IND vs SL: ವಿಕೆಟ್‌ ಪಡೆದ ಖುಷಿಯಲ್ಲಿ ಬ್ಯಾಟ್ಸ್‌ಮನ್‌ಗೆ ಛೀಮಾರಿ ಹಾಕಿದ ರಿಯಾನ್ ಪರಾಗ್..! ವಿಡಿಯೋ ವೈರಲ್‌

Riyan Parag: ಟೀಂ ಇಂಡಿಯಾದ ಯುವ ಆಲ್‌ರೌಂಡರ್ ರಿಯಾನ್ ಪರಾಗ್ ಮತ್ತೊಮ್ಮೆ ಸಾಮಾಜಿಕ ಜಾಲತಾಣಗಳಲ್ಲಿ ಚರ್ಚೆಗೆ ಗ್ರಾಸವಾಗಿದ್ದಾರೆ. ಮೂರು ಟಿ20 ಸರಣಿಯಲ್ಲಿ ಶ್ರೀಲಂಕಾ ವಿರುದ್ಧದ ಮೊದಲ ಟಿ20ಯಲ್ಲಿ ಬ್ಯಾಟಿಂಗ್ ವೈಫಲ್ಯ ಕಂಡಿದ್ದ ರಯಾನ್ ಪರಾಗ್ ಬೌಲಿಂಗ್ ನಲ್ಲಿ ಅಸಾಮಾನ್ಯ ಪ್ರದರ್ಶನ ತೋರಿದ್ದರು. ರಿಯಾನ್ ಪರಾಗ್ 8 ಎಸೆತಗಳನ್ನು ಎಸೆದು ಮೂರು ವಿಕೆಟ್ ಪಡೆದರು. 

Last Updated : Jul 28, 2024, 03:07 PM IST
  • ರಿಯಾನ್ ಪರಾಗ್ 8 ಎಸೆತಗಳನ್ನು ಎಸೆದು ಮೂರು ವಿಕೆಟ್ ಪಡೆದರು.
  • 17ನೇ ಓವರ್ ನಲ್ಲಿ ಬೌಲಿಂಗ್‌ ಮಾಡಿದ ರಯಾನ್ ಪರಾಗ್ ಕಮಿಂದು ಮೆಂಡಿಸ್ ಅವರನ್ನು ಕ್ಲೀನ್ ಬೌಲ್ಡ್ ಮಾಡಿದರು.
  • ರಿಯಾನ್ ಪರಾಗ್ ಅವರ ಈ ನಡೆಯ ಬಗ್ಗೆ ಸಾಮಾಜಿಕ ಮಾಧ್ಯಮದಲ್ಲಿ ವಿಭಿನ್ನ ಪ್ರತಿಕ್ರಿಯೆ ಕೇಳಿ ಬರುತ್ತಿದೆ.
IND vs SL: ವಿಕೆಟ್‌ ಪಡೆದ ಖುಷಿಯಲ್ಲಿ ಬ್ಯಾಟ್ಸ್‌ಮನ್‌ಗೆ ಛೀಮಾರಿ ಹಾಕಿದ ರಿಯಾನ್ ಪರಾಗ್..! ವಿಡಿಯೋ ವೈರಲ್‌  title=

Riyan Parag: ಟೀಂ ಇಂಡಿಯಾದ ಯುವ ಆಲ್‌ರೌಂಡರ್ ರಿಯಾನ್ ಪರಾಗ್ ಮತ್ತೊಮ್ಮೆ ಸಾಮಾಜಿಕ ಜಾಲತಾಣಗಳಲ್ಲಿ ಚರ್ಚೆಗೆ ಗ್ರಾಸವಾಗಿದ್ದಾರೆ. ಮೂರು ಟಿ20 ಸರಣಿಯಲ್ಲಿ ಶ್ರೀಲಂಕಾ ವಿರುದ್ಧದ ಮೊದಲ ಟಿ20ಯಲ್ಲಿ ಬ್ಯಾಟಿಂಗ್ ವೈಫಲ್ಯ ಕಂಡಿದ್ದ ರಯಾನ್ ಪರಾಗ್ ಬೌಲಿಂಗ್ ನಲ್ಲಿ ಅಸಾಮಾನ್ಯ ಪ್ರದರ್ಶನ ತೋರಿದ್ದರು. ರಿಯಾನ್ ಪರಾಗ್ 8 ಎಸೆತಗಳನ್ನು ಎಸೆದು ಮೂರು ವಿಕೆಟ್ ಪಡೆದರು. 

17ನೇ ಓವರ್ ನಲ್ಲಿ ಬೌಲಿಂಗ್‌ ಮಾಡಿದ ರಿಯಾನ್ ಪರಾಗ್ ಕಮಿಂದು ಮೆಂಡಿಸ್ ಅವರನ್ನು ಕ್ಲೀನ್ ಬೌಲ್ಡ್ ಮಾಡಿದರು. ಅಂತಾರಾಷ್ಟ್ರೀಯ ಟಿ20ಯಲ್ಲಿ ರಯಾನ್ ಪರಾಗ್ ಅವರ ಮೊದಲ ವಿಕೆಟ್ ಇದಾಗಿದೆ. ಅದರೊಂದಿಗೆ ಕೊಂಚ ಆಕ್ರಮಣಕಾರಿಯಾಗಿ ಸಂಭ್ರಮಿಸಿ, ಜೋರಾಗಿ ಕಿರುಚುತ್ತಾ ಬ್ಯಾಟರ್‌ಗೆ ಛೀಮಾರಿ ಹಾಕಿದರು. ಇದಕ್ಕೆ ಸಂಬಂಧಿಸಿದ ವಿಡಿಯೋ ಇದೀಗ ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿದೆ.

