ನವದೆಹಲಿ: ಆಕ್ಲೆಂಡ್ ನ ಈಡನ್ ಪಾರ್ಕ್ ನಲ್ಲಿ ನ್ಯೂಜಿಲೆಂಡ್ ವಿರುದ್ದದ ಮೊದಲ ಟಿ-20 ಪಂದ್ಯದಲ್ಲಿ ಭಾರತ ತಂಡವು ಆರು ವಿಕೆಟ್ ಗಳ ಗೆಲುವು ಸಾಧಿಸಿದೆ.
ಭಾರತ ತಂಡವು ಟಾಸ್ ಗೆದ್ದು ಮೊದಲು ಫೀಲ್ಡಿಂಗ್ ಆಯ್ದುಕೊಂಡಿತು. ಕೀವಿಸ್ ತಂಡ ಪರವಾಗಿ ರಾಸ್ ಟೇಲರ್ (54) ಕಾಲಿನ್ ಮನ್ರೋ (59) ಹಾಗೂ ಕೇನ್ ವಿಲಿಯಮ್ಸನ್ (51 ) ಅವರ ಅರ್ಧ ಶತಕದ ನೆರವಿನಿಂದ 20 ಓವರ್ ಗಳಲ್ಲಿ ಐದು ವಿಕೆಟ್ ನಷ್ಟಕ್ಕೆ ನ್ಯೂಜಿಲೆಂಡ್ ತಂಡವು 203 ರನ್ ಗಳನ್ನು ಗಳಿಸಿತು.
Shreyas Iyer finishes things off in style with a mighty six!
India win the first #NZvIND T20I by six wickets.
SCORECARD: https://t.co/6dq9gApGSs pic.twitter.com/9lV5uXXE1W
— ICC (@ICC) January 24, 2020
ಬೃಹತ್ ಮೊತ್ತವನ್ನು ಬೆನ್ನತ್ತಿದ ಭಾರತ ತಂಡಕ್ಕೆ ಮೊತ್ತ 16 ಆಗಿದ್ದಾಗ ರೋಹಿತ್ ಶರ್ಮಾ ಅವರ ವಿಕೆಟ್ ನ್ನು ಕಳೆದುಕೊಂಡು ಆಘಾತ ಎದುರಿಸಿತು. ಈ ಹಂತದಲ್ಲಿ ಜೊತೆಯಾದ ವಿರಾಟ್ ಕೊಹ್ಲಿ ಹಾಗೂ ಕನ್ನಡಿಗ ಲೋಕೇಶ್ ರಾಹುಲ್ ಕ್ರಮವಾಗಿ 45 ,56 ರನ್ ಗಳನ್ನು ಗಳಿಸಿದರು. ಕೆ.ಎಲ್ ರಾಹುಲ್ 27 ಎಸೆತಗಳಲ್ಲಿ ನಾಲ್ಕು ಬೌಂಡರಿ ಹಾಗೂ ಮೂರು ಸಿಕ್ಸರ್ ಗಳಿಂದ 56 ರನ್ ಗಳಿಸಿ ಔಟಾದರು. ಇನ್ನೊಂದೆಡೆ ವಿರಾಟ್ ಕೊಹ್ಲಿ 32 ಎಸೆತಗಳಲ್ಲಿ ಮೂರು ಬೌಂಡರಿ ಹಾಗೂ ಒಂದು ಸಿಕ್ಸರ್ ಬಾರಿಸಿದರು.
ತದನಂತರ ಬಂದಂತಹ ಶ್ರೇಯಸ್ ಅಯ್ಯರ್ ಕೇವಲ 29 ಎಸೆತಗಳಲ್ಲಿ ಐದು ಬೌಂಡರಿ ಹಾಗೂ 3 ಸಿಕ್ಸರ್ ಗಳ ಮೂಲಕ 58 ರನ್ ಗಳಿಸಿ ತಂಡದ ಗೆಲುವಿಗೆ ಕಾರಣರಾದರು.