Rohit Sharma: ಟಿ20, ಏಕದಿನದಲ್ಲಿ ಮಾತ್ರವಲ್ಲ… ಟೆಸ್ಟ್’ನಲ್ಲೂ ಸಿಕ್ಸರ್ ಕಿಂಗ್ ರೋಹಿತ್! ಧರ್ಮಶಾಲಾದಲ್ಲಿ ವಿಶ್ವದಾಖಲೆಯೇ ಸೃಷ್ಟಿ

Rohit Sharma: ಧರ್ಮಶಾಲಾ ಟೆಸ್ಟ್ ಪಂದ್ಯದಲ್ಲಿ ರೋಹಿತ್ ತಮ್ಮ ಮೊದಲ ಸಿಕ್ಸರ್ ಬಾರಿಸಿದ ತಕ್ಷಣ, ವಿಶ್ವ ಟೆಸ್ಟ್ ಚಾಂಪಿಯನ್‌ಶಿಪ್ ಇತಿಹಾಸದಲ್ಲಿ 50 ಸಿಕ್ಸರ್‌’ಗಳನ್ನು ಪೂರ್ಣಗೊಳಿಸಿದ ಮೊದಲ ಭಾರತೀಯ ಆಟಗಾರ ಎನಿಸಿಕೊಂಡರು.

Written by - Bhavishya Shetty | Last Updated : Mar 7, 2024, 07:20 PM IST
    • ಪ್ರತಿಯೊಂದು ಮಾದರಿಯಲ್ಲಿ ಅತಿ ಹೆಚ್ಚು ಸಿಕ್ಸರ್‌ ಬಾರಿಸಿದ ಕೀರ್ತಿಗೆ ರೋಹಿತ್ ಶರ್ಮಾ
    • ಧರ್ಮಶಾಲಾ ಟೆಸ್ಟ್ ಪಂದ್ಯದಲ್ಲಿ ರೋಹಿತ್ ತಮ್ಮ ಮೊದಲ ಸಿಕ್ಸರ್
    • WTC ನಲ್ಲಿ ಅತಿ ಹೆಚ್ಚು ಸಿಕ್ಸರ್‌’ಗಳನ್ನು ಬಾರಿಸಿದ ಆಟಗಾರರು
Rohit Sharma: ಟಿ20, ಏಕದಿನದಲ್ಲಿ ಮಾತ್ರವಲ್ಲ… ಟೆಸ್ಟ್’ನಲ್ಲೂ ಸಿಕ್ಸರ್ ಕಿಂಗ್ ರೋಹಿತ್! ಧರ್ಮಶಾಲಾದಲ್ಲಿ ವಿಶ್ವದಾಖಲೆಯೇ ಸೃಷ್ಟಿ title=
Rohit Sharma

Rohit Sharma: ಅಂತರಾಷ್ಟ್ರೀಯ ಕ್ರಿಕೆಟ್‌’ನ ಪ್ರತಿಯೊಂದು ಮಾದರಿಯಲ್ಲಿ ಅತಿ ಹೆಚ್ಚು ಸಿಕ್ಸರ್‌ ಬಾರಿಸಿದ ಕೀರ್ತಿಗೆ ರೋಹಿತ್ ಶರ್ಮಾ ಪಾತ್ರರಾಗಿದ್ದಾರೆ. ಧರ್ಮಶಾಲಾದಲ್ಲಿ ನಡೆಯುತ್ತಿರುವ ಭಾರತ ಮತ್ತು ಇಂಗ್ಲೆಂಡ್ ನಡುವಿನ ಟೆಸ್ಟ್ ಸರಣಿಯ ಕೊನೆಯ ಪಂದ್ಯದಲ್ಲಿ ಸಿಕ್ಸರ್ ಬಾರಿಸುವ ಮೂಲಕ ಈ ದಾಖಲೆ ಮಾಡಿದ್ದಾರೆ.

