IND vs SA : ಅಪಾಯದಲ್ಲಿತ್ತು ಈ ಆಟಗಾರನ ವೃತ್ತಿಜೀವನ : 3ನೇ ಟಿ20ಯಲ್ಲಿ ಭರ್ಜರಿ ಕಮ್ ಬ್ಯಾಕ್!

ರಿತುರಾಜ್ ಗಾಯಕ್ವಾಡ್ 35 ಎಸೆತಗಳಲ್ಲಿ 7 ಬೌಂಡರಿ ಹಾಗೂ 2 ಸಿಕ್ಸರ್ ನೆರವಿನಿಂದ 57 ರನ್ ಗಳಿಸಿದರು. ಇದರಿಂದ ರಿತುರಾಜ್ ಗಾಯಕ್ವಾಡ್ ಫಾರ್ಮ್‌ಗೆ ಮರಳಿದ್ದಾರೆ. 

Written by - Channabasava A Kashinakunti | Last Updated : Jun 15, 2022, 02:33 PM IST
  • ಮೂರನೇ ಟಿ20 ಅಂತಾರಾಷ್ಟ್ರೀಯ ಪಂದ್ಯದಲ್ಲಿ ಟೀಂ ಇಂಡಿಯಾ 48 ರನ್‌ಗಳಿಂದ ದಕ್ಷಿಣ ಆಫ್ರಿಕಾವನ್ನು ಸೋಲಿಸಿತು
  • ಐದು ಪಂದ್ಯಗಳ ಟಿ20 ಅಂತಾರಾಷ್ಟ್ರೀಯ ಸರಣಿಯಲ್ಲಿ ಭರ್ಜರಿ ಕಮ್ ಬ್ಯಾಕ್ ಮಾಡಿದ್ದಾರೆ
  • ಟಿ20 ಅಂತಾರಾಷ್ಟ್ರೀಯ ಸರಣಿಯಲ್ಲಿ ದಕ್ಷಿಣ ಆಫ್ರಿಕಾ ಇನ್ನೂ 2-1 ಮುನ್ನಡೆಯಲ್ಲಿದೆ.
IND vs SA : ಅಪಾಯದಲ್ಲಿತ್ತು ಈ ಆಟಗಾರನ ವೃತ್ತಿಜೀವನ : 3ನೇ ಟಿ20ಯಲ್ಲಿ ಭರ್ಜರಿ ಕಮ್ ಬ್ಯಾಕ್! title=

IND vs SA : ಮೂರನೇ ಟಿ20 ಅಂತಾರಾಷ್ಟ್ರೀಯ ಪಂದ್ಯದಲ್ಲಿ ಟೀಂ ಇಂಡಿಯಾ 48 ರನ್‌ಗಳಿಂದ ದಕ್ಷಿಣ ಆಫ್ರಿಕಾವನ್ನು ಸೋಲಿಸಿತು. ಇದರೊಂದಿಗೆ ಐದು ಪಂದ್ಯಗಳ ಟಿ20 ಅಂತಾರಾಷ್ಟ್ರೀಯ ಸರಣಿಯಲ್ಲಿ ಭರ್ಜರಿ ಕಮ್ ಬ್ಯಾಕ್ ಮಾಡಿದ್ದಾರೆ. ಟಿ20 ಅಂತಾರಾಷ್ಟ್ರೀಯ ಸರಣಿಯಲ್ಲಿ ದಕ್ಷಿಣ ಆಫ್ರಿಕಾ ಇನ್ನೂ 2-1 ಮುನ್ನಡೆಯಲ್ಲಿದೆ. ಮೂರನೇ ಟಿ20 ಪಂದ್ಯದಲ್ಲಿ ಭಾರತದ ಬ್ಯಾಟ್ಸ್‌ಮನ್‌ಗಳು ತಮ್ಮ ಶಕ್ತಿ ಪ್ರದರ್ಶಿಸಿದ್ದಾರೆ. ರಿತುರಾಜ್ ಗಾಯಕ್ವಾಡ್ 35 ಎಸೆತಗಳಲ್ಲಿ 7 ಬೌಂಡರಿ ಹಾಗೂ 2 ಸಿಕ್ಸರ್ ನೆರವಿನಿಂದ 57 ರನ್ ಗಳಿಸಿದರು. ಇದರಿಂದ ರಿತುರಾಜ್ ಗಾಯಕ್ವಾಡ್ ಫಾರ್ಮ್‌ಗೆ ಮರಳಿದ್ದಾರೆ. 

