ದಕ್ಷಿಣ ಆಫ್ರಿಕಾ ನೆಲದಲ್ಲಿ ಹೊಸ ಇತಿಹಾಸ ಸೃಷ್ಠಿಸಲು ರೋಹಿತ್ ಗೆ ಚಾನ್ಸ್‌ ?

Rohit Shram ::ಭಾರತ ಮತ್ತು ದಕ್ಷಿಣ ಆಫ್ರಿಕಾ ನಡುವಿನ ಮೊದಲ ಪಂದ್ಯ ಡಿಸೆಂಬರ್‌ 26 ರಿಂದ ಆರಂಭವಾಗಲಿದೆ.  ದಕ್ಷಿಣ ಆಫ್ರಿಕಾ ನೆಲದಲ್ಲಿ  ಭಾರತಕ್ಕೆ  ಇದುವೆರಗೂ ಒಂದು ಟೆಸ್ಟ್‌ ಸರಣಿಯಲ್ಲೂ ಜಯ ಸಿಕ್ಕಿಲ್ಲ . ಈ ಸರಣಿಯು ಭಾರಕ್ಕೆ ಆ ಕೆಟ್ಟ ದಾಖಲೆಯನ್ನು ನೆಲ ಸಮಗೊಳಿಸಲು ಸೂಕ್ತ ಅವಕಾಶವಾಗಿದೆ.

Written by - Zee Kannada News Desk | Last Updated : Dec 25, 2023, 07:22 PM IST
  • ಸೆಂಚೂರಿಯನ್‌ ಸ್ಟೇಡಿಯಂನಲ್ಲಿ ಭಾರತ vs ದ.ಆಫ್ರಿಕಾ ಮೊದಲ ಟೆಸ್ಟ್‌ ಸರಣಿ

    ರೋಹಿತ್‌ ಶರ್ಮಾ ನಾಯಕತ್ವದಲ್ಲಿ ಸಜ್ಜಾದ ಟೀಮ್‌ ಇಂಡಿಯಾ
  • 31 ವರ್ಷಗಳಿಂದ ದಕ್ಷಿಣ ಆಫ್ರಿಖಾ ನೆಲದಲ್ಲಿ ಒಂದು ಟೆಸ್ಟ್‌ ಸರಣಿ ಗೆಲ್ಲದ ಭಾರತ
ದಕ್ಷಿಣ ಆಫ್ರಿಕಾ ನೆಲದಲ್ಲಿ ಹೊಸ ಇತಿಹಾಸ ಸೃಷ್ಠಿಸಲು ರೋಹಿತ್ ಗೆ ಚಾನ್ಸ್‌ ? title=

INd vs SA test series : ಭಾರತ ತಂಡವು ದಕ್ಷಿಣ ಆಫ್ರಿಕಾ ಪ್ರವಾಸ ಕೈಗೊಂಡಿದ್ದು, ದ. ಆಫ್ರಿಕಾ ವಿರುದ್ದ ಟಿ20 ಮತ್ತ ಏಕದಿನ ಎರಡು ಸರಣಿಗಳನ್ನು ಆಡಿ ಮುಗಿಸಿದೆ. ಈಗ 2 ಪಂದ್ಯಗಳ ಟೆಸ್ಟ್‌‌ ಸರಣಿ ಮಾತ್ರ ಬಾಕಿ ಇದ್ದು,ಅದು ಮಂಗಳವಾರ(ಡಿಸೆಂಬರ್‌26)ರಿಂದ ಆರಂಭಗೊಳ್ಳಲಿದೆ. ಸೆಂಚುರಿಯನ್‌ ಸ್ಟೇಡಿಯಂನಲ್ಲಿ ಮೊದಲ ಟೆಸ್ಟ್‌ ಪಂದ್ಯ ನಡೆಯಲಿದ್ದು ಕ್ಷಣಗಣನೆ ಆರಂಭವಾಗಿದೆ. ದ. ಆಫ್ರಿಕಾ ವಿರುದ್ದ ಜಯಸಾಧಸಿ ಟಿ20 ಸರಣಿಯನ್ನು ತಮ್ಮ ವಶಕ್ಕೆ ಪಡೆದ ಭಾರತಕ್ಕೆ ಟೆಸ್ಟ್‌ ಸರಣಿಯು ದೊಡ್ಡ ಸವಾಲಾಗಿದೆ. ಈ ಸರಣಿಯಲ್ಲಿ ಭಾರತ ಒಂದು ವೇಳೆ ಗೆದ್ದರೆ, ಇಲ್ಲಿವೆರಗೂ ಭಾರತದ ತಂಡ ಮಾಡದ ಹೊಸದೊಂದು ದಾಖಲೆಯನ್ನು ಮಾಡಲಿದೆ.

