ಧೋನಿ-ಅಫ್ರಿದಿ, ಯುವರಾಜ್ ಅಲ್ಲ; ಕ್ರಿಕೆಟ್ ಇತಿಹಾಸದಲ್ಲಿ ಅತಿ ದೂರದ ಸಿಕ್ಸರ್ ಬಾರಿಸಿದ ಈ ಆಟಗಾರ!

19ನೇ ಶತಮಾನದಲ್ಲಿ ಆಲ್ಬರ್ಟ್ ಟ್ರಾಟ್ ಅವರು ಕ್ರಿಕೆಟ್ ಇತಿಹಾಸದಲ್ಲಿ ಅತಿ ದೂರದ ಸಿಕ್ಸರ್ ಬಾರಿಸಿದ್ದರು. ಇದು ಕ್ರಿಕೆಟ್ ಇತಿಹಾಸದಲ್ಲಿ ದಾಖಲಾದ ಅತಿ ದೂರದ ಸಿಕ್ಸರ್ ಆಗಿದೆ.

Last Updated : Jan 10, 2022, 06:58 PM IST
  • 19ನೇ ಶತಮಾನದಲ್ಲಿ ಆಲ್ಬರ್ಟ್ ಟ್ರಾಟ್ ಕ್ರಿಕೆಟ್ ಇತಿಹಾಸದಲ್ಲಿ ಅತಿ ದೂರದ ಸಿಕ್ಸರ್ ಬಾರಿಸಿದ್ದರು
  • ಇಂಗ್ಲೆಂಡ್ ಮತ್ತು ಆಸ್ಟ್ರೇಲಿಯಾ ಪರ ಆಡಿದ್ದ ಟ್ರಾಟ್ 164 ಮೀಟರ್ ದೂರದ ಸಿಕ್ಸರ್ ಭಾರಿಸಿದ್ದರು
  • ಶಾಹಿದ್ ಅಫ್ರಿದಿ 158, ಯುವರಾಜ್ ಸಿಂಗ್ 119, ಎಂ.ಎಸ್.ಧೋನಿ 112 ಮೀಟರ್ ಸಿಕ್ಸರ್ ಸಿಡಿಸಿದ್ದಾರೆ
ಧೋನಿ-ಅಫ್ರಿದಿ, ಯುವರಾಜ್ ಅಲ್ಲ; ಕ್ರಿಕೆಟ್ ಇತಿಹಾಸದಲ್ಲಿ ಅತಿ ದೂರದ ಸಿಕ್ಸರ್ ಬಾರಿಸಿದ ಈ ಆಟಗಾರ!   title=
ಅತಿ ದೂರದ ಸಿಕ್ಸರ್ ಭಾರಿಸಿದ ಆಟಗಾರ ಯಾರು..?

ನವದೆಹಲಿ: ಕ್ರಿಕೆಟ್‌ನಲ್ಲಿ ಅತಿ ದೂರದ ಸಿಕ್ಸರ್‌(Biggest Six) ಬಾರಿಸಿದ ದಾಖಲೆ ಶಾಹಿದ್‌ ಅಫ್ರಿದಿ ಹೆಸರಲ್ಲಾಗಲೀ, ಮಹೇಂದ್ರ ಸಿಂಗ್‌ ಧೋನಿ ಹಾಗೂ ಸಿಕ್ಸರ್ ಕಿಂಗ್ ಖ್ಯಾತಿಯ ಯುವರಾಜ್‌ ಸಿಂಗ್‌ ಹೆಸರಿನಲ್ಲಿಲ್ಲ. 100 ವರ್ಷಗಳ ಹಿಂದೆಯೇ ಕ್ರಿಕೆಟ್‌ ಇತಿಹಾಸದಲ್ಲಿ ಅತಿ ದೂರದ ಸಿಕ್ಸರ್‌ಗಾಗಿ ವಿಶ್ವದಾಖಲೆ ನಿರ್ಮಾಣವಾಗಿದೆ ಎಂದರೆ ನಿಮಗೆ ಆಶ್ಚರ್ಯವಾಗಬಹುದು. ಆದರೆ ಇಲ್ಲಿಯವರೆಗೆ ಯಾರೂ ಈ ದಾಖಲೆಯನ್ನು ಮುರಿದಿಲ್ಲ.

