Pakistan vs South Africa: ಪಾಕ್ ಸರಣಿ ನಂತರ ನಾಯಕನ ಹುದ್ದೆಗೆ ಡಿಕಾಕ್ ಗುಡ್ ಬೈ

ಸದ್ಯ ನಡೆಯುತ್ತಿರುವ ಪಾಕಿಸ್ತಾನ ಪ್ರವಾಸ ಮುಗಿದ ನಂತರ ಕ್ವಿಂಟನ್ ಡಿ ಕಾಕ್ ಟೆಸ್ಟ್ ನಾಯಕನಾಗಿ ಮುಂದುವರೆಯುವುದಿಲ್ಲ ಎಂದು ದಕ್ಷಿಣ ಆಫ್ರಿಕಾದ ಮುಖ್ಯ ಕೋಚ್ ಮಾರ್ಕ್ ಬೌಚರ್ ಬುಧವಾರ ಹೇಳಿದ್ದಾರೆ.

Last Updated : Feb 4, 2021, 12:00 AM IST
  • ನೀವು ರನ್ ಗಳಿಸದಿದ್ದರೆ ಅದು ಹೈಲೈಟ್ ಆಗುತ್ತದೆ, ವಿಶೇಷವಾಗಿ ನೀವು ಕ್ಯಾಪ್ಟನ್ ಆಗಿದ್ದರೆ" ಎಂದು ಬೌಚರ್ ಹೇಳಿದ್ದಾರೆ.
  • ಅವರು ಗುಣಮಟ್ಟದ ಆಟಗಾರ ಎನ್ನುವುದು ನಮಗೆ ತಿಳಿದಿದೆ.ಉತ್ತಮ ಇನಿಂಗ್ಸ್ ಶೀಘ್ರದಲ್ಲೇ ಆಡಲಿದ್ದಾರೆ.
  • ಅವನಿಗೆ ನಾಯಕನಾಗಿ ಹೆಚ್ಚುವರಿ ಹೊರೆ ನೀಡಲಾಗಿದೆ ಮತ್ತು ಅದು ಕಠಿಣವಾಗಬಹುದು ಎಂದು ಬೌಷರ್ ಹೇಳಿದರು.
Pakistan vs South Africa: ಪಾಕ್ ಸರಣಿ ನಂತರ ನಾಯಕನ ಹುದ್ದೆಗೆ ಡಿಕಾಕ್ ಗುಡ್ ಬೈ title=
file photo

ನವದೆಹಲಿ: ಸದ್ಯ ನಡೆಯುತ್ತಿರುವ ಪಾಕಿಸ್ತಾನ ಪ್ರವಾಸ ಮುಗಿದ ನಂತರ ಕ್ವಿಂಟನ್ ಡಿ ಕಾಕ್ ಟೆಸ್ಟ್ ನಾಯಕನಾಗಿ ಮುಂದುವರೆಯುವುದಿಲ್ಲ ಎಂದು ದಕ್ಷಿಣ ಆಫ್ರಿಕಾದ ಮುಖ್ಯ ಕೋಚ್ ಮಾರ್ಕ್ ಬೌಚರ್ ಬುಧವಾರ ಹೇಳಿದ್ದಾರೆ.

28 ವರ್ಷದ ಡಿ ಕಾಕ್ (quinton de kock) ರನ್ನು ಕಳೆದ ಅಕ್ಟೋಬರ್‌ನಲ್ಲಿ ತಾತ್ಕಾಲಿಕ ಆಧಾರದ ಮೇಲೆ ನಾಯಕನನ್ನಾಗಿ ನೇಮಿಸಲಾಯಿತು. "ನಾವು ಹಿಂತಿರುಗಿದಾಗ ನಮ್ಮ ಮುಂದಿನ ಟೆಸ್ಟ್ ಸರಣಿಯ ಮೊದಲು ನಮಗೆ ಸ್ವಲ್ಪ ಸಮಯ ಸಿಕ್ಕಿದೆ, ಆದ್ದರಿಂದ ನಾವು ಕುಳಿತುಕೊಳ್ಳಬಹುದು ಮತ್ತು ಅವನಿಂದ ಯಾರು ಸ್ವಾಧೀನಪಡಿಸಿಕೊಳ್ಳಬಹುದು ಮತ್ತು ಆ ಹೊರೆಯಿಂದ ಅವರನ್ನು ಬಿಡುಗಡೆ ಮಾಡಬಹುದು ಎಂಬುದರ ಕುರಿತು ಉತ್ತಮ ಧೃಢ ನಿರ್ಧಾರ ತೆಗೆದುಕೊಳ್ಳಲಾಗುವುದು" ಎಂದು ಬೌಚರ್ ರಾವಲ್ಪಿಂಡಿಯಲ್ಲಿ ಗುರುವಾರ ಪ್ರಾರಂಭವಾಗುವ ಪಾಕಿಸ್ತಾನ ವಿರುದ್ಧದ ಎರಡನೇ ಟೆಸ್ಟ್ ಪಂದ್ಯದ ಮುನ್ನ ಪತ್ರಿಕಾಗೋಷ್ಠಿಯಲ್ಲಿ ಹೇಳಿದರು.