ಟೀಂ ಇಂಡಿಯಾವು ಇಲ್ಲಿವೆರಗೂ ದಕ್ಷಿಣ ಆಫ್ರಿಕಾ ನೆಲದಲ್ಲಿ ಒಂದು ಟೆಸ್ಟ್‌ ಸರಣಿಯನ್ನು ಗೆದ್ದಿಲ್ಲ. ಒಂದು ವೇಳೆ ಈ ಸರಣಿಯನ್ನು ರೋಹಿತ್‌ ಶರ್ಮಾ ಅವರು ತಮ್ಮ ನಾಯಕತ್ವದಲ್ಲಿ ಗೆದ್ದು ಕೊಂಡರೆ 31 ವರ್ಷಗಳ ದಾಖಲೆಯ ನಂತರ ಹೊಸ ದಾಖಲೆಯೇ ಆಗಲಿದೆ. ಭಾರತವು  ದಕ್ಷಿಣ ಆಫ್ರಿಕಾ ಪ್ರವಾಸದಲ್ಲಿ ಆಡಿದ 8 ಪಂದ್ಯಗಳಲ್ಲಿ 7 ಪಂದ್ಯಗಳನ್ನು ಸೋತಿದೆ. ಕೇವಲ ಒಂದು ಪಂದ್ಯದಲ್ಲಿ ಜಯಗಳಿಸಿದ ಭಾರತ ಇನ್ನು ಗೆಲುವಿನ ರುಚಿ ಸವಿಯಲಾಗಿಲ್ಲ. ಈ ಸರೆಣಿಯನ್ನು ಗೆದ್ದು ಹೊಸ ಅಧ್ಯಾಯಕ್ಕೆ ಮುನ್ನುಡಿ ಹಾಡುವುದಾಗಿ ಸ್ವತ: ನಾಯಕ ರೋಹಿತ್‌ ಶರ್ಮಾ ಅವರೇ ತಿಳಿಸಿದ್ಧಾರೆ.

ಇದನ್ನು ಓದಿ-ಯುವ ಆಟಾಗರನಿಂದ ಶತಕ ನಿರೀಕ್ಷೆ ಬೇಡ... ಗೌತಮ್ ಗಂಬೀರ್‌ ಹೇಳಿಕೆ !

ದ.ಆಫ್ರಿಕಾ ವಿರುದ್ದ ಟೆಸ್ಟ್‌ ಸರಣಿ ಬಗ್ಗೆ ಮಾತನಾಡಿದ ತಂಡದ ನಾಯಕ "ನಾವು ಇಲ್ಲಿ ಎಂದಿಗೂ ಸರಣಿಯನ್ನು ಗೆದ್ದಿಲ್ಲ ಮತ್ತು ನಾವು ಅದನ್ನು ಇಲ್ಲಿ ಮಾಡಿದರೆ ಅದು ದೊಡ್ಡ ವಿಷಯವಾಗುತ್ತದೆ. ಇದು ವಿಶ್ವಕಪ್ ಸೋಲಿನ ನೋವನ್ನು ಹೋಗಲಾಡಿಸಲು ಸಾಧ್ಯವಾಗುತ್ತದೆಯೇ ಎಂದು ನನಗೆ ತಿಳಿದಿಲ್ಲ. ನಾವು ಅದನ್ನು ಸಾಧಿಸಲು ಸಾಧ್ಯವಾದರೆ ಆಗ ಅದು ಒಳ್ಳೆಯದು. ಇತ್ನಿ ಮೆಹನಾತ್ ಕಿ ಹೈ ತೋ ಕುಚ್ ತೋ ಬಂತಾ ಹೈ" ಎಂದು ಹೇಳಿದರು.

ಮೊದಲಿನಿಂದ ದಕ್ಷಿಣ ಆಫ್ರಿಕಾ ತಂಡವು ಟೆಸ್ಟ್‌ ಮಾದರಿಯ ಕ್ರಿಕೇಟ್‌ನಲ್ಲಿ ತಮ್ಮ ತವರಿನಲ್ಲಿ ಬಲಿಷ್ಠವಾಗಿ ಕಾಣಿಸಿ ಕೊಂಡುಬಂದಿದೆ. ಅವರನ್ನು ಅವರ ನೆಲದಲ್ಲೆ ಸೋಲಿಸುವುದು ಭಾರತಕ್ಕೆ ಅತೀ ದೊಡ್ಡ ಸವಾಲಾಗಿ ಪರಿಣಮಿಸಿದೆ. ಅಷ್ಟೇ ಅಲ್ಲದೇ ದ.ಕ್ಷಿಣ ಆಫ್ರಿಕಾದ ಮೈದಾನಗಳು ಹೆಚ್ಚಿನ ಬೌನ್ಸರ್‌ಗಳಿಗೆ ಹೆಸರುವಾಸಿಯಾಗಿವೆ. ಇಲ್ಲಿನ ಪಿಚ್‌ಗಳಲ್ಲಿ ದ.ಆಫ್ರಿಕಾ ಬೌಲರ್ಸ್‌ಗಳನ್ನು ಎದುರಿಸುವುದು ಭಾರತದ ಬ್ಯಾಟ್‌ಮನ್ಸ್‌ಗಳಿಗೊಂತು ದೊಡ್ಡ ತಲೆ ನೂವಾಗಿ ಪರಣಮಿಸುತ್ತದೆ.

