IPL 2021, PBKS vs RR: ಇಂದು ಪಂಜಾಬ್ ಕಿಂಗ್ಸ್ ಮತ್ತು ರಾಜಸ್ಥಾನ್ ರಾಯಲ್ಸ್ ಸೆಣಸಾಟ

ದುಬೈನ ಅಂತಾರಾಷ್ಟ್ರೀಯ ಕ್ರೀಡಾಂಗಣದಲ್ಲಿ ನೆಡಯಲಿರುವ ಪಂದ್ಯದಲ್ಲಿ ಕೆ.ಎಲ್.ರಾಹುಲ್ ಮತ್ತು ಸಂಜು ಸ್ಯಾಮನ್ಸ್ ನಾಯಕತ್ವದ ತಂಡಗಳು ಮುಖಾಮುಖಿಯಾಗುತ್ತಿವೆ.

Last Updated : Sep 21, 2021, 05:10 PM IST
  • ಐಪಿಎಲ್ ಟೂರ್ನಿಯ 31ನೇ ಪಂದ್ಯದಲ್ಲಿ ಪಂಜಾಬ್ ಕಿಂಗ್ಸ್ ಮತ್ತು ರಾಜಸ್ಥಾನ್ ರಾಯಲ್ಸ್ ಮುಖಾಮುಖಿ
  • ಗೆಲುವಿನ ಒತ್ತಡದಲ್ಲಿರುವ ಕನ್ನಡಿಗ ಕೆ.ಎಲ್.ರಾಹುಲ್ ಮತ್ತು ಸಂಜು ಸ್ಯಾಮ್ಸನ್ ಪಡೆ
  • ದುಬೈನ ಅಂತಾರಾಷ್ಟ್ರೀಯ ಕ್ರೀಡಾಂಗಣದಲ್ಲಿ ನೆಡಯಲಿರುವ ಪಂದ್ಯಕ್ಕೆ ಉಭಯ ತಂಡಗಳು ಸಜ್ಜು
IPL 2021, PBKS vs RR: ಇಂದು ಪಂಜಾಬ್ ಕಿಂಗ್ಸ್ ಮತ್ತು ರಾಜಸ್ಥಾನ್ ರಾಯಲ್ಸ್ ಸೆಣಸಾಟ title=
ಐಪಿಎಲ್ 32ನೇ ಪಂದ್ಯದಲ್ಲಿ ಪಂಜಾಬ್ ಮತ್ತು ರಾಜಸ್ಥಾನ್ ಮುಖಾಮುಖಿ (Photo Courtesy: @Zee News)

ನವದೆಹಲಿ: 14ನೇ ಆವೃತ್ತಿಯ ಇಂಡಿಯನ್ ಪ್ರೀಮಿಯರ್ ಲೀಗ್(IPL 2021) 32ನೇ ಪಂದ್ಯದಲ್ಲಿ ಇಂದು ಪಂಜಾಬ್ ಕಿಂಗ್ಸ್ ಮತ್ತು ರಾಜಸ್ಥಾನ್ ರಾಯಲ್ಸ್ ಗೆಲುವಿಗಾಗಿ ಸೆಣಸಾಟ ನಡೆಸಲಿವೆ. ದುಬೈನ ಅಂತಾರಾಷ್ಟ್ರೀಯ ಕ್ರೀಡಾಂಗಣದಲ್ಲಿ ನೆಡಯಲಿರುವ ಪಂದ್ಯದಲ್ಲಿ ಕನ್ನಡಿಗ ಕೆ.ಎಲ್.ರಾಹುಲ್ ಮತ್ತು ಸಂಜು ಸ್ಯಾಮನ್ಸ್ ನಾಯಕತ್ವದ ತಂಡಗಳು ಮುಖಾಮುಖಿಯಾಗುತ್ತಿವೆ.

ಈಗಾಗಲೇ ಮೊದಲ ಹಂತದಲ್ಲಿ ಕ್ರಮವಾಗಿ 7-8 ಪಂದ್ಯಗಳನ್ನು ಆಡಿರುವ ಉಭಯ ತಂಡಗಳಿಗೆ ಗೆಲುವು ಅನಿವಾರ್ಯವಾಗಿದೆ. ಏಕೆಂದರೆ ಈ ಎರಡೂ ತಂಡಗಳು ಪಾಯಿಂಟ್ಸ್ ಪಟ್ಟಿಯಲ್ಲಿ ತುಂಬಾ ಕೆಳಗಿವೆ. ಕೆ.ಎಲ್.ರಾಹುಲ್(KL Rahul) ನೇತೃತ್ವದ ಪಂಜಾಬ್ ಕಿಂಗ್ಸ್(Punjab Kings) ಮೊದಲ ಹಂತದಲ್ಲಿ ಆಡಿದ 8 ಪಂದ್ಯಗಳಲ್ಲಿ ಕೇವಲ 3 ಗೆಲುವು ಸಾಧಿಸಿದ್ದು, 5ರಲ್ಲಿ ಸೋಲು ಕಂಡಿದೆ. 6 ಅಂಕಗಳೊಂದಿಗೆ ಅಂಕಪಟ್ಟಿಯಲ್ಲಿ 7ನೇ ಸ್ಥಾನದಲ್ಲಿದೆ.