ಬಹುತೇಕ ಅಂತ್ಯದಲ್ಲಿತ್ತು ಈ ಆಟಗಾರನ ವೃತ್ತಿಜೀವನ

ರಿತುರಾಜ್ ಗಾಯಕ್ವಾಡ್ ಇದುವರೆಗೆ 36 ಐಪಿಎಲ್ ಪಂದ್ಯಗಳಲ್ಲಿ 1207 ರನ್ ಗಳಿಸಿದ್ದಾರೆ, ಆದರೆ 25 ವರ್ಷದ 6 ಟಿ20 ಅಂತಾರಾಷ್ಟ್ರೀಯ ಪಂದ್ಯಗಳಲ್ಲಿ ಕೇವಲ 120 ರನ್ ಗಳಿಸಿದ್ದಾರೆ, ಮಂಗಳವಾರ ನಡೆದ ದಕ್ಷಿಣ ಆಫ್ರಿಕಾ ವಿರುದ್ಧದ ಮೂರನೇ ಟಿ20ಐನಲ್ಲಿ ಬರಿ ಒಂದು ಅರ್ಧಶತಕ. ಇದು ನನಗೆ ತೊಂದರೆಯಾಗಿದೆಯೇ ಎಂಬ ಪ್ರಶ್ನೆಗೆ ಗಾಯಕ್ವಾಡ್, ‘ಇಲ್ಲ, ನನಗೆ ಅಸಮಾಧಾನವಿಲ್ಲ, ಇದು ಆಟದ ಭಾಗವಾಗಿದೆ ಎಂದು ಹೇಳಿದ್ದಾರೆ.

ಇದನ್ನೂ ಓದಿ : IPL Media Auction: ZEE ನಿಂದ ಅಧಿಕೃತ ಹೇಳಿಕೆ ಬಿಡುಗಡೆ

ಈ ಕುರಿತು ಮಾತನಾಡಿದ ಗಾಯಕ್ವಾಡ್, 'ಕಳೆದ ವರ್ಷ ನನಗೆ ತುಂಬಾ ಚೆನ್ನಾಗಿತ್ತು, ಹೀಗಾಗಿ ಜನ ನನ್ನ ಮೇಲೆ ಹೆಚ್ಚಿನ ನಿರೀಕ್ಷೆಗಳನ್ನು ಹೊಂದಿದ್ದರು, ಏಕೆಂದರೆ ನೀವು ಐಪಿಎಲ್ ಮತ್ತು ದೇಶೀಯ ಕ್ರಿಕೆಟ್‌ನಲ್ಲಿ ಉತ್ತಮ ಪ್ರದರ್ಶನ ನೀಡಿದಾಗ ಅದು ಸಂಭವಿಸುತ್ತದೆ' ಎಂದು ಹೇಳಿದರು. ಈ ವರ್ಷ ಐಪಿಎಲ್‌ನಲ್ಲಿ ಅವರ ಫಾರ್ಮ್ ಏರುಪೇರಾಗಿದ್ದರೂ, ಆದರೆ ಕೊನೆಯಲ್ಲಿ ಅವರು ಚೆನ್ನೈ ಸೂಪರ್ ಕಿಂಗ್ಸ್ ಪರ 14 ಪಂದ್ಯಗಳಲ್ಲಿ ಮೂರು ಅರ್ಧಶತಕಗಳೊಂದಿಗೆ 368 ರನ್ ಗಳಿಸಿ ಪುನರಾಗಮನ ಮಾಡಿದರು.

