Rohit Sharma: ಟಿ20 ಕ್ರಿಕೆಟ್’ನಲ್ಲಿ ರೋಹಿತ್ ಶರ್ಮಾ ವಿಶ್ವದಾಖಲೆ: ಈ ಮೈಲಿಗಲ್ಲು ತಲುಪಿದ ಜಗತ್ತಿನ ಮೊದಲ ಕ್ರಿಕೆಟಿಗ ಇವರೇ

IND vs AFG, 2nd T20I: 150 ಅಂತಾರಾಷ್ಟ್ರೀಯ ಟಿ20 ಪಂದ್ಯಗಳನ್ನು ಆಡಿದ ವಿಶ್ವದ ಮೊದಲ ಕ್ರಿಕೆಟಿಗ ಎಂಬ ಹೆಗ್ಗಳಿಕೆಗೆ ಪಾತ್ರರಾಗಿದ್ದಾರೆ. ಈ ಪಂದ್ಯದಲ್ಲಿ ಶುಭ್‌ಮನ್ ಗಿಲ್ ಮತ್ತು ತಿಲಕ್ ವರ್ಮಾ ಬದಲಿಗೆ ವಿರಾಟ್ ಕೊಹ್ಲಿ ಮತ್ತು ಯಶಸ್ವಿ ಜೈಸ್ವಾಲ್ ಅವರನ್ನು ಪ್ಲೇಯಿಂಗ್ -11 ರಲ್ಲಿ ಸೇರಿಸಲಾಗಿತ್ತು.

Written by - Bhavishya Shetty | Last Updated : Jan 14, 2024, 11:00 PM IST
    • ರೋಹಿತ್ ಶರ್ಮಾ ಅಂತಾರಾಷ್ಟ್ರೀಯ ಟಿ20 ಕ್ರಿಕೆಟ್‌’ನಲ್ಲಿ ಅತಿ ಹೆಚ್ಚು ಪಂದ್ಯ ಆಡಿದ ಆಟಗಾರ
    • 150 ಅಂತಾರಾಷ್ಟ್ರೀಯ ಟಿ20 ಪಂದ್ಯಗಳನ್ನು ಆಡಿದ ವಿಶ್ವದ ಮೊದಲ ಕ್ರಿಕೆಟಿಗ
    • ಅತಿ ಹೆಚ್ಚು T20 ಅಂತರಾಷ್ಟ್ರೀಯ ಪಂದ್ಯಗಳನ್ನು ಆಡಿದ ಟಾಪ್ 5 ಕ್ರಿಕೆಟಿಗರು
Rohit Sharma: ಟಿ20 ಕ್ರಿಕೆಟ್’ನಲ್ಲಿ ರೋಹಿತ್ ಶರ್ಮಾ ವಿಶ್ವದಾಖಲೆ: ಈ ಮೈಲಿಗಲ್ಲು ತಲುಪಿದ ಜಗತ್ತಿನ ಮೊದಲ ಕ್ರಿಕೆಟಿಗ ಇವರೇ title=
Rohit Sharma

IND vs AFG, 2nd T20I: T20 ಸರಣಿಯ ಎರಡನೇ ಪಂದ್ಯವು ಇಂದೋರ್‌’ನ ಹೋಲ್ಕರ್ ಕ್ರಿಕೆಟ್ ಸ್ಟೇಡಿಯಂನಲ್ಲಿ ಭಾರತ ಮತ್ತು ಅಫ್ಘಾನಿಸ್ತಾನ ನಡುವೆ ನಡೆಯಿತು. ಈ ಪಂದ್ಯದಲ್ಲಿ ರೋಹಿತ್ ಶರ್ಮಾ ಟಾಸ್ ಗೆದ್ದು ಬ್ಯಾಟಿಂಗ್ ಮಾಡಲು ಅಫ್ಘನ್ ತಂಡವನ್ನು ಆಹ್ವಾನಿಸಿದರು. ಈ ಪಂದ್ಯದಲ್ಲಿ ಆಡುವ ಮೂಲಕ ರೋಹಿತ್ ಶರ್ಮಾ ಅಂತಾರಾಷ್ಟ್ರೀಯ ಟಿ20 ಕ್ರಿಕೆಟ್‌’ನಲ್ಲಿ ದೊಡ್ಡ ದಾಖಲೆ ಬರೆದಿದ್ದಾರೆ.

