RCB vs RR, IPL 2022: ಆರ್​ಸಿಬಿ ವಿರುದ್ಧ ರಾಜಸ್ಥಾನ್‌ಗೆ ಭರ್ಜರಿ ಗೆಲುವು

ಮೊದಲು ಬ್ಯಾಟಿಂಗ್ ಮಾಡುವ ಅವಕಾಶ ಪಡೆದ ರಾಜಸ್ಥಾನ್ ನಿಗದಿತ 20 ಓವರ್ ಗಳಲ್ಲಿ 8 ವಿಕೆಟ್ ಕಳೆದುಕೊಂಡು 144 ರನ್‍ಗಳ ಸ್ಪರ್ಧಾತ್ಮಕ ಮೊತ್ತ ಗಳಿಸಿತು.

Written by - Puttaraj K Alur | Last Updated : Apr 26, 2022, 11:41 PM IST
  • ರಾಯಲ್ ಚಾಲೆಂಜರ್ಸ್‍ ಬೆಂಗಳೂರಿಗೆ ಮತ್ತೊಂದು ಹೀನಾಯ ಸೋಲು
  • ಆರ್​ಸಿಬಿ ವಿರುದ್ಧ ಭರ್ಜರಿ ಗೆಲುವು ಸಾಧಿಸಿದ ಸಂಭ್ರಮಿಸಿದ ರಾಜಸ್ಥಾನ್
  • ಮತ್ತೆ ಬ್ಯಾಟಿಂಗ್‍ ನಲ್ಲಿ ವೈಫಲ್ಯ ಅನುಭವಿಸಿದ ಆರ್​ಸಿಬಿ ಬ್ಯಾಟ್ಸ್ಮನ್‍ಗಳು
RCB vs RR, IPL 2022: ಆರ್​ಸಿಬಿ ವಿರುದ್ಧ ರಾಜಸ್ಥಾನ್‌ಗೆ ಭರ್ಜರಿ ಗೆಲುವು title=
ಆರ್​ಸಿಬಿ ವಿರುದ್ಧ ರಾಜಸ್ಥಾನ್‌ಗೆ ಭರ್ಜರಿ ಗೆಲುವು

ಪುಣೆ: ಮಹಾರಾಷ್ಟ್ರ ಕ್ರಿಕೆಟ್ ಅಸೋಸಿಯೇಷನ್ ಸ್ಟೇಡಿಯಂನಲ್ಲಿ ಮಂಗಳವಾರ ರಾತ್ರಿ ನಡೆದ ಐಪಿಎಲ್ ಟೂರ್ನಿಯ 39ನೇ ಪಂದ್ಯದಲ್ಲಿ ರಾಯಲ್ ಚಾಲೆಂಜರ್ಸ್ ಬೆಂಗಳೂರು ವಿರುದ್ಧ ರಾಜಸ್ಥಾನ್ ರಾಯಲ್ಸ್ 29 ರನ್‍ಗಳ ಭರ್ಜರಿ ಗೆಲುವು ಸಾಧಿಸಿತು.

ಟಾಸ್‍ ಗೆದ್ದ ಆರ್​ಸಿಬಿ ಫೀಲ್ಡಿಂಗ್ ಆಯ್ದುಕೊಂಡಿತು. ಅದರಂತೆ ಮೊದಲು ಬ್ಯಾಟಿಂಗ್ ಮಾಡುವ ಅವಕಾಶ ಪಡೆದ ರಾಜಸ್ಥಾನ್ ನಿಗದಿತ 20 ಓವರ್ ಗಳಲ್ಲಿ 8 ವಿಕೆಟ್ ಕಳೆದುಕೊಂಡು 144 ರನ್‍ಗಳ ಸ್ಪರ್ಧಾತ್ಮಕ ಮೊತ್ತ ಗಳಿಸಿತು. ಗೆಲುವಿನ ಗುರಿ ಬೆನ್ನತ್ತಿದ ಆರ್​ಸಿಬಿ ಬ್ಯಾಟಿಂಗ್ ನಲ್ಲಿ ವೈಫಲ್ಯ ಅನುಭವಿಸುವ ಮೂಲಕ ಮತ್ತೊಂದು ಸೋಲು ಕಂಡಿತು.

