ರಿಂಕು ಸಿಂಗ್ ಸ್ಫೋಟಕ ಸಿಕ್ಸರ್’ಗೆ ಪೀಸ್… ಪೀಸ್.. ಆಯ್ತು ಮೀಡಿಯಾ ಹೌಸ್ ಗ್ಲಾಸ್! ವಿಡಿಯೋ

Rinku Singh six broke media box glass: ಆಫ್ರಿಕಾ ತಂಡದ ವಿರುದ್ಧ ಬೌಂಡರಿ ಹಾಗೂ ಸಿಕ್ಸರ್ ಬಾರಿಸುವ ವೇಳೆ ರಿಂಕು ಸಿಂಗ್ ಮೀಡಿಯಾ ಬಾಕ್ಸ್’ನ ಗಾಜು ಒಡೆದಿದ್ದು, ಅದರ ವಿಡಿಯೋ ವೈರಲ್ ಆಗಿದೆ.

Written by - Bhavishya Shetty | Last Updated : Dec 13, 2023, 12:46 AM IST
    • ಭಾರತ ಮತ್ತು ದಕ್ಷಿಣ ಆಫ್ರಿಕಾ ನಡುವೆ ಮೂರು ಪಂದ್ಯಗಳ ಟಿ20 ಸರಣಿ
    • ಸಿಕ್ಸರ್ ಬಾರಿಸಿ ಮೀಡಿಯಾ ಬಾಕ್ಸ್’ನ ಗಾಜು ಒಡೆದ ರಿಂಕು ಸಿಂಗ್
    • ಭಾರತದ ಇನ್ನಿಂಗ್ಸ್‌’ನ ಜವಾಬ್ದಾರಿಯನ್ನು ವಹಿಸಿಕೊಂಡ ಸೂರ್ಯ-ರಿಂಕು
ರಿಂಕು ಸಿಂಗ್ ಸ್ಫೋಟಕ ಸಿಕ್ಸರ್’ಗೆ ಪೀಸ್… ಪೀಸ್.. ಆಯ್ತು ಮೀಡಿಯಾ ಹೌಸ್ ಗ್ಲಾಸ್! ವಿಡಿಯೋ  title=
Rinku Singh six broke media box glass

Rinku Singh Six: ಸದ್ಯ ಭಾರತ ಮತ್ತು ದಕ್ಷಿಣ ಆಫ್ರಿಕಾ ನಡುವೆ ಮೂರು ಪಂದ್ಯಗಳ ಟಿ20 ಸರಣಿ ನಡೆಯುತ್ತಿದೆ. ಸರಣಿಯ ಮೊದಲ ಪಂದ್ಯ ಮಳೆಯಿಂದಾಗಿ ರದ್ದಾಗಿತ್ತು. ಸರಣಿಯ ಎರಡನೇ ಪಂದ್ಯ ಡಿಸೆಂಬರ್ 12 ರಂದು ಗಕೆಬರ್ಹಾದಲ್ಲಿ ನಡೆದಿದೆ. ದಕ್ಷಿಣ ಆಫ್ರಿಕಾದ ನಾಯಕ ಏಡನ್ ಮಾರ್ಕ್ರಾಮ್ ಟಾಸ್ ಗೆದ್ದು ಮೊದಲು ಬೌಲಿಂಗ್ ಮಾಡಲು ನಿರ್ಧರಿಸಿದರು. ಮೊದಲು ಬ್ಯಾಟ್ ಮಾಡಲು ಬಂದ ಟೀಂ ಇಂಡಿಯಾ ಆರಂಭದಲ್ಲಿ ಕೊಂಚ ಸಂಕಷ್ಟಕ್ಕೆ ಸಿಲುಕಿದಂತೆ ಕಂಡುಬಂದಿತು.

ಇದನ್ನೂ ಓದಿ: ಬಿಗ್ ಬಾಸ್’ನಲ್ಲಿ ಹಾಟ್ ರೊಮ್ಯಾನ್ಸ್: ಸೀರೆಯುಟ್ಟ ನಟಿಯನ್ನ ಎತ್ತಿ ಲಿಪ್ ಲಾಕ್ ಮಾಡಿದ ಸಹಸ್ಪರ್ಧಿ!

