RCB Win WPL 2024: ಈ ಸಲ ಕಪ್‌ ನಮ್ದು!! ಟೈಟಲ್ ವಿನ್ನರ್ RCB ಪಡೆದ ಬಹುಮಾನದ ಹಣವೆಷ್ಟು ಗೊತ್ತಾ?

RCB WPL 2024: ಈ ಸಲ ಕಪ್‌ ನಮ್ಮದು!!.. ಎಲ್ಲರೂ ಕಾಯುತ್ತಿದ್ದ ಆ ಸಮಯ ಬಂದೇ ಬಿಡ್ತು.. ಆರ್‌ಸಿಬಿ ಕಪ್‌ ಗೆದ್ದೆ ಬಿಡ್ತು.. ಸದ್ಯ ಟೈಟಲ್ ವಿನ್ನರ್ RCB ಪಡೆದ ಬಹುಮಾನದ ಮೊತ್ತದ ಕುರಿತಾದ ಚರ್ಚೆಯಾಗುತ್ತಿದೆ... 

Written by - Savita M B | Last Updated : Mar 18, 2024, 08:45 AM IST
  • ನಿನ್ನೆ ರಾತ್ರಿ ನಡೆದ ಡಬ್ಲ್ಯುಪಿಎಲ್ ಫೈನಲ್ ಪಂದ್ಯದಲ್ಲಿ ಆರ್‌ಸಿಬಿ 8 ವಿಕೆಟ್‌ಗಳಿಂದ ಡೆಲ್ಲಿ ಕ್ಯಾಪಿಟಲ್ಸ್ ತಂಡವನ್ನು ಸೋಲಿಸಿತು.
  • ಡೆಲ್ಲಿ ನೀಡಿದ 114 ರನ್ ಗಳ ಗುರಿಯನ್ನು ಆರ್ ಸಿಬಿ 19.3 ಓವರ್ ಗಳಲ್ಲಿ 2 ವಿಕೆಟ್ ಕಳೆದುಕೊಂಡು ಛಾಟಿ ಬೀಸಿ ಕಪ್ ಗೆದ್ದುಕೊಂಡಿತು
RCB Win WPL 2024: ಈ ಸಲ ಕಪ್‌ ನಮ್ದು!! ಟೈಟಲ್ ವಿನ್ನರ್ RCB ಪಡೆದ ಬಹುಮಾನದ ಹಣವೆಷ್ಟು ಗೊತ್ತಾ? title=

RCB Win WPL 2024: ಐಪಿಎಲ್‌ನಲ್ಲಿ ಆರ್‌ಸಿಬಿ ಸಾಧಿಸಲಾಗದ್ದನ್ನು ರಾಯಲ್ ಚಾಲೆಂಜರ್ಸ್ ಬೆಂಗಳೂರು ಮಹಿಳೆಯರ ತಂಡ ಡಬ್ಲ್ಯುಪಿಎಲ್‌ನಲ್ಲಿ ಸಾಧಿಸಿದೆ. ನಿನ್ನೆ ರಾತ್ರಿ ನಡೆದ ಡಬ್ಲ್ಯುಪಿಎಲ್ ಫೈನಲ್ ಪಂದ್ಯದಲ್ಲಿ ಆರ್‌ಸಿಬಿ 8 ವಿಕೆಟ್‌ಗಳಿಂದ ಡೆಲ್ಲಿ ಕ್ಯಾಪಿಟಲ್ಸ್ ತಂಡವನ್ನು ಸೋಲಿಸಿತು.

ಇದನ್ನೂ ಓದಿ-Womens Premier League 2024: ಖಡಕ್‌ ರೊಟ್ಟಿಯ ಹೊಡೆತಕ್ಕೆ ನಲುಗಿದ ಡೆಲ್ಲಿ ಕ್ಯಾಪಿಟಲ್ಸ್‌! ‌

