RCB : ಕಿಂಗ್‌‌ ಕೊಹ್ಲಿ ದಾಖಲೆ ಮುರಿದ RCBಯ ಆ ಒಂದು ಪೋಸ್ಟ್‌..!

RCB Virat Kohli : ಸ್ಮೃತಿ ಮಂದಾನ ಕ್ಯಾಪ್ಟನ್‌ಶಿಪ್‌‌ನಲ್ಲಿ ತಂಡ ಫಸ್ಟ್ ಟೈಮ್‌ ಕಪ್‌ ಎತ್ತಿ ಹಿಡಿದಿದ್ದು, ಈ ಮೂಲಕ ಈ ಸಲ ಕಪ್‌ ನಮ್ದೆ ಅನ್ನೋ ಸ್ಲೋಗನ್‌‌ನ ಈ ಸಲ ಕಪ್‌‌ ನಮ್ದು ಅಂತ ಬದಲಾಯಿಸಿದೆ. ಅಲ್ಲದೆ, ವಿರಾಟ್‌ ಕೊಹ್ಲಿ ದಾಖಲೆಯೊಂದನ್ನು ಮುರಿದಿದೆ.

Written by - Krishna N K | Last Updated : Mar 18, 2024, 04:31 PM IST
    • WPL ಫೈನಲ್‌ನಲ್ಲಿ ಆರ್‌ಸಿಬಿ ಡೆಲ್ಲಿ ವಿರುದ್ಧ ಗೆದ್ದು ಇತಿಹಾಸ ಸೃಷ್ಟಿಸಿದೆ.
    • ಸ್ಮೃತಿ ಮಂದಾನ ಕ್ಯಾಪ್ಟನ್‌ಶಿಪ್‌‌ನಲ್ಲಿ ತಂಡ ಫಸ್ಟ್ ಟೈಮ್‌ ಕಪ್‌ ಎತ್ತಿ ಹಿಡಿದಿದೆ.
    • ಈ ಮೂಲಕ ವಿರಾಟ್‌ ಕೊಹ್ಲಿ ದಾಖಲೆ ಒಂದನ್ನು ಆರ್‌ಸಿಬಿ ಮುರಿದಿದೆ.
RCB : ಕಿಂಗ್‌‌ ಕೊಹ್ಲಿ ದಾಖಲೆ ಮುರಿದ RCBಯ ಆ ಒಂದು ಪೋಸ್ಟ್‌..! title=
RCB

WPL 2024 RCB : ಈ ಸಲ ಕಪ್‌ ನಮ್ದೆ ಎನ್ನುವ ಆಸೆಯನ್ನು WPL RCB ಮಹಿಳಾ ತಂಡ ಪೂರೈಸಿದೆ. ಸ್ಮೃತಿ ಮಂದಾನ ನಾಯಕತ್ವದ ತಂಡ ಕೊನೆಗೂ ಕಪ್‌ ಎತ್ತಿ ಹಿಡಿದಿದೆ. ಈ ಮೂಲಕ 16 ವರ್ಷಗಳ ಕಾಯುವಿಕೆಗೆ ಆರ್‌ಸಿಬಿ ವನಿತೆಯರ ತಂಡ ಅಂತ್ಯ ಹಾಡಿದೆ. ಅಲ್ಲದೆ, ಈ ಮೂಲಕ ವಿರಾಟ್‌ ಕೊಹ್ಲಿ ದಾಖಲೆ ಒಂದನ್ನು ಆರ್‌ಸಿಬಿ ಮುರಿದಿದೆ.

ಹೌದು.. ನಿನ್ನೆ ನಡೆದ WPL ಫೈನಲ್‌ನಲ್ಲಿ ಆರ್‌ಸಿಬಿ ಡೆಲ್ಲಿ ವಿರುದ್ಧ ಗೆದ್ದು ಇತಿಹಾಸ ಸೃಷ್ಟಿಸಿದೆ. ಸ್ಮೃತಿ ಮಂದಾನ ಕ್ಯಾಪ್ಟನ್‌ಶಿಪ್‌‌ನಲ್ಲಿ ತಂಡ ಫಸ್ಟ್ ಟೈಮ್‌ ಕಪ್‌ ಎತ್ತಿ ಹಿಡಿದಿದೆ. ಈ ಮೂಲಕ ಈ ಸಲ ಕಪ್‌ ನಮ್ದೆ  ಅನ್ನೋ ಸ್ಲೋಗನ್‌‌ನ ಈ ಸಲ ಕಪ್‌‌ ನಮ್ದು ಬದಲಾಯಿಸಿದೆ.

