PSL League: ಪಿಎಸ್‌ಎಲ್‌ನಲ್ಲಿ ತಲೆತಗ್ಗಿಸುವ ಘಟನೆ, ಸಹ ಆಟಗಾರನಿಗೆ ಕಪಾಳಮೋಕ್ಷ ಮಾಡಿದ ಬೌಲರ್!

ಸೋಮವಾರ(ಫೆ.21) ರಾತ್ರಿ ಲಾಹೋರ್ ಖಲಂದರ್ಸ್ ಮತ್ತು ಪೇಶಾವರ್ ಝಲ್ಮಿ ನಡುವೆ ನಡೆದ ರೋಚಕ ಪಂದ್ಯದಲ್ಲಿ ಈ ಘಟನೆ ಸಂಭವಿಸಿದೆ.

Written by - Puttaraj K Alur | Last Updated : Feb 22, 2022, 01:25 PM IST
  • ಪಾಕಿಸ್ತಾನ ಸೂಪರ್ ಲೀಗ್ ಪಂದ್ಯದ ವೇಳೆ ಭಾರೀ ಗಲಾಟೆ ನಡೆದಿದೆ
  • ಕ್ಯಾಚ್ ಕೈಬಿಟ್ಟಿದ್ದಕ್ಕೆ ತನ್ನದೇ ತಂಡದ ಸಹ ಆಟಗಾರನಿಗೆ ಕಪಾಳಮೋಕ್ಷ
  • ಲಾಹೋರ್ ಖಲಂದರ್ಸ್ ಮತ್ತು ಪೇಶಾವರ್ ಝಲ್ಮಿ ನಡುವಿನ ಪಂದ್ಯದಲ್ಲಿ ಘಟನೆ
PSL League: ಪಿಎಸ್‌ಎಲ್‌ನಲ್ಲಿ ತಲೆತಗ್ಗಿಸುವ ಘಟನೆ, ಸಹ ಆಟಗಾರನಿಗೆ ಕಪಾಳಮೋಕ್ಷ ಮಾಡಿದ ಬೌಲರ್!  title=
ಕ್ಯಾಚ್ ಕೈಬಿಟ್ಟಿದ್ದಕ್ಕೆ ಕಪಾಳಮೋಕ್ಷ!

ನವದೆಹಲಿ: ಪಾಕಿಸ್ತಾನ ಸೂಪರ್ ಲೀಗ್ (PSL) ಪಂದ್ಯದ ವೇಳೆ ಭಾರೀ ಗಲಾಟೆ ನಡೆದಿದೆ. ಪಂದ್ಯದ ವೇಳೆ ಪಾನಮತ್ತನಾಗಿದ್ದ ಪಾಕಿಸ್ತಾನದ ಬೌಲರ್ ತನ್ನದೇ ತಂಡದ ಸಹ ಆಟಗಾರನಿಗೆ ಕಪಾಳಮೋಕ್ಷ ಮಾಡಿದ್ದಾನೆ. ಈ ಘಟನೆಯ ವಿಡಿಯೋ ಸಾಮಾಜಿಕ ಜಾಲತಾಣ(Social Media)ಗಳಲ್ಲಿ ಭಾರೀ ಸಂಚಲನ ಮೂಡಿಸುತ್ತಿದೆ.

ಪಿಎಸ್‌ಎಲ್‌(Pakistan Super League)ನಲ್ಲಿ ಲಾಹೋರ್ ಖಲಂದರ್ಸ್ ವೇಗದ ಬೌಲರ್ ಹ್ಯಾರಿಸ್ ರೌಫ್ ಪಂದ್ಯದ ವೇಳೆ ವಿಕೆಟ್ ಪಡೆದ ನಂತರ ತಮ್ಮ ಸಹ ಆಟಗಾರ ಕಮ್ರಾನ್ ಗುಲಾಮ್‌ಗೆ ಕಪಾಳಮೋಕ್ಷ ಮಾಡಿದ್ದಾರೆ. ಪೇಶಾವರ ಝಲ್ಮಿ ಇನಿಂಗ್ಸ್‌ನ 2ನೇ ಓವರ್‌ನಲ್ಲಿ ಈ ಘಟನೆ ನಡೆದಿದೆ. ಈ ವೇಳೆ ಹ್ಯಾರಿಸ್ ರೌಫ್ ಬೌಲಿಂಗ್ ಮಾಡುತ್ತಿದ್ದರು.

