Rookie Racing Competition: ಥೈಲ್ಯಾಂಡ್ ನಲ್ಲಿ 25 ಗಂಟೆಗಳ ಸಹಿಷ್ಣುತೆ ರೇಸಿಂಗ್ನಲ್ಲಿ ರೂಕಿ ರೇಸಿಂಗ್ ಸ್ಪರ್ಧೆ: ಟಿಎಂಸಿ ಘೋಷಣೆ

Rookie Racing Competition: ಈ ಕಂಪನಿಗಳು ORC ROOKIE GR Corolla H2 ಪರಿಕಲ್ಪನೆಯಾಗಿರುವ ಹೈಡ್ರೋಜನ್ ಎಂಜಿನ್ ವಾಹನ ಮತ್ತು ORC ROOKIE GR86 CNF ಪರಿಕಲ್ಪನೆಯಾಗಿರುವ ಕಾರ್ಬನ್-ನ್ಯೂಟ್ರಲ್ ಇಂಧನ ವಾಹನದೊಂದಿಗೆ ರೇಸ್‌ನಲ್ಲಿ ಪಾಲ್ಗೊಳ್ಳುತ್ತಿವೆ. ಈ ಪಾಲ್ಗೊಳ್ಳುವಿಕೆಯು ಪೂರ್ಣ 25 ಗಂಟೆಗಳ ಅವಧಿಗೆ ಇರುವುದಿಲ್ಲ.

Written by - Bhavishya Shetty | Last Updated : Dec 15, 2022, 05:57 PM IST
    • ಡಿಸೆಂಬರ್ 17ರಿಂದ 18ರವರೆಗೆ ಥೈಲ್ಯಾಂಡ್ ದೇಶದ ಚಾಂಗ್ ಇಂಟರ್‌ನ್ಯಾಷನಲ್ ಸರ್ಕ್ಯೂಟ್‌ನಲ್ಲಿ ಸ್ಪರ್ಧೆ
    • ಕಾರ್ಬನ್-ನ್ಯೂಟ್ರಲ್ ಇಂಧನ ವಾಹನದೊಂದಿಗೆ ರೇಸ್‌ನಲ್ಲಿ ಪಾಲ್ಗೊಳ್ಳುತ್ತಿವೆ
    • ಟೊಯೋಟಾ ಮೋಟಾರ್ ಕಾರ್ಪೊರೇಷನ್ ಘೋಷಣೆ
Rookie Racing Competition: ಥೈಲ್ಯಾಂಡ್ ನಲ್ಲಿ 25 ಗಂಟೆಗಳ ಸಹಿಷ್ಣುತೆ ರೇಸಿಂಗ್ನಲ್ಲಿ ರೂಕಿ ರೇಸಿಂಗ್ ಸ್ಪರ್ಧೆ: ಟಿಎಂಸಿ ಘೋಷಣೆ title=
Rookie Racing Company Limited

Rookie Racing Competition: ಬೆಂಗಳೂರು: ರೂಕಿ ರೇಸಿಂಗ್ ಕಂಪನಿ ಲಿಮಿಟೆಡ್ ಈ ವರ್ಷದ ಡಿಸೆಂಬರ್ 17ರಿಂದ 18ರವರೆಗೆ ಥೈಲ್ಯಾಂಡ್ ದೇಶದ ಚಾಂಗ್ ಇಂಟರ್‌ನ್ಯಾಷನಲ್ ಸರ್ಕ್ಯೂಟ್‌ನಲ್ಲಿ IDEMITSU 1500 ಸೂಪರ್ ಎಂಡ್ಯೂರೆನ್ಸ್ 2022 (ಥೈಲ್ಯಾಂಡ್ 25H ಎಂಡ್ಯೂರೆನ್ಸ್ ರೇಸ್) ನಲ್ಲಿ ಸ್ಪರ್ಧಿಸುವುದಾಗಿ ಟೊಯೋಟಾ ಮೋಟಾರ್ ಕಾರ್ಪೊರೇಷನ್ ಘೋಷಿಸಿವೆ.