ಇದನ್ನೂ ಓದಿ:Smriti Mandhana: ಆರ್ಸಿಬಿ ಟ್ರೋಫಿ ಗೆಲ್ಲುತ್ತಿದ್ದಂತೆ ಬಾಯ್ಫ್ರೆಂಡ್ ಜೊತೆಗಿರುವ ಸ್ಮೃತಿ ಮಂಧಾನ ಫೋಟೋ ವೈರಲ್...!

ಇನ್ನು ಆರ್​ಸಿಬಿ ತಮ್ಮ ಅಧಿಕೃತ ಇನ್​ಸ್ಟಾಗ್ರಾಮ್​ ಖಾತೆಯಲ್ಲಿ ಹಂಚಿಕೊಂಡ ಗೆಲುವಿನ ಪೋಸ್ಟ್​ ವಿರಾಟ್‌ ಕೊಹ್ಲಿ ದಾಖಲೆಯನ್ನು ಮುರಿದಿದೆ. ಈ ಪೋಸ್ಟ್‌ ಅತೀ ಕಡಿಮೆ ಅವಧಿಯಲ್ಲಿ 1 ಮಿಲಿಯನ್ ಲೈಕ್ಸ್ ಪಡೆದುಕೊಂಡಿದೆ. ಇದರೊಂದಿಗೆ ಭಾರತದಲ್ಲಿ ಅತೀ ಕಡಿಮೆ ಸಮಯದಲ್ಲಿ 10 ಲಕ್ಷ ಲೈಕ್ಸ್ ಪಡೆದುಕೊಂಡಿದೆ..

ಈ ದಾಖಲೆ ವಿರಾಟ್ ಕೊಹ್ಲಿಯ ಹೆಸರಿನಲ್ಲಿತ್ತು. ಫೆಬ್ರವರಿ 20 ರಂದು 2ನೇ ಮಗುವಿನ ಆಗಮನದ ಸುದ್ದಿಯನ್ನು ಕೊಹ್ಲಿ ತಮ್ಮ ಇನ್​ಸ್ಟಾಗ್ರಾಮ್ ಖಾತೆಯಲ್ಲಿ ಹಂಚಿಕೊಂಡಿದ್ದರು. ಈ ಪೋಸ್ಟ್ ಕೇವಲ 10 ನಿಮಿಷಗಳಲ್ಲಿ 10 ಲಕ್ಷ ಲೈಕ್ಸ್ ಪಡೆದುಕೊಂಡಿತ್ತು. ಇದೀಗ ಈ ದಾಖಲೆಯನ್ನು ಆರ್‌ಸಿಬಿ ಪೋಸ್ಟ್‌ ಮುರಿದಿದೆ.

ಕನ್ನಡ ಭಾಷೆಯಲ್ಲಿ ಇತ್ತೀಚಿನ ಕರ್ನಾಟಕ, ದೇಶ, ವಿದೇಶ, ಮನರಂಜನೆ, ಶಿಕ್ಷಣ, ಉದ್ಯೋಗ, ಆರೋಗ್ಯ, ಜೀವನಶೈಲಿ, ಆಧ್ಯಾತ್ಮ,  ಕ್ರೀಡೆ, ಕ್ರೈಂ, ವೈರಲ್, ವ್ಯಾಪಾರ, ತಂತ್ರಜ್ಞಾನ ಸುದ್ದಿಗಳನ್ನು ಓದಲು ಈಗಲೇ ನಮ್ಮ ಜೀ ಕನ್ನಡ ನ್ಯೂಸ್ ಮೊಬೈಲ್ ಅಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3AClgDd
Apple Link - https://apple.co/3wPoNgr
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು 
Twitter Link - https://bit.ly/3n6d2R8
Facebook Link - https://bit.ly/3Hhqmcj 
Youtube Link - https://www.youtube.com/live/RNn4I7iIaYE?si=3G4W5dh0oCdFnu-T

Instagram Link -  https://bit.ly/3LyfY2l 
Sharechat Link - https://bit.ly/3LCjokI 
Threads Link-  https://www.threads.net/@zeekannadanews 
WhatsApp Channel- bit.ly/46lENGm ಲಿಂಕ್ ಗಳ ಮೇಲೆ ಕ್ಲಿಕ್ ಮಾಡಿ.

Trending News