ಡೆಲ್ಲಿ ನೀಡಿದ 114 ರನ್ ಗಳ ಗುರಿಯನ್ನು ಆರ್ ಸಿಬಿ 19.3 ಓವರ್ ಗಳಲ್ಲಿ 2 ವಿಕೆಟ್ ಕಳೆದುಕೊಂಡು ಛಾಟಿ ಬೀಸಿ ಕಪ್ ಗೆದ್ದುಕೊಂಡಿತು. ಐಪಿಎಲ್‌ನಲ್ಲಿ ಇದುವರೆಗೂ ಆರ್‌ಸಿಬಿ (ಪುರುಷರ ತಂಡ) ಕಪ್ ಗೆದ್ದಿಲ್ಲ ಎಂಬುದು ಗೊತ್ತೇ ಇದೆ. ಆರ್‌ಸಿಬಿ ಮಹಿಳೆಯರ ತಂಡ ಡಬ್ಲ್ಯುಪಿಎಲ್ ಟ್ರೋಫಿ ಗೆದ್ದು 6 ಕೋಟಿ ರೂಪಾಯಿ ಬಹುಮಾನ ಪಡೆದುಕೊಂಡಿದೆ.

ಇದನ್ನೂ ಓದಿ-WPL 2024: ಐತಿಹಾಸಿಕ ಡಬ್ಲ್ಯೂಪಿಎಲ್ ಪ್ರಶಸ್ತಿ ಗೆದ್ದ ನಂತರ ಸ್ಮೃತಿ ಮಂಧಾನಾಗೆ ವಿರಾಟ್ ಕೊಹ್ಲಿಯಿಂದ ವೀಡಿಯೊ ಕರೆ

ರನ್ನರ್ ಅಪ್ ಡೆಲ್ಲಿ ಕ್ಯಾಪಿಟಲ್ಸ್ ರೂ.3 ಕೋಟಿ ಬಹುಮಾನವನ್ನು ಗೆದ್ದುಕೊಂಡಿತು. ಆರ್‌ಸಿಬಿ ಬ್ಯಾಟ್ಸ್‌ಮನ್ ಎಲ್ಲಿಸ್ ಪೆರ್ರಿ ಆರೆಂಜ್ ಕ್ಯಾಪ್ ಗೆದ್ದು 5 ಲಕ್ಷ ರೂಪಾಯಿ ಬಹುಮಾನ ಪಡೆದರು. ಇವರು ಫೈನಲ್ ಪಂದ್ಯದಲ್ಲಿ ಪೆರ್ರಿ 37 ಎಸೆತಗಳಲ್ಲಿ 35 ರನ್.. WPL ನ‌ ಒಂಬತ್ತು ಪಂದ್ಯಗಳಲ್ಲಿ 347 ರನ್ ಗಳಿಸಿ ಸರಾಸರಿ 69.40 ದಾಖಲಿಸಿದ್ದಾರೆ. ಅಂತಿಮ ಪಂದ್ಯದಲ್ಲಿ ಸ್ಮೃತಿ ಮಂಧಾನ 31 ರನ್, ಸೋಫಿ ಡಿವೈನ್ 32 ರನ್ ಮತ್ತು ರಿಚಾ ಘೋಷ್ 17 ರನ್ (ಔಟಾಗದೆ) ಗಳಿಸಿದರು.

ಕನ್ನಡ ಭಾಷೆಯಲ್ಲಿ ಇತ್ತೀಚಿನ ಕರ್ನಾಟಕ, ದೇಶ, ವಿದೇಶ, ಮನರಂಜನೆ, ಶಿಕ್ಷಣ, ಉದ್ಯೋಗ, ಆರೋಗ್ಯ, ಜೀವನಶೈಲಿ, ಆಧ್ಯಾತ್ಮ,  ಕ್ರೀಡೆ, ಕ್ರೈಂ, ವೈರಲ್, ವ್ಯಾಪಾರ, ತಂತ್ರಜ್ಞಾನ ಸುದ್ದಿಗಳನ್ನು ಓದಲು ಈಗಲೇ ನಮ್ಮ ಜೀ ಕನ್ನಡ ನ್ಯೂಸ್ ಮೊಬೈಲ್ ಅಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3AClgDd
Apple Link - https://apple.co/3wPoNgr
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು 
Twitter Link - https://bit.ly/3n6d2R8
Facebook Link - https://bit.ly/3Hhqmcj 
Youtube Link - https://www.youtube.com/live/RNn4I7iIaYE?si=3G4W5dh0oCdFnu-T

Instagram Link -  https://bit.ly/3LyfY2l 
Sharechat Link - https://bit.ly/3LCjokI 
Threads Link-  https://www.threads.net/@zeekannadanews 
WhatsApp Channel- bit.ly/46lENGm ಲಿಂಕ್ ಗಳ ಮೇಲೆ ಕ್ಲಿಕ್ ಮಾಡಿ.

Trending News