ಮೈದಾನದಲ್ಲಿ ಕೂಗಾಡುವುದು, ಕಿರುಚುವುದರಿಂದ ಪ್ರಯೋಜನವಿಲ್ಲ: ರೋಹಿತ್ ವರ್ತನೆಗೆ ಶೋಯೆಬ್ ಅಖ್ತರ್ ಬೇಸರ

ಮೈದಾನದಲ್ಲಿ ರೋಹಿತ್ ಶರ್ಮಾ ತೋರಿದ ವರ್ತನೆ ಸರಿಯಲ್ಲವೆಂದು ಪಾಕಿಸ್ತಾನದ ಮಾಜಿ ವೇಗದ ಬೌಲರ್ ಶೋಯೆಬ್ ಅಖ್ತರ್ ಬೇಸರ ವ್ಯಕ್ತಪಡಿಸಿದ್ದಾರೆ.

Written by - Puttaraj K Alur | Last Updated : Sep 8, 2022, 10:46 AM IST
  • ಮೈದಾನದಲ್ಲಿಯೇ ಆಟಗಾರರ ಮೇಲೆ ರೋಹಿತ್ ಶರ್ಮಾ ಕೂಗಾಟ
  • ಸೋಲಿನ ಹತಾಶೆಯಲ್ಲಿ ಈ ರೀತಿಯ ವರ್ತನೆ ಸರಿಯಲ್ಲವೆಂದ ಶೋಯೆಬ್ ಅಖ್ತರ್
  • ಟಿ-20 ವಿಶ್ವಕಪ್ ಟೂರ್ನಿಗೆ ಭಾರತ ತಂಡಕ್ಕೆ ಪಾಕ್ ಆಟಗಾರನ ಎಚ್ಚರಿಕೆ
ಮೈದಾನದಲ್ಲಿ ಕೂಗಾಡುವುದು, ಕಿರುಚುವುದರಿಂದ ಪ್ರಯೋಜನವಿಲ್ಲ: ರೋಹಿತ್ ವರ್ತನೆಗೆ ಶೋಯೆಬ್ ಅಖ್ತರ್ ಬೇಸರ title=
‘ರೋಹಿತ್ ಶರ್ಮಾ ವರ್ತನೆ ಸರಿಯಲ್ಲ’

ನವದೆಹಲಿ: ಏಷ್ಯಾಕಪ್ ಫೈನಲ್‌ಗೆ ಅರ್ಹತೆ ಪಡೆಯುವ ಭಾರತದ ಭರವಸೆ ಬುಧವಾರ ಭಗ್ನಗೊಂಡಿತು. ಪಾಕಿಸ್ತಾನವು ಅಫ್ಘಾನಿಸ್ತಾನವನ್ನು ಸೋಲಿಸಿ ಶ್ರೀಲಂಕಾದೊಂದಿಗೆ ಅಂತಿಮ ಹಣಾಹಣಿಗೆ ಸಿದ್ಧವಾಗಿದೆ. ಪಾಕಿಸ್ತಾನ ಮತ್ತು ಶ್ರೀಲಂಕಾ ವಿರುದ್ಧ ಸೂಪರ್ 4ರ ಹಂತದಲ್ಲಿ 2 ಸತತ ಸೋಲಿನೊಂದಿಗೆ ಟೀಂ ಇಂಡಿಯಾ ಟೂರ್ನಿಯಿಂದ ನಿರ್ಗಮಿಸಿದೆ. ಇದು ಕೋಟ್ಯಂತರ ಭಾರತೀಯ ಅಭಿಮಾನಿಗಳಿಗೆ ದೊಡ್ಡ ನಿರಾಸೆ ಮೂಡಿಸಿದೆ.