ಈ ಕಂಪನಿಗಳು ORC ROOKIE GR Corolla H2 ಪರಿಕಲ್ಪನೆಯಾಗಿರುವ ಹೈಡ್ರೋಜನ್ ಎಂಜಿನ್ ವಾಹನ ಮತ್ತು ORC ROOKIE GR86 CNF ಪರಿಕಲ್ಪನೆಯಾಗಿರುವ ಕಾರ್ಬನ್-ನ್ಯೂಟ್ರಲ್ ಇಂಧನ ವಾಹನದೊಂದಿಗೆ ರೇಸ್‌ನಲ್ಲಿ ಪಾಲ್ಗೊಳ್ಳುತ್ತಿವೆ. ಈ ಪಾಲ್ಗೊಳ್ಳುವಿಕೆಯು ಪೂರ್ಣ 25 ಗಂಟೆಗಳ ಅವಧಿಗೆ ಇರುವುದಿಲ್ಲ. ಓಟದ ಆರಂಭದ ಮತ್ತು ಕೊನೆಯ ಕೆಲವು ಗಂಟೆಗಳಿಗೆ ಸೀಮಿತವಾಗಿರುತ್ತದೆ. ಎರಡೂ ವಾಹನಗಳು ಜಪಾನ್‌ ದೇಶದಿಂದ ಹೊರಗೆ ಇದೇ ಮೊದಲ ಬಾರಿಗೆ ರೇಸ್ ಒಂದರಲ್ಲಿ ಸ್ಪರ್ಧಿಸುತ್ತಿವೆ.

ಇದನ್ನೂ ಓದಿ:   Jio 5G ಈಗ ಐಫೋನ್‌ಗಳಲ್ಲಿ ಉಚಿತವಾಗಿ ಲಭ್ಯ..!  ನಿಮ್ಮ ಪೋನ್ ನಲ್ಲಿ ಆಕ್ಟಿವ್ ಮಾಡಿಕೊಳ್ಳುವುದು ಹೇಗೆ ಗೊತ್ತಾ?

ಇದರ ಜೊತೆಗೆ, ಥೈಲ್ಯಾಂಡ್‌ನ ಟೊಯೊಟಾ ಗಝೂ ರೇಸಿಂಗ್‌ನ ಒಂದು ತಂಡದ ವಾಹನಗಳು ಇಂಗಾಲ-ತಟಸ್ಥ ಇಂಧನದಲ್ಲಿ ಚಲಿಸಲಿದೆ. ಥೈಲ್ಯಾಂಡ್ 25H ಎಂಡ್ಯೂರೆನ್ಸ್ ರೇಸ್‌ನಲ್ಲಿ ಭಾಗವಹಿಸುವುದರಿಂದ ಆರಂಭಿಸಿ ರೂಕಿ ರೇಸಿಂಗ್ ಮತ್ತು ಟೊಯೊಟಾ ಕಂಪನಿಗಳು, ಮೋಟಾರ್‌ ಸ್ಪೋರ್ಟ್‌ಗಳ ಮೂಲಕ ಏಷ್ಯಾದಲ್ಲಿ ಇಂಗಾಲ-ತಟಸ್ಥ ತಂತ್ರಜ್ಞಾನಗಳ ಅಭಿವೃದ್ಧಿಯನ್ನು ತ್ವರಿತಗೊಳಿಸಲು ನಿರಂತರವಾಗಿ ಶ್ರಮಿಸುತ್ತದೆ.

ಜಪಾನ್‌ನಲ್ಲಿ ಸೂಪರ್ ಟೈಕ್ಯೂ ಸರಣಿಯಲ್ಲಿ ರೂಕಿ ರೇಸಿಂಗ್‌ನ ಸವಾಲು:

