arshad nadeem: ಪಾಕಿಸ್ತಾನದ ಅಥ್ಲೀಟ್ ಅರ್ಷದ್ ನದೀಮ್ ಪ್ಯಾರಿಸ್ ಒಲಿಂಪಿಕ್ಸ್ 2024 ರಲ್ಲಿ ಜಾವೆಲಿನ್ ಎಸೆತದಲ್ಲಿ ಚಿನ್ನದ ಪದಕ ಗೆದ್ದಿದ್ದಾರೆ.. ನದೀಮ್ ಚಿನ್ನದ ಪದಕ ಗೆದ್ದ ನಂತರ ಪಾಕಿಸ್ತಾನದ ಜನರು ಭರ್ಜರಿ ಸಂಭ್ರಮಿಸಿದರು. ಅರ್ಷದ್ ಅವರಿಗೆ ಜಗತ್ತಿನಾದ್ಯಂತ ಪ್ರಶಂಸೆಯ ಸುರಿಮಳೆಗೈದರು. ಭಾರತ ಕೂಡ ಚಿನ್ನದ ಪದಕ ಗೆದ್ದ ಅರ್ಷದ್ ಅವರನ್ನು ಅಭಿನಂದಿಸಿದೆ. ಆದರೆ, ಸದ್ಯ ಅವರು ವಿವಾದದಲ್ಲಿ ಸಿಲುಕಿದ್ದಾರೆ.
ಅರ್ಷದ್ ನದೀಮ್ ಗೆ ಭಯೋತ್ಪಾದಕರೊಂದಿಗೆ ನಂಟು ಇರುವ ಶಂಕೆ ವ್ಯಕ್ತವಾಗುತ್ತಿದೆ. ಕಾರಣವೇನೆಂದರೇ ಚಿನ್ನದ ಪದಕ ಗೆದ್ದ ನಂತರ ಅರ್ಷದ್ ಭಯೋತ್ಪಾದಕ ಸಂಘಟನೆಯ ಸದಸ್ಯರನ್ನು ಭೇಟಿಯಾಗಿದ್ದ ಎಂಬ ಆರೋಪಗಳಿವೆ..
ಇದನ್ನೂ ಓದಿ-ಗರ್ಲ್ ಫ್ರೆಂಡ್ ಬಗ್ಗೆ ಮಾತನಾಡಿದ ನೀರಜ್ ಚೋಪ್ರಾ : ಮಗನ ಮದುವೆ ಯಾವಾಗ ಎನ್ನುವುದನ್ನು ಸ್ಪಷ್ಟವಾಗಿ ಹೇಳಿದ ತಂದೆ
ಪ್ಯಾರಿಸ್ ಒಲಿಂಪಿಕ್ಸ್‌ನಲ್ಲಿ ಚಿನ್ನ ಗೆದ್ದ ನಂತರ ಅರ್ಷದ್ ನದೀಮ್ ಪಾಕಿಸ್ತಾನಕ್ಕೆ ತೆರಳಿದ್ದರು. ಅಲ್ಲಿನ ಭಯೋತ್ಪಾದಕ ಸಂಘಟನೆಯ ಮುಖಂಡರ ಜತೆ ಸಭೆ ನಡೆಸಿದ್ದಾರೆ ಎಂದು ಸಾಮಾಜಿಕ ಜಾಲತಾಣಗಳಲ್ಲಿ ಕೆಲವರು ಹೇಳಿಕೊಳ್ಳುತ್ತಿದ್ದಾರೆ. ಆದರೆ, ಈ ಸಭೆ ನಡೆದದ್ದು ಚಿನ್ನದ ಪದಕ ಗೆದ್ದ ನಂತರವೇ.. ಅಥವಾ ಅದಕ್ಕೂ ಮುನ್ನವೇ ಎಂಬ ವಿಚಾರದಲ್ಲಿ ಸ್ಪಷ್ಟತೆ ಬರಬೇಕಿದೆ. ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗುತ್ತಿರುವ ವಿಡಿಯೋದಲ್ಲಿ ಅರ್ಷದ್ ಮೊಹಮ್ಮದ್ ಹಾರಿಸ್ ದಾರ್ ಎಂಬ ಭಯೋತ್ಪಾದಕನನ್ನು ಭೇಟಿಯಾಗಿರುವುದು ಕಂಡುಬಂದಿದೆ. ಹ್ಯಾರಿಸ್ ದಾರ್ ಅವರು ನಿಷೇಧಿತ ಭಯೋತ್ಪಾದಕ ಸಂಘಟನೆ ಲಷ್ಕರ್-ಎ-ತೊಯ್ಬಾದ ರಾಜಕೀಯ ಮುಂಭಾಗವಾದ ಮಿಲಿ ಮುಸ್ಲಿಂ ಲೀಗ್ (ಎಂಎಂಎಲ್) ನ ಜಂಟಿ ಕಾರ್ಯದರ್ಶಿಯಾಗಿದ್ದಾರೆ.