ಇದನ್ನೂ ಓದಿ: Rohit Sharma : ಟೀಂ ಇಂಡಿಯಾದ ಹಣೆಬರಹವನ್ನೇ ಬದಲಿಸಿದ ಕ್ಯಾಪ್ಟನ್ ರೋಹಿತ್ ಶರ್ಮಾ!

ಅಷ್ಟಕ್ಕೂ ಏನಾಗಿತ್ತು..?

ಸೋಮವಾರ(ಫೆ.21) ರಾತ್ರಿ ಲಾಹೋರ್ ಖಲಂದರ್ಸ್ ಮತ್ತು ಪೇಶಾವರ್ ಝಲ್ಮಿ(Lahore Qalandars vs Peshawar Zalmi)ನಡುವೆ ನಡೆದ ರೋಚಕ ಪಂದ್ಯದಲ್ಲಿ ಈ ಘಟನೆ ಸಂಭವಿಸಿದೆ. ಈ ಪಂದ್ಯದಲ್ಲಿ ಪೇಶಾವರ್ ಮೊದಲು ಬ್ಯಾಟಿಂಗ್ ಆಯ್ಕೆ ಮಾಡಿಕೊಂಡಿತ್ತು. ಲಾಹೋರ್ ಪರ 2ನೇ ಓವರ್‌ನಲ್ಲಿ ಹ್ಯಾರಿಸ್ ಬೌಲಿಂಗ್ ಮಾಡಲು ಬಂದಿದ್ದರು. ಈ ಓವರ್‌ನಲ್ಲಿ ಕಮ್ರಾನ್ ಗುಲಾಮ್ ಅವರು ಪೇಶಾವರದ ಅಪಾಯಕಾರಿ ಆರಂಭಿಕ ಬ್ಯಾಟ್ಸ್‌ಮನ್ ಹರ್ಜತುಲ್ಲಾ ಝಝಾಯ್ ಅವರ ಕ್ಯಾಚ್ ಅನ್ನು ಕೈಚೆಲ್ಲಿದರು. ಇದರಿಂದ ರೌಫ್ ತುಂಬಾ ಕೋಪಗೊಂಡರು.

ನಂತರ ಇದೇ ಓವರ್​ನ 5ನೇ ಎಸೆತದಲ್ಲಿ ಮತ್ತೊಬ್ಬ ಬ್ಯಾಟ್ಸ್ ಮನ್ ಮೊಹಮ್ಮದ್ ಹ್ಯಾರಿಸ್ ವಿಕೆಟ್ ಅನ್ನು ರೌಫ್ ಪಡೆದುಕೊಂಡರು. ಫೈನ್ ಲೆಗ್‌ನಲ್ಲಿ ಫವಾದ್ ಅಹ್ಮದ್ ಕ್ಯಾಚ್ ಹಿಡಿಯುವ ಮೂಲಕ ರೌಫ್ ಮೊದಲ ವಿಕೆಟ್ ಕಿತ್ತರು. ಈ ವಿಕೆಟ್ ಕಿತ್ತ ಸಂಭ್ರಮದ ನಡುವೆ ರೌಫ್ ಅವರು ಕಮ್ರಾನ್ ಗುಲಾಮ್ ಗೆ ಕಪಾಳಮೋಕ್ಷ ಮಾಡಿದರು. ಆದರೆ ಈ ವೇಳೆ ಸ್ವಲ್ಪವೂ ವಿಚಿಲಿತರಾಗದ ಕಮ್ರಾನ್ ತಮ್ಮನ್ನು ನಿಯಂತ್ರಿಸಿಕೊಂಡರು.

ಸಂಭ್ರಮದ ನಡುವೆ ಕಪಾಳಮೋಕ್ಷ!

ಹ್ಯಾರಿಸ್ ರೌಫ್(Haris Rauf)ಅವರು ತಮ್ಮ ಓವರ್‌ನ ಕೊನೆಯ ಎಸೆತದಲ್ಲಿ ಮೊಹಮ್ಮದ್ ಹ್ಯಾರಿಸ್ ಅವರನ್ನು ಔಟ್ ಮಾಡಿದರು. ಈ ವೇಳೆ ಕಮ್ರಾನ್ ಸೇರಿದಂತೆ ಎಲ್ಲ ಆಟಗಾರರು ಸಂಭ್ರಮಾಚರಣೆಗೆ ಬಂದಿದ್ದರು. ರೌಫ್ ಬಳಿ ಕಮ್ರಾನ್(Kamran Ghulam) ತಲುಪಿದ ತಕ್ಷಣವೇ ಆತನಿಗೆ ಕಪಾಳಮೋಕ್ಷ ಮಾಡಲಾಗಿದೆ. ಇದಾದ ನಂತರ ಕಮ್ರಾನ್ ಯಾವುದೇ ಪ್ರತಿಕ್ರಿಯೆ ನೀಡಿಲ್ಲ. ಈ ವಿಷಯ ಮುನ್ನೆಲೆಗೆ ಬಂದ ನಂತರ ಹ್ಯಾರಿಸ್ ರೌಫ್ ಅವರನ್ನು ಸಾಮಾಜಿಕ ಜಾಲತಾಣಗಳಲ್ಲಿ ಸಾಕಷ್ಟು ಟ್ರೋಲ್ ಮಾಡಲಾಗುತ್ತಿದೆ.