ಇದನ್ನೂ ಓದಿ: Balakrishna wig : ಬಾಲಯ್ಯ ಹಾಕುವ ʼವಿಗ್‌ʼ ಮುಟ್ಟಿದ್ರೆ..! ಖ್ಯಾತ ನಿರ್ದೇಶಕನ ಶಾಕಿಂಗ್‌ ಹೇಳಿಕೆ

ಧರ್ಮಶಾಲಾ ಟೆಸ್ಟ್ ಪಂದ್ಯದಲ್ಲಿ ರೋಹಿತ್ ತಮ್ಮ ಮೊದಲ ಸಿಕ್ಸರ್ ಬಾರಿಸಿದ ತಕ್ಷಣ, ವಿಶ್ವ ಟೆಸ್ಟ್ ಚಾಂಪಿಯನ್‌ಶಿಪ್ ಇತಿಹಾಸದಲ್ಲಿ 50 ಸಿಕ್ಸರ್‌’ಗಳನ್ನು ಪೂರ್ಣಗೊಳಿಸಿದ ಮೊದಲ ಭಾರತೀಯ ಆಟಗಾರ ಎನಿಸಿಕೊಂಡರು. ಇದಲ್ಲದೆ, ರೋಹಿತ್ ವಿಶ್ವ ಟೆಸ್ಟ್ ಚಾಂಪಿಯನ್‌ಶಿಪ್ ಇತಿಹಾಸದಲ್ಲಿ 50+ ಸಿಕ್ಸರ್‌’ಗಳನ್ನು ಬಾರಿಸಿದ ವಿಶ್ವದ ಎರಡನೇ ಬ್ಯಾಟ್ಸ್‌ಮನ್ ಎಂಬ ಹೆಗ್ಗಳಿಕೆಗೆ ಪಾತ್ರರಾಗಿದ್ದಾರೆ. ಅತಿ ಹೆಚ್ಚು ಸಿಕ್ಸರ್ ಬಾರಿಸಿದ ದಾಖಲೆ ಇಂಗ್ಲೆಂಡ್ ನಾಯಕ ಬೆನ್ ಸ್ಟೋಕ್ಸ್ ಹೆಸರಿನಲ್ಲಿದೆ. ಅವರು ಇದುವರೆಗೆ 78 ಸಿಕ್ಸರ್‌ಗಳನ್ನು ಬಾರಿಸಿದ್ದಾರೆ. ಧರ್ಮಶಾಲಾ ಟೆಸ್ಟ್‌ನಲ್ಲಿ ರೋಹಿತ್ 52 ರನ್‌ಗಳ ಅಜೇಯ ಇನ್ನಿಂಗ್ಸ್‌ನಲ್ಲಿ 2 ಸಿಕ್ಸರ್ ಬಾರಿಸಿದ್ದಾರೆ.

WTC ನಲ್ಲಿ ಅತಿ ಹೆಚ್ಚು ಸಿಕ್ಸರ್‌ ಬಾರಿಸಿದ ಆಟಗಾರರು

  • ಬೆನ್ ಸ್ಟೋಕ್ಸ್ - 78 ಸಿಕ್ಸರ್
  • ರೋಹಿತ್ ಶರ್ಮಾ - 51 ಸಿಕ್ಸರ್
  • ರಿಷಬ್ ಪಂತ್ - 38 ಸಿಕ್ಸರ್
  • ಜಾನಿ ಬೈರ್‌ಸ್ಟೋ - 27 ಸಿಕ್ಸರ್‌ಗಳು
  • ಯಶಸ್ವಿ ಜೈಸ್ವಾಲ್ - 26 ಸಿಕ್ಸರ್
  • ಟ್ರಾವಿಸ್ ಹೆಡ್ - 25 ಸಿಕ್ಸರ್

ಇದನ್ನೂ ಓದಿ: ಬಿಬಿಎಂಪಿ ಪಬ್ಲಿಕ್ ಶಾಲೆಯ ಪ್ರವೇಶಾತಿ ಆರಂಭ… ಅರ್ಜಿ ಸಲ್ಲಿಕೆ ಹೇಗೆ? ಅಗತ್ಯ ದಾಖಲೆಗಳೇನು?

