ ಸಾಮಾಜಿಕ ಜಾಲತಾಣದಲ್ಲಿ ಗಾಡ್ ಆಫ್ ಕ್ರಿಕೆಟ್, ಸಚಿನ್ ತೆಂಡೂಲ್ಕರ್ ಹ್ಯಾಶ್ ಟ್ಯಾಗ್ ಗಳು ಟ್ರೆಂಡಿಂಗ್ ನಲ್ಲಿವೆ. ಸಚಿನ್ ಗೆ ಐಸಿಸಿ ತನ್ನ ಅಧಿಕೃತ ಟ್ವಿಟ್ಟರ್ ಖಾತೆಯಲ್ಲಿ " ಹುಟ್ಟು ಹಬ್ಬದ ಶುಭಾಶಯಗಳು ಸಚಿನ್ ತೆಂಡೂಲ್ಕರ್, 200 ಟೆಸ್ಟ್ ಪಂದ್ಯ 463 ಏಕದಿನ ಪಂದ್ಯಗಳೊಂದಿಗೆ 34,357 ರನ್ ಗಳನ್ನು ಗಳಿಸಿದ್ದಾರೆ.ಅದರಲ್ಲಿ ಅವರ ಅದ್ಭುತ ಶತಕಗಳು ಸೇರಿವೆ! ಎಂದು  ಟ್ವೀಟ್ ಮಾಡಿದೆ. ಇನ್ನು ಮುಂದುವರೆದು ನಿಮ್ಮ ನೆಚ್ಚಿನ ಸಚಿನ್ ಸಚಿನ್ ಕ್ಷಣ ಯಾವುದು ? ಎಂದು ಕೊನೆಗೆ ಪ್ರಶ್ನಿಸಿದೆ.

ಸಚಿನ್ ಜೊತೆ ಸಹ ಆಟಗಾರನಾಗಿದ್ದ ಹರ್ಭಜನ್ ಸಿಂಗ್ " ಹುಟ್ಟುಹಬ್ಬದ ಶುಭಾಶಯಗಳು ಪಾಜಿ...ನನಗೆ ತಿಳಿದಿರುವ ವ್ಯಕ್ತಿಯಲ್ಲಿ ಅವರೊಬ್ಬ ಕ್ರಿಕೆಟ್ ಆಟಗಾರಕಿಂತ ಅದ್ಭುತ ವ್ಯಕ್ತಿ...ಪಾಜಿ ನಾವು ನಿಮ್ಮನ್ನು ಪ್ರೀತಿಸುತ್ತೇವೆ" ಎಂದು ಟ್ವೀಟ್ ಮಾಡಿದ್ದಾರೆ. 

ಇನ್ನು ಅಧಿಕೃತ ವಿಶ್ವಕಪ್ ನ ಟ್ವಿಟ್ಟರ್ ಖಾತೆ ಕೂಡ ಸಚಿನ್ ಗೆ ಶುಭಾಶಯಗಳನ್ನು ಸಲ್ಲಿಸುತ್ತಾ " 2011ರ ವಿಶ್ವಕಪ್ ವಿಜೇತ,  ಅಧಿಕ ವಿಶ್ವಕಪ್ ರನ್ ಗಳು,  ಅಧಿಕ ವಿಶ್ವಕಪ್ ಶತಕಗಳು, ಅಧಿಕ ವಿಶ್ವಕಪ್ ಅರ್ಧಶತಕಗಳು ,ಲಿಟಲ್ ಮಾಸ್ಟರ್ಗೆ  ಜನ್ಮದಿನದ ಶುಭಾಶಯಗಳು! ಎಂದು ಟ್ವೀಟ್ ಮಾಡಿದೆ. 
 

Trending News