ಇದನ್ನೂ ಓದಿ: Rohit Sharma: ರೋಹಿತ್ ಶರ್ಮಾ ಕ್ಯಾಪ್ಟನ್ ಆಗುತ್ತಿದ್ದಂತೆ ಖುಲಾಯಿಸಿತು ಈ 3 ಆಟಗಾರರ ಅದೃಷ್ಟ

ಶ್ರೀಶಾಂತ್ ಗೆ ಕಪಾಳಮೋಕ್ಷ ಮಾಡಿದ್ದ ಹರ್ಭಜನ್ ಸಿಂಗ್

ಐಪಿಎಲ್ ಮೊದಲ ಸೀಸನ್ ನಲ್ಲಿ ಭಾರತದ ದಿಗ್ಗಜ ಆಫ್ ಸ್ಪಿನ್ನರ್ ಹರ್ಭಜನ್ ಸಿಂಗ್ ವೇಗದ ಬೌಲರ್ ಶ್ರೀಶಾಂತ್ ಗೆ ಕಪಾಳಮೋಕ್ಷ ಮಾಡಿದ್ದರು. ಈ ಋತುವಿನಲ್ಲಿ ಹರ್ಭಜನ್ ಮುಂಬೈ ಮತ್ತು ಶ್ರೀಶಾಂತ್ ಕಿಂಗ್ಸ್ ಇಲೆವೆನ್ ಪಂಜಾಬ್ ಪರ ಆಡುತ್ತಿದ್ದರು. ಉಭಯ ತಂಡಗಳ ನಡುವಿನ ಪಂದ್ಯದ ನಂತರ ಶ್ರೀಶಾಂತ್‌ಗೆ ಹರ್ಭಜನ್ ಕಪಾಳಮೋಕ್ಷ ಮಾಡಿದ್ದರು. ಬಳಿಕ ಇಬ್ಬರೂ ತಾವೇ  ಸಮಸ್ಯೆಯನ್ನು ಬಗೆಹರಿಸಿಕೊಂಡರು. ಪಿಎಸ್ ಎಲ್(PSL 2022) ನಲ್ಲೂ ಹಲವು ವಿವಾದಗಳು ಮುನ್ನೆಲೆಗೆ ಬಂದಿವೆ. ವಹಾಬ್ ರಿಯಾಜ್ ಮತ್ತು ಅಹ್ಮದ್ ಶೆಹಜಾದ್ 2016ರಲ್ಲಿ ಪರಸ್ಪರ ಕಿತ್ತಾಡಿಕೊಂಡಿದ್ದರು. ಈ ವೇಳೆ ಷಹಜಾದ್ ನನ್ನು ರಿಯಾಜ್ ತಳ್ಳಿದ್ದರು. ಬಳಿಕ ಇಬ್ಬರ ನಡುವೆ ಮಾರಾಮಾರಿ ನಡೆದಿತ್ತು. ಈ ಘಟನೆಯ ನಂತರ ರಿಯಾಜ್‌ಗೆ ಪಂದ್ಯದ ಶೇ.40 ಮತ್ತು ಶಹಜಾದ್‌ಗೆ ಶೇ.30ರಷ್ಟು ದಂಡ ವಿಧಿಸಲಾಗಿತ್ತು.

ಕನ್ನಡ ಭಾಷೆಯಲ್ಲಿ ಮತ್ತಷ್ಟು ಸ್ವಾರಸ್ಯಕರ ಸುದ್ದಿಗಳನ್ನು ಓದಲು ನಮ್ಮ ಜೀ ಕನ್ನಡ ನ್ಯೂಸ್ ಮೊಬೈಲ್ ಆಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3hDyh4G
Apple Link - https://apple.co/3hEw2hy
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು TwitterFacebook ಲಿಂಕ್ ಗಳ ಮೇಲೆ ಕ್ಲಿಕ್ಕಿಸಿ.

Trending News