Rashid Khan : ಪ್ರಸಕ್ತ ಇಂಡಿಯನ್ ಪ್ರೀಮಿಯರ್ ಲೀಗ್ (ಐಪಿಎಲ್) ಸೀಸನ್ ನಲ್ಲಿ ಸ್ಪಿನ್ನರ್ ರಶೀದ್ ಖಾನ್ ತಮ್ಮ ಫ್ರಾಂಚೈಸಿ ಗುಜರಾತ್ ಟೈಟಾನ್ಸ್ (ಜಿಟಿ) ಪರ ಬೌಲಿಂಗ್‌ನಲ್ಲಿ ತಮ್ಮ ಉತ್ತಮ ಪ್ರದರ್ಶನ ತೋರಿಸಲು ಸಾಧ್ಯವಾಗಲಿಲ್ಲ. ಆದರೆ, 23ರ ಹರೆಯದ ಈ ಆಟಗಾರ ಬ್ಯಾಟಿಂಗ್ ಅದ್ಭುತ ಪ್ರದರ್ಶನ ನೀಡಿದ್ದಾರೆ. ತೀವ್ರ ಒತ್ತಡದ ಪರಿಸ್ಥಿತಿಯಲ್ಲಿ ಸಿಎಸ್‌ಕೆ (40) ಮತ್ತು ಎಸ್‌ಆರ್‌ಹೆಚ್ (ಅಜೇಯ 31) ವಿರುದ್ಧ ಗುಜರಾತ್‌ಗೆ ರಶೀದ್ ಖಾನ್ ಮ್ಯಾಚ್ ವಿನ್ನರ್ ಆಗಿ ಹೊರಹೊಮ್ಮಿದ್ದಾರೆ.
ಧೋನಿಯಂತೆ ಫಿನಿಶರ್ ಆಗಲು ಪಡೆಯುತ್ತಿದ್ದಾರೆ ರಶೀದ್ ತರಬೇತಿ
ಆದರೆ ರಶೀದ್ ಖಾನ್ ಪ್ರಸಕ್ತ ಐಪಿಎಲ್ 2022 ರಲ್ಲಿ 7.09 ರ ಎಕಾನಾಮಿಯೊಂದಿಗೆ ಹಾರ್ದಿಕ್ ಪಾಂಡ್ಯ ನೇತೃತ್ವದ ತಂಡಕ್ಕೆ 8 ಪಂದ್ಯಗಳಲ್ಲಿ ಕೇವಲ ಎಂಟು ವಿಕೆಟ್ಗಳನ್ನು ಪಡೆದಿದ್ದಾರೆ.
ರಶೀದ್ ಮೂಲತಃ ಬೌಲರ್, ಆದರೆ, ಕೈ ಚಳಕ ತೋರಿಸುವಲ್ಲಿ ವಿಫಲರಾಗಿದ್ದಾರೆ. ಆದ್ರೆ, ಕಳೆದ 2-3 ವರ್ಷಗಳಿಂದ ತಮ್ಮ ಬ್ಯಾಟಿಂಗ್‌ನಲ್ಲಿ ಉತಮ್ಮ ಸುಧಾರಣೆಯನ್ನು ತೋರಿಸುತ್ತಿದ್ದಾರೆ. ಅದರಲ್ಲೂ ಮಹೇಂದ್ರ ಸಿಂಗ್ ಧೋನಿಯಂತಹ ಫಿನಿಶರ್ ಆಗಿ ತಮ್ಮ ಫ್ರಾಂಚೈಸಿಯನ್ನು ಬಲಪಡಿಸಿಕೊಳ್ಳಲು ತಯಾರಿ ನಡೆಸುತ್ತಿದ್ದಾರೆ.
ಇದನ್ನೂ ಓದಿ : ಟಿ20 ವಿಶ್ವಕಪ್ ತಂಡದಿಂದ ವಿರಾಟ್ ಕೊಹ್ಲಿ ಔಟ್ ಆಗುತ್ತಾರಾ...? ಗಂಗೂಲಿ ಹೇಳಿದ್ದೇನು?