ಇದನ್ನೂ ಓದಿ: IND vs SL: ಫೈನಲ್‌ನಲ್ಲಿ ವನಿತೆಯರ ಹೋರಾಟ..ಶ್ರೀಲಂಕಾದ ವಿರುದ್ಧ ಇಂದು ಎರಡು ಪಂದ್ಯಗಳ ರೋಚಕ ಕಾದಾಟ

ರಿಯಾನ್ ಪರಾಗ್ ಅವರ ಈ ನಡೆಯ ಬಗ್ಗೆ ಸಾಮಾಜಿಕ ಮಾಧ್ಯಮದಲ್ಲಿ ವಿಭಿನ್ನ ಪ್ರತಿಕ್ರಿಯೆ ಕೇಳಿ ಬರುತ್ತಿದೆ. ಮೊದಲ ವಿಕೆಟ್ ಪಡೆದಾಗ ಸಂಭ್ರಮಿಸುವುದು ಸಹಜ ಎಂದು ಕೆಲ ಅಭಿಮಾನಿಗಳು ಹೇಳಿದರೆ, ಇನ್ನು ಕೆಲವರು ಅಂತಹ ಉತ್ಸಾಹ ವ್ಯರ್ಥ ಎಂದು ಕಮೆಂಟ್ ಮಾಡುತ್ತಿದ್ದಾರೆ. ಬ್ಯಾಟರ್ ಅನ್ನು ನಿಂದಿಸುವುದರಲ್ಲಿ ಯಾವುದೇ ಅರ್ಥವಿಲ್ಲ ಮತ್ತು ರಿಯಾನ್ ಪರಾಗ್ ಅವರು ಅತಿಯಾಗಿ ಪ್ರತಿಕ್ರಿಯಿಸಿದ್ದಾರೆ ಎಂದು ಕೋಪಗೊಂಡಿದ್ದಾರೆ.

ಈ ಪಂದ್ಯವನ್ನು ಭಾರತ 43 ರನ್‌ಗಳಿಂದ ಗೆದ್ದು ಮೂರು ಟಿ20 ಸರಣಿಯಲ್ಲಿ 1-0 ಮುನ್ನಡೆ ಕಾಯ್ದುಕೊಂಡಿದೆ. ಈ ಪಂದ್ಯದಲ್ಲಿ ಮೊದಲು ಬ್ಯಾಟ್ ಮಾಡಿದ ಭಾರತ ನಿಗದಿತ 20 ಓವರ್‌ಗಳಲ್ಲಿ 7 ವಿಕೆಟ್‌ಗೆ 213 ರನ್‌ಗಳ ಬೃಹತ್ ಮೊತ್ತ ಕಲೆಹಾಕಿತು. ಗುರಿಬೆನ್ನತ್ತಿದ ಶ್ರೀಲಂಕಾ ತಂಡ  170 ರನ್‌ಗಳಿಗೆ ಆಲೌಟ್ ಆಗುವ ಮೂಲಕ ಸರ್ವ ಪತನ ಕಂಡಿತು. ಭಾರತದ ಬೌಲರ್ ಗಳ ಪೈಕಿ ರಿಯಾನ್ ಪರಾಗ್ ಮೂರು ವಿಕೆಟ್ ಕಬಳಿಸಿ ಅರ್ಷದೀಪ್ ಸಿಂಗ್ ಮತ್ತು ಅಕ್ಷರ್ ಪಟೇಲ್ ಎರಡು ವಿಕೆಟ್ ಪಡೆದರು. ರವಿ ಬಿಷ್ಣೋಯ್ ಮತ್ತು ಮೊಹಮ್ಮದ್ ಸಿರಾಜ್ ತಲಾ ಒಂದು ವಿಕೆಟ್ ಪಡೆದರು.

 

 

ಕನ್ನಡ ಭಾಷೆಯಲ್ಲಿ ಇತ್ತೀಚಿನ ಕರ್ನಾಟಕ, ದೇಶ, ವಿದೇಶ, ಮನರಂಜನೆ, ಶಿಕ್ಷಣ, ಉದ್ಯೋಗ, ಆರೋಗ್ಯ, ಜೀವನಶೈಲಿ, ಆಧ್ಯಾತ್ಮ,  ಕ್ರೀಡೆ, ಕ್ರೈಂ, ವೈರಲ್, ವ್ಯಾಪಾರ, ತಂತ್ರಜ್ಞಾನ ಸುದ್ದಿಗಳನ್ನು ಓದಲು ಈಗಲೇ ನಮ್ಮ ಜೀ ಕನ್ನಡ ನ್ಯೂಸ್ ಮೊಬೈಲ್ ಅಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3AClgDd
Apple Link - https://apple.co/3wPoNgr
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು 
Twitter Link - https://bit.ly/3n6d2R8
Facebook Link - https://bit.ly/3Hhqmcj 
Youtube Link - https://www.youtube.com/live/RNn4I7iIaYE?si=3G4W5dh0oCdFnu-T

Instagram Link -  https://bit.ly/3LyfY2l 
Sharechat Link - https://bit.ly/3LCjokI 
Threads Link-  https://www.threads.net/@zeekannadanews 
WhatsApp Channel- bit.ly/46lENGm ಲಿಂಕ್ ಗಳ ಮೇಲೆ ಕ್ಲಿಕ್ ಮಾಡಿ.

Trending News