Mohammad siraj: ಐಪಿಎಲ್ ಹರಾಜಿಗೆ ಇನ್ನೇನು ಕೆಲವೇ ದಿನ ಉಳಿದಿದೆ, ಸ್ಟಾರ್ ಆಟಗಾರರನ್ನು ಉಳಿಸಿಕೊಳ್ಳಲು ವಿವಿಧ ತಂಡದ ಫ್ರಾಂಚೈಸಿಗಳು ಕಸರತ್ತು ನಡೆಸುತ್ತಿವೆ. ಈ ಸೀಸನ್ನಲ್ಲಿ ಹೊಸ ನಿಯಮಗಳ ಕಾರಣ ಎಲ್ಲಾ ತಂಡಗಳಲ್ಲಿಯೂ ಭಾರಿ ಬದಲಾವಣೆ ಖಚಿತ ಎಂದೆ ಹೇಳಬಹುದು. ಈಗಿರುವಾಗ ಆರ್ಸಿಬಿ ತಂಡ ಯಾವ ಯಾವ ಆಟಗಾರರನ್ನು ಇದೀಗ ಉಳಿಸಿಕೊಳ್ಳಲಿದೆ ಎಂದು ಫ್ಯಾನ್ಸ್ ಎದುರು ನೋಡುತ್ತಿದ್ದಾರೆ.
ಪ್ರತಿ ವರ್ಷ ಗೆಲುವಿನ ನಿರೀಕ್ಷೆಯಲ್ಲಿ ಆರ್ಸಿಬಿ ತಂಡ ಫೀಲ್ಡ್ಗೆ ಎಂಟ್ರಿ ಕೊಡ್ಡುತ್ತಿದೆ. ತನ್ನ ಶಕ್ತಿಗೂ ಮೀರಿ ಕಷ್ಟ ಪಟ್ಟರು ಅಹ ಅದೇನೊ ಬೆಂಗಳೂರು ತಂಡಕ್ಕೆ ಕಪ್ ಕೈಗೆತ್ತಿಕೊಳ್ಳುವ ಭಾಗ್ಯ ದೊರಕಲೇ ಇಲ್ಲ. ಪ್ಲೇ ಆಫ್ ವೆಗೂ ಎಂಟ್ರಿ ಕೊಟ್ಟಿದ್ದ ಆರ್ಸಿಬಿ ತಂಡ ಕಳೆದ ಸೀಸನ್ನಲ್ಲಿ ಕೂಡ ರಾಜಸ್ಥಾನ್ ತಂಡದ ಎದುರು ಸೋತು ಅಭಿಮಾನಿಗಳ ಕಪ್ ಗೆಲ್ಲುವ ಕನಸನ್ನು ಭಗ್ನ ಗೊಳಿಸಿತು. ಒಮ್ಮೆಯಾದರೂ ತಮ್ಮ ನೆಚ್ಚಿನ ತಂಡ ಕಪ್ ಗೆಲ್ಲುತ್ತೆ ಎನ್ನುವ ಉತ್ಸಾಹದಲ್ಲಿದ್ದ ಅಭಿಮಾನಿಗಳಿಗೆ ಈ ಸೋಲು ಮತ್ತೊಮ್ಮೆ ನಿರಾಸೆ ಮೂಡಿಸಿತ್ತು.
ಈ ಭಾರಿ ಕಪ್ ಗೆಲ್ಲಲೇ ಬೇಕು ಎಂದು ಎಲ್ಲಾ ತಂಡಗಳಂತೆ ಆರ್ಸಿಬಿ ತಂಡ ಕೂಡ ಭಾರಿ ಕಸರತ್ತು ನಡೆಸುತ್ತಿದೆ, ಕೇವಲ ನಾಲ್ಕು ಆಟಗಾರರನ್ನು ಉಳಿಸಿಕೊಳ್ಳುವ ಅವಕಾಶ ನೀಡಿದ್ದು ಫ್ರಾಂಚೈಸಿ ಇದೀಗ ಯಾವ ಆಟಗಾರರನ್ನು ಉಳಿಸಿಕೊಳ್ಳಲಿದೆ ಎನ್ನುವ ಸಂಗತಿ ಅಭಿಮಾನಿಗಳಲ್ಲಿ ಕುತೂಹಲ ಹೆಚ್ಚಿಸಿದೆ.