ಇದನ್ನೂ ಓದಿ: BCCIಯನ್ನು ತಾಳಕ್ಕೆ ತಕ್ಕಂತೆ ಕುಣಿಸುತ್ತಿದ್ದಾರಂತೆ ಈ 3 ಆಟಗಾರರು..! ಪ್ರಮುಖರ ವಿರುದ್ಧವೇ ಗಂಭೀರ

150 ಅಂತಾರಾಷ್ಟ್ರೀಯ ಟಿ20 ಪಂದ್ಯಗಳನ್ನು ಆಡಿದ ವಿಶ್ವದ ಮೊದಲ ಕ್ರಿಕೆಟಿಗ ಎಂಬ ಹೆಗ್ಗಳಿಕೆಗೆ ಪಾತ್ರರಾಗಿದ್ದಾರೆ. ಈ ಪಂದ್ಯದಲ್ಲಿ ಶುಭ್‌ಮನ್ ಗಿಲ್ ಮತ್ತು ತಿಲಕ್ ವರ್ಮಾ ಬದಲಿಗೆ ವಿರಾಟ್ ಕೊಹ್ಲಿ ಮತ್ತು ಯಶಸ್ವಿ ಜೈಸ್ವಾಲ್ ಅವರನ್ನು ಪ್ಲೇಯಿಂಗ್ -11 ರಲ್ಲಿ ಸೇರಿಸಲಾಗಿತ್ತು.

ರೋಹಿತ್ ಶರ್ಮಾ ಅಂತಾರಾಷ್ಟ್ರೀಯ ಟಿ20 ಕ್ರಿಕೆಟ್‌’ನಲ್ಲಿ ಅತಿ ಹೆಚ್ಚು ಪಂದ್ಯಗಳನ್ನು ಆಡಿದ ಆಟಗಾರ. ಅಫ್ಘಾನಿಸ್ತಾನ ವಿರುದ್ಧದ ಎರಡನೇ ಪಂದ್ಯದಲ್ಲಿ ಮೈದಾನಕ್ಕಿಳಿದ ಕೂಡಲೇ ಈ ಮಾದರಿಯಲ್ಲಿ 150 ಅಥವಾ ಅದಕ್ಕಿಂತ ಹೆಚ್ಚು ಪಂದ್ಯಗಳನ್ನು ಆಡಿದ ವಿಶ್ವದ ಮೊದಲ ಕ್ರಿಕೆಟಿಗ ಎಂಬ ಹೆಗ್ಗಳಿಕೆಗೆ ಪಾತ್ರರಾದರು. ಇದು ಅವರ 150ನೇ ಟಿ20 ಅಂತಾರಾಷ್ಟ್ರೀಯ ಪಂದ್ಯವಾಗಿತ್ತು. ಇಲ್ಲಿಯವರೆಗೂ ಯಾವುದೇ ಕ್ರಿಕೆಟಿಗರು ಈ ಮೈಲಿಗಲ್ಲನ್ನು ತಲುಪಲು ಸಾಧ್ಯವಾಗಿಲ್ಲ.

