Ravindra Jadeja : ಶಸ್ತ್ರಚಿಕಿತ್ಸೆಗೆ ಒಳಗಾದ ಜಡೇಜಾ : ಟಿ20 ವಿಶ್ವಕಪ್​ನಲ್ಲಿ ಆಡ್ತಾರಾ ಅಲ್‌ರೌಂಡರ್‌..!

ಟೀಂ ಇಂಡಿಯಾ ಆಲ್‌ರೌಂಡರ್‌ ಆಟಗಾರ ರವೀಂದ್ರ ಜಡೇಜಾ ಅವರು, ಆಸ್ಪತ್ರೆಗೆ ದಾಖಲಾಗಿದ್ದು ಮೊಣಕಾಲಿನ ಶಸ್ತ್ರಚಿಕಿತ್ಸೆಗೆ ಒಳಗಾಗಿದ್ದಾರೆ. ಈ ಕುರಿತು ತಮ್ಮ ಇನ್‌ಸ್ಟಾಗ್ರಾಮ್‌ನಲ್ಲಿ ಫೋಟೋ ಒಂದನ್ನು ಹಂಚಿಕೊಂಡಿದ್ದಾರೆ.

Written by - Krishna N K | Last Updated : Sep 7, 2022, 04:00 PM IST
  • ಶಸ್ತ್ರಚಿಕಿತ್ಸೆಗೆ ಒಳಗಾದ ರವೀಂದ್ರ ಜಡೇಜಾ
  • ವಿಶ್ರಾಂತಿಯಲ್ಲಿರುವ ಜಡೇಜಾ ಮುಂಬರುವ ಟಿ-20 ವಿಶ್ವಕಪ್​ನಲ್ಲಿ ಕಾಣಿಸಿಕೊಳ್ಳುವುದು ಅನುಮಾನ
  • ಆದಷ್ಟು ಬೇಗ ಕ್ರಿಕೆಟ್‌ಗೆ ಮರಳುವುದಾಗಿ ಅಭಿಮಾನಿಗಳಿಗೆ ತಿಳಿಸಿದ ಟೀಂ ಇಂಡಿಯಾ ಅಲ್‌ರೌಂಡರ್‌
Ravindra Jadeja : ಶಸ್ತ್ರಚಿಕಿತ್ಸೆಗೆ ಒಳಗಾದ ಜಡೇಜಾ : ಟಿ20 ವಿಶ್ವಕಪ್​ನಲ್ಲಿ ಆಡ್ತಾರಾ ಅಲ್‌ರೌಂಡರ್‌..! title=

ಬೆಂಗಳೂರು: ಟೀಂ ಇಂಡಿಯಾ ಆಲ್‌ರೌಂಡರ್‌ ಆಟಗಾರ ರವೀಂದ್ರ ಜಡೇಜಾ ಅವರು, ಆಸ್ಪತ್ರೆಗೆ ದಾಖಲಾಗಿದ್ದು ಮೊಣಕಾಲಿನ ಶಸ್ತ್ರಚಿಕಿತ್ಸೆಗೆ ಒಳಗಾಗಿದ್ದಾರೆ. ಈ ಕುರಿತು ತಮ್ಮ ಇನ್‌ಸ್ಟಾಗ್ರಾಮ್‌ನಲ್ಲಿ ಫೋಟೋ ಒಂದನ್ನು ಹಂಚಿಕೊಂಡಿದ್ದಾರೆ.

ʼಈ ಸಂದರ್ಭದಲ್ಲಿ ನಾನು ತುಂಬಾ ಜನರಿಗೆ ಧನ್ಯವಾದ ಹೇಳಬೇಕು, ನನಗೆ ಬೆಂಬಲಿಸಿದ್ದಕ್ಕಾಗಿ ಬಿಸಿಸಿಐ ಮತ್ತು ಅಭಿಮಾನಿಗಳಿಗೆ ಧನ್ಯವಾದ. ಶಸ್ತ್ರಚಿಕಿತ್ಸೆ ಯಶಸ್ವಿಯಾಗಿದೆ. ಆದಷ್ಟು ಬೇಗ ಕ್ರಿಕೆಟ್‌ಗೆ ಮರಳಲು ಪ್ರಯತ್ನಿಸುವುದಾಗಿʼ ಅಭಿಮಾನಿಗಳಿಗೆ ಜಡೇಜಾ ತಿಳಿಸಿದ್ದಾರೆ.