ಟಿ20ಯಲ್ಲಿ ಭರ್ಜರಿ ಕಮ್ ಬ್ಯಾಕ್!

ಇನ್ನು ಮುಂದುವರೆದು ಮಾತನಾಡಿದ ರಿತುರಾಜ್ ಗಾಯಕ್ವಾಡ್, 'ಐಪಿಎಲ್‌ನಲ್ಲಿ ವಿಕೆಟ್ ಸ್ವಲ್ಪ ಬೌಲರ್ ಸ್ನೇಹಿಯಾಗಿತ್ತು. ಫ್ಲಾಟ್ ವಿಕೆಟ್ ಇರಲಿಲ್ಲ, ಬೌಲಿಂಗ್ ಸ್ವಲ್ಪ ಸ್ವಿಂಗ್ ಇತ್ತು. ಆದ್ದರಿಂದ ಐಪಿಎಲ್‌ನಲ್ಲಿನ ಮೂರು-ನಾಲ್ಕು ಪಂದ್ಯಗಳಲ್ಲಿ, ನಾನು ಬೇಗ ಔಟಾದಿದ್ದೇನೆ, ಅದು ಬಿಟ್ಟರೆ ನಾನು ಚೆನ್ನಾಗಿ ಪ್ರದರ್ಶನ ನೀಡಿದ್ದೇನೆ ಎಂದರು. 

ಬ್ಯಾಟಿಂಗ್ ಸಾಮರ್ಥ್ಯದ ಬಗ್ಗೆ ಗಾಯಕ್ವಾಡ್ ಮಾತು

ಗಾಯಕ್ವಾಡ್ ಮೊದಲ ಎರಡು ಪಂದ್ಯಗಳಲ್ಲಿ 23 ಹೆಚ್ಚು ರನ್ ಗಳಿಸಿದರು. ಒಂದು ಮ್ಯಾಚ್ ನಲ್ಲಿ ಕೇವಲ ಒಂದು ರನ್ ಗಳಿಸಿದ್ದಾರೆ. ತಂಡಕ್ಕೆ ಹೆಚ್ಚಿನ ಅಗತ್ಯವಿದ್ದಾಗ ಅವರು ಉತ್ತಮ ಇನ್ನಿಂಗ್ಸ್ ಆಡಿದರು, ಇದರಿಂದಾಗಿ ತಂಡವು ಸರಣಿಯಲ್ಲಿ ಉಳಿಯಬಹುದು. ಗಾಯಕ್ವಾಡ್ 35 ಎಸೆತಗಳಲ್ಲಿ ಏಳು ಬೌಂಡರಿ ಹಾಗೂ ಎರಡು ಸಿಕ್ಸರ್‌ಗಳೊಂದಿಗೆ 57 ರನ್ ಗಳಿಸಿದರು ಇದು ಮರಳಿ ಫಾರ್ಮ್ ಗೆ ಬರಲು ತುಂಬಾ ಸಹಾಯಕವಾಗಿದೆ. 

ಇದನ್ನೂ ಓದಿ : IPL Media Rights: ಇನ್ಮುಂದೆ ನೀವು ಈ ಟಿವಿ ಚಾನೆಲ್ ಮೇಲೆ IPL ವೀಕ್ಷಿಸಬಹುದು, ಗಳಿಕೆಯ ಎಲ್ಲಾ ದಾಖಲೆ ನುಚ್ಚುನೂರು ಮಾಡಿದ ಬಿಸಿಸಿಐ

 ಕನ್ನಡ ಭಾಷೆಯಲ್ಲಿ ಮತ್ತಷ್ಟು ತಾಜಾ ಸುದ್ದಿಗಳನ್ನು ಓದಲು ನಮ್ಮ ಜೀ ಕನ್ನಡ ನ್ಯೂಸ್ ಮೊಬೈಲ್ ಅಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3hDyh4G
Apple Link - https://apple.co/3hEw2hy
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು TwitterFacebookYoutube ಲಿಂಕ್ ಗಳ ಮೇಲೆ ಕ್ಲಿಕ್ಕಿಸಿ.

Trending News