ರೂಕಿ ರೇಸಿಂಗ್ ಮತ್ತು ಟೊಯೊಟಾ 2021ರ ಋತುವಿನ ಮಧ್ಯದಲ್ಲಿ ಜಪಾನ್‌ನಲ್ಲಿ ಹೈಡ್ರೋಜನ್-ಚಾಲಿತ ಕೊರೊಲ್ಲಾದೊಂದಿಗೆ ಸೂಪರ್ ಟೈಕ್ಯೂ ಸರಣಿಯಲ್ಲಿ ಭಾಗವಹಿಸಿ, ಇಂಗಾಲ-ತಟಸ್ಥ ಸಮಾಜವನ್ನು ಸಾಧಿಸುವ ಗುರಿಯೊಂದಿಗೆ ಉದ್ಯಮದ ಒಳಗಿನ ಹಾಗೂ ಹೊರಗಿನ ಸಮಾನ ಮನಸ್ಕರೊಂದಿಗೆ ಸಹಯೋಗದಲ್ಲಿ "ಉತ್ಪಾದನೆ", "ಸಾರಿಗೆ" ಮತ್ತು "ಬಳಕೆ"ಯ ಪ್ರಯತ್ನಗಳನ್ನು ತ್ವರಿತಗೊಳಿಸಿತು. 2022ರ ಋತುವಿನಿಂದ, ಹೈಡ್ರೋಜನ್ ಎಂಜಿನ್ ಕೊರೊಲ್ಲಾ ಜೊತೆಗೆ, ರೂಕಿ ರೇಸಿಂಗ್ ಮತ್ತು ಟೊಯೋಟಾ ಕಂಪನಿಗಳು ರೇಸಿಂಗ್‌ನಲ್ಲಿ GR86 ಸಿಂಥೆಟಿಕ್ ಇಂಧನವನ್ನು ಬಳಸುತ್ತಿವೆ ಮತ್ತು ಆಂತರಿಕ ದಹನಕಾರಿ ಎಂಜಿನ್‌ಗಳ ಬಳಕೆಯನ್ನು ಒಳಗೊಂಡಂತೆ ಕ್ಲೀನ್ ಎನರ್ಜಿ ಆಯ್ಕೆಗಳನ್ನು ವಿಸ್ತರಿಸುವ ಸವಾಲನ್ನು ಸ್ವೀಕರಿಸಿವೆ.

ಟೊಯೊಟಾ ಮೋಟಾರ್ ಕಾರ್ಪೊರೇಶನ್‌ ಅಧ್ಯಕ್ಷ ಅಕಿಯೊ ಟೊಯೊಡಾ ಅವರು "ಮೊರಿಜೊ" ಎಂಬ ಚಾಲಕನ ಹೆಸರಿನಲ್ಲಿ ಭಾಗವಹಿಸುತ್ತಿರುವ ರೂಕಿ ರೇಸಿಂಗ್‌ನ ಸಂಸ್ಥಾಪಕರೂ, ತಂಡದ ಮಾಲೀಕರೂ ಆಗಿದ್ದಾರೆ.

ಆಗಸ್ಟ್‌ ತಿಂಗಳಲ್ಲಿ ವೈಪ್ರೆಸ್‌ನಲ್ಲಿ ನಡೆದ ವಿಶ್ವ ರ‍್ಯಾಲಿ ಚಾಂಪಿಯನ್‌ಶಿಪ್ (WRC) ನ ಒಂಬತ್ತನೇ ಸುತ್ತಿನಲ್ಲಿ ಮತ್ತು ನವೆಂಬರ್‌ನಲ್ಲಿ ಜಪಾನ್‌ನಲ್ಲಿ ನಡೆದ WRC ಯ 13ನೇ ಸುತ್ತಿನಲ್ಲಿ, ರೂಕಿ ರೇಸಿಂಗ್ ಮತ್ತು ಟೊಯೋಟಾ ಪರೀಕ್ಷಾ ಅಭಿವೃದ್ಧಿಯ ಅಡಿಯಲ್ಲಿ GR ಯಾರಿಸ್ H2 ಹೈಡ್ರೋಜನ್ ಎಂಜಿನ್ ವಾಹನದ ಪ್ರದರ್ಶನ ನಡೆಸಲಾಯಿತು. ರ‍್ಯಾಲಿಯ ಕಠಿಣ ಪರಿಸ್ಥಿತಿಗಳಲ್ಲಿ ಇಂಗಾಲ-ತಟಸ್ಥತೆಯನ್ನು ಸಾಧಿಸಲು ಕಾರ್ಯಸಾಧ್ಯ ಆಯ್ಕೆಯಾಗಿ ಹೈಡ್ರೋಜನ್ ಸಾಮರ್ಥ್ಯವನ್ನು ಪ್ರದರ್ಶಿಸುವ ಗುರಿಯನ್ನು ಇದು ಹೊಂದಿತ್ತು. ಮೋರಿಜೊ ಅವರ ಚಾಲನಾ ದಕ್ಷತೆಯು ವಾಹನದ ಸುರಕ್ಷತೆ ಮತ್ತು ಕಾರ್ಯಕ್ಷಮತೆಯನ್ನು ರುಜುವಾತುಪಡಿಸಿತು.

