ಎಂ.ಎಸ್.ಧೋನಿ ಸ್ಥಾನಕ್ಕೆ ರಿಷಬ್ ಪಂತ್ ಅರ್ಹ- ರಿಕಿ ಪಾಂಟಿಂಗ್

ಮಹೇಂದ್ರ ಸಿಂಗ್ ಧೋನಿ ಸ್ಥಾನಕ್ಕೆ ರಿಷಬ್ ಪಂತ್ ಅರ್ಹ ಎಂದು ಆಸ್ಟ್ರೇಲಿಯಾದ ಮಾಜಿ ಆಟಗಾರ ರಿಕಿ ಪಾಂಟಿಂಗ್ ಅಭಿಪ್ರಾಯಪಟ್ಟಿದ್ದಾರೆ.

Last Updated : Mar 16, 2019, 02:17 PM IST
ಎಂ.ಎಸ್.ಧೋನಿ ಸ್ಥಾನಕ್ಕೆ ರಿಷಬ್ ಪಂತ್ ಅರ್ಹ- ರಿಕಿ ಪಾಂಟಿಂಗ್  title=

ನವದೆಹಲಿ: ಮಹೇಂದ್ರ ಸಿಂಗ್ ಧೋನಿ ಸ್ಥಾನಕ್ಕೆ ರಿಷಬ್ ಪಂತ್ ಅರ್ಹ ಎಂದು ಆಸ್ಟ್ರೇಲಿಯಾದ ಮಾಜಿ ಆಟಗಾರ ರಿಕಿ ಪಾಂಟಿಂಗ್ ಅಭಿಪ್ರಾಯಪಟ್ಟಿದ್ದಾರೆ.

ಕ್ರಿಕೆಟ್ ನಿಂದ ಧೋನಿ ನಿವೃತ್ತಿಯಾದ ನಂತರ ಆ ಸ್ಥಾನಕ್ಕೆ ರಿಷಬ್ ಪಂತ್ ಸೂಕ್ತ ವ್ಯಕ್ತಿ ಎಂದು ರಿಕಿ ಪಾಂಟಿಂಗ್ ಹೇಳಿದ್ದಾರೆ. ಅಲ್ಲದೆ ಮುಂಬರುವ ವಿಶ್ವಕಪ್ ನಲ್ಲಿ ಧೋನಿಗೆ ಪರ್ಯಾಯ ಆಯ್ಕೆ ಪಂತ್ ಎಂದು ಹೇಳಿದ್ದಾರೆ. 

"ಒಂದು ವೇಳೆ ಅವರು ಐಪಿಎಲ್ ನಲ್ಲಿ ಹಲವು ಪಂದ್ಯಗಳನ್ನು ದೆಹಲಿ ಕ್ಯಾಪಿಟಲ್ ಗೆ ಗೆದ್ದು ಕೊಟ್ಟಿದ್ದೆ ಆದಲ್ಲಿ ಎಲ್ಲವು ಮರೆತುಹೋಗುತ್ತದೆ, ಸದ್ಯ ಭಾರತ ತಂಡದಲ್ಲಿ ಧೋನಿ ನಂತರ ಎರಡನೇ ವಿಕೆಟ್ ಕಿಪರ್ ಗೆ ಪಂತ್ ಅಲ್ಲದೆ ಬೇರೆ ಯಾರು ತಮಗೆ ಕಾಣಿಸುತ್ತಿಲ್ಲ" ಎಂದು ರಿಕಿ ಪಾಂಟಿಂಗ್ ಹೇಳಿದ್ದಾರೆ.

ಮುಂಬರುವ ಐಪಿಎಲ್ ಪಂದ್ಯಾವಳಿಯಲ್ಲಿ  ಪಂತ್ ಉತ್ತಮ ಬ್ಯಾಟಿಂಗ್ ಪ್ರದರ್ಶನ ತೋರಿದ್ದಲ್ಲಿ ಅವರಿಗೆ ಆತ್ಮ ವಿಶ್ವಾಸ ಹೆಚ್ಚಾಗಿ ಇನ್ನು ಉನ್ನತ ಸ್ಥಾನಕ್ಕೆ ಏರಬಲ್ಲರು ಎಂದು ಪಾಂಟಿಂಗ್ ವಿಶ್ವಾಸ ವ್ಯಕ್ತಪಡಿಸಿದರು.ಸದ್ಯ ರಿಕಿ ಪಾಂಟಿಂಗ್ ಐಪಿಎಲ್ ಟೂರ್ನಿಯಲ್ಲಿ  ಡೆಲ್ಲಿ ಕ್ಯಾಪಿಟಲ್ಸ್ ತಂಡದ ಪ್ರಮುಖ ಕೋಚ್ ಆಗಿ ಕಾರ್ಯ ನಿರ್ವಹಿಸುತ್ತಿದ್ದಾರೆ.

ವಿಶ್ವಕಪ್ ನಂತರ ಎಂ.ಎಸ್.ಧೋನಿ ಕ್ರಿಕೆಟ್ ಗೆ ನಿವೃತ್ತಿ ಹೇಳುವ ಸಾಧ್ಯತೆ ಇರುವುದರಿಂದ ಅವರ ಸ್ಥಾನದಲ್ಲಿ ಪಂತ್ ಹೆಸರು ಬಲವಾಗಿ ಕೇಳಿ ಬರುತ್ತಿದೆ.ಈ ಹಿನ್ನಲೆಯಲ್ಲಿ ಈಗ ರಿಕಿ ಪಾಂಟಿಂಗ್ ಕೂಡ ಪಂತ್ ಪರ್ ಬ್ಯಾಟಿಂಗ್ ಬೀಸಿದ್ದಾರೆ.

 

Trending News