🚨🚨🚨Big Expose:
The sinister connection between Pak sportsman Arshad Nadeem & UN designated terrorist organisations fin sec Harris Dhar (Lashkar-e-Taiba)
📍It's evident from their conversation that this video is very recent after Arshad Nadeem's return from the Paris Olympics… pic.twitter.com/ko8OlJ81ct
— OsintTV 📺 (@OsintTV) August 12, 2024
ಪಾಕಿಸ್ತಾನದಲ್ಲಿ ಲಷ್ಕರ್-ಎ-ತೊಯ್ಬಾ ಭಯೋತ್ಪಾದಕ ಸಂಘಟನೆಯ ಹಣಕಾಸು ವ್ಯವಹಾರಗಳನ್ನು ಹ್ಯಾರಿಸ್ ನಿರ್ವಹಿಸುತ್ತಿದ್ದಾನೆ ಎಂಬ ಆರೋಪಗಳಿವೆ. ಇದರೊಂದಿಗೆ ವಿಶ್ವಸಂಸ್ಥೆ ಈಗಾಗಲೇ ಆತನನ್ನು ಅಂತಾರಾಷ್ಟ್ರೀಯ ಭಯೋತ್ಪಾದಕ ಎಂದು ಘೋಷಿಸಿದೆ. ಈ ವಿಡಿಯೋ ನೋಡಿದ ನೆಟಿಜನ್ಸ್ ಶಾಕ್ ಆಗಿದ್ದಾರೆ. ಇಂತಹ ಕ್ರೀಡಾ ಪಟುಗಳು ಭಯೋತ್ಪಾದಕರನ್ನು ಭೇಟಿ ಮಾಡುವ ಉದ್ದೇಶವೇನು ಎಂದು ಪ್ರಶ್ನಿಸುತ್ತಿದ್ದಾರೆ.. ಈ ವಿಡಿಯೋ ಕುರಿತು ಅರ್ಷದ್ ನದೀಮ್ ಅಥವಾ ಪಾಕಿಸ್ತಾನ ಸರ್ಕಾರ ಮತ್ತು ಪಾಕಿಸ್ತಾನಿ ಮಾಧ್ಯಮಗಳು ಯಾವುದೇ ಹೇಳಿಕೆ ನೀಡಿಲ್ಲ ಎಂಬುದು ಗಮನಾರ್ಹ.
ಕನ್ನಡ ಭಾಷೆಯಲ್ಲಿ ಇತ್ತೀಚಿನ ಕರ್ನಾಟಕ, ದೇಶ, ವಿದೇಶ, ಮನರಂಜನೆ, ಶಿಕ್ಷಣ, ಉದ್ಯೋಗ, ಆರೋಗ್ಯ, ಜೀವನಶೈಲಿ, ಆಧ್ಯಾತ್ಮ, ಕ್ರೀಡೆ, ಕ್ರೈಂ, ವೈರಲ್, ವ್ಯಾಪಾರ, ತಂತ್ರಜ್ಞಾನ ಸುದ್ದಿಗಳನ್ನು ಓದಲು ಈಗಲೇ ನಮ್ಮ ಜೀ ಕನ್ನಡ ನ್ಯೂಸ್ ಮೊಬೈಲ್ ಅಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3AClgDd
Apple Link - https://apple.co/3wPoNgr
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು
Twitter Link - https://bit.ly/3n6d2R8
Facebook Link - https://bit.ly/3Hhqmcj
Youtube Link - https://www.youtube.com/live/RNn4I7iIaYE?si=3G4W5dh0oCdFnu-T
Instagram Link - https://bit.ly/3LyfY2l
Sharechat Link - https://bit.ly/3LCjokI
Threads Link- https://www.threads.net/@zeekannadanews
WhatsApp Channel- bit.ly/46lENGm ಲಿಂಕ್ ಗಳ ಮೇಲೆ ಕ್ಲಿಕ್ ಮಾಡಿ