ಸಚಿನ್-ಸೆಹ್ವಾಗ್ ದಾಖಲೆ ಅಳಿಸಿ ಹಾಕಿದ ರೋಹಿತ್-ಧವನ್ ಜೋಡಿ!

ರೋಹಿತ್ ಶರ್ಮಾ ಮತ್ತು ಶಿಖರ್ ಧವನ್ ಜೋಡಿ ನ್ಯೂಝಿಲೆಂಡ್ ತಂಡದ ವಿರುದ್ದ ನೂತನ ದಾಖಲೆ ಮಾಡಿದ್ದಾರೆ. ಮೌಂಟ್ ಮೌಂಗಾನುಯಿ ಯಲ್ಲಿ ನಡೆಯುತ್ತಿರುವ ಎರಡನೇ ಏಕದಿನ ಅಂತಾರಾಷ್ಟ್ರೀಯ ಪಂದ್ಯದ ವೇಳೆ ಭಾರತಕ್ಕೆ 154 ರನ್ ಗಳ ಜೊತೆಯಾಟದ ಮೂಲಕ ಇಬ್ಬರು ಆಟಗಾರರು ಭಾರತ ತಂಡವು ಬೃಹತ್ ಮೊತ್ತ ಗಳಿಸುವಲ್ಲಿ ನೆರವಾದರು.

Last Updated : Jan 26, 2019, 12:32 PM IST
ಸಚಿನ್-ಸೆಹ್ವಾಗ್ ದಾಖಲೆ ಅಳಿಸಿ ಹಾಕಿದ ರೋಹಿತ್-ಧವನ್ ಜೋಡಿ! title=
file photo

ನವದೆಹಲಿ: ರೋಹಿತ್ ಶರ್ಮಾ ಮತ್ತು ಶಿಖರ್ ಧವನ್ ಜೋಡಿ ನ್ಯೂಝಿಲೆಂಡ್ ತಂಡದ ವಿರುದ್ದ ನೂತನ ದಾಖಲೆ ಮಾಡಿದ್ದಾರೆ. ಮೌಂಟ್ ಮೌಂಗಾನುಯಿ ಯಲ್ಲಿ ನಡೆಯುತ್ತಿರುವ ಎರಡನೇ ಏಕದಿನ ಅಂತಾರಾಷ್ಟ್ರೀಯ ಪಂದ್ಯದ ವೇಳೆ ಭಾರತಕ್ಕೆ 154 ರನ್ ಗಳ ಜೊತೆಯಾಟದ ಮೂಲಕ ಇಬ್ಬರು ಆಟಗಾರರು ಭಾರತ ತಂಡವು ಬೃಹತ್ ಮೊತ್ತ ಗಳಿಸುವಲ್ಲಿ ನೆರವಾದರು.

ಇದೇ ವೇಳೆ 13 ಬಾರಿ ಶತಕದ ಜೊತೆಯಾಟವಾಡಿದ್ದ ಸಚಿನ್-ಸೆಹ್ವಾಗ್ ಜೋಡಿಯ ದಾಖಲೆಯನ್ನು ಅಳಿಸಿಹಾಕಿದರು.ರೋಹಿತ್ ಶರ್ಮಾ 96 ಎಸೆತಗಳಲ್ಲಿ 87 ರನ್ ಗಳಿಸಿದರೆ ಧವನ್ 67 ಎಸೆತಗಳಲ್ಲಿ 66 ರನ್ ಗಳಿಸಿದರು.ಭಾರತ ತಂಡದ ನಾಯಕ ವಿರಾಟ್ ಕೊಹ್ಲಿ 43 ರನ್ ಗಳಿಸಿ ವಿಕೆಟ್ ಒಪ್ಪಿಸಿದರು.

ಭಾರತ ತಂಡವು 50 ಓವರ್ ಗಳಲ್ಲಿ ನಾಲ್ಕು ವಿಕೆಟ್ ನಷ್ಟಕ್ಕೆ 324 ರನ್ ಗಳ ಬೃಹತ್ ಮೊತ್ತವನ್ನು ಗಳಿಸಿದೆ. ಇನ್ನೊಂದೆಡೆ ಬ್ಯಾಟಿಂಗ್ ಆರಂಭಿಸಿರುವ ಕಿವೀಸ್ ತಂಡವು ಎಂಟು ಓವರ್ ಗಳಲ್ಲಿ ಎರಡು ವಿಕೆಟ್ ನಷ್ಟಕ್ಕೆ 53 ರನ್ ಗಳಿಸಿದೆ. 

ಈಗಾಗಲೇ ಸರಣಿಯಲ್ಲಿ ಮೊದಲ ಪಂದ್ಯವನ್ನು ಗೆದ್ದು 1-0 ಮುನ್ನಡೆ ಸಾಧಿಸಿರುವ ಭಾರತವು ಎರಡನೇ ಪಂದ್ಯವನ್ನು ಸಹಿತ ಗೆಲ್ಲುವ ಹಾದಿಯಲ್ಲಿದೆ.

 

Trending News