ಇದನ್ನೂ ಓದಿ: RCB ಅಭಿಮಾನಿಗಳಿಗೆ ಗುಡ್ ನ್ಯೂಸ್! ತಂಡಕ್ಕೆ ವಿಧ್ವಂಸಕ ವಿಕೆಟ್ ಕೀಪರ್ ಎಂಟ್ರಿ
ಇನ್ನೇನು ಐಪಿಎಲ್ ಸೀಸನ್ 2024ಕ್ಕೆ ಎರಡೇ ತಿಂಗಳು ಬಾಕಿ ಇದೆ. ಎಲ್ಲಾ ತಂಡಗಳು ಯಾವ ಯಾವ ಆಟಗಾರರನ್ನು ರಿಟೈನ್ ಮಾಡಿಕೊಳ್ಳಬೇಕು ಎಂಬ ಶಾರ್ಟ್ ಲಿಸ್ಟ್ ರೆಡಿ ಮಡಿಕೊಂಡಿದೆ. ಎಲ್ಲಾ ತಂಡದಂತೆ ಆರ್ಸಿಬಿ ಕೂಡ ಎಲ್ಲಾ ದಿಕ್ಕಿನಿಂದ ಲೆಕ್ಕಾಚಾರ ಮಾಡಿ ತಂಡದಲ್ಲಿ ಯಾವ ಆಟಗಾರರನ್ನು ಉಳಿಸಿಕೊಳ್ಳಬೇಕು ಯಾವ ಆಟಗಾರರನ್ನು ಕೈ ಬಿಡಬೇಕು ಎಂಬ ಯೋಜನೆಗೆ ಬಂದಿದೆ. ಆರ್ಸಿಬಿ ಈಗಾಗಲೇ ರಿಟೈನ್ ಪ್ಲೇಯರ್ಸ್ ಲಿಸ್ಟ್ ಸಿದ್ದ ಮಾಡಿಕೊಂಡಿದೆ ಎನ್ನುವ ವಿಷಯ ಹೊರಬಿದ್ದಿದ್ದು, ಇದರಲ್ಲಿ ಸ್ಟಾರ್ ಆಟಗಾರನ ಹೆಸರು ಇಲ್ಲ ಎಂಬುದು ಅಚ್ಚರಿಯ ಸಂಗತಿ.
ಬೆಂಗಳೂರು ತಂಡದಲ್ಲಿ ಪ್ರಮುಖ ಪಾತ್ರವಹಿಸಿದ್ದ ಸ್ಟಾರ್ ಆಟಗಾರರನ್ನು ಕೈ ಬಿಡುವ ಮೂಲಕ ಈ ಭಾರಿ ಹರಾಜಿನಲ್ಲಿ ಭಾರಿ ಶಾಕ್ ನೀಡುವ ಸಾಧ್ಯತೆ ಇದೆ. ಇನ್ನೂ ಆರ್ಸಿಬಿ ರಿಟೈನ್ ಲಿಸ್ಟ್ನಿಂದ ಮೊಹಮ್ಮದ್ ಸಿರಾಜ್ ಅವರ ಹೆಸರನ್ನು ತೆಗೆದು ಹಾಕಲಾಗಿದ್ದು ಇದು ಅಭಿಮಾನಿಗಳಿಗೆ ಅಘಾತ ನೀಡಿದ. ವೇಗಿ ಬೌಲರ್ ಸಿರಾಜ್ ಬದಲಿಗೆ ಮತ್ತೊಬ್ಬ ಬಲಿಷ್ಠ ಆಟಗಾರನನ್ನು ತಂಡಕ್ಕೆ ಕರೆತರಲು ಆರ್ಸಿಬಿ ಫ್ರಾಂಚೈಸಿ ಇಂತಹ ನಿರ್ಧಾರ ತೆಗೆದುಕೊಂಡಿದ್ದು, ಈ ಸ್ಟಾರ್ ಆಟಗಾರನನ್ನು ಕೈ ಬಿಟ್ಟಿದೆ ಆದರೆ ಆರ್ಸಿಬಿ ಅಭಿಮಾನಿಗಳು ನಿರಾಶರಾಗುತ್ತಾರೆ.