ಈ ಬ್ಯಾಟ್ಸ್‌ ಮನ್ ಕ್ರಿಕೆಟ್‌ನ ಅತಿ ಉದ್ದದ ಸಿಕ್ಸರ್ ಬಾರಿಸಿದ್ದಾರೆ

19ನೇ ಶತಮಾನದಲ್ಲಿ ಆಲ್ಬರ್ಟ್ ಟ್ರಾಟ್ ಅವರು ಕ್ರಿಕೆಟ್ ಇತಿಹಾಸ(Cricket History)ದಲ್ಲಿ ಅತಿ ದೂರದ ಸಿಕ್ಸರ್ ಬಾರಿಸಿದ್ದರು. ಆಲ್ಬರ್ಟ್ ಟ್ರಾಟ್ ಇಂಗ್ಲೆಂಡ್ ಮತ್ತು ಆಸ್ಟ್ರೇಲಿಯಾ ಎರಡರ ಪರವೂ ಕ್ರಿಕೆಟ್ ಆಡಿದ್ದಾರೆ. ಲಾರ್ಡ್ಸ್ ಕ್ರಿಕೆಟ್ ಮೈದಾನದ ಪೆವಿಲಿಯನ್ ದಾಟುವಂತೆ ಅವರು ಸಿಕ್ಸರ್ ಬಾರಿಸಿದ್ದರು. ಅವರ ಸಿಕ್ಸ್‌ ನ ದೂರ ಬರೋಬ್ಬರಿ 164 ಮೀಟರ್. ಇದು ಕ್ರಿಕೆಟ್ ಇತಿಹಾಸದಲ್ಲಿ ದಾಖಲಾದ ಅತಿ ದೂರದ ಸಿಕ್ಸರ್ ಆಗಿದೆ. ಇಂಗ್ಲೆಂಡ್‌ನ ಮೇರಿಲ್‌ಬೋರ್ನ್ ಕ್ರಿಕೆಟ್ ಕ್ಲಬ್‌ಗಾಗಿ ಆಡುವಾಗ ಆಲ್ಬರ್ಟ್ ಆಸ್ಟ್ರೇಲಿಯಾ ವಿರುದ್ಧ ಈ ಸಿಕ್ಸರ್ ಸಿಡಿಸಿ ದಾಖಲೆ ಬರೆದಿದ್ದರು..

ಇದನ್ನೂ ಓದಿ: Sachin Tendulkar : ವೃತ್ತಿಜೀವನದಲ್ಲಿ ಈ ಬೌಲರ್‌ಗಳಿಗಿಂತ ಹೆಚ್ಚು ವಿಕೆಟ್‌ ಪಡೆದ ಸಚಿನ್ ತೆಂಡೂಲ್ಕರ್! 

ಅಪಾಯಕಾರಿ ಬ್ಯಾಟ್ಸ್ ಮನ್ ಆಗಿದ್ದ ಟ್ರಾಟ್!

ಆಲ್ಬರ್ಟ್ ಟ್ರಾಟ್(Albert Trott) 19ನೇ ಶತಮಾನದ ಅತ್ಯಂತ ಅಪಾಯಕಾರಿ ಬ್ಯಾಟ್ಸ್‌ ಮನ್‌ಗಳಲ್ಲಿ ಒಬ್ಬರು. ಅವರು ಇಂಗ್ಲೆಂಡ್ ಮತ್ತು ಆಸ್ಟ್ರೇಲಿಯಾ ಎರಡರಲ್ಲೂ ಕ್ರಿಕೆಟ್ ಆಡಿದ್ದಾರೆ. ಇತಿಹಾಸದಲ್ಲಿನ ಅತಿ ದೂರದ ಸಿಕ್ಸರ್ ಇನ್ನೂ ಕೂಡ ಆಲ್ಬರ್ಟ್ ಹೆಸರಿನಲ್ಲಿದೆ. ಅವರು 164 ಮೀಟರ್‌ ದೂರದ ಸಿಕ್ಸರ್‌ ಬಾರಿಸಿದ ಸಾಧನೆ ಮಾಡಿದ್ದಾರೆ. 19ನೇ ಶತಮಾನದಲ್ಲಿ ಬೌಲರ್‌ಗಳು ಆಲ್ಬರ್ಟ್ ಟ್ರಾಟ್ ಎಂಬ ಹೆಸರು ಕೇಳಿದರೆ ಭಯಪಡುತ್ತಿದ್ದರು. ಆದರೆ ಈ ಆಟಗಾರ 1910ರಲ್ಲಿ ತಮ್ಮ 41ನೇ ವಯಸ್ಸಿನಲ್ಲಿ ಗುಂಡು ಹಾರಿಸಿಕೊಂಡು ಆತ್ಮಹತ್ಯೆ ಮಾಡಿಕೊಂಡರು ಎಂದು ಹೇಳಲಾಗುತ್ತದೆ.

ಅಫ್ರಿದಿ ಸಿಕ್ಸರ್ ಉದ್ದ ಎಷ್ಟು..?