ರಶೀದ್ ಖಾನ್ 2-3 ವರ್ಷಗಳಿಂದ ಬ್ಯಾಟಿಂಗ್ ಪ್ರಾಕ್ಟೀಸ್
ಈ ಕುರಿತು ಕುದ್ದು ಮಾಹಿತಿ ನೀಡಿರುವ ರಶೀದ್ ಖಾನ್, 'ಕಳೆದ ಎರಡು-ಮೂರು ವರ್ಷಗಳಿಂದ ನಾನು ನನ್ನ ಬ್ಯಾಟಿಂಗ್‌ನಲ್ಲಿ ಕೆಲಸ ಮಾಡುತ್ತಿದ್ದೇನೆ. ನಾನು ಮೈದಾನದಲ್ಲಿ ತಂಡಕ್ಕೆ ಫಿನಿಶರ್ ಆಗಿ ಹೊರಹೊಮ್ಮುತ್ತಿದ್ದೇನೆ. ನನ್ನಲ್ಲಿ ಆ ಕೌಶಲ್ಯ ಮತ್ತು ಪ್ರತಿಭೆ ಇದೆ, ಆದರೆ ನಾನು ಮ್ಯಾಚ್ ಫಿನಿಶರ್ ಆಗ್ತೀನಿ ಎಂಬ ವಿಶ್ವಾಸ ನನ್ನಲ್ಲಿತ್ತು ಎಂದು ಹೇಳಿದ್ದಾರೆ. ಉತ್ತಮ ಭಾಗವೆಂದರೆ ನಾನು ಈ ತಂಡದಲ್ಲಿ ಬ್ಯಾಟಿಂಗ್ ಮಾಡಲು ಹೆಚ್ಚು ಅವಕಾಶಗಳನ್ನು ಪಡೆಯುತ್ತಿದ್ದೇನೆ ಎಂದು ಹೇಳಿದ್ದಾರೆ.
'ಸ್ನೇಕ್ ಶಾಟ್' ಆಡುತ್ತಿದ್ದಾರೆ ರಶೀದ್ ಖಾನ್
ರಶೀದ್ ಇತ್ತೀಚಿಗೆ ಮಾಜಿ ಫ್ರಾಂಚೈಸಿಯನ್ನು ಎದುರಿಸುತ್ತಿದ್ದಾ ವೇಳೆ ಬ್ಯಾಟಿಂಗ್ ಎಷ್ಟು ಸ್ಫೋಟಕವಾಗಿ ಮಾಡಿದ್ದಾರೆ. ಕೇವಲ 11 ಎಸೆತಗಳಲ್ಲಿ ಅಜೇಯ 31 ರನ್ ಗಳಿಸಿದರು, ಹೈದರಾಬಾದ್ ವಿರುದ್ಧದ ಗೆಲುವಿನಲ್ಲಿ ಗುಜರಾತ್ 195 ರನ್‌ಗಳ ಅಸಾಧ್ಯ ಗುರಿಯನ್ನು ಬೆನ್ನಟ್ಟಿತು. ಈ ಸಮಯದಲ್ಲಿ, ರಶೀದ್ ಎಂಎಸ್ ಧೋನಿಯ ಹೆಲಿಕಾಪ್ಟರ್ ಶಾಟ್‌ನಂತಹ ಶಾಟ್ ಹೊಡೆದು ಆತ ಮುಗಿಸಿದರು, ಅದನ್ನು ರಶೀದ್ ಖಾನ್ 'ಸ್ನೇಕ್ ಶಾಟ್' ಎಂದು ಕರೆದರು.
ಇದನ್ನೂ ಓದಿ : PBKS vs LSG, IPL 2022: ಇಂದು ಬಲಿಷ್ಠ ಲಕ್ನೋಗೆ ಪಂಜಾಬ್ ಸವಾಲು
ಕನ್ನಡ ಭಾಷೆಯಲ್ಲಿ ಮತ್ತಷ್ಟು ತಾಜಾ ಸುದ್ದಿಗಳನ್ನು ಓದಲು ನಮ್ಮ ಜೀ ಕನ್ನಡ ನ್ಯೂಸ್ ಮೊಬೈಲ್ ಆಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3hDyh4G
Apple Link - https://apple.co/3hEw2hy
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು Twitter, Facebook, Youtube ಲಿಂಕ್ ಗಳ ಮೇಲೆ ಕ್ಲಿಕ್ಕಿಸಿ.