ಫಾಫ್ ಡು ಪ್ಲೆಸಿಸ್ ಔಟ್ ಅಥವಾ ನಾಟೌಟ್? RCBಗೆ ಮತ್ತೆ ಮೋಸ ಮಾಡಿದ್ರಾ ಅಂಪೈರ್!!

IPL 2024, RCB vs CSK: ವಿರಾಟ್ ಕೊಹ್ಲಿ ಮತ್ತು ಫಾಫ್ ಡು ಪ್ಲೆಸಿಸ್ ಆರ್‌’ಸಿಬಿಗೆ ಅದ್ಭುತ ಆರಂಭ ನೀಡಿದ್ದರು. ಆದರೆ, ಮಳೆಯ ಅಡಚಣೆಯ ನಂತರ ಆರಂಭವಾದ ಪಂದ್ಯದಲ್ಲಿ ಸಿಎಸ್‌’ಕೆ ಸ್ಪಿನ್ನರ್‌’ಗಳು ಉತ್ತಮ ಪ್ರದರ್ಶನ ತೋರಿದರು.

Written by - Bhavishya Shetty | Last Updated : May 18, 2024, 09:59 PM IST
    • ವಿರಾಟ್ ಕೊಹ್ಲಿ ಮತ್ತು ಫಾಫ್ ಡು ಪ್ಲೆಸಿಸ್ ಆರ್‌’ಸಿಬಿಗೆ ಅದ್ಭುತ ಆರಂಭ ನೀಡಿದ್ದರು
    • ಮಿಚೆಲ್ ಸ್ಯಾಂಟರ್ನ್ ಎಸೆತದಲ್ಲಿ ಡೆರಿಲ್ ಮಿಚೆಲ್ ಅದ್ಭುತ ಕ್ಯಾಚ್ ಪಡೆದರು
    • ಫಾಫ್ ಔಟ್ ಆಗಿರುವ ವಿಚಾರ ಸದ್ಯ ವಿವಾದದ ಸುಳಿಗೆ ಸಿಲುಕಿದೆ.
ಫಾಫ್ ಡು ಪ್ಲೆಸಿಸ್ ಔಟ್ ಅಥವಾ ನಾಟೌಟ್? RCBಗೆ ಮತ್ತೆ ಮೋಸ ಮಾಡಿದ್ರಾ ಅಂಪೈರ್!!  title=
Faf du Plessis out controversy

IPL 2024, RCB vs CSK: ರಾಯಲ್ ಚಾಲೆಂಜರ್ಸ್ ಬೆಂಗಳೂರು ತಂಡದ ಇಬ್ಬರು ಆರಂಭಿಕರು ಕೂಡ ಪೆವಿಲಿಯನ್’ಗೆ ಮರಳಿದ್ದಾರೆ. ಆದರೆ ಈ ಸಂದರ್ಭದಲ್ಲಿ ಆರ್’ಸಿಬಿ ಕ್ಯಾಪ್ಟನ್ ಫಾಫ್ ಡು ಪ್ಲೆಸಿಸ್ ದುರಾದೃಷ್ಟಕ್ಕೆ ಔಟ್ ಆಗಿದ್ದಾರೆ. ಫಾಫ್ ಔಟ್ ಆಗಿರುವ ವಿಚಾರ ಸದ್ಯ ವಿವಾದದ ಸುಳಿಗೆ ಸಿಲುಕಿದೆ.

ಇದನ್ನೂ ಓದಿ: ಬಿಸಿಹಾಲಿಗೆ ಈ ಬೇರಿನ ಪುಡಿ ಬೆರೆಸಿ ಕುಡಿಯಿರಿ: ಸಂಧುಗಳಲ್ಲಿ ಅಂಟಿರುವ ಯೂರಿಕ್ ಆಸಿಡ್ ಕರಗುತ್ತೆ! ಮಂಡಿನೋವು ಸಹ ದೂರವಾಗುತ್ತೆ

ವಿರಾಟ್ ಕೊಹ್ಲಿ ಮತ್ತು ಫಾಫ್ ಡು ಪ್ಲೆಸಿಸ್ ಆರ್‌’ಸಿಬಿಗೆ ಅದ್ಭುತ ಆರಂಭ ನೀಡಿದ್ದರು. ಆದರೆ, ಮಳೆಯ ಅಡಚಣೆಯ ನಂತರ ಆರಂಭವಾದ ಪಂದ್ಯದಲ್ಲಿ ಸಿಎಸ್‌’ಕೆ ಸ್ಪಿನ್ನರ್‌’ಗಳು ಉತ್ತಮ ಪ್ರದರ್ಶನ ತೋರಿದರು. ಮಿಚೆಲ್ ಸ್ಯಾಂಟ್ನರ್ ಮತ್ತು ಮಹಿಷಾ ತಿಕ್ಷಣ ಅವರ ಟರ್ನಿಂಗ್ ಎಸೆತಗಳನ್ನು ವಿರಾಟ್ ಮತ್ತು ಫಾಫ್ ಅರ್ಥಮಾಡಿಕೊಳ್ಳಲು ಕೆಲ ಸಮಯ ತೆಗೆದುಕೊಂಡರು.