6 ರನ್ ಗಳಿಸುವಷ್ಟರಲ್ಲಿ ತಂಡ 2 ವಿಕೆಟ್ ಕಳೆದುಕೊಂಡಿತ್ತು. ಆದರೆ ನಂತರ ಸೂರ್ಯಕುಮಾರ್ ಯಾದವ್ ಮತ್ತು ರಿಂಕು ಸಿಂಗ್ ಭಾರತದ ಇನ್ನಿಂಗ್ಸ್‌’ನ ಜವಾಬ್ದಾರಿಯನ್ನು ವಹಿಸಿಕೊಂಡರು ಮತ್ತು ಅದ್ಭುತವಾಗಿ ಆಡಿದರು. ರಿಂಕು ಸಿಂಗ್ ಈ ಹಿಂದೆ ಆಸ್ಟ್ರೇಲಿಯಾ ವಿರುದ್ಧದ ಸರಣಿಯಲ್ಲಿ ಅದ್ಭುತವಾಗಿ ಕಾಣಿಸಿಕೊಂಡಿದ್ದರು, ದಕ್ಷಿಣ ಆಫ್ರಿಕಾ ವಿರುದ್ಧವೂ ಸಹ ಅದೇ ಫಾರ್ಮ್ ಅನ್ನು ರಿಂಕು ಕಾಯ್ದುಕೊಂಡಿದ್ದರು.

ಅಂದಹಾಗೆ ಆಫ್ರಿಕಾ ತಂಡದ ವಿರುದ್ಧ ಬೌಂಡರಿ ಹಾಗೂ ಸಿಕ್ಸರ್ ಬಾರಿಸುವ ವೇಳೆ ರಿಂಕು ಸಿಂಗ್ ಮೀಡಿಯಾ ಬಾಕ್ಸ್’ನ ಗಾಜು ಒಡೆದಿದ್ದು, ಅದರ ವಿಡಿಯೋ ವೈರಲ್ ಆಗಿದೆ.

ಇದನ್ನೂ ಓದಿ: ಕೊಹ್ಲಿಯ 13 ವರ್ಷ ಹಳೆಯ ದಾಖಲೆ ಸರಿಗಟ್ಟಿದ ಸೂರ್ಯಕುಮಾರ್

ದಕ್ಷಿಣ ಆಫ್ರಿಕಾ ವಿರುದ್ಧ ರಿಂಕು ಸಿಂಗ್ ಕೇವಲ 30 ಎಸೆತಗಳಲ್ಲಿ ಚೊಚ್ಚಲ ಅರ್ಧಶತಕ ದಾಖಲಿಸಿದ್ದಾರೆ. ಭಾರತದ ಇನಿಂಗ್ಸ್‌ನ 19ನೇ ಓವರ್‌ ಅನ್ನು ಏಡನ್‌ ಮಾರ್ಕ್‌ರಾಮ್‌ ಬೌಲಿಂಗ್‌ ಮಾಡುತ್ತಿದ್ದರು. ರಿಂಕು ಸಿಂಗ್ ಓವರ್‌’ನ ಕೊನೆಯ ಎರಡು ಎಸೆತಗಳಲ್ಲಿ ಎರಡು ಅದ್ಭುತ ಸಿಕ್ಸರ್‌’ಗಳನ್ನು ಬಾರಿಸಿದರು. ಅದರಲ್ಲಿ ಒಂದು ಸಿಕ್ಸರ್ ನೇರವಾಗಿ ಮೀಡಿಯಾ ಬಾಕ್ಸ್ ಕಡೆಗೆ ಹೋಗಿ ಗ್ಲಾಸ್ ಒಡೆದಿದೆ.  

ವಿಡಿಯೋ ಇಲ್ಲಿದೆ:

 

 

ಕನ್ನಡ ಭಾಷೆಯಲ್ಲಿ ಇತ್ತೀಚಿನ ಕರ್ನಾಟಕ, ದೇಶ, ವಿದೇಶ, ಮನರಂಜನೆ, ಶಿಕ್ಷಣ, ಉದ್ಯೋಗ, ಆರೋಗ್ಯ, ಜೀವನಶೈಲಿ, ಆಧ್ಯಾತ್ಮ,  ಕ್ರೀಡೆ, ಕ್ರೈಂ, ವೈರಲ್, ವ್ಯಾಪಾರ, ತಂತ್ರಜ್ಞಾನ ಸುದ್ದಿಗಳನ್ನು ಓದಲು ಈಗಲೇ ನಮ್ಮ ಜೀ ಕನ್ನಡ ನ್ಯೂಸ್ ಮೊಬೈಲ್ ಅಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3AClgDd
Apple Link - https://apple.co/3wPoNgr
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು 
Twitter Link - https://bit.ly/3n6d2R8
Facebook Link - https://bit.ly/3Hhqmcj 
Youtube Link - https://t.co/lCSPNypK2U

Instagram Link -  https://bit.ly/3LyfY2l 
Sharechat Link - https://bit.ly/3LCjokI 
Threads Link-  https://www.threads.net/@zeekannadanews ಲಿಂಕ್ ಗಳ ಮೇಲೆ ಕ್ಲಿಕ್ ಮಾಡಿ

Trending News