ಇದನ್ನೂ ಓದಿ: ಡಿಕಾಕ್ ಆರ್ಭಟಕ್ಕೆ ತಣ್ಣಗಾದ ಭಾರತ : ಟಿ-20 ಸರಣಿ 1-1 ರಲ್ಲಿ ಸಮ

ಮುಂದಿನ ತಿಂಗಳು ಆಸ್ಟ್ರೇಲಿಯಾ ವಿರುದ್ಧದ ತವರು ಸರಣಿಯನ್ನು ಕರೋನವೈರಸ್ ಸಾಂಕ್ರಾಮಿಕ ರೋಗದ ಕಾರಣದಿಂದ ಕ್ರಿಕೆಟ್ ಆಸ್ಟ್ರೇಲಿಯಾ ಮುಂದೂಡಿದ್ದರಿಂದ ದಕ್ಷಿಣ ಆಫ್ರಿಕಾ ನೂತನ ನಾಯಕನಿಗಾಗಿ ಸ್ವಲ್ಪ ಸಮಯದವರೆಗೆ ಕಾಯಬಹುದು.ಎಬಿ ಡಿವಿಲಿಯರ್ಸ್ ಮತ್ತು ಹಾಶಿಮ್ ಆಮ್ಲಾ ಅವರ ನಿವೃತ್ತಿಯ ನಂತರ ಟೆಸ್ಟ್ ನಾಯಕನನ್ನು ನೇಮಿಸುವುದು ದಕ್ಷಿಣ ಆಫ್ರಿಕಾಕ್ಕೆ ಕಷ್ಟಕರವಾಗಿದೆ.

ಕಳೆದ ತಿಂಗಳು ಕರಾಚಿಯಲ್ಲಿ ಪಾಕಿಸ್ತಾನ ವಿರುದ್ಧದ ಮೊದಲ ಟೆಸ್ಟ್ ಪಂದ್ಯದಲ್ಲಿ ಸೋಲುವ ಮುನ್ನ ಶ್ರೀಲಂಕಾ ವಿರುದ್ಧದ ಸ್ವದೇಶಿ ಸರಣಿಯಲ್ಲಿ ದಕ್ಷಿಣ ಆಫ್ರಿಕಾವನ್ನು 2-0 ಅಂತರದಿಂದ ಮುನ್ನಡೆಸಿದರು.

"ನೀವು ರನ್ ಗಳಿಸದಿದ್ದರೆ ಅದು ಹೈಲೈಟ್ ಆಗುತ್ತದೆ, ವಿಶೇಷವಾಗಿ ನೀವು ಕ್ಯಾಪ್ಟನ್ ಆಗಿದ್ದರೆ" ಎಂದು ಬೌಚರ್ ಹೇಳಿದ್ದಾರೆ. ಇಂತಹ ಸಂದರ್ಭದಲ್ಲಿ ನಾವು ಕ್ವಿನ್ನಿಯ ಮೇಲೆ ಕಠಿಣ ತಿರ್ಮಾನ ತೆಗೆದುಕೊಳ್ಳುತ್ತಿಲ್ಲ,ಅವರು ಗುಣಮಟ್ಟದ ಆಟಗಾರ ಎನ್ನುವುದು ನಮಗೆ ತಿಳಿದಿದೆ.ಉತ್ತಮ ಇನಿಂಗ್ಸ್ ಶೀಘ್ರದಲ್ಲೇ ಆಡಲಿದ್ದಾರೆ.ಅವನಿಗೆ ನಾಯಕನಾಗಿ ಹೆಚ್ಚುವರಿ ಹೊರೆ ನೀಡಲಾಗಿದೆ ಮತ್ತು ಅದು ಕಠಿಣವಾಗಬಹುದು ಎಂದು ಬೌಷರ್ ಹೇಳಿದರು.

ಕನ್ನಡ ಭಾಷೆಯಲ್ಲಿ ಮತ್ತಷ್ಟು ಸ್ವಾರಸ್ಯಕರ ಸುದ್ದಿಗಳನ್ನು ಓದಲು ನಮ್ಮ ಝೀ ಹಿಂದೂಸ್ತಾನ್ ಕನ್ನಡ ಮೊಬೈಲ್ ಆಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3hDyh4G
Apple Link - https://apple.co/3hEw2hy

ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು TwitterFacebook ಲಿಂಕ್ ಗಳ ಮೇಲೆ ಕ್ಲಿಕ್ಕಿಸಿ.

 

Trending News