ಅತಿ ಹೆಚ್ಚು T20 ಅಂತರಾಷ್ಟ್ರೀಯ ಪಂದ್ಯಗಳನ್ನು ಆಡಿದ ಟಾಪ್ 5 ಕ್ರಿಕೆಟಿಗರು

  • ರೋಹಿತ್ ಶರ್ಮಾ - 150 ಪಂದ್ಯಗಳು
  • ಪಾಲ್ ಸ್ಟರ್ಲಿಂಗ್ - 134 ಪಂದ್ಯಗಳು
  • ಜಾರ್ಜ್ ಹೆನ್ರಿ ಡಾಕ್ರೆಲ್ - 128 ಪಂದ್ಯಗಳು
  • ಶೋಯೆಬ್ ಮಲಿಕ್ - 124 ಪಂದ್ಯಗಳು
  • ಮಾರ್ಟಿನ್ ಗಪ್ಟಿಲ್ - 122 ಪಂದ್ಯಗಳು

ರೋಹಿತ್ ಶರ್ಮಾ ಇದುವರೆಗೆ 141 ಟಿ20 ಇನ್ನಿಂಗ್ಸ್‌’ಗಳಲ್ಲಿ 3853 ರನ್ ಗಳಿಸಿದ್ದಾರೆ. ಟಿ20 ಅಂತಾರಾಷ್ಟ್ರೀಯ ಕ್ರಿಕೆಟ್‌’ನಲ್ಲಿ ಅತಿ ಹೆಚ್ಚು ರನ್ ಗಳಿಸಿದ ವಿಶ್ವದ ಎರಡನೇ ಆಟಗಾರ. ಈ ಮಾದರಿಯಲ್ಲಿ ಅವರು ನಾಲ್ಕು ಶತಕಗಳು ಮತ್ತು 29 ಅರ್ಧ ಶತಕಗಳನ್ನು ಹೊಂದಿದ್ದಾರೆ. ಜೊತೆಗೆ ಈ ಮಾದರಿಯಲ್ಲಿ ಅತಿ ಹೆಚ್ಚು ಶತಕಗಳನ್ನು ಬಾರಿಸಿದ ವಿಶ್ವದ ಬ್ಯಾಟ್ಸ್‌ಮನ್ ಕೂಡ ಇವರೇ.

ಇದನ್ನೂ ಓದಿ: “ಭವ್ಯ ಮಂದಿರ ಸಿದ್ಧ, ನಮ್ಮ ರಾಜ ಶ್ರೀರಾಮನನನ್ನು ನೋಡಲು ಕಾತುರನಾಗಿದ್ದೇನೆ”- ಪಾಕ್ ಕ್ರಿಕೆಟಿಗ

 

ಕನ್ನಡ ಭಾಷೆಯಲ್ಲಿ ಇತ್ತೀಚಿನ ಕರ್ನಾಟಕ, ದೇಶ, ವಿದೇಶ, ಮನರಂಜನೆ, ಶಿಕ್ಷಣ, ಉದ್ಯೋಗ, ಆರೋಗ್ಯ, ಜೀವನಶೈಲಿ, ಆಧ್ಯಾತ್ಮ,  ಕ್ರೀಡೆ, ಕ್ರೈಂ, ವೈರಲ್, ವ್ಯಾಪಾರ, ತಂತ್ರಜ್ಞಾನ ಸುದ್ದಿಗಳನ್ನು ಓದಲು ಈಗಲೇ ನಮ್ಮ ಜೀ ಕನ್ನಡ ನ್ಯೂಸ್ ಮೊಬೈಲ್ ಅಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3AClgDd
Apple Link - https://apple.co/3wPoNgr
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು 
Twitter Link - https://bit.ly/3n6d2R8
Facebook Link - https://bit.ly/3Hhqmcj 
Youtube Link - https://www.youtube.com/live/RNn4I7iIaYE?si=3G4W5dh0oCdFnu-T

Instagram Link -  https://bit.ly/3LyfY2l 
Sharechat Link - https://bit.ly/3LCjokI 
Threads Link-  https://www.threads.net/@zeekannadanews 
WhatsApp Channel- bit.ly/46lENGm ಲಿಂಕ್ ಗಳ ಮೇಲೆ ಕ್ಲಿಕ್ ಮಾಡಿ.

Ram MandirDanish Kaneriacricket

Trending News