ನವದೆಹಲಿ: ಭಾರತ ಕ್ರಿಕೆಟ್ ತಂಡದ ಮಾಜಿ ನಾಯಕ ರಾಹುಲ್ ದ್ರಾವಿಡ್ ಐಸಿಸಿ ಹಾಲ್ ಆಫ್ ಫೇಮ್ ಗೆ ಆಯ್ಕೆಯಾಗಿದ್ದಾರೆ.ಆ ಮೂಲಕ ಈ ಶ್ರೇಯಕ್ಕೆ ಪಾತ್ರನಾದ ಐದನೇ ಆಟಗಾರ ಎಂದು ಅವರು ಖಾತ್ಯಿ ಪಡೆದಿದ್ದಾರೆ.
ಗುರುವಾರದಂದು ಭಾರತ ಮತ್ತು ವೆಸ್ಟ್ ಇಂಡೀಸ್ ನಡುವಿನ ಅಂತಿಮ ಏಕದಿನ ಪಂದ್ಯದ ಮುನ್ನ ಸಂಕ್ಷಿಪ್ತ ಐಸಿಸಿ ಹಾಲ್ ಆಫ್ ಫೇಮ್ ಸಮಾರಂಭದಲ್ಲಿ ರಾಹುಲ್ ದ್ರಾವಿಡ್ ಭಾಗವಹಿಸಿದ್ದರು.ಈ ಕಾರ್ಯಕ್ರಮದ ಔಪಚಾರಿಕತೆಯನ್ನು ಹಿರಿಯ ಆಟಗಾರ ಸುನಿಲ್ ಗವಾಸ್ಕರ್ ಪೋರೈಸಿದರು.
🙌 Congratulations Rahul Dravid! 🙌
A look at some of the times we got to see the legendary Indian batsman at his absolute best!
➡️ https://t.co/puD8WKlMA9 https://t.co/Be9z3llDsv
— ICC (@ICC) November 1, 2018
ಐಸಿಸಿಯು ರಾಹುಲ್ ದ್ರಾವಿಡ್ ರ ಹೆಸರನ್ನು ಹಾಲ್ ಆಫ್ ಫೇಮ್ ಗೆ ಜುಲೈ 2 ರಂದು ಸೇರಿಸಿತ್ತು. ಇದುವರೆಗೆ ಭಾರತದ ಪರ ಬಿಶನ್ ಸಿಂಗ್ ಬೇಡಿ, ಕಪಿಲ್ ದೇವ್, ಸುನಿಲ್ ಗಾವಸ್ಕರ್ ಮತ್ತು ಅನಿಲ್ ಕುಂಬ್ಳೆ ಈ ಶ್ರೆಯವನ್ನು ಪಡೆದಿದ್ದಾರೆ.
ರಾಹುಲ್ ದ್ರಾವಿಡ್ 164 ಟೆಸ್ಟಳಲ್ಲಿ 13,288 ರನ್ ಗಳನ್ನು ಗಳಿಸಿದ್ದಾರೆ.ಇದರಲ್ಲಿ ಒಟ್ಟು 36 ಶತಕಗಳು ಸೇರಿವೆ.344 ಏಕದಿನ ಪಂದ್ಯಗಳಲ್ಲಿ 10,889 ರನ್ ಗಳಿಸಿದ್ದಾರೆ,ಇದರಲ್ಲಿ ಏಕದಿನದಲ್ಲಿ 12 ಶತಕಗಳು ಸೇರಿವೆ. 2004 ರಲ್ಲಿ ಐಸಿಸಿ ಕ್ರಿಕೆಟಿ ಆಫ್ ದಿ ಇಯರ್ ಮತ್ತು ಐಸಿಸಿ ವರ್ಷದ ಟೆಸ್ಟ್ ಆಟಗಾರ ಎನ್ನುವ ಶ್ರೆಯವನ್ನು ಪಡೆದಿದ್ದರು.
ರಾಹುಲ್ ದ್ರಾವಿಡ್ ಕೇವಲ ಒಂದೇ ಒಂದು ಟ್ವೆಂಟಿ ಕ್ರಿಕೆಟ್ ಪಂದ್ಯವನ್ನು ಆಡಿದ್ದಾರೆ.ಅಲ್ಲದೆ ಟೆಸ್ಟ್ ನಲ್ಲಿ 210 ಟೆಸ್ಟ್ ಕ್ಯಾಚಗಳನ್ನು ಪಡೆದಿದ್ದಾರೆ.