ಈಗ ಪ್ರದರ್ಶನವು ಏಷ್ಯಾ ಖಂಡಕ್ಕೆ ವಿಸ್ತರಿಸುತ್ತಿದೆ. ಥೈಲ್ಯಾಂಡ್‌ನ ಪ್ರಮುಖ ಅಂತಾರಾಷ್ಟ್ರೀಯ ಸರ್ಕ್ಯೂಟ್‌ಗಳಲ್ಲಿ ಚಾಂಗ್ ಇಂಟರ್‌ನ್ಯಾಶನಲ್ ಕೂಡ ಒಂದು. ಇದು ವಿಶ್ವದ ಅತ್ಯಂತ ಪ್ರತಿಷ್ಠಿತ ಮೋಟಾರ್ ಸೈಕಲ್ ರೇಸಿಂಗ್ ಸರಣಿ ಥೈಲ್ಯಾಂಡ್ ಮೋಟೋಜಿಪಿ (Thailand MotoGP) ಯನ್ನು ಆಯೋಜಿಸುತ್ತದೆ. 2014ರಲ್ಲಿ ಸರ್ಕ್ಯೂಟ್ ಪ್ರಾರಂಭವಾದಾಗಿನಿಂದ, ಟೊಯೋಟಾ ಮೋಟಾರ್ ಥೈಲ್ಯಾಂಡ್ ಕಂಪನಿ ಲಿಮಿಟೆಡ್ ಮುಖ್ಯ ಪ್ರಾಯೋಜಕತ್ವ ವಹಿಸಿದ್ದು, ಥೈಲ್ಯಾಂಡ್‌ನಲ್ಲಿ ಒನ್-ಮೇಕ್ ರೇಸ್‌ಗಳನ್ನು ಆಯೋಜಿಸುವ ಮೂಲಕ ಮೋಟಾರ್‌ಸ್ಪೋರ್ಟ್‌ಗಳ ಅಭಿವೃದ್ಧಿಯನ್ನು ಉತ್ತೇಜಿಸಿದೆ.

ಇದನ್ನೂ ಓದಿ:   ವಿದ್ಯುತ್ ಬಿಲ್ ಕಡಿಮೆ ಮಾಡಲು ನಿಮ್ಮ ಮನೆಯ ಈ 2 ಗ್ಯಾಜೆಟ್‌ಗಳನ್ನು ಬದಲಾಯಿಸಿ ಸಾಕು!

ಸರ್ಕ್ಯೂಟ್ ರೇಸಿಂಗ್‌ನಲ್ಲಿ ಮೊದಲ ಪ್ರವೇಶ ಪಡೆದಿದ್ದ ರೂಕಿ ರೇಸಿಂಗ್, 10-ಗಂಟೆಗಳ "IDEMITSU 600 ಸೂಪರ್ ಎಂಡ್ಯೂರೆನ್ಸ್ 2019" ಅನ್ನು ಗೆದ್ದುಕೊಂಡಿತು. ಈ ಮೂರು ವರ್ಷಗಳಲ್ಲಿ ಇದೇ ಮೊದಲ ಬಾರಿಗೆ ರೂಕಿ ರೇಸಿಂಗ್ ಮತ್ತು ಟೊಯೊಟಾದ ಕಾರುಗಳನ್ನು ಜಪಾನ್‌ಗಿಂತ ವಿಭಿನ್ನವಾದ ಪರಿಸರದಲ್ಲಿ ಪರೀಕ್ಷಿಸಲಾಗುವುದು. ಜಗತ್ತಿನೆಲ್ಲೆಡೆ ಇಂಗಾಲ-ತಟಸ್ಥ ಸಮಾಜವನ್ನು ರಚಿಸುವತ್ತ ತಂತ್ರಜ್ಞಾನದ ಆಯ್ಕೆಗಳನ್ನು ವಿಸ್ತರಿಸುವ ಪ್ರಯತ್ನಗಳನ್ನು ತ್ವರಿತಗೊಳಿಸುತ್ತದೆ.

 

ಕನ್ನಡ ಭಾಷೆಯಲ್ಲಿ ಮತ್ತಷ್ಟು ತಾಜಾ ಸುದ್ದಿಗಳನ್ನು ಓದಲು ನಮ್ಮ ಜೀ ಕನ್ನಡ ನ್ಯೂಸ್ ಮೊಬೈಲ್ ಅಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3hDyh4G
Apple Link - https://apple.co/3hEw2hy
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು TwitterFacebookYoutube ಲಿಂಕ್ ಗಳ ಮೇಲೆ ಕ್ಲಿಕ್ಕಿಸಿ.

Trending News