ಇದನ್ನೂ ಓದಿ: Krunal Pandya: ಕೃನಾಲ್‌ ಮೇಲೆ ಕೋಪಗೊಂಡ ಪೊಲಾರ್ಡ್‌: ಮಾಡಿದ್ದೇನು ನೋಡಿ

ರಿಯಾನ್ ಪರಾಗ್ ‘ಗೆಲುವಿನ’ ಆಟ

ಟಾಸ್‍ ಸೋತರು ಮೊದಲು ಬ್ಯಾಟಿಂಗ್ ಮಾಡುವ ಅವಕಾಶ ಪಡೆದ ಪಂಜಾಬ್ ತಂಡದ ಆರಂಭ ಚೆನ್ನಾಗಿರಲಿಲ್ಲ. ಆರಂಭಿಕ ಆಟಗಾರರಾದ ದೇವದತ್ ಪಡಿಕ್ಕಲ್(7) ಮತ್ತು ಆರ್.ಅಶ್ವಿನ್(17), ಜೋಸ್ ಬಟ್ಲರ್(8) ಬಹುಬೇಗನೆ ನಿರ್ಗಮಿಸಿದರು. ನಾಯಕ ಸಂಜು ಸ್ಯಾಮ್ಸನ್(27) ಮತ್ತು ಡೇರಿಲ್ ಮಿಚೆಲ್(16) ಸ್ವಲ್ಪ ಹೊತ್ತು ಮಾತ್ರ ಆಡಿದರು. ಆರ್​ಸಿಬಿ ಮಾರಕ ಬೌಲಿಂಗ್ ದಾಳಿಗೆ ನಲುಗಿದ್ದ ರಾಜಸ್ಥಾನ್ ಅಲ್ಪಮೊತ್ತಕ್ಕೆ ಆಲೌಟ್ ಆಗುವ ಸಾಧ‍್ಯತೆ ಇತ್ತು. ನಂತರ ಪಂದ ರಿಯಾನ್ ಪರಾಗ್ ಪಂದ್ಯದ ಗತಿಯನ್ನೇ ಬದಲಾಯಿಸಿದರು. ಗೆಲುವಿನ ಆಟ ಆಡಿದ ರಿಯಾನ್ ಆಕರ್ಷಕ ಅರ್ಧಶತಕ(56) ಬಾರಿಸಿ ಔಟಾಗದೆ ಉಳಿದರು. ರಿಯಾನ್ ಸ್ಫೋಟಕ ಆಟದ ನೆರವಿನಿಂದ ರಾಜಸ್ಥಾನ್ 144 ರನ್‍ಗಳ ಸ್ಪರ್ಧಾತ್ಮಕ ಮೊತ್ತ ಗಳಿಸಲು ಸಾಧ್ಯವಾಯಿತು. ಆರ್​ಸಿಬಿ ಪರ ಮೊಹಮ್ಮದ್ ಸಿರಾಜ್, ಜೋಶ್ ಹ್ಯಾಜಲ್ವುಡ್ ಹಾಗೂ ವನಿಂದು ಹಸರಂಗ ತಲಾ 2 ವಿಕೆಟ್ ಪಡೆದು ಮಿಂಚಿದರು.

ಆರ್​ಸಿಬಿ ಬ್ಯಾಟಿಂಗ್ ವೈಫಲ್ಯ!

ಸುಲಭ ಗೆಲುವಿನ ಗುರಿ ಬೆನ್ನತ್ತಿದ ಆರ್​ಸಿಬಿ ಮತ್ತೊಮ್ಮೆ ಬ್ಯಾಟಿಂಗ್‍ನಲ್ಲಿ ವೈಫಲ್ಯ ಅನುಭವಿಸಿ ಹೀನಾಯ ಸೋಲು ಕಂಡಿತು. 19.3 ಓವರ್ ಗಳಲ್ಲಿ ತನ್ನೆಲ್ಲಾ ವಿಕೆಟ್ ಗಳನ್ನು ಕಳೆದುಕೊಂಡು ಆರ್​ಸಿಬಿ 115 ರನ್‍ ಗಳನಷ್ಟೇ ಗಳಿಸಲು ಸಾಧ್ಯವಾಯಿತು. ನಾಯಕ ಫಾಫ್ ಡು ಪ್ಲೆಸಿಸ್(23), ವನಿಂದು ಹಸರಂಗ(18), ಶಹಬಾಜ್ ಅಹ್ಮದ್(17) ಮತ್ತು ರಜತ್ ಪಾಟಿದಾರ್(16) ರನ್ ಗಳಿಸಿರು. ಆರ್​ಸಿಬಿಯ ಯಾವೊಬ್ಬ ಬ್ಯಾಟ್ಸ್‍ ಮನ್ ಕೂಡ ಹೆಚ್ಚು ಕ್ರೀಸ್‍ನಲ್ಲಿ ನಿಂತು ಆಡಲಿಲ್ಲ. ಪರಿಣಾಮ ತಂಡ ಮತ್ತೊಂದು ಸೋಲು ಕಂಡು ಅಭಿಮಾನಿಗಳಿಗೆ ನಿರಾಸೆ ಮೂಡಿಸಿತು.

ಇದನ್ನೂ ಓದಿ: ಸತತ 8 ಹೀನಾಯ ಸೋಲು: ಮುಂಬೈ ಅಭಿಮಾನಿಗಳಿಗೆ ರೋಹಿತ್ ಶರ್ಮಾ ಭಾವನಾತ್ಮಕ ಸಂದೇಶ

ಪಂಜಾಬ್ ಪರ ಕುಲದೀಪ್ ಸೇನ್ 4 ಮತ್ತು ಆರ್.ಅಶ್ವಿನ್ 3 ವಿಕೆಟ್ ಪಡೆದು ಮಿಂಚಿದರು. ಆಡಿರುವ 8 ಪಂದ್ಯಗಳಲ್ಲಿ 6 ಗೆಲುವು ಸಾಧಿಸಿರುವ ರಾಜಸ್ಥಾನ್ 12 ಅಂಕಗಳೊಂದಿಗೆ ಪಾಯಿಂಟ್ಸ್ ಪಟ್ಟಿಯಲ್ಲಿ ಅಗ್ರಸ್ಥಾನಕ್ಕೇರಿತು. ಆಡಿರುವ 9 ಪಂದ್ಯಗಳಲ್ಲಿ ಆರ್​ಸಿಬಿ 5 ಗೆಲುವು ಸಾಧಿಸಿದ್ದು, 10 ಅಂಕಗಳೊಂದಿಗೆ 5ನೇ ಸ್ಥಾನದಲ್ಲಿದೆ.

ಕನ್ನಡ ಭಾಷೆಯಲ್ಲಿ ಮತ್ತಷ್ಟು ತಾಜಾ ಸುದ್ದಿಗಳನ್ನು ಓದಲು ನಮ್ಮ ಜೀ ಕನ್ನಡ ನ್ಯೂಸ್ ಮೊಬೈಲ್ ಆಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3hDyh4G
Apple Link - https://apple.co/3hEw2hy
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು TwitterFacebookYoutube ಲಿಂಕ್ ಗಳ ಮೇಲೆ ಕ್ಲಿಕ್ಕಿಸಿ.

Trending News