ಇದಾದ ಬಳಿಕ ಮತ್ತೆ ಲಯಕ್ಕೆ ಬಂದ ವಿರಾಟ್ ಬ್ಯಾಟ್ ಬೀಸಿದರೂ ಸಹ ಸ್ಯಾಂಟ್ನರ್ ವಿಕೆಟ್ ಪಡೆದರು. ವಿರಾಟ್ 29 ಎಸೆತಗಳಲ್ಲಿ 3 ಬೌಂಡರಿ ಹಾಗೂ 4 ಸಿಕ್ಸರ್ ನೆರವಿನಿಂದ 47 ರನ್ ಗಳಿಸಿ ಔಟಾದರು. ಮಿಚೆಲ್ ಸ್ಯಾಂಟರ್ನ್ ಎಸೆತದಲ್ಲಿ ಡೆರಿಲ್ ಮಿಚೆಲ್ ಅದ್ಭುತ ಕ್ಯಾಚ್ ಪಡೆದರು.

 

9.4 ಓವರ್‌’ಗಳಲ್ಲಿ 78 ರನ್‌’ಗಳಿಗೆ ಬೆಂಗಳೂರು ಮೊದಲ ಆಘಾತ ಅನುಭವಿಸಿತು. ಅದಾದ ಬಳಿಕ 13ನೇ ಓವರ್‌’ನ ಕೊನೆಯ ಎಸೆತದಲ್ಲಿ ದುರಾದೃಷ್ಟ ಎಂಬಂತೆ, ಫಾಫ್ ರನ್ ಔಟ್ ಆದರು. ಸ್ಯಾಂಟ್ನರ್ ಎಸೆತಕ್ಕೆ ರಜತ್ ಪಾಟಿದಾರ್ ಬ್ಯಾಟ್ ಬೀಸಿದ್ದು, ನೇರವಾಗಿ ಫಾಫ್ ಇದ್ದ ವಿಕೆಟ್‌’ಗೆ ಬಡಿದಿದೆ. ಇದನ್ನು ಪರಿಶೀಲಿಸಿದ ಥರ್ಡ್ ಅಂಪೈರ್ ಔಟ್ ಎಂದು ಘೋಷಿಸಿದರು.

ಇದನ್ನೂ ಓದಿ: ಚಿನ್ನಸ್ವಾಮಿ ಮೈದಾನದಲ್ಲಿ ವಿಶೇಷ ದಾಖಲೆ ಬರೆದ ವಿರಾಟ್ ಕೊಹ್ಲಿ: ಈ ಇತಿಹಾಸ ಸೃಷ್ಟಿಸಿದ ಮೊದಲಿಗ

ಈ ನಿರ್ಧಾರದಿಂದ ಅಸಮಾಧಾನಗೊಂಡ ಫಾಫ್, ಪೆವಿಲಿಯನ್ ಕಡೆ ನಡೆದರು. ಅಂದಹಾಗೆ ಫಾಫ್ 39 ಎಸೆತಗಳಲ್ಲಿ 3 ಬೌಂಡರಿ ಹಾಗೂ 3 ಸಿಕ್ಸರ್ ನೆರವಿನಿಂದ 54 ರನ್ ಗಳಿಸಿದ್ದಾರೆ.

 

ಕನ್ನಡ ಭಾಷೆಯಲ್ಲಿ ಇತ್ತೀಚಿನ ಕರ್ನಾಟಕ, ದೇಶ, ವಿದೇಶ, ಮನರಂಜನೆ, ಶಿಕ್ಷಣ, ಉದ್ಯೋಗ, ಆರೋಗ್ಯ, ಜೀವನಶೈಲಿ, ಆಧ್ಯಾತ್ಮ,  ಕ್ರೀಡೆ, ಕ್ರೈಂ, ವೈರಲ್, ವ್ಯಾಪಾರ, ತಂತ್ರಜ್ಞಾನ ಸುದ್ದಿಗಳನ್ನು ಓದಲು ಈಗಲೇ ನಮ್ಮ ಜೀ ಕನ್ನಡ ನ್ಯೂಸ್ ಮೊಬೈಲ್ ಅಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3AClgDd
Apple Link - https://apple.co/3wPoNgr
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು 
Twitter Link - https://bit.ly/3n6d2R8
Facebook Link - https://bit.ly/3Hhqmcj 
Youtube Link - https://tinyurl.com/7jmvv2nz

Instagram Link -  https://bit.ly/3LyfY2l 
Sharechat Link - https://bit.ly/3LCjokI 
Threads Link-  https://www.threads.net/@zeekannadanews 
WhatsApp Channel- bit.ly/46lENGm ಲಿಂಕ್ ಗಳ ಮೇಲೆ ಕ್ಲಿಕ್ ಮಾಡಿ

Trending News