ನವದೆಹಲಿ: ಟಿವಿ ಶೋವೊಂದರಲ್ಲಿ ನೀಡಿದ ಕಾಮೆಂಟ್ ಗಳಿಂದಾಗಿ ಹಾರ್ದಿಕ್ ಪಾಂಡ್ಯ ಮತ್ತು ಕೆ.ಎಲ್ ರಾಹುಲ್ ಅವರ ವಿರುದ್ದ ಕ್ರಿಕೆಟ್ ವಲಯದಲ್ಲಿ ಭಾರಿ ಟೀಕೆ ಕೇಳಿ ಬಂದಿತ್ತು.ಆದರೆ ಈಗ ಭಾರತದ ಮಾಜಿ ನಾಯಕ ಸೌರವ್ ಗಂಗೂಲಿ ಮಾತ್ರ ಈ ಇಬ್ಬರು ಆಟಗಾರರ ಬೆಂಬಲಕ್ಕೆ ನಿಂತಿದ್ದಾರೆ.
"ನಾವೆಲ್ಲರೂ ಮಾನವರು ಆದ್ದರಿಂದ ಎಲ್ಲರೂ ಪರ್ಫೆಕ್ಟ್ ಆಗಿರೋಲ್ಲ" ಆದ್ದರಿಂದ ಈ ತಪ್ಪುಗಳನ್ನು ಮತ್ತೊಮ್ಮೆ ಮಾಡದೆ ಮುಂದೆ ಸಾಗಬೇಕು ಎಂದು ತಿಳಿಸಿದರು.ನಾನು ಇದುವರೆಗೆ ಆ ಎಪಿಸೋಡ್ ನ್ನು ನೋಡಿಲ್ಲ, ನಾನು ಕಾಮಿಡಿ ನೈಟ್ಸ್ ವಿತ್ ಕಪಿಲ್ ನೋಡುತ್ತೇನೆ "ಎಂದ ದಾದಾ ನೀವು ಮಾಡರ್ನ್ ಕ್ರಿಕೆಟಿಗರ್ಷ್ಟೇ ಜವಾಬ್ದಾರಿಯಾಗಿ ವರ್ತಿಸಬೇಕೆಂದು ಎಲ್ಲವನ್ನು ಸಾಮಾನ್ಯಿಕರಿಸಬಾರದು, ಜನರು ತಪ್ಪುಗಳನ್ನು ಮಾಡುತ್ತಾರೆ. ಆದ್ದರಿಂದ ಅದರ ಆಳಕ್ಕಿಳಿಯುವುದು ಅಷ್ಟು ಸರಿಯಲ್ಲ ಎಂದರು.
ಯಾರೇ ತಪ್ಪು ಮಾಡಿರಲಿ ಅದನ್ನು ತಿಳಿದುಕೊಂಡು ಅವರೆಲ್ಲರು ಉತ್ತಮ ವ್ಯಕ್ತಿಗಳಾಗಿ ಬದಲಾಗುತ್ತಾರೆ ಎನ್ನುವ ವಿಶ್ವಾಸವಿದೆ.ನಾವೆಲ್ಲಾ ಮನುಷ್ಯರೆ ಹೊರತು ಮಷಿನ್ ಗಳಲ್ಲ ಎಲ್ಲವು ಪರ್ಫೆಕ್ಟ್ ಎನ್ನುವುದಕ್ಕೆ ಎಂದು ಅಭಿಪ್ರಾಯಪಟ್ಟಿದ್ದಾರೆ.
ನನಗೆ ಅನಿಸುವ ಹಾಗೆ ಮಾಡರ್ನ್ ಕ್ರಿಕೆಟಿಗರು ಜವಾಬ್ದಾರಿಯನ್ನು ಹೊಂದಿರುವವರು, ಶಿಸ್ತನ್ನು ಒಳಗೊಂಡವರು ಮತ್ತು ವಿದೇಯರಾಗಿರುವವರು, ಜೀವನದಲ್ಲಿ ಕೆಲವು ತಪ್ಪುಗಳು ನಡೆದು ಹೋಗಿಬಿಡುತ್ತವೆ, ಅದರಲ್ಲಿ ನಾವು ತಪ್ಪುಗಳನ್ನು ಎಸಗುತ್ತೇವೆ. ನೀವು ವಿರಾಟ್ ಕೊಹ್ಲಿರನ್ನು ನೋಡಿ ಅವರೊಬ್ಬ ಅದ್ಬುತ ರೋಲ್ ಮಾಡೆಲ್, ಇದಕ್ಕೆ ಭಾರತ ಅದೃಷ್ಟ ವೆನ್ನಬಹುದು ಎಂದು ಗಂಗೂಲಿ ತಿಳಿಸಿದರು.