ಅಂತರಾಷ್ಟ್ರೀಯ ಕ್ರಿಕೆಟ್‌’ನಲ್ಲಿ ಅತಿ ಹೆಚ್ಚು ಸಿಕ್ಸರ್‌ಗಳನ್ನು ಬಾರಿಸಿದ ಬ್ಯಾಟ್ಸ್‌ಮನ್ ರೋಹಿತ್. ರೋಹಿತ್ ಇದುವರೆಗೆ ಎಲ್ಲಾ ಮೂರು ಮಾದರಿಗಳಲ್ಲಿ ಒಟ್ಟು 596 ಸಿಕ್ಸರ್‌ಗಳನ್ನು ಬಾರಿಸಿದ್ದಾರೆ. ಇನ್ನು 6 ಸಿಕ್ಸರ್‌ಗಳನ್ನು ಬಾರಿಸುವ ಮೂಲಕ ಅಂತಾರಾಷ್ಟ್ರೀಯ ಕ್ರಿಕೆಟ್‌ನಲ್ಲಿ 600 ಸಿಕ್ಸರ್‌’ಗಳನ್ನು ಪೂರೈಸಿದ ವಿಶ್ವದ ಮೊದಲ ಆಟಗಾರ ಎಂಬ ಹೆಗ್ಗಳಿಕೆಗೆ ಪಾತ್ರರಾಗಲಿದ್ದಾರೆ. ವೆಸ್ಟ್‌ ಇಂಡೀಸ್‌ ಅನುಭವಿ ಬ್ಯಾಟ್ಸ್‌ಮನ್ ಕ್ರಿಸ್ ಗೇಲ್ ಕೂಡ ತಮ್ಮ ಅಂತರಾಷ್ಟ್ರೀಯ ವೃತ್ತಿ ಜೀವನದಲ್ಲಿ ಕೇವಲ 553 ಸಿಕ್ಸರ್‌’ಗಳನ್ನು ಬಾರಿಸಿದ್ದರು. ಭಾರತದ ಮಾಜಿ ನಾಯಕ ಮಹೇಂದ್ರ ಸಿಂಗ್ ಧೋನಿ ತಮ್ಮ ಅಂತರಾಷ್ಟ್ರೀಯ ವೃತ್ತಿಜೀವನದಲ್ಲಿ 359 ಸಿಕ್ಸರ್ಗಳನ್ನು ಬಾರಿಸಿದ್ದರು.

 

ಕನ್ನಡ ಭಾಷೆಯಲ್ಲಿ ಇತ್ತೀಚಿನ ಕರ್ನಾಟಕ, ದೇಶ, ವಿದೇಶ, ಮನರಂಜನೆ, ಶಿಕ್ಷಣ, ಉದ್ಯೋಗ, ಆರೋಗ್ಯ, ಜೀವನಶೈಲಿ, ಆಧ್ಯಾತ್ಮ,  ಕ್ರೀಡೆ, ಕ್ರೈಂ, ವೈರಲ್, ವ್ಯಾಪಾರ, ತಂತ್ರಜ್ಞಾನ ಸುದ್ದಿಗಳನ್ನು ಓದಲು ಈಗಲೇ ನಮ್ಮ ಜೀ ಕನ್ನಡ ನ್ಯೂಸ್ ಮೊಬೈಲ್ ಅಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3AClgDd
Apple Link - https://apple.co/3wPoNgr
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು 
Twitter Link - https://bit.ly/3n6d2R8
Facebook Link - https://bit.ly/3Hhqmcj 
Youtube Link - https://t.co/lCSPNypK2U

Instagram Link -  https://bit.ly/3LyfY2l 
Sharechat Link - https://bit.ly/3LCjokI 
Threads Link-  https://www.threads.net/@zeekannadanews ಲಿಂಕ್ ಗಳ ಮೇಲೆ ಕ್ಲಿಕ್ ಮಾಡಿ

Trending News