ಇದನ್ನು ಓದಿ-ಬ್ಯಾಟಿಂಗ್‌ನಲ್ಲಿ ನಂ.1, ಫಿಲ್ಡಿಂಗ್‌ ನಲ್ಲೂ ನಂ.1 ! 2023ರಲ್ಲಿ ಅತೀ ಹೆಚ್ಚು ಕ್ಯಾಚ್‌ ಹಿಡಿದ ದಾಖಲೆ ಭಾರತದ ಈ ಆಟಗರಾನ ಪಾಲಾಯತ್ತು.

ಭಾರತ ತಂಡಕ್ಕೆ ಮೊಹಮ್ಮದ್‌ ಶಮಿ ಅವರ ಇಂಜುರಿಯು ಮತ್ತೊಂದು ಸಮಸ್ಯೆಯಾಗಿದೆ. ವಿಶ್ವಕಪ್‌ನಲ್ಲಿ ಉತ್ತಮ ಬೌಲಿಂಗ್‌ ಪ್ರದರ್ಶನ ನೀಡಿದ್ದರು, ಇವರು ಪಾದದ ಗಾಯದ ಸಮಸ್ಯೆ ಇಂದ ಈಗ ಟೆಸ್ಟ್‌ ಸರಣಿಯಿಂದ ಹೊರಗುಳಿಯಲಿದ್ಧಾರೆ. ಒಂದು ವೇಳೆ ವೆಘಿ ಮೊಹಮ್ಮದ್‌ ಶಮಿ ತಂಡದಲ್ಲಿ ಆಡಿದ್ದರೆ  ಬೌಲಿಂಗ್‌ ವಿಭಾಗದಲ್ಲಿ ಹೆಚ್ಚು ಬಲ ಬರುತತ್ತು. ಇದೇನೆ ಇದ್ದರು ಭಾರತ ತಂಡವು ದ.ಆಫ್ರಿಕಾ ವಿರುಧ್ದ ಸರಣಿಯನ್ನು ಗೆಲ್ಲುವ ಉತ್ಸಾಹದಲ್ಲಿದೆ.

ಭಾರತ ತಂಡ ಪ್ಲೇಯಿಂಗ್‌-11

ಭಾರತ: ರೋಹಿತ್ ಶರ್ಮಾ (c), ಯಶಸ್ವಿ ಜೈಸ್ವಾಲ್, ಶುಭಮನ್ ಗಿಲ್, ವಿರಾಟ್ ಕೊಹ್ಲಿ, ಶ್ರೇಯಸ್ ಅಯ್ಯರ್, ಕೆಎಲ್ ರಾಹುಲ್ (WK), ರವೀಂದ್ರ ಜಡೇಜಾ, ರವಿಚಂದ್ರನ್ ಅಶ್ವಿನ್, ಜಸ್ಪ್ರೀತ್ ಬುಮ್ರಾ, ಪ್ರಸಿದ್ಧ್ ಕೃಷ್ಣ ಮತ್ತು ಮೊಹಮ್ಮದ್ ಸಿರಾಜ್
 

 

ಕನ್ನಡ ಭಾಷೆಯಲ್ಲಿ ಇತ್ತೀಚಿನ ಕರ್ನಾಟಕ, ದೇಶ, ವಿದೇಶ, ಮನರಂಜನೆ, ಶಿಕ್ಷಣ, ಉದ್ಯೋಗ, ಆರೋಗ್ಯ, ಜೀವನಶೈಲಿ, ಆಧ್ಯಾತ್ಮ,  ಕ್ರೀಡೆ, ಕ್ರೈಂ, ವೈರಲ್, ವ್ಯಾಪಾರ, ತಂತ್ರಜ್ಞಾನ ಸುದ್ದಿಗಳನ್ನು ಓದಲು ಈಗಲೇ ನಮ್ಮ ಜೀ ಕನ್ನಡ ನ್ಯೂಸ್ ಮೊಬೈಲ್ ಅಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3AClgDd
Apple Link - https://apple.co/3wPoNgr
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು 
Twitter Link - https://bit.ly/3n6d2R8
Facebook Link - https://bit.ly/3Hhqmcj 
Youtube Link - https://www.youtube.com/live/RNn4I7iIaYE?si=3G4W5dh0oCdFnu-T

Instagram Link -  https://bit.ly/3LyfY2l 
Sharechat Link - https://bit.ly/3LCjokI 
Threads Link-  https://www.threads.net/@zeekannadanews 
WhatsApp Channel- bit.ly/46lENGm ಲಿಂಕ್ ಗಳ ಮೇಲೆ ಕ್ಲಿಕ್ ಮಾಡಿ
.

 

Trending News