ಇದೀಗ ಸ್ಟಾರ್ ಆಟಗಾರ ಮೊಹಮ್ಮದ್ ಸಿರಾಜ್ರನ್ನು ಆರ್ಸಿಬಿ ಕೈಬಿಡುವುದು ಖಚಿತ ಎಂದು ಇಂಡಿಯನ್ ಪೀಮಿಯರ್ನ ಉನ್ನತ ಮೂಲಗಳು ತಿಳಿಸಿದ್ದು, ಇದರ ಹಿಂದಿನ ಸತ್ಯ ಏನೆಂದು ತಿಳಿಯಲು ಇನ್ನಷ್ಟೆ ಕಾದು ನೋಡಬೇಕಿದೆ. ಅತ್ಯತ್ತಮ ಬೌಲರ್ ಎನಿಸಿಕೊಂಡಿದ್ದ ಮೊಹಮ್ಮದ್ ಸಿರಾಜ್ ಅವರನ್ನು ಆರ್ಸಿಬಿ ತಂಡ ಭಾರಿ ಮೊತ್ತಕ್ಕೆ ಕರೀದಿಸಿತ್ತಾದರೂ, ನಿರೀಕ್ಷಿಸಿದಂತೆ ಅವರು ಪ್ರದರ್ಶನ ನೀಡಲಿಲ್ಲ, ಇದೇ ಕಾರಣದಿಂದ ಇದೀಗ ಆರ್ಸಿಬಿ ತಂಡ ಈ ನಿರ್ಧಾರಕ್ಕೆ ಬಂದಿದೆ ಎಂದು ಹೇಳಲಾಗಿದೆ.
ಕನ್ನಡ ಭಾಷೆಯಲ್ಲಿ ಇತ್ತೀಚಿನ ಕರ್ನಾಟಕ, ದೇಶ, ವಿದೇಶ, ಮನರಂಜನೆ, ಶಿಕ್ಷಣ, ಉದ್ಯೋಗ, ಆರೋಗ್ಯ, ಜೀವನಶೈಲಿ, ಆಧ್ಯಾತ್ಮ, ಕ್ರೀಡೆ, ಕ್ರೈಂ, ವೈರಲ್, ವ್ಯಾಪಾರ, ತಂತ್ರಜ್ಞಾನ ಸುದ್ದಿಗಳನ್ನು ಓದಲು ಈಗಲೇ ನಮ್ಮ ಜೀ ಕನ್ನಡ ನ್ಯೂಸ್ ಮೊಬೈಲ್ ಅಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3AClgDd
Apple Link - https://apple.co/3wPoNgr
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು
Twitter Link - https://bit.ly/3n6d2R8
Facebook Link - https://bit.ly/3Hhqmcj
Youtube Link - https://www.youtube.com/live/RNn4I7iIaYE?si=3G4W5dh0oCdFnu-T
Instagram Link - https://bit.ly/3LyfY2l
Sharechat Link - https://bit.ly/3LCjokI
Threads Link- https://www.threads.net/@zeekannadanews
WhatsApp Channel- bit.ly/46lENGm ಲಿಂಕ್ ಗಳ ಮೇಲೆ ಕ್ಲಿಕ್ ಮಾಡಿ.