ಇದನ್ನೂ ಓದಿ: Team India: ಏಷ್ಯಾಕಪ್‌ನೊಂದಿಗೆ ಈ 2 ಆಟಗಾರರ ವೃತ್ತಿಜೀವನ ಬಹುತೇಕ ಅಂತ್ಯ..?

ಈ ಬಾರಿಯ ಏಷ್ಯಾಕಪ್​ನ ಮೊದಲ ಎರಡು ಪಂದ್ಯಗಳಲ್ಲಿ ಜಡೇಜಾ ಕಾಣಿಸಿಕೊಂಡಿದ್ದರು. ಪಾಕಿಸ್ತಾನ್ ವಿರುದ್ದದ ಪಂದ್ಯದಲ್ಲಿ 35 ರನ್​ಗಳ ಹೊಡೆಯುವ ಮೂಲಕ ಟೀಮ್ ಇಂಡಿಯಾ ಗೆಲುವಿಗೆ ಕಾರಣರಾಗಿದ್ದರು. ಅಲ್ದೆ, ಹಾಂಗ್ ಕಾಂಗ್ ವಿರುದ್ದದ್ದ ಪಂದ್ಯದಲ್ಲಿ ಅತ್ಯುತ್ತಮ ಫೀಲ್ಡಿಂಗ್ ಮಾಡುವ ಮೂಲಕ ಗಮನ ಸೆಳೆದಿದ್ದರು. ನಂತರ ಗಾಯಗೊಂಡಿದ್ದರು.

ಸದ್ಯ ವಿಶ್ರಾಂತಿಯಲ್ಲಿರುವ ಜಡೇಜಾ ಮುಂಬರುವ ಟಿ20 ವಿಶ್ವಕಪ್​ನಲ್ಲಿ ಕಾಣಿಸಿಕೊಳ್ಳುವುದು ಅನುಮಾನ ಎನ್ನಲಾಗಿದೆ. ಟಿ20 ವಿಶ್ವಕಪ್​ಗಾಗಿ ಇದೇ ತಿಂಗಳು ಆಯ್ಕೆ ಪ್ರಕ್ರಿಯೆ ಆರಂಭವಾಗುತ್ತದೆ. ಒಂದು ವೇಳೆ ಗಾಯ ವಾಸಿಯಾದರೆ ಮಾತ್ರ ಜಡೇಜಾ ಆಟವಾಡಲಿದ್ದಾರೆ.  ಅಲ್ಲದೆ, ರವೀಂದ್ರ ಜಡೇಜಾ ಅವರ ಮೊಣಕಾಲಿಗೆ ಗಾಯವಾಗಿದೆ, ಅವರು ಏಷ್ಯಾ ಕಪ್‌ನಿಂದ ಹೊರಗುಳಿಯುತ್ತಾರೆ ಎಂದು ಪಾಕಿಸ್ತಾನದ ವಿರುದ್ಧ ಭಾರತದ ಸೂಪರ್ 4 ಪಂದ್ಯದ ಮೊದಲು ರಾಹುಲ್ ದ್ರಾವಿಡ್ ಹೇಳಿದರು. ಹಾಗೂ ವಿಶ್ವಕಪ್ ಇನ್ನೂ ಸ್ವಲ್ಪ ದೂರದಲ್ಲಿದೆ ಮತ್ತು ನಾವು ಯಾವುದೇ ತೀರ್ಮಾನಗಳಿಗೆ ಸದ್ಯಕ್ಕೆ ಬರುವುದು ಸೂಕ್ತವಲ್ಲ ಎಂದು ತಿಳಿಸಿದ್ದರು.

ಕನ್ನಡ ಭಾಷೆಯಲ್ಲಿ ಮತ್ತಷ್ಟು ತಾಜಾ ಸುದ್ದಿಗಳನ್ನು ಓದಲು ನಮ್ಮ ಜೀ ಕನ್ನಡ ನ್ಯೂಸ್ ಮೊಬೈಲ್ ಅಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3hDyh4G
Apple Link - https://apple.co/3hEw2hy
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು TwitterFacebookYoutube ಲಿಂಕ್ ಗಳ ಮೇಲೆ ಕ್ಲಿಕ್ಕಿಸಿ.

Trending News