ಪಾಕಿಸ್ತಾನದ ಮಾಜಿ ಸ್ಫೋಟಕ ಆಲ್‌ರೌಂಡರ್ ಶಾಹಿದ್ ಅಫ್ರಿದಿ ತಮ್ಮ ವೃತ್ತಿಜೀವನದುದ್ದಕ್ಕೂ ಹಲವು ಅಪಾಯಕಾರಿ ಮತ್ತು ಸ್ಫೋಟಕ ಇನ್ನಿಂಗ್ಸ್‌ ಗಳನ್ನು ಆಡಿದ್ದಾರೆ. ಶಾಹಿದ್ ಅಫ್ರಿದಿ 2013ರಲ್ಲಿ ದಕ್ಷಿಣ ಆಫ್ರಿಕಾ ವಿರುದ್ಧ 158 ಮೀಟರ್ ದೂರದ ಸಿಕ್ಸರ್ ಬಾರಿಸಿದ್ದರು.

ಇದನ್ನೂ ಓದಿ: Video: No Ball, Wide Ball, Sixer ಯಾವುದು ಇಲ್ಲ, ಆದರೂ ಒಂದು ಬಾಲ್ ಗೆ 7 ರನ್ಸ್ ಬಂತು! ಹೇಗೆ ಅಂತೀರಾ?

ಇಬ್ಬರು ಭಾರತೀಯರ ಹೆಸರಿನಲ್ಲಿಯೂ ದಾಖಲೆ

ದೂರದ ಸಿಕ್ಸರ್ ಬಾರಿಸಿದ ಆಟಗಾರರ ಪಟ್ಟಿಯಲ್ಲಿ ಇಬ್ಬರು ಭಾರತೀಯರು ಕೂಡ ಸೇರಿದ್ದಾರೆ. ಇದರಲ್ಲಿ ಯುವರಾಜ್ ಸಿಂಗ್(Yuvraj Singh) ಮತ್ತು ಮಹೇಂದ್ರ ಸಿಂಗ್ ಧೋನಿ ಹೆಸರುಗಳಿವೆ. ಯುವರಾಜ್ ಸಿಂಗ್ 119 ಮೀಟರ್ ಸಿಕ್ಸರ್ ಬಾರಿಸಿದ್ದಾರೆ. ಟಿ-20ಯಲ್ಲಿ 6 ಎಸೆತಗಳಲ್ಲಿ 6 ಸಿಕ್ಸರ್ ಸಿಡಿಸಿದ ದಾಖಲೆಯೂ ಯುವಿ ಹೆಸರಿನಲ್ಲಿದೆ. ಅದೇ ರೀತಿ ಎಂ.ಎಸ್.ಧೋನಿ 112 ಮೀಟರ್ ಸಿಕ್ಸರ್ ಬಾರಿಸಿದ ದಾಖಲೆ ಹೊಂದಿದ್ದಾರೆ. ಆಸ್ಟ್ರೇಲಿಯಾ ವಿರುದ್ಧ  ನಡೆದ 2007ರ T20 ವಿಶ್ವಕಪ್‌ನ ಪಂದ್ಯದಲ್ಲಿ ಯುವರಾಜ್ ಸಿಂಗ್ ಅವರು ಬ್ರೆಟ್ ಲೀ ಅವರ ಬೌಲಿಂಗ್ ನಲ್ಲಿ 119 ಮೀಟರ್ ದೂರದ ಸಿಕ್ಸರ್ ಅನ್ನು ಹೊಡೆದು ದಾಖಲೆ ನಿರ್ಮಿಸಿದ್ದರು.  

ಎಂ.ಎಸ್.ಧೋನಿ

2011-12ರಲ್ಲಿ ಸಿಬಿ ಸರಣಿಯಲ್ಲಿ ಆಸ್ಟ್ರೇಲಿಯಾ ವಿರುದ್ಧದ ಪಂದ್ಯದಲ್ಲಿ ಧೋನಿ(MS Dhoni) ಪದಾರ್ಪಣೆ ಮಾಡಿದ್ದರು. ಈ ವೇಳೆ ಅವರು ಲಾಂಗ್ ಆಫ್‌ನ ದಿಕ್ಕಿನಲ್ಲಿ ಅದ್ಭುತ ಸಿಕ್ಸರ್ ಭಾರಿಸಿದ್ದರು. ಅವರ ಹೊಡೆತಕ್ಕೆ ಚೆಂಡು ಆ ಕ್ರೀಡಾಂಗಣ ದಾಟಿತ್ತು.   

ಕನ್ನಡ ಭಾಷೆಯಲ್ಲಿ ಮತ್ತಷ್ಟು ಸ್ವಾರಸ್ಯಕರ ಸುದ್ದಿಗಳನ್ನು ಓದಲು ನಮ್ಮ ಝೀ ಹಿಂದೂಸ್ತಾನ್ ಕನ್ನಡ ಮೊಬೈಲ್ ಆಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3hDyh4G
Apple Link - https://apple.co/3hEw2hy
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು Twitter, Facebook ಲಿಂಕ್ ಗಳ ಮೇಲೆ ಕ್ಲಿಕ್ಕಿಸಿ.

Trending News