ಬ್ಯಾಟಿಂಗ್ ಮತ್ತು ಬೌಲಿಂಗ್‍ನಲ್ಲಿ ವೈಫಲ್ಯ ಅನುಭವಿಸಿದ ಕಾರಣ ರೋಹಿತ್ ಶರ್ಮಾ ಪಡೆ 2 ಮಹತ್ವದ ಪಂದ್ಯಗಳಲ್ಲಿ ಸೋಲು ಕಾಣಬೇಕಾಯಿತು. ಗೆಲ್ಲುವ ಪಂದ್ಯಗಳಲ್ಲಿ ಸೋಲು ಕಾಣುವ ಮೂಲಕ ಟೀಂ ಇಂಡಿಯಾ ಏಷ್ಯಾಕಪ್ ಟೂರ್ನಿಯಿಂದಲೇ ಹೊರಬಿದ್ದಿದೆ. ತಲಾ 2 ಗೆಲುವು ಸಾಧಿಸಿರುವ ಪಾಕಿಸ್ತಾನ ಮತ್ತು ಶ್ರೀಲಂಕಾ ಫೈನಲ್ ಜಿದ್ದಾಜಿದ್ದಿಗೆ ಸಜ್ಜಾಗಿವೆ.

ಇದನ್ನೂ ಓದಿ: Team India : ಈ ಆಟಗಾರನ ಅನುಪಸ್ಥಿತಿಯಿಂದ ಟೀಂ ಇಂಡಿಯಾಗೆ ಈ ಪರಸ್ಥಿತಿ!

ಭಾರತೀಯ ಆಟಗಾರರ ಕಳಪೆ ಬೌಲಿಂಗ್ ಮತ್ತು ಫೀಲ್ಡಿಂಗ್ ಬಗ್ಗೆ ನಾಯಕ ರೋಹಿತ್ ಶರ್ಮಾ ಮೈದಾನದಲ್ಲಿಯೇ ಅಸಮಾಧಾನ ಹೊರಹಾಕಿದ್ದರು. ಗೆಲುವಿನ ಹಂತದಲ್ಲಿ ಭುವನೇಶ‍್ವರ್ ಕುಮಾರ್ ಮತ್ತು ಅರ್ಷದೀಪ್ ಸಿಂಗ್ ಕ್ಯಾಚ್ ಕೈಚೆಲ್ಲಿದ್ದರು. ಅನುಭವಿ ಬೌಲರ್ ಆಗಿದ್ದರೂ ಪಾಕಿಸ್ತಾನ ಮತ್ತು ಶ್ರೀಲಂಕಾ ವಿರುದ್ಧದ ಪಂದ್ಯಗಳಲ್ಲಿ ಭುವನೇಶ್ವರ್ ಕುಮಾರ್ 19ನೇ ಓವರ್‍ನಲ್ಲಿ ಕ್ರಮವಾಗಿ 19 ಮತ್ತು 14 ರನ್ ಬಿಟ್ಟುಕೊಟ್ಟಿದ್ದು ರೋಹಿತ್ ಶರ್ಮಾಗೆ ಸಿಟ್ಟು ತರಿಸಿತ್ತು. ಹೀಗಾಗಿ ಮೈದಾನದಲ್ಲಿಯೇ ಜೋರಾಗಿ ಕಿರುಚಾಡಿದ್ದ ರೋಹಿತ್ ಶರ್ಮಾ ಆಟಗಾರರ ಮೇಲೆ ಕೂಗಾಡಿದ್ದರು.

ಮೈದಾನದಲ್ಲಿ ರೋಹಿತ್ ಶರ್ಮಾ ತೋರಿದ ವರ್ತನೆ ಸರಿಯಲ್ಲವೆಂದು ಪಾಕಿಸ್ತಾನದ ಮಾಜಿ ವೇಗದ ಬೌಲರ್ ಶೋಯೆಬ್ ಅಖ್ತರ್ ಬೇಸರ ವ್ಯಕ್ತಪಡಿಸಿದ್ದಾರೆ. ಭಾರತ ಮತ್ತು ಶ್ರೀಲಂಕಾ ಪಂದ್ಯದ ಫಲಿತಾಂಶವನ್ನು ವಿಶ್ಲೇಷಿಸಿ ಮಾತನಾಡಿರುವ ಅವರು, ‘ನಾಯಕನಾಗಿ ರೋಹಿತ್ ಶರ್ಮಾ ವರ್ತನೆ ಅಹಿತಕರವಾಗಿದೆ. ಸೋತ ಬಳಿಕ ಮೈದಾನದಲ್ಲಿ ಕಿರುಚಾಡುವುದು, ಕೂಗಾಡುವುದರಿಂದ ಯಾವುದೇ ಪ್ರಯೋಜನವಿಲ್ಲ’ವೆಂದು ಹೇಳಿದ್ದಾರೆ.

ಇದನ್ನೂ ಓದಿ: Team India : ಏಷ್ಯಾಕಪ್ ಸೋಲಿನ ನಂತರ, ಟೀಂ ಇಂಡಿಯಾದಲ್ಲಿ ಮಾಡಬೇಕು ಈ 3 ಬದಲಾವಣೆಗಳು!

‘ಭಾರತೀಯ ಪಾಳಯದಲ್ಲಿ ಅನಿಶ್ಚಿತತೆಯಿದೆ. T20 ವಿಶ್ವಕಪ್ ಸಮೀಪಿಸುತ್ತಿರುವ ಹಿನ್ನೆಲೆ ಇದು ಭಾರತ ತಂಡಕ್ಕೆ ಎಚ್ಚರಿಕೆಯ ಗಂಟೆಯಾಗಿದೆ’ ಎಂದು ಶೋಯೆಬ್ ಅಖ್ತರ್ ಅಭಿಪ್ರಾಯಪಟ್ಟಿದ್ದಾರೆ. ‘ನೀವು ಮತ್ತೆ ನಾಯಕನನ್ನು ಬದಲಾಯಿಸಬೇಕಾಗಿಲ್ಲ. ರೋಹಿತ್ ಶರ್ಮಾ ಅಹಿತಕರವಾಗಿ ಕಾಣುತ್ತಿದ್ದಾರೆ, ಅವರು ಸೋಲಿನ ಬೇಸರದಲ್ಲಿ ಕೂಗುತ್ತಿದ್ದಾರೆ ಮತ್ತು ಕಿರುಚುತ್ತಿದ್ದಾರೆ. ಭಾರತೀಯ ಶಿಬಿರದಲ್ಲಿ ಅನಿಶ್ಚಿತತೆ ಇದೆ ನಿಜ. ಮುಂಬರುವ ಟಿ-20 ವಿಶ್ವಕಪ್‍ಗೆ ಹಳೆಯ ತಪ್ಪುಗಳನ್ನು ತಿದ್ದುಕೊಂಡು ಭಾರತ ತಂಡ ಆಡಬೇಕಿದೆ. ಇದೇ ತಪ್ಪುಗಳು ಮರುಕಳಿಸಿದರೆ ಟೀಂ ಇಂಡಿಯಾ ಪ್ರದರ್ಶನದ ಮೇಲೆ ಪರಿಣಾಮ ಬೀರುತ್ತದೆ’ ಎಂದು ಎಚ್ಚರಿಕೆ ನೀಡಿದ್ದಾರೆ.     

ಕನ್ನಡ ಭಾಷೆಯಲ್ಲಿ ಮತ್ತಷ್ಟು ತಾಜಾ ಸುದ್ದಿಗಳನ್ನು ಓದಲು ನಮ್ಮ ಜೀ ಕನ್ನಡ ನ್ಯೂಸ್ ಮೊಬೈಲ್ ಅಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3AClgDd
Apple Link - https://apple.co/3wPoNgr
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು TwitterFacebookYoutube ಲಿಂಕ್ ಗಳ ಮೇಲೆ ಕ್ಲಿಕ್ ಮಾಡಿ.

Trending News