ಇದನ್ನೂ ಓದಿ: IPL 2021: RCB ತಂಡದ ನಾಯಕರಾಗುವ ಆಟಗಾರರು ಯಾರು ಗೊತ್ತೇ?

ಕೆ.ಎಲ್.ರಾಹುಲ್(KL Rahul) ಪಡೆಗೆ ಇನ್ನುಳಿದ ಎಲ್ಲ ಪಂದ್ಯಗಳಲ್ಲೂ ಗೆಲುವು ಅನಿವಾರ್ಯವಾಗಿದೆ. ಅಂಕಪಟ್ಟಿಯಲ್ಲಿ ತಮ್ಮ ಸ್ಥಾನವನ್ನು ಉತ್ತಮಪಡಿಸಿಕೊಳ್ಳಲು ಹೋರಾಟ ನಡೆಸಬೇಕಿದೆ. ಬ್ಯಾಟಿಂಗ್ ಮತ್ತು ಬೌಲಿಂಗ್ ವಿಭಾಗದಲ್ಲಿ ಪಂಜಾಬ್ ಬಲಿಷ್ಠವಾಗಿದ್ದರೂ ಆಟಗಾರರು ನಿರೀಕ್ಷಿತ ಪ್ರದರ್ಶನ ನೀಡುವಲ್ಲಿ ವಿಫಲರಾಗುತ್ತಿದ್ದಾರೆ. ಹೀಗಾಗಿ ತಂಡ ಎಲ್ಲಾ ವಿಭಾಗಗಳಲ್ಲಿಯೂ ಸುಧಾರಿಸಿಕೊಂಡು, ಕಳೆದ ಪಂದ್ಯಗಳಲ್ಲಿ ಮಾಡಿದ ತಪ್ಪುಗಳನ್ನು ತಿದ್ದುಕೊಂಡು ಕಣಕ್ಕಿಳಿಯಬೇಕಿದೆ.

ಇನ್ನು ಸಂಜು ಸ್ಯಾಮ್ಸನ್ ನೇತೃತ್ವದ ರಾಜಸ್ಥಾನ್ ರಾಯಲ್ಸ್(Rajasthan Royals) ತಂಡಕ್ಕೂ ಕೂಡ ಬಾಕಿ ಪಂದ್ಯಗಳಲ್ಲಿ ಗೆಲುವು ಅನಿವಾರ್ಯವಾಗಿದೆ. ಮೊದಲ ಹಂತದಲ್ಲಿ ತಾನಾಡಿದ 7 ಪಂದ್ಯಗಳಲ್ಲಿ 4 ಗೆಲುವು, 4 ಸೋಲು ಕಂಡಿರುವ ರಾಜಸ್ಥಾನ್ ಅಂಕಪಟ್ಟಿಯಲ್ಲಿ 6ನೇ ಸ್ಥಾನದಲ್ಲಿದೆ. ರಾಜಸ್ಥಾನ್ ತಂಡಕ್ಕೆ ಜೋಸ್ ಬಟ್ಲರ್, ಬೆನ್ ಸ್ಟೋಕ್ಸ್ ಮತ್ತು ಜೋಪ್ರಾ ಅರ್ಚರ್ ಮೂವರು ಸ್ಟಾರ್ ಆಟಗಾರರು ಕೈಕೊಟ್ಟಿದ್ದು, ತಂಡ ಯಾವ ರೀತಿ ಪ್ರದರ್ಶನ ನೀಡುತ್ತದೆ ಕಾದು ನೋಡಬೇಕಿದೆ. ಈ ಮೂವರು ಆಟಗಾರರಿಗೆ ರಾಜಸ್ಥಾನ ಬದಲಿ ಆಟಗಾರರನ್ನು ಕಂಡುಕೊಂಡಿದೆ. ಆದರೆ ಸ್ಟಾರ್ ಆಟಗಾರರ ಅನುಪಸ್ಥಿತಿ ತಂಡಕ್ಕೆ ಕಾಡಲಿದೆ.

ಇದನ್ನೂ ಓದಿ: Video: 'ಧೋನಿ ರಿವ್ಯೂ ಸಿಸ್ಟಮ್' ಅನ್ನು ತಪ್ಪಿಸುವುದು ಭಾರೀ ಕಷ್ಟ, ಈ ರೀತಿ ಬ್ಯಾಟ್ಸ್‌ಮನ್ ಅನ್ನು ಚಿಂತೆಗೀಡು ಮಾಡಿದ ಮಹಿ

ಎರಡೂ ತಂಡಗಳ ಸ್ಕ್ವಾಡ್‌ ಹೀಗಿದೆ ನೋಡಿ...

ರಾಜಸ್ಥಾನ ರಾಯಲ್ಸ್: ಸಂಜು ಸ್ಯಾಮ್ಸನ್ (ಕ್ಯಾಪ್ಟನ್), ಲಿಯಾಮ್ ಲಿವಿಂಗ್ಸ್ಟೋನ್, ಎವಿನ್ ಲೂಯಿಸ್, ಡೇವಿಡ್ ಮಿಲ್ಲರ್, ಕ್ರಿಸ್ ಮೋರಿಸ್, ಓಶಾನೆ ಥಾಮಸ್, ಮುಸ್ತಫಿಜುರ್ ರಹಮಾನ್, ತಬ್ರೇಜ್ ಶಮ್ಸಿ, ಗ್ಲೆನ್ ಫಿಲಿಪ್ಸ್, ಚೇತನ್ ಸಕಾರಿಯಾ, ರಿಯಾನ್ ಪರಾಗ್, ರಾಹುಲ್ ತಿವಾಟಿಯಾ, ಆಕಾಶ್ ಸಿಂಗ್, ಅನುಜ್ ರಾವತ್, ಕೆಸಿ ಕರಿಯಾ, ಯಶಸ್ವಿ ಜೈಸ್ವಾಲ್, ಶಿವಂ ದುಬೆ, ಶ್ರೇಯಸ್ ಗೋಪಾಲ್, ಕಾರ್ತಿಕ್ ತ್ಯಾಗಿ, ಮಯಾಂಕ್ ಮಾರ್ಕಂಡೆ, ಜಯದೇವ್ ಉನದ್ಕಟ್, ಕುಲದೀಪ್ ಯಾದವ್, ಮಹಿಪಾಲ್ ಲೊಮರ್

ಪಂಜಾಬ್ ಕಿಂಗ್ಸ್: ಕೆ.ಎಲ್.ರಾಹುಲ್ (ನಾಯಕ), ಮಯಾಂಕ್ ಅಗರ್ವಾಲ್, ಅರ್ಷದೀಪ್ ಸಿಂಗ್, ಇಶಾನ್ ಪೊರೆಲ್, ಶಾರುಖ್ ಖಾನ್, ಮೊಹಮ್ಮದ್ ಶಮಿ, ನಾಥನ್ ಎಲ್ಲಿಸ್, ಆದಿಲ್ ರಶೀದ್, ಮುರುಗನ್ ಅಶ್ವಿನ್, ಹರ್ ಪ್ರೀತ್ ಬ್ರಾರ್, ಮೊಯಿಸ್ ಹೆನ್ರಿಕ್ಸ್, ಕ್ರಿಸ್ ಜೋರ್ಡಾನ್, ಏಡೆನ್ ಮಾರ್ಕ್ರಮ್, ಮಂದೀಪ್ ಸಿಂಗ್, ದರ್ಶನ್ ನಲ್ಕಂಡೆ , ಪ್ರಭಸಿಮ್ರಾನ್ ಸಿಂಗ್, ರವಿ ಬಿಶ್ನೋಯ್, ಉತ್ಕರ್ಶ್ ಸಿಂಗ್, ಫ್ಯಾಬಿಯನ್ ಅಲೆನ್, ಸೌರಭ್ ಕುಮಾರ್, ಜಲಜ್ ಸಕ್ಸೇನಾ.

ಐಪಿಎಲ್‌ ಪಂದ್ಯ: 32

ಪಂಜಾಬ್ ಕಿಂಗ್ಸ್ vs ರಾಜಸ್ಥಾನ್ ರಾಯಲ್ಸ್

ದಿನಾಂಕ: ಸೆಪ್ಟೆಂಬರ್ 21, ಮಂಗಳವಾರ

ಸ್ಥಳ: ದುಬೈನ ಅಂತಾರಾಷ್ಟ್ರೀಯ ಕ್ರೀಡಾಂಗಣ

ಸಮಯ: ಸಂಜೆ 7.30

ಕನ್ನಡ ಭಾಷೆಯಲ್ಲಿ ಮತ್ತಷ್ಟು ಸ್ವಾರಸ್ಯಕರ ಸುದ್ದಿಗಳನ್ನು ಓದಲು ನಮ್ಮ ಝೀ ಹಿಂದೂಸ್ತಾನ್ ಕನ್ನಡ ಮೊಬೈಲ್ ಆಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3hDyh4G
Apple Link - https://apple.co/3hEw2hy
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು TwitterFacebook ಲಿಂಕ್ ಗಳ ಮೇಲೆ ಕ್ಲಿಕ